For Quick Alerts
ALLOW NOTIFICATIONS  
For Daily Alerts

ನೃತ್ಯ ಮಾಡುವುದರಿಂದ ಗಂಟೆಯೊಳಗೆ ತೂಕ ಇಳಿಸಬಹುದು ಗೊತ್ತೆ!

|

ಮನಸ್ಸು ಖುಷಿಯನ್ನು ಅನುಭವಿಸಿದಾಗ ಒಂದೆರಡು ಹೆಜ್ಜೆ ಹಾಕಿ ನೃತ್ಯ ಮಾಡಬೇಕು ಎನಿಸುವುದು. ನೃತ್ಯವನ್ನು ಮಾಡುವುದರಿಂದ ನಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಹಿತವಾದ ಅನುಭವ ಉಂಟಾಗುವುದು. ನೃತ್ಯ ಮಾಡುವುದರಿಂದ ದೇಹದ ಎಲ್ಲಾ ಅಂಗಾಂಗಗಳಿಗೂ ವ್ಯಾಯಾಮ ಆಗುವುದು. ಅವು ತನ್ನಿಂದ ತಾನೇ ಕ್ರಿಯಾ ಶೀಲತೆಯನ್ನು ಪಡೆದುಕೊಂಡು ಸಂತೋಷವನ್ನು ಅನುಭವಿಸುತ್ತವೆ. ಮಾನಸಿಕವಾಗಿ ಹೆಚ್ಚಿನ ಆನಂದ ದೊರೆಯುವುದು. ಕೆಲವು ಅಧ್ಯಯನಗಳ ಪ್ರಕಾರ ನೃತ್ಯ ಮಾಡುವುದರಿಂದ ಮಾನಸಿಕ ಒತ್ತಡವು ಇಳಿಮುಖವಾಗುವುದು. ಅಲ್ಲದೆ ಚೈತನ್ಯ ಶೀಲ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು.

Burn Your Calories In An Hour Of Moderate Dancing

ಈ ನಿಟ್ಟಿನಲ್ಲಿ ಇಂದು ಅನೇಕರು ನೃತ್ಯ ರೂಪದ ವ್ಯಾಯಾಮ ಮಾಡಲು ಮುಂದಾಗುತ್ತಿದ್ದಾರೆ. ವಿವಿಧ ಬಗೆಯ ನೃತ್ಯದ ಹೆಜ್ಜೆ ಹಾಕುವುದರಿಂದ ದೇಹದಲ್ಲಿ ಅಡಗಿರುವ ಅನಗತ್ಯ ಕೊಬ್ಬುಗಳು ಕರಗುತ್ತವೆ. ಆಗ ದೇಹವು ಅತ್ಯಂತ ಆಕರ್ಷಣೆಯನ್ನು ಪಡೆದುಕೊಳ್ಳುವುದು ಎಂದು ಹೇಳಲಾಗುತ್ತಿದೆ. ಮುಂದುವರಿದ ದೇಶಗಳಲ್ಲಿ ನೃತ್ಯ ವ್ಯಾಯಾಮ ಶಾಲೆಗಳು ಸಾಕಷ್ಟು ಇವೆ, ಆದರೆ ನಮ್ಮ ದೇಶದಲ್ಲಿ ವಿರಳವಾಗಿ ನೃತ್ಯದ ವ್ಯಾಯಾಮ ಶಾಲೆ ಇರುವುದನ್ನು ಕಾಣಬಹುದು. ಅಲ್ಲಿಯ ಜನರು ತಮಗೆ ಅಗತ್ಯವಾದ ವ್ಯಾಯಾಮಗಳನ್ನು ಸುಲಭವಾಗಿ ಆರಿಸಿಕೊಳ್ಳಬಹುದು. ನಮ್ಮ ದೇಶದಲ್ಲಿ ನೃತ್ಯ ಶಾಲೆ ವಿರಳವಾಗಿರುವುದರಿಂದ ಆಯ್ಕೆಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ನೀವೇ ಕೆಲವು ನೃತ್ಯದ ಹೆಜ್ಜೆಯನ್ನು ಹಾಕುವುದರ ಮೂಲಕ ನೃತ್ಯ ಚಟುವಟಿಕೆಯನ್ನು ಮಾಡಬಹುದು.

ವ್ಯಾಯಾಮ ಮತ್ತ ಜಿಮ್ ಗಿಂತ ನೃತ್ಯವೇ ಉತ್ತಮ

ವ್ಯಾಯಾಮ ಮತ್ತ ಜಿಮ್ ಗಿಂತ ನೃತ್ಯವೇ ಉತ್ತಮ

ಕೆಲವು ಸಂಶೋಧನೆ ಹಾಗೂ ಅಧ್ಯಯನಗಳ ಪ್ರಕಾರ ವ್ಯಾಯಾಮ ಹಾಗೂ ಜಿಮ್ ‍ಗಳಿಗಿಂತ ನೃತ್ಯ ಮಾಡುವುದರ ಮೂಲಕ ಬಹುಬೇಗ ಕ್ಯಾಲೋರಿಯನ್ನು ಕರಗಿಸಬಹುದು. ನೀವು ಜಿಮ್ ಹಾಗೂ ವ್ಯಾಯಾಮದಿಂದ ಬೇಸತ್ತಿದ್ದೀರಿ ಎಂದಾದರೆ ನಿಮ್ಮ ದಿನಚರಿಯಲ್ಲಿ ನೃತ್ಯವನ್ನು ಸೇರಿಸಿಕೊಳ್ಳಬಹುದು. ನೃತ್ಯವನ್ನು ಸಾಮಾನ್ಯವಾಗಿ ಮನರಂಜನಾ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ನೃತ್ಯ ಅದ್ಭುತವಾದ ಫಿಟ್ ನೆಸ್ ಚಟುವಟಿಕೆಯಾಗಿದೆ. ನೀವು ಸಹ ಮನೆಯಲ್ಲಿ ಒಂದು ಗಂಟೆಗಳ ಕಾಲ ನೃತ್ಯ ಚಟುವಟಿಕೆ ಕೈಗೊಂಡರೆ ಸುಲಭವಾಗಿ ದೇಹದ ಕ್ಯಾಲೋರಿಯನ್ನು ಇಳಿಸಬಹುದು. ನೃತ್ಯ ಮಾಡುವುದರಿಂದ ಯಾವ ಬಗೆಯಲ್ಲಿ ದೇಹದ ತೂಕ ಇಳಿಯುವುದು? ನೃತ್ಯದ ಚಟುವಟಿಕೆ ಹೇಗಿರಬೇಕು? ಎನ್ನುವ ಸಂಗತಿಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಲೇಖನದ ಮುಂದಿನ ಭಾಗ ವಿವರಿಸುವುದು.

ಒಂದು ಗಂಟೆಯಲ್ಲಿ ಎಷ್ಟು ಕ್ಯಾಲೋರಿ ಇಳಿಸಬಹುದು?

ಒಂದು ಗಂಟೆಯಲ್ಲಿ ಎಷ್ಟು ಕ್ಯಾಲೋರಿ ಇಳಿಸಬಹುದು?

ಒಂದು ಗಂಟೆಯಲ್ಲಿ ಎಷ್ಟು ಕ್ಯಾಲೋರಿಯನ್ನು ಸುಡಬಹುದು ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ದೇಹದ ಸಂಯೋಜನೆ, ಯಾವ ನೃತ್ಯವನ್ನು ಅವಲಂಬಿಸಿದ್ದೀರಿ ಎನ್ನುವುದು? ನಿಮ್ಮ ತೀವ್ರತೆ, ದೇಹದ ತೂಕ ಮತ್ತು ನೀವು ನಿತ್ಯ ಕೈಗೊಳ್ಳುವ ನೃತ್ಯದ ಬಗೆ ಎಲ್ಲವೂ ಪರಿಗಣಿಸಬೇಕಾಗುವುದು. ಉದಾಹರಣೆಯ ಪ್ರಕಾರ 56 ಕಿ.ಲೋ ತೂಕದ ವ್ಯಕ್ತಿಯು ನೃತ್ಯ ಮಾಡುವಾಗ ನಿಮಿಷಕ್ಕೆ 5.5 ಕ್ಯಾಲೋರಿಯನ್ನು ಕಳೆದುಕೊಳ್ಳಬಹುದು. 125 ಪೌಡ್ ತೂಕ ಇರುವವರು ಒಂದು ಅಂದಾಜಿನ ಪ್ರಕಾರ 5.5 ಕ್ಯಾಲೋರಿಯನ್ನು ಸುಡುತ್ತಾರೆ. ಒಂದು ಅಧ್ಯಯನದ ಪ್ರಕಾರ 56 ಕಿಲೋ ತೂಕದ ವ್ಯಕ್ತಿಯು ಒಂದು ಗಂಟೆಗೆ 330 ಕ್ಯಾಲೋರಿಯನ್ನು ಸುಡಬಹುದು.

ಕ್ಯಾಲೋರಿ ಬಗ್ಗೆ ಇರಲಿ ಜ್ಞಾನ

ಕ್ಯಾಲೋರಿ ಬಗ್ಗೆ ಇರಲಿ ಜ್ಞಾನ

ಕೇವಲ ನೃತ್ಯ ಮಾಡುವುದೊಂದೇ ಗುರಿಯಾಗಬಾರದು. ಅದರೊಂದಿಗೆ ಕ್ಯಾಲೋರಿ ಬಗ್ಗೆಯೂ ಜ್ಞಾನ ಇರಬೇಕು. ಇಲ್ಲವಾದರೆ ದೇಹದಲ್ಲಿ ಕ್ಯಾಲೋರಿಯ ಕೊರತೆಯು ಉಂಟಾಗುವ ಸಾಧ್ಯತೆಗಳಿರುತ್ತವೆ. 1 ಕಿಲೋ ಕೊಬ್ಬನ್ನು ಕಳೆದುಕೊಳ್ಳಬೇಕು ಎಂದರೆ ವಾರದಲ್ಲಿ 3,500ರಷ್ಟು ಕಡಿಮೆ ಕ್ಯಾಲೋರಿಯನ್ನು ಹೊಂದಬೇಕು. ಇದರೊಟ್ಟಿಗೆ ಪ್ರತಿದಿನ ಒಂದು ಗಂಟೆಗಳ ಕಾಲ ಮಧ್ಯಮ ತೀವ್ರತೆಯ ನೃತ್ಯ ಮಾಡಬೇಕು. ಆಗ ನೀವು 10 ರಿಂದ 11 ದಿನದ ಒಳಗೆ 1 ಕಿಲೋ ತೂಕವನ್ನು ಕಳೆದುಕೊಳ್ಳುತ್ತೀರಿ.

ಕನಿಷ್ಠ ಒಂದು ಗಂಟೆ ನೃತ್ಯ

ಕನಿಷ್ಠ ಒಂದು ಗಂಟೆ ನೃತ್ಯ

ನೃತ್ಯದಿಂದ ನೀವು ನಿಮ್ಮ ದೇಹದ ತೂಕ ಇಳಿಸಲು ಬಯಸುತ್ತೀರಿ ಎಂದಾದರೆ ಕ್ಯಾಲೋರಿ ಕೊರತೆಯನ್ನು ಸೃಷ್ಟಿಸಿಕೊಳ್ಳಲು ಸಾಕಷ್ಟು, ಕನಿಷ್ಠ ಒಂದು ಗಂಟೆ ನೃತ್ಯವನ್ನು ಮಾಡಬೇಕು. ಒಂದು ಪೌಂಡ್ ಕೊಬ್ಬನ್ನು ಕರಗಿಸಬೇಕು ಎಂದರೆ ನೀವು ಸುಮಾರು 3500ರಷ್ಟು ಕ್ಯಾಲೋರಿ ಕೊರತೆಯನ್ನು ನೀವು ನಿರ್ವಹಿಸಬೇಕು. 125 ಪೌಡ್ ಹೊಂದಿರುವವರು ದಿನಕ್ಕೆ ಒಂದು ಗಂಟೆಗಳ ಕಾಲ ನೃತ್ಯ ಮಾಡುವುದರಿಂದ ಪ್ರತಿ 10-11 ದಿನಗಳಿಗೊಮ್ಮೆ 1 ಕೆ.ಜಿ ತೂಕವನ್ನು ಇಳಿಸಬಹುದು.

ತೀವ್ರತೆಯನ್ನು ಹೆಚ್ಚಿಸಿ

ತೀವ್ರತೆಯನ್ನು ಹೆಚ್ಚಿಸಿ

ನೀವು ನಿಮ್ಮ ನೃತ್ಯದ ತೀವ್ರತೆಯನ್ನು ಹೆಚ್ಚಿಸುತ್ತಾ ಹೋದಂತೆ ಹೆಚ್ಚಿನ ಶಕ್ತಿಯನ್ನು ವ್ಯಯಿಸಲು ಸಾಧ್ಯವಾಗುತ್ತದೆ. ನೃತ್ಯದಿಂದ ಸಾಕಷ್ಟು ವ್ಯಾಯಾಮಗಳು ದೇಹಕ್ಕೆ ಉಂಟಾಗುತ್ತವೆ. ಆಗ ದೇಹದ ಕ್ಯಾಲೋರಿಯ ಮೇಲೆ ನೇರ ಪರಿಣಾಮ ಉಂಟಾಗುವುದು. ಹೆಚ್ಚಿನ ಹುರುಪನ್ನು ಹೊಂದಿದ್ದೀರಿ, ತೂಕ ಇಳಿಸಲು ಉತ್ಸುಕರಾಗಿದ್ದೀರಿ ಎಂದರೆ ನೃತ್ಯದಲ್ಲಿ ತೀವ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. 125 ಕೆ.ಜಿ ತೂಕ ಇರುವವರು ಗಂಟೆಗೆ ಸುಮಾರು 360 ಕ್ಯಾಲೋರಿಯನ್ನು ಸುಡುವ ನಿರೀಕ್ಷೆಯನ್ನು ಹೊಂದಿರಬೇಕು. ತೂಕ ಇಳಿಸಲು ಹೆಚ್ಚು ಕ್ಯಾಲೋರಿಯನ್ನು ಇಳಿಸಿದರೆ ಬಹುಬೇಗ ತೂಕದ ಇಳಿಕೆಯನ್ನು ಕಾಣಬಹುದು.

ಆರೋಗ್ಯಕರ ಆಹಾರವನ್ನು ಸೇವಿಸಿ

ಆರೋಗ್ಯಕರ ಆಹಾರವನ್ನು ಸೇವಿಸಿ

ತೀವ್ರವಾದ ಅಥವಾ ಪರಿಣಾಮಕಾರಿ ಹೆಜ್ಜೆಯ ಮೂಲಕ ನೃತ್ಯ ಮಾಡುತ್ತಿದ್ದೀರಿ, ಕ್ಯಾಲೋರಿಯು ಉತ್ತಮ ಪ್ರಮಾಣದಲ್ಲಿ ಕರಗುತ್ತಿದೆ ಎಂದಾಗಲೂ ನಿಮ್ಮ ಆಹಾರ ಕ್ರಮದ ಮೇಲೆ ಸಾಕಷ್ಟು ನಿಗಾ ವಹಿಸಬೇಕು. ಆರೋಗ್ಯಕರ ಆಹಾರದ ಸೇವನೆ ಅತ್ಯಂತ ಪ್ರಮುಖವಾದದ್ದು. ನೃತ್ಯ ಮಾಡುವ ಚಟುವಟಿಕೆ ಒಂದೆಡೆ ಇಟ್ಟುಕೊಂಡು ಅದರೊಟ್ಟಿಗೆ ಅಧಿಕ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿದರೆ ಯಾವುದೇ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಆಗ ದೇಹದಲ್ಲಿ ತೂಕ ನಷ್ಟವೂ ಸಂಭವಿಸುವುದಿಲ್ಲ. ತೂಕ ಇಳಿಸುವಾಗ ನಮ್ಮ ಆಹಾರ ಕ್ರಮವು ಅತ್ಯಂತ ಪ್ರಮುಖವಾಗಿರುತ್ತದೆ. ಕಡಿಮೆ ಪ್ರಮಾಣದ ಕ್ಯಾಲೋರಿ ಹೊಂದಿರುವ ಆಹಾರಗಳನ್ನು ಹೊಂದಬೇಕು. ಅದರೊಟ್ಟಿಗೆ ತೀವ್ರವಾದ ನೃತ್ಯ ಚಟುವಟಿಕೆಯನ್ನು ಕೈಗೊಳ್ಳಬೇಕು. ಆಗಲೇ ದೇಹದ ತೂಕ ನಿರೀಕ್ಷೆಯಂತೆ ಇಳಿಕೆ ಕಾಣುವುದು.

ನಿಮ್ಮ ಡಯಟ್ ಆಹಾರ ಹೀಗಿರಬೇಕು

ನಿಮ್ಮ ಡಯಟ್ ಆಹಾರ ಹೀಗಿರಬೇಕು

ದೇಹದ ತೂಕ, ಆರೋಗ್ಯ, ಆಹಾರದ ಬಗ್ಗೆ ನೀವು ಸೂಕ್ತ ಗಮನವನ್ನು ನೀಡಿದಾಗ ಮಾತ್ರ ಅಂದುಕೊಂಡ ತೂಕವನ್ನು ಇಳಿಸಲು ಸಾಧ್ಯ. ನೀವು ತೂಕ ಇಳಿಸುವ ಹವಣಿಕೆಯಲ್ಲಿ ಇದ್ದರೆ ಅನಗತ್ಯವಾಗಿ ತಿನ್ನುವುದು, ದೇಹವನ್ನು ದಂಡಿಸದೆ ಇರಬಾರದು. ಬದಲಿಗೆ ವಿವಿಧ ಹಣ್ಣುಗಳೂ, ಹಸಿ ತರಕಾರಿ, ಮೊಳಕೆ ಭರಿಸಿದ ಕಾಳುಗಳು, ಕೊಬ್ಬು ರಹಿತ ಆಹಾರ ಪದಾರ್ಥ, ಕಡಿಮೆ ಕೊಬ್ಬನ್ನು ಹೊಂದಿರುವ ಡೈರಿ ಉತ್ಪನ್ನಗಳು, ಅಧಿಕ ಪ್ರಮಾಣದ ಪ್ರೋಟೀನ್ ಆಹಾರ ಸೇವಿಸಬೇಕು. ಆಗ ನಿಮ್ಮ ದೇಹದ ತೂಕವನ್ನು ಇಳಿಸುವ ಗುರಿ ಸಾಧಿಸಲು ಸಾಧ್ಯವಾಗುವುದು. ಆಹಾರ ಮತ್ತು ವ್ಯಾಯಾಮ ಎನ್ನುವುದು ಪರಸ್ಪರ ಸಂಬಂಧವನ್ನು ಪಡೆದುಕೊಂಡಿವೆ. ಅವುಗಳೆರಡನ್ನು ಒಂದು ಮಾರ್ಗದಲ್ಲಿ ಅನುಸರಿಸಿದರೆ ಮಾತ್ರ ಬಹುಬೇಗ ತೂಕವನ್ನು ಇಳಿಸಬಹುದು.

ನೃತ್ಯದಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು

ನೃತ್ಯದಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು

- ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

- ಸಮತೋಲನ ಮತ್ತು ಶಕ್ತಿಯನ್ನು ಸುಧಾರಿಸುತ್ತದೆ.

- ನಿಮ್ಮ ಮೆದುಳಿಗೆ ಸವಾಲು ಹಾಕುತ್ತದೆ.

- ನಮ್ಯತೆಯನ್ನು ಸುಧಾರಿಸುತ್ತದೆ.

- ಒತ್ತಡವನ್ನು ಕಡಿಮೆ ಮಾಡುತ್ತದೆ.

- ಏಕಾಗ್ರತೆ ಹೆಚ್ಚುತ್ತದೆ.

- ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

- ಮನಃಸ್ಥಿತಿಯನ್ನು ಉತ್ತಮವಾಗಿ ಇರಿಸುತ್ತದೆ.

English summary

Burn Your Calories In An Hour Of Moderate Dancing

If you are someone who finds gymming dull and intimidating, then include dancing in your routine. Dancing is often considered as a recreational activity, but in reality, it can be an awesome fitness activity. You can burn a good amount of calories if you practice it regularly. It does not matter if you choose salsa, hip hop, jazz, belly, ballet or Classical dance. As long as you enjoy it, move your body to the beat properly and be consistent about it to reap maximum benefits.
X
Desktop Bottom Promotion