For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ಡಯಟ್: ಕೀಮೋಥೆರಪಿ ಮಾಡಿಸಿದಾಗ ಈ ಆಹಾರ ಒಳ್ಳೆಯದು

|

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೀಮೋಥೆರಪಿ ತುಂಬಾನೇ ಪರಿಣಾಮಕಾರಿ. ಈಮೋಥೆರಪಿಯಲ್ಲಿ ಕ್ಯಾನ್ಸರ್‌ ಕಣಗಳನ್ನು ನಾಶಪಡಿಸಲಾಗುವುದು. ಈ ಸಮಯದಲ್ಲಿ ರೋಗಿಯ ಚಿಕಿತ್ಸೆಯ ಜೊತೆಗೆ ಅವರ ಆಹಾರಕ್ರಮದ ಕಡೆ ಕೂಡ ಗಮನಹರಿಸಬೇಕು, ಅವರಿಗೆ ಈ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಅವರ ಡಯಟ್‌ನಲ್ಲಿ ಸೇರಿಸಿದರೆ ಅವರ ದೇಹಕ್ಕೆ ಶಕ್ತಿ ದೊರೆಯುವುದರ ಜೊತೆಗೆ ದೇಹದ ಕೆಲಸ ಕಾರ್ಯಗಳಿಗೆ ಸಹಾಯವಾಗುವುದು.

ಕೀಮೋಥೆರಪಿ ಮಾಡಿಸುತ್ತಿರುವ ರೋಗಿಗೆ ಯಾವ ಆಹಾರಗಳು ತುಂಬಾ ಒಳ್ಳೆಯದು ಎಂದು ನೋಡೋಣ:

ಓಟ್‌ಮೀಲ್‌

ಓಟ್‌ಮೀಲ್‌

ಓಟ್‌ಮೀಲ್‌ನಲ್ಲಿ ಪ್ರೊಟೀನ್‌, ಕಾರ್ಬ್ಸ್ ಜೊತೆಗೆ ಆ್ಯಂಟಿಆಕ್ಸಿಡೆಂಟ್‌ಗಳಿರುತ್ತೆ. ಈ ಆಹಾರ ಬಾಯಿಗೆ ರುಚಿಯಾಗಿ ಸಿಗಲು ನೀವು ಸೀಸನಲ್‌ ಫ್ರೂಟ್ಸ್‌ ಕೂಡ ಸೇರಿಸಬಹುದು.

ಬೆಣ್ಣೆಹಣ್ಣು (ಅವೊಕಾಡೊ)

ಬೆಣ್ಣೆಹಣ್ಣು (ಅವೊಕಾಡೊ)

ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ಮೋನೋಸ್ಯಾಚುರೇಟಡ್‌ ಫ್ರೂಟ್ಸ್ ಇದ್ದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುವಲ್ಲಿ ಸಹಕಾರಿ. ಅಲ್ಲದೆ ಬೆಣ್ಣಹಣ್ಣು ದೇಹಕ್ಕೆ ಶಕ್ತಿಯನ್ನು ನೀಡುವುದು. ಇದನ್ನು ಹಾಗೇ ಸೇವಿಸಬಹುಉದ ಅಥವಾ ಜ್ಯೂಸ್‌ ಮಾಡಿ ಸವಿಯಬಹುದು, ಆದರೆ ಸಕ್ಕರೆ ಸೇರಿಸಬೇಡಿ.

ಮೊಟ್ಟೆ

ಮೊಟ್ಟೆ

ಕೀಮೋಥೆರಪಿಯ ಪ್ರಮುಖ ಅಡ್ಡಪರಿಣಾಮವೆಂದರೆ ತಲೆಸುತ್ತು. ತಜ್ಞರ ಪ್ರಕಾರ ಮೊಟ್ಟೆ ಸೇವನೆಯಿಂದ ಸುಸ್ತು ಕಡಿಮೆಯಾಗುವುದು. ಇದರಿಂದ ಪ್ರೊಟೀನ್ ಹಾಗೂ ಕೊಬ್ಬಿನಂಶವಿರುತ್ತದೆ.

ಆದರೆ ಮೊಟ್ಟೆಯನ್ನು ಕೊಡುವಾಗ ಬೇಯಿಸಿದ ಮೊಟ್ಟೆಯನ್ನಷ್ಟೇ ನೀಡಿ, ಹಾಫ್‌ ಬಾಯಲ್ಡ್ ಅಥವಾ ಚೆನ್ನಾಗಿ ಬೆಂದಿರದ ಮೊಟ್ಟೆ ಫುಡ್‌ ಪಾಯಿಸನ್ ಉಂಟು ಮಾಡಬಹುದು.

 ಸೂಪ್‌

ಸೂಪ್‌

ಕೀಮೋಥೆರಪಿ ಮಾಡಿಸಿದಾಗ ವಾಂತಿ-ಬೇಧಿಯಿಂದಾಗಿ ದೇಹದಲ್ಲಿ ಸೂಪ್‌ನಂ ಕಡಿಮೆಯಾಗಿರುತ್ತದೆ, ಆಗ ಸೂಪ್‌ ಕುಡಿದರೆ ಒಳ್ಳೆಯದು. ನೀರು, ಕೆಲವು ಹರ್ಬ್ಸ್ ಬೇಕಿದ್ದರೆ ಚಿಕನ್‌, ಮಟನ್ ಸೇರಿಸಿ ಸೂಪ್ ಮಾಡಬಹುದು. ತರಕಾರಿ ಸೇರಿಸಬಹುದು, ಆದರೆ ಜೀರ್ಣಕ್ರಿಯೆ ಶಕ್ತಿ ತುಂಬಾ ಕಡಿಮೆಯಿದ್ದಾಗ ಹರ್ಬ್ಸ್ ಸೇರಿಸಿದ ಸಿಂಪಲ್ ಸೂಪ್ ಕುಡಿಯಿರಿ.

ಬಾದಾಮಿ ಹಾಗೂ ನಟ್ಸ್‌

ಬಾದಾಮಿ ಹಾಗೂ ನಟ್ಸ್‌

ಬಾದಾಮಿ, ಕುಂಬಳಕಾಯಿ ಬೀಜ ಇವುಗಳ ಸೇವನೆ ಒಳ್ಳೆಯದು, ಆದರೆ ರಕ್ತ ಬದಲಾವಣೆಯ ಚಿಕಿತ್ಸೆ ಮಾಡಿದ್ದರೆ ಕಬ್ಬಿಣದಂಶ ಅಧಿಕವಿರುವ ಡ್ರೈ ಫ್ರೂಟ್ಸ್‌ ಅಂದರೆ ಸಿಹಿ ಕುಂಬಳಕಾಯಿ ಬೀಜ ಬೇಡ.

ಡ್ರೈ ಫ್ರೂಟ್ಸ್‌, ಬೆರ್ರಿ, ನಟ್ಸ್ ಇವುಗಳನ್ನು ಮಿಶ್ರ ಮಾಡಿ ತಿಂದರೆ ಬಯಿಗೆ ರುಚಿ ಇರುತ್ತೆ.

ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು

ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು

ಈ ಬಗೆಯ ಆಹಾರಗಳನ್ನು ಬೇಯಿಸಿ ಅಥವಾ ಪಲ್ಯ ರೀತಿ ಮಾಡಿ ಕೊಡಬಹುದು.ಇವುಗಳಲ್ಲಿ ವಿಟಮಿನ್ ಸಿ ಇರುವುದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.

ಬ್ರೆಡ್

ಬ್ರೆಡ್

ವಾಂತಿ, ಬೇಧಿ ಇದ್ದ ಸಮಯದಲ್ಲಿ ಬರೀ ಬ್ರೆಡ್‌ ಮಾತ್ರ ಸೇವಿಸುವುದು ಒಳ್ಳೆಯದು, ವೈಟ್‌ ಬ್ರೆಡ್‌ ಸೇವಿಸಿ. ಹೊಟ್ಟೆ ಚೆನ್ನಾಗಿ ಇದ್ದಾಗ ಇದನ್ನು ಸ್ಯಾಂಡ್‌ವಿಚ್ ಮಾಡಿ ಬಾಯಿಗೆ ರುಚಿಯಾಗುವಂತೆ ಮಾಡಿ ಸವಿಯಬಹುದು.

ಮೀನು

ಮೀನು

ಸಮುದ್ರಾಹಾರ ಸೇವಿಸುವವರಾದರೆ ಮೀನನ್ನು ತಿನ್ನುವುದು ಒಳ್ಳೆಯದು, ಇದರಿಂದ ದೇಹಕ್ಕೆ ಅಗ್ಯತವಾದ ಒಮೆಗಾ 3 ಕೊಬ್ಬಿನಂಶ ದೊರೆಯುತ್ತದೆ, ಅಲ್ಲದೆ ಈ ಆಹಾರ ಸೇವನೆ ತುಂಬಾ ತೂಕ ಇಳಿಕೆಯಾಗುವುದನ್ನು ಕೂಡ ತಡೆಗಟ್ಟಬಹುದು.

ಸಾಲಮೋನ್, ಮತ್ತಿ ಈ ಬಗೆಯ ಮೀನನ್ನು ಸೇವಿಸಿ.

English summary

Cancer Diet : List of Foods to Eat During Chemotherapy in kannada

Cancer Diet: During Chemotherapy better to give these foods, this helps to avoid weightloss and tired read on...
Story first published: Friday, October 14, 2022, 15:54 [IST]
X
Desktop Bottom Promotion