For Quick Alerts
ALLOW NOTIFICATIONS  
For Daily Alerts

ಕೀಟೊ ಡಯಟ್ ಮಾಡುವಾಗ ಗಮನದಲ್ಲಿರಿಸಬೇಕಾದ ಅಂಶಗಳು

|

ಈಗಿನ ಫಿಟ್ನೆಸ್ ದುನಿಯಾದಲ್ಲಿ ಎಲ್ಲರ ಬಾಯಲ್ಲೂ ವೈಟ್‌ಲಾಸ್, ಡಯಟ್ ಇವುಗಳದ್ದೇ ಜಪ. ಸ್ಲಿಮ್ ಆಗಿರಬೇಕು ಎಂಬುದು ಎಲ್ಲರ ಆಸೆ. ಹಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್.... ಈ ಎಲ್ಲಾ ವುಡ್ ಸೆಲೆಬ್ರಿಟಿಗಳ ಡಯಟ್ ಪ್ಲಾನ್ ಗಳತ್ತ ಆಕರ್ಷಿತ ಗೊಳ್ಳುವವರು ಜಾಸ್ತಿ. ನಾವೂ ಅದನ್ನು ಅನುಸರಿಸೋಣ ಎಂಬ ಬಯಕೆ ಅನೇಕರಿಗೆ ಇರುತ್ತದೆ.

ಆಕರ್ಷಕ ಮೈಕಟ್ಟು ಬೇಕೆಂಬ ಹಂಬಲದಲ್ಲಿ ಸ್ತ್ರೀ ಪುರುಷರೆಲ್ಲರೂ ಈಗ ಕೀಟೋ ಕಡೆ ವಾಲುತ್ತಿದ್ದಾರೆ. ಎಲ್ಲರಿಗೂ ತಾವು ಅಂದುಕೊಂಡಿರುವ ವೇಟ್ ಲಾಸ್ ಗೋಲ್ ಬೇಗ ತಲುಪಿ ಬಿಡಬೇಕೆಂಬ ಆತುರ. ಆದರೆ ಈ ಕೀಟೊ ಡಯಟ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಅದನ್ನು ಅನುಸರಿಸುವುದು ಬೆಂಕಿಯೊಂದಿಗೆ ಸರಸವಾಡಿದಂತೆ. ನಿಮ್ಮ ಆರೋಗ್ಯಕ್ಕೆ ಧಕ್ಕೆ ಉಂಟಾಗಬಹುದು.

ಹಾಗಾಗಿ ಮುಂದಿನ ಅಂಶಗಳನ್ನು ತಿಳಿದುಕೊಂಡು ಇದನ್ನು ಪ್ರಯತ್ನಿಸಿ ನೋಡಿ:

ಕಡಿಮೆ ಸಮಯದಲ್ಲಿ ಅತಿ ಹೆಚ್ಚು ತೂಕ ಇಳಿಸುವುದು

ಕಡಿಮೆ ಸಮಯದಲ್ಲಿ ಅತಿ ಹೆಚ್ಚು ತೂಕ ಇಳಿಸುವುದು

ಕಡಿಮೆ ಸಮಯದಲ್ಲಿ ಅತಿ ಹೆಚ್ಚು ತೂಕ ಇಳಿಸಲು ಬಹಳ ಜನ ಕೀಟೋ ಡಯಟ್ ಮಾಡ್ತಾರೆ. ಗೂಗಲ್ ಕೂಡ ಇದರ ಸಲಹೆಯನ್ನೇ ಕೊಡುತ್ತದೆ. ನಮ್ಮ ದಿನದ ಆಹಾರದಲ್ಲಿ ಕಡಿಮೆ ಕಾರ್ಬೋಹೈಡ್ರೈಟ್ಸ್, ಮಿತದಲ್ಲಿ ಪ್ರೊಟೀನ್ ಮತ್ತು ಅತಿ ಹೆಚ್ಚಿನ ಫ್ಯಾಟ್ ಬಳಸಬೇಕೆಂಬುದೇ ಇದರ ಮಂತ್ರ. ನಾವು ದಿನಕ್ಕೆ ಸರಾಸರಿ 1200 ಕ್ಯಾಲೋರಿಯ ಮಿತಿಯಲ್ಲಷ್ಟೇ ಆಹಾರ ತೆಗೆದುಕೊಳ್ಳೋಣವೆಂದು ಅಂದುಕೊಂಡಿದ್ದಲ್ಲಿ, ಅದರಲ್ಲಿ 60-75% ಕ್ಯಾಲೋರಿ ಫ್ಯಾಟ್ ನಿಂದ, 15-30% ಕ್ಯಾಲೋರಿ ಪ್ರೋಟೀನ್ ನಿಂದ, ಕೇವಲ 5-10% ಕ್ಯಾಲೋರಿ ಕಾರ್ಬೋಹೈಡ್ರೈಟ್ಸ್ ಇಂದ ಬರಬೇಕೆಂಬುದೇ ಇದರ ಫಾರ್ಮುಲಾ.

ತೂಕ ಇಳಿಸುವಲ್ಲಿ ಇದರ ಪಾತ್ರ ನೋಡುವುದಾದರೆ, ನಮ್ಮ ದೇಹವನ್ನು ಕೀಟೋಸಿಸ್ ಗೆ ತಂದು ನಿಲ್ಲಿಸುತ್ತದೆ. ಅಲ್ಲಿ ನಮ್ಮ ಮೆಟಬಾಲಿಕ್ ಸ್ಥಿತಿಯನ್ನು ಹೇಗೆ ಸಿದ್ಧಪಡಿಸುತ್ತದೆ ಎಂದರೆ, ನಮ್ಮ ದೇಹ ಎನರ್ಜಿಗಾಗಿ ಗ್ಲುಕೋಸ್ ಉಪಯೋಗ ಮಾಡಿಕೊಳ್ಳುವುದನ್ನು ನಿಲ್ಲಿಸಿ ಬದಲಿಗೆ ಫ್ಯಾಟ್ ಅನ್ನು ಬಳಸಿಕೊಳ್ಳುವುದಾಗಿರುತ್ತದೆ.

ಎಷ್ಟೋ ಜನ ಡಾಕ್ಟರ್ಸ್ ಮತ್ತು ಡಯಟಿಷಿಯನ್ ಗಳು ಕೀಟೋ ಡಯೆಟ್ಟನ್ನು ಒಪ್ಪುವುದಿಲ್ಲ. ಈ ಮಾದರಿಯ ಡಯಟ್ ನಲ್ಲಿ ಜನ ಆರೋಗ್ಯಕ್ಕೆ ಅಡ್ಡ ಪರಿಣಾಮ ಉಂಟು ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚೆಂದು. ಈ ಡಯಟ್ ಮಾಡುವಾಗ ತುಂಬಾ ಜಾಗರೂಕತೆಯನ್ನು ವಹಿಸಬೇಕು ಇಲ್ಲದಿದ್ದಲ್ಲಿ ಹಳಿ ತಪ್ಪಿ ಬೀಳೋದು ಖಚಿತ. ಹಾಗಾಗಿ ನೀವು ಈ ತಪ್ಪುಗಳನ್ನು ಮಾಡಿದಂತೆ ಎಚ್ಚರವಹಿಸಿ.

ಅಪೌಷ್ಟಿಕ ಆಹಾರ

ಅಪೌಷ್ಟಿಕ ಆಹಾರ

ಸೌತೆಕಾಯಿ, ಟೊಮೇಟೊ, ಕಾಲಿ ಫ್ಲವರ್ , ಕ್ಯಾರೆಟ್, ಈರುಳ್ಳಿ, ಪಾಲಕ್ ಇನ್ನು ಮುಂತಾದ ಪಿಷ್ಟ ರಹಿತ ತರಕಾರಿಗಳನ್ನು ಬಳಸದೆ ನಾರಿನಾಂಶ ಮತ್ತು ಮೈಕ್ರೋ ನ್ಯೂಟ್ರಿಯಂಟ್ಸ್ ಕೊರತೆಗೆ ತುತ್ತು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ದೀರ್ಘಾವಧಿಯಲ್ಲಿ ಈ ಡಯಟ್ ಅನುಸರಿಸದೇ ಇರುವುದು

ದೀರ್ಘಾವಧಿಯಲ್ಲಿ ಈ ಡಯಟ್ ಅನುಸರಿಸದೇ ಇರುವುದು

ಈ ಡಯಟ್ ನ ಆರಂಭದಲ್ಲಿ ನಾವು ಕಳೆದುಕೊಳ್ಳುವ ತೂಕ ನೀರಿನದ್ದಾಗಿರುತ್ತದೆ. ವಿಜ್ಞಾನದ ಪ್ರಕಾರ ಕಡಿಮೆ ಕಾರ್ಬನ್ ಕಾರ್ಬ್ಸ್ ತಿನ್ನುತ್ತಿದ್ದಾಗ ಇದರ ಫಲಿತಾಂಶ ಸಿಗುತ್ತದೆ. ಅದೇ ಕಾರ್ಬ್ಸ್ ತೆಗೆದುಕೊಳ್ಳುವುದನ್ನು ಹೆಚ್ಚು ಮಾಡಿದಾಗ ಕಳೆದುಕೊಂಡ ತೂಕ ಮತ್ತೆ ಬರುತ್ತದೆ. ಅಕ್ಕಿ, ಬೇಳೆ, ಕಾಳುಗಳಲ್ಲಿ ಕಾರ್ಬ್ಸ್ ಹೆಚ್ಚೆಂದು ದೀರ್ಘಾವಧಿಯಲ್ಲಿ ಅದನ್ನು ಬಳಸದೆಯೇ ಇರುವುದು ಸಾಧ್ಯವೇ? ನಿಮ್ಮ ದೇಹಕ್ಕೆ ಇದು ಒಪ್ಪುತ್ತದೆಯೇ ಎಂದು ಮೊದಲು ನಿರ್ಧರಿಸಿಕೊಳ್ಳಿ.

ಫ್ಯಾಟ್ ಎಷ್ಟು ಬೇಕಾದ್ರೂ ತಿನ್ನಬಹುದೆಂದುಕೊಂಡು ಮಾಡಿಕೊಳ್ಳುವ ಎಡವಟ್ಟು

ಫ್ಯಾಟ್ ಎಷ್ಟು ಬೇಕಾದ್ರೂ ತಿನ್ನಬಹುದೆಂದುಕೊಂಡು ಮಾಡಿಕೊಳ್ಳುವ ಎಡವಟ್ಟು

ಫ್ಯಾಟನ್ನು ಎಷ್ಟು ಬೇಕಾದರೂ ನಮ್ಮ ದೇಹಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿದು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಾಗಿರುವ

ಮಾಂಸಹಾರ ಹಾಗೂ ಎಣ್ಣೆಯ ತಿಂಡಿಗಳನ್ನು ಅತಿಯಾಗಿ ಬಳಸಿ ಅವುಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿಕೊಳ್ಳುವವರೇ ಜಾಸ್ತಿ. ಇದು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.

ಆವಕಾಡೊ, ಕಡಲೆಬೀಜ, ಕಲ್ಲಂಗಡಿ ಬೀಜ,ಅಗಸೆ ಬೀಜ, ಒಣ ಹಣ್ಣುಗಳು ಇನ್ನೂ ಮುಂತಾದವುಗಳಿಂದ ಆರೋಗ್ಯಕರ ಫ್ಯಾಟ್ ಸಿಗುತ್ತದೆ.

ಹಣ್ಣು ತರಕಾರಿಗಳನ್ನು ಪಕ್ಕಕ್ಕೆ ತಳ್ಳುವುದು

ಹಣ್ಣು ತರಕಾರಿಗಳನ್ನು ಪಕ್ಕಕ್ಕೆ ತಳ್ಳುವುದು

ಕಿಟೊ ಡಯಟ್ ಕಡಿಮೆ ಕಾರ್ಬ್ಸ್, ಹೆಚ್ಚು ಫ್ಯಾಟ್ ಇದಷ್ಟೇ ತುಂಬಾ ಜನಗಳಿಗೆ ಕಾಣಿಸುವುದು. ಹಾಗಾಗಿ ಹಣ್ಣು, ತರಕಾರಿಗಳನ್ನು ಕಡೆಗಾಣಿಸುತ್ತಾರೆ. ಪೊಟ್ಯಾಶಿಯಂ, ಫೈಬರ್, ಮೆಗ್ನೀಷಿಯಂ, ಕ್ಯಾಲ್ಸಿಯಂ, ವಿಟಮಿನ್ ಬಿ ಮುಂತಾದ ಕೊರತೆಗಳಿಂದ ತದನಂತರ ಬಳಲುತ್ತಾರೆ.

ಸಾಕಷ್ಟು ನೀರನ್ನು ಕುಡಿಯದೆ ಇರುವುದು

ಸಾಕಷ್ಟು ನೀರನ್ನು ಕುಡಿಯದೆ ಇರುವುದು

ಕೀಟೋ ಡಯಟ್ ನಲ್ಲಿ ಹೆಚ್ಚು ಫ್ಯಾಟ್ , ಕಮ್ಮಿ ಕಾರ್ಬ್ಸ್ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಎಷ್ಟೋ ಜನ ನೀರು ಕುಡಿಯುವುದನ್ನೇ ಕಡಿಮೆ ಮಾಡಿಬಿಡುತ್ತಾರೆ. ಹಟಾತ್ತನೆ ಕಾರ್ಬ್ಸ್ ಕಮ್ಮಿ ಮಾಡುವುದರಿಂದ ದೇಹದಲ್ಲಿ ನೀರಿನ ಮತ್ತು ಎಲೆಕ್ಟ್ರೋಲೈಟ್ಸ್ ನ ಅಸಮತೋಲನ ಉಂಟಾಗುತ್ತದೆ. ಡೀಹೈಡ್ರೇಶನ್ ಕೂಡ ಉಂಟಾಗುತ್ತದೆ.

ಪ್ಯಾಕೆಟ್, ಫುಡ್ ಗಳಿಂದ ಆಗುವ ಅಪಾಯ

ಪ್ಯಾಕೆಟ್, ಫುಡ್ ಗಳಿಂದ ಆಗುವ ಅಪಾಯ

ಕೀಟೋ ಡಯಟ್ ನಲ್ಲಿ ಫ್ಯಾಟ್ ತೆಗೆದುಕೊಳ್ಳಬಹುದು ಎಂಬುದು ಎಷ್ಟೋ ಜನಕ್ಕೆ ಮಜವೆನಿಸುತ್ತದೆ. ಹಾಗಾಗಿ ಪ್ಯಾಕೆಟ್ ಫುಡ್ ಉಪಯೋಗಿಸಬಹುದು, ತುಂಬಾ ಫ್ಯಾಟ್ ಇರುತ್ತದೆ ಒಳ್ಳೆಯದೇ ಆಯಿತು ಕೆಲಸನು ತಪ್ಪಿತು ರೆಡಿನೂ ಇರುತ್ತೆ, ನಾಲಿಗೆಗೂ ಹಿತವೆಂದು ಅತಿಯಾಗಿ ಪ್ಯಾಕೆಟ್ ಫುಟ್ ಗಳನ್ನು ಬಳಸುತ್ತಾರೆ. ಇದರಲ್ಲಿರುವ ಪ್ರಿಸರ್ವೇಟಿವ್ ಗಳ ಬಗ್ಗೆ ಯೋಚಿಸುವುದೇ ಇಲ್ಲ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವುದರಿಂದ ಅತಿಯಾಗಿ ಚೀಸ್ ತಿನ್ನುವುದು ಕೂಡ ಒಳ್ಳೆಯದಲ್ಲ. ಅಸ್ತಮಾ, ಬಂಜೆತನ, ಡಯಾಬಿಟಿಸ್ ಇನ್ನೂ ಮುಂತಾದ ರೋಗಗಳು ಪ್ಯಾಕೆಟ್ ಫುಡ್ ಗಳಿಂದ ಬರುವ ಸಾಧ್ಯತೆಗಳಿರುತ್ತದೆ.

ತೂಕ ಇಳಿಸುವುದಷ್ಟೇ ಗುರಿ ಮಾಡಿಕೊಳ್ಳದೆ, ಈ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಒಂದು ಪರಿಪೂರ್ಣವಾದ ಪೌಷ್ಟಿಕ ಆಹಾರ ಕ್ರಮದ ಮಾದರಿಯನ್ನು ಮೊದಲು ಗೊತ್ತುಪಡಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಈ ಮಾದರಿ ನಿಮಗೆ ಒಗ್ಗುತ್ತದೆಯೇ ಎಂದು ಯೋಚಿಸಿ. ನಿಮ್ಮ ಡಯಟಿಷಿಯನ್ ಜೊತೆ ಚರ್ಚಿಸಿ ಮುಂದುವರೆಯುವುದೇ ಸೂಕ್ತ.

English summary

Common Keto Diet Mistakes in kannada

Here we are discussing about the common mistakes we do while doing keto diet and how to avoid it. Read more.
X
Desktop Bottom Promotion