For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ದಿನಾ ಸೇಬು ತಿಂದ್ರೆ ಈ ಪ್ರಯೋಜನಗಳಿವೆ

|

'An apple a day keeps the doctors away" ಎಂಬ ಮಾತಿದೆ, ದಿನಾ ಒಂದು ಸೇಬು ತಿಂದ್ರೆ ವೈದ್ಯರನ್ನು ದೂರ ಇಡಬಹುದು ಎಂಬುವುದು ಇದರರ್ಥ. ಸೇಬು ತಿನ್ನುವುದರಿಂದ ಅದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಅತ್ಯಂತ ಆರೋಗ್ಯಕರವಾದ ಸ್ನ್ಯಾಕ್ಸ್ ಹೀಗೆ ಸೇಬಿನ ಪ್ರಯೋಜಗಳ ಬಗ್ಗೆ ಸಾಕಷ್ಟು ವಿಷಯ ನಿಮಗೂ ಗೊತ್ತಿರುತ್ತದೆ.

apple benefits

ಆದರೆ ಈ ಸೇಬು ಚಳಿಗಾಲದಲ್ಲಿ ಸೇವಿಸಬೇಕಾದ ಅತ್ಯುತ್ತಮವಾದ ಆಹಾರಗಳಲ್ಲಿ ಒಂದು ಎಂಬುವುದು ನಿಮಗೆ ಗೊತ್ತೇ? ಚಳಿಗಾಲದಲ್ಲಿ ಪ್ರತಿದಿನ ಸೇಬು ತಿನ್ನುವುದರಿಂದ ದೊರೆಯುವ ಪ್ರಯೋಜನಗಳೇನು ನೋಡೋಣ ಬನ್ನಿ:

ಒಂದು ಸೇಬು ತಿಂದ್ರೆ ದೊರೆಯುವ ಪೋಷಕಾಂಶಗಳು
2.5 ಗ್ರಾಂ ನಾರಿನಂಶ, 0.6 ಗ್ರಾಂ ಪ್ರೊಟೀನ್, 11.6 ಗ್ರಾಂ ಕಾರ್ಬ್ಸ್, 6 ಮಿಗ್ರಾಂ ವಿಟಮಿನ್ ಸಿ ದೊರೆಯುತ್ತದೆ.

ಚಳಿಗಾಲದಲ್ಲಿ ದಿನಾ ತಿನ್ನಬೇಕು ಏಕೆ?
ಜೀರ್ಣಕ್ರಿಯೆ ಚೆನ್ನಾಗಿರುತ್ತದೆ: ಚಳಿಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದು. ಸೇಬು ತಿನ್ನುವುದರಿಂದ ಅದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಕಾರಿ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾದರೆ ಹೃದಯದ ಆರೋಗ್ಯ ಹೆಚ್ಚುವುದು. ಚಳಿಯಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯ ಸಮಸ್ಯೆ ಉಂಟಾಗದಂತೆ ತಡೆಗಟ್ಟುವಲ್ಲಿ ಸಹಕಾರಿ.

ಮಧುಮೇಹಿಗಳೂ ತಿನ್ನಬಹುದು: ಮಧುಮೇಹಿಗಳು ಮಿತಿಯಲ್ಲಿ ಸೇಬು ತಿನ್ನಬಹುದು. ಸೇಬು ಸಮ ಮೈತೂಕ ಹೊಂದಲು ಸಹಾಯ ಮಾಡುತ್ತದೆ, ಇದರಿಂದ ಮಧುಮೇಹ ತಡೆಗಟ್ಟಬಹುದು.

ಮೈ ತೂಕ ಹೆಚ್ಚುವುದನ್ನು ತಡೆಗಟ್ಟುತ್ತದೆ: ಕೊರೆಯುವ ಚಳಿಯಲ್ಲಿ ಎದ್ದು ವ್ಯಾಯಾಮ ಮಾಡುವವರು ಯಾರು ಎಂದು ಮುದುರಿಕೊಂಡು ಮಲಗುತ್ತೇವೆ, ಇದರಿಂದ ಮೈ ತೂಕ ಹೆಚ್ಚಾಗುವುದು. ಚಳಿಗಾಲದಲ್ಲಿ ನಿಮ್ಮ ಮೈ ತೂಕ ಹೆಚ್ಚುವುದನ್ನು ತಡೆಗಟ್ಟಲು ಸೇಬು ತಿನ್ನಿ.

ಚಳಿಗಾಲದಲ್ಲಿ ಈ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು
* ಗ್ರೇಪ್‌ ಫ್ರೂಟ್‌: ಇದರಲ್ಲಿ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
* ಪಿಯರ್ಸ್: ಪಿಯರ್ಸ್‌ನಲ್ಲಿ ವಿಟಮಿನ್‌ ಸಿ, ಪೊಟಾಷ್ಯಿಯಂ, ವಿಟಮಿನ್ ಕೆ, ವಿಟಮಿನ್ ಇದೆ.
* ದಾಳಿಂಬೆ:ದಾಳಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಡ್‌ ಅಧಿಕವಿದ್ದು ದೇಹದಲ್ಲಿ ರೋಗಾಣುಗಳ ವಿರುದ್ಧ ಹೋರಾಡುತ್ತದೆ, ಅಲ್ಲದೆ ಹೀಮೋಗ್ಲೋಬಿನ್ ಹೆಚ್ಚಿಸುತ್ತದೆ.
* ಕಿತ್ತಳೆ: ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ಚಳಿಗಾಲದಲ್ಲಿ ಕಾಡುವ ಶೀತ, ಕೆಮ್ಮು ಇದರಿಂದ ರಕ್ಷಣೆ ನೀಡುತ್ತದೆ.
* ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟಾಷ್ಯಿಂ, ಮೆಗ್ನಿಷ್ಯಿಯಂ ಹಾಗೂ ನಾರಿನಂಶವಿದೆ.
* ಕ್ರಾನ್‌ಬೆರ್ರಿ:phenols ಎಂಬ ಆ್ಯಂಟಿಆಕ್ಸಿಡೆಂಡ್‌ ಅಧಿಕವಿರುವ ಹಣ್ಣಾಗಿದೆ.
* ಪೈನಾಪಲ್: A, B6, E ಮತ್ತು K,ಮೆಗ್ನಿಷ್ಯಿಯಂ, ಕಬ್ಬಿಣದಂಶ, ಕ್ಯಾಲ್ಸಿಯಂ, ರಂಜಕ, ಸತು, ಪೊಟಾಷ್ಯಿಯಂ ಇದೆ.
* ಕಿವಿ: ಕಿವಿ ಹಣ್ಣು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

English summary

Health Benefits of Eating Apples in Winter in Kannada

Why we should eat apple in winter read on....
X
Desktop Bottom Promotion