For Quick Alerts
ALLOW NOTIFICATIONS  
For Daily Alerts

ದಪ್ಪ ಇರುವವರು ಸಣ್ಣ ಆಗಬೇಕಾದರೆ ಈ ಬೀಜಗಳನ್ನು ತಿನ್ನಬೇಕಂತೆ!!!

|

ಪ್ರತಿಯೊಬ್ಬರಿಗೂ ನಾವು ನೋಡಲು ಚೆನ್ನಾಗಿ ಕಾಣಬೇಕು. ಒಳ್ಳೆಯ ದೈಹಿಕ ಆಕೃತಿಯನ್ನು ಹೊಂದಬೇಕು ಎನ್ನುವ ಬಯಕೆ ಇರುತ್ತದೆ. ತಮ್ಮ ಆಹಾರ ಶೈಲಿಯಿಂದ ತಮಗೇ ಗೊತ್ತಿಲ್ಲದಂತೆ ದೇಹದಲ್ಲಿ ಬೊಜ್ಜಿನ ಪ್ರಮಾಣವನ್ನು ತುಂಬಿಕೊಂಡು ವಿಪರೀತ ಕೊಲೆಸ್ಟಾಲ್ ಅಂಶದೊಂದಿಗೆ ಹೃದಯದ ಸಮಸ್ಯೆಗಳನ್ನು ಹೊತ್ತು ಬದುಕಬೇಕಾದ ಸಂದರ್ಭ ಇಂದು ಹಲವರಿಗೆ ಬಂದಿದೆ.

ಮತ್ತೆ ತಮ್ಮ ದೈಹಿಕ ಸ್ಥಿತಿಯನ್ನು ಮೊದಲಿನಂತೆ ಮಾಡಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡಬೇಕಾದ ಸಂದರ್ಭವಂತೂ ಬಂದೇ ಬರುತ್ತದೆ. ತಮ್ಮ ಆರೋಗ್ಯ ರಕ್ಷಣೆಯ ಜೊತೆಗೆ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಆಲೋಚಿಸಿ ನೋಡುವುದಾದರೆ ನೈಸರ್ಗಿಕ ಆಹಾರ ಉತ್ಪನ್ನಗಳು ನಿಮ್ಮ ಸಹಾಯಕ್ಕೆ ಖಂಡಿತವಾಗಿ ಬಂದು ನಿಲ್ಲುತ್ತವೆ. ಅವುಗಳು ಈ ಕೆಳಗಿನಂತಿವೆ.

ಹಸಿ ಕುಂಬಳಕಾಯಿ ಬೀಜಗಳು

ಹಸಿ ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಕೂಡ ಒಳ್ಳೆಯ ಹೆಸರಿದೆ. ಒಬ್ಬ ಮನುಷ್ಯನ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಇಂತಹ ನೈಸರ್ಗಿಕ ಉತ್ಪನ್ನಗಳನ್ನು ಅಲ್ಲಗಳೆಯುವಂತಿಲ್ಲ. ಕುಂಬಳಕಾಯಿ ಬೀಜಗಳಲ್ಲಿ ನಿಮ್ಮ ಊಹೆಗೂ ಮೀರಿದ ಪ್ರಮಾಣದಲ್ಲಿ ಪ್ರೋಟೀನ್ ಅಂಶ ಮತ್ತು ನಾರಿನ ಅಂಶ ಮತ್ತು ಅಷ್ಟೇ ಪ್ರಮಾಣದ ಜಿಂಕ್ ಅಂಶ ಕಂಡು ಬರುವುದರಿಂದ ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ಬೇರೆ ಬಗೆಯ ಆಹಾರಗಳನ್ನು ಆಗಾಗ ತಿನ್ನದಂತೆ ನೋಡಿಕೊಂಡು ನಿಮ್ಮ ತೂಕವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತಾ ಹೋಗುತ್ತದೆ. ನೋಡಲು ದಪ್ಪ ಇರುವವರು ಕುಂಬಳಕಾಯಿ ಬೀಜಗಳನ್ನು ಹಸಿಯಾಗಿ ತಿಂದರೂ ಲಾಭವೇ ಅಥವಾ ಹುರಿದುಕೊಂಡು ಇಲ್ಲವೇ ವಿವಿಧ ಬಗೆಯ ಆಹಾರ ಪದಾರ್ಥಗಳಲ್ಲಿ ಮಿಶ್ರಣ ಮಾಡಿಕೊಂಡು ಸೇವನೆ ಮಾಡಿದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಫ್ಲಾಕ್ಸ್ ಸೀಡ್ಸ್

ಫ್ಲಾಕ್ಸ್ ಸೀಡ್ಸ್

ಫ್ಲಾಕ್ಸ್ ಸೀಡ್ಸ್ ಅಥವಾ ಅಗಸೆ ಬೀಜಗಳು ನಮ್ಮ ದೇಹದ ಮೇಲೆ ಉಷ್ಣದ ಪ್ರಭಾವವನ್ನು ಬೀರುತ್ತವೆ. ಇದರ ಕಾರಣ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಶೇಖರಣೆಗೊಳ್ಳಲು ಸಾಧ್ಯವಿಲ್ಲ. ಇದರ ಜೊತೆಗೆ ಅಗಸೆ ಬೀಜಗಳಲ್ಲಿ ನಾರಿನ ಅಂಶ ತುಂಬಾ ಹೆಚ್ಚಾಗಿರುವ ಕಾರಣ ಮತ್ತು ಒಮೆಗಾ - 3 ಫ್ಯಾಟಿ ಆಸಿಡ್ ಅಂಶಗಳು ಇರುವುದರಿಂದ ಹೊಟ್ಟೆ ಹಸಿವಿನ ನಿವಾರಣೆಯಾಗಿ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಗೊಳ್ಳುತ್ತದೆ. ಅಗಸೆ ಬೀಜಗಳು ದಪ್ಪ ಇರುವವರನ್ನು ತೆಳ್ಳಗೆ ಮಾಡುವಲ್ಲಿ ಪ್ರಮುಖ ಪಾತ್ರ ಬೀರುತ್ತವೆ.

ಚಿಯಾ ಬೀಜಗಳು

ಚಿಯಾ ಬೀಜಗಳು

ತಮ್ಮ ದೇಹದ ಅಧಿಕ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಚಿಯಾ ಬೀಜಗಳು ಹೇಳಿ ಮಾಡಿಸಿದ ಆಹಾರಗಳಾಗಿವೆ. ಚಿಯ ಬೀಜಗಳಲ್ಲಿ ಕೂಡ ಹೆಚ್ಚಿನ ಪ್ರಮಾಣದ ಪ್ರೋಟಿನ್ ಮತ್ತು ನಾರಿನ ಅಂಶ ಲಭ್ಯವಿರುವುದರಿಂದ ಮತ್ತು ನೀರಿನಲ್ಲಿ ನೆನೆ ಹಾಕಿದ ನಂತರ ಊದಿಕೊಂಡು ಜೆಲ್ ರೀತಿ ಬದಲಾಗುವುದರಿಂದ ಬಹಳ ಸುಲಭವಾಗಿ ಮತ್ತು ಬೇಗನೆ ನಮಗೆ ಈ ಅಂಶಗಳು ಸಿಗುತ್ತವೆ. ಅತಿ ಹೆಚ್ಚಿನ ನಾರಿನ ಅಂಶ ಚಿಯಾ ಬೀಜಗಳಲ್ಲಿ ಸಿಗುವುದರಿಂದ ಬಹಳ ಬೇಗನೆ ಇತರ ಬೊಜ್ಜು ನಿವಾರಣೆ ಆಹಾರಗಳಿಗೆ ಹೋಲಿಸಿದರೆ ನಮ್ಮ ದೇಹದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿರುತ್ತದೆ. ತಮ್ಮಲ್ಲಿನ ಕ್ಯಾಲ್ಸಿಯಂ ಅಂಶದ ಪ್ರಭಾವದಿಂದ ನಿಮ್ಮ ಸೊಂಟದ ಸುತ್ತಳತೆಯನ್ನು ನಿಯಂತ್ರಣ ಮಾಡುವ ಗುಣ ಲಕ್ಷಣ ಚಿಯಾ ಬೀಜಗಳಲ್ಲಿ ಕಂಡು ಬರುತ್ತದೆ.

ಸೂರ್ಯಕಾಂತಿ ಬೀಜಗಳು

ಸೂರ್ಯಕಾಂತಿ ಬೀಜಗಳು

ಸಾಮಾನ್ಯವಾಗಿ ನಾವು ಆಹಾರಗಳಿಗೆ ಮತ್ತು ಅಡುಗೆ ಪದಾರ್ಥಗಳನ್ನು ತಯಾರು ಮಾಡಲು ಮನೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಬಳಕೆ ಮಾಡುತ್ತೇವೆ. ಇದು ತಿನ್ನಲು ರುಚಿಕರವೂ ಹೌದು ಹಾಗೂ ದೇಹಕ್ಕೆ ಆರೋಗ್ಯಕರವೂ ಹೌದು. ಅದೇ ರೀತಿ ಸೂರ್ಯಕಾಂತಿ ಬೀಜಗಳು ಸಹ ವಿಟಮಿನ್ ' ಇ ' ಅಂಶವನ್ನು ಒಳಗೊಂಡಿರುವ ಕಾರಣದಿಂದ ಮತ್ತು ಮೆಗ್ನೀಷಿಯಂ, ಪೊಟ್ಯಾಶಿಯಂ, ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಅಂಶಗಳು ಇವುಗಳಲ್ಲಿ ಸಿಗುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳು ಸಿಗುವುದರ ಜೊತೆಗೆ ಇವುಗಳಲ್ಲಿರುವ ನಾರಿನ ಅಂಶದ ಕಾರಣದಿಂದ ನಮ್ಮ ದೇಹದ ಕೆಟ್ಟ ಕೊಬ್ಬಿನ ಅಂಶ ಕರಗುವುದರ ಮೂಲಕ ತುಂಬಾ ಬೇಗನೆ ಇತರರಂತೆ ಸಹಜವಾದ ದೈಹಿಕ ಆಕಾರವನ್ನು ಹೊಂದಲು ನೆರವಾಗುತ್ತದೆ.

ಎಳ್ಳು

ಎಳ್ಳು

ನೋಡಲು ಸಣ್ಣದಾದ ಮತ್ತು ಉಷ್ಣ ಪದಾರ್ಥಗಳ ಗುಂಪಿಗೆ ಸೇರುವ ಎಳ್ಳಿನ ಬೀಜಗಳಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್ 'ಇ' ಅಂಶ ಲಭ್ಯವಿರುವ ಕಾರಣ ನಿಮ್ಮ ತ್ವಚೆ ಹಾಗೂ ಕೂದಲಿನ ಆರೋಗ್ಯದಲ್ಲಿ ಆರೋಗ್ಯಕರ ಬೆಳವಣಿಗೆ ಕಂಡು ಬರುತ್ತದೆ. ವಿವಿಧ ಅಡುಗೆ ತಯಾರಿಯಲ್ಲಿ ಬಳಕೆ ಮಾಡುವ ಎಳ್ಳು ಹಾಗೂ ಎಳ್ಳೆಣ್ಣೆ ತನ್ನ ಅದ್ಭುತ ಗುಣ ಲಕ್ಷಣಗಳಿಂದ ನಿಮ್ಮ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸಿ ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಅಷ್ಟೇ ಸಹಾಯಕ್ಕೆ ಬಂದು ನಿಲ್ಲುತ್ತದೆ.

ಸೆಣಬಿನ ಬೀಜಗಳು

ಸೆಣಬಿನ ಬೀಜಗಳು

ಮೇಲೆ ಹೇಳಿದ ಎಲ್ಲಾ ಬಗೆಯ ನಿಮ್ಮ ದೇಹದ ತೂಕ ಕಡಿಮೆ ಮಾಡುವ ಆಹಾರ ಪದಾರ್ಥಗಳು ಸುಲಭವಾಗಿ ನಿಮಗೆ ಲಭ್ಯವಾದ ಅಷ್ಟು ಸೆಣಬಿನ ಬೀಜಗಳು ಸಿಗುವುದಿಲ್ಲ. ಆದರೆ ಒಂದು ವೇಳೆ ಎಲ್ಲಿಯಾದರೂ ನಿಮಗೆ ಸೆಣಬು ಅಥವಾ ಸೆಣಬಿನ ಬೀಜ ಲಭ್ಯವಾದರೆ ನಿರ್ಲಕ್ಷ ತೋರದೆ ಅದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ. ಏಕೆಂದರೆ ಮೇಲಿನ ಎಲ್ಲಾ ಪದಾರ್ಥಗಳಂತೆ ಸೆಣಬಿನ ಪದಾರ್ಥಗಳಲ್ಲಿ ಕೂಡ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಅತ್ಯಧಿಕ ಪ್ರೋಟೀನ್ ನಾರಿನ ಅಂಶ ಮತ್ತು ಕ್ಯಾಲ್ಶಿಯಂ ಅಂಶ ಲಭ್ಯವಿದೆ. ಇದರಿಂದ ನಿಮ್ಮ ದಪ್ಪನಾದ ದೇಹ ಕರಗುವಂತಹ ಸಾಧ್ಯತೆಯಿದೆ. ಅದೇ ಸಮಯಕ್ಕೆ ನಿಮ್ಮ ದೇಹದ ಸದೃಢತೆಯನ್ನು ಕಾಪಾಡಲು ಕಬ್ಬಿಣದ ಅಂಶ, ಮೆಗ್ನೀಷಿಯಂ ಮತ್ತು ಫಾಸ್ಪರಸ್ ಅಂಶಗಳು ಸೆಣಬಿನ ಬೀಜಗಳಿಂದ ನಿಮಗೆ ಸಿಗುತ್ತವೆ.

English summary

Healthy Seeds That Can Help You Lose Weight Easily in kannada

Here we are discussing about Healthy Seeds That Can Help You Lose Weight Easily in kannada. Rich in fiber, protein, omega-3 fatty acids, and trace minerals – they are not only great for overall health, they help cut down fat and even reduce belly fat. Read more.
X