For Quick Alerts
ALLOW NOTIFICATIONS  
For Daily Alerts

ಇಂಥಾ ತಪ್ಪು ಅಭ್ಯಾಸಗಳಿಂದ ನಿಮ್ಮ ತೂಕ ಎಂದಿಗೂ ಕಡಿಮೆ ಆಗುವುದಿಲ್ಲ

|

ನಮ್ಮ ಆಹಾರ ಕ್ರಮವೇ ನಮ್ಮ ಆರೋಗ್ಯದ ರಹಸ್ಯ. ತೂಕ ಇಳಿಸಲು ಬಯಸುವ ಹಲವರು ಮೊದಲಿಗೆ ಮಾಡುವ ಕೆಲಸ ಊಟ ಬಿಡುವುದು. ತಮ್ಮ ಆಹಾರ ಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿಬಿಡುತ್ತಾರೆ, ಅಷ್ಟೇ ಅಲ್ಲದೆ ಕೆಲವರು ಜಿಮ್‌ಗೆ ಹೋಗುತ್ತಾರೆ. ಆದರೆ ಈ ತಪ್ಪು ಅಭ್ಯಾಸವು ಅವರ ತೂಕವನ್ನು ಕಡಿಮೆ ಮಾಡುವ ಬದಲಿಗೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚು.

ತಜ್ಞರ ಪ್ರಕಾರ ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ತೂಕ ಕಡಿಮೆಯಾಗದ ಕಾರಣ ನಿಮ್ಮ ಆಹಾರ ಪದ್ಧತಿ ಹಾಗೂ ಕೆಲವು ಸರಿ ಎಂದುಕೊಂಡಿರುವ ಕೆಟ್ಟ ಅಭ್ಯಾಸಗಳು. ಪ್ರತಿದಿನ ನೀವು ಅಂತಹ ಕೆಲವು ತಪ್ಪುಗಳನ್ನು ಮಾಡುತ್ತೀರಿ, ಯಾವುದು ಈ ಅಭ್ಯಾಸಗಳು ಮುಂದೆ ತಿಳಿಯೋಣ:

ಹೆಚ್ಚು ಜ್ಯೂಸ್ ಸೇವನೆ

ಹೆಚ್ಚು ಜ್ಯೂಸ್ ಸೇವನೆ

ನೀವು ನೀರಿನ ಬದಲು ಹೆಚ್ಚು ಜ್ಯೂಸ್ ಸೇವಿಸಿದರೆ, ಇದರಿಂದ ನೀವು ತೂಕವನ್ನು ಕಳೆದುಕೊಳ್ಳುವುದಿಲ್ಲ. ರಸದಲ್ಲಿ ಕಂಡುಬರುವ ಸಕ್ಕರೆಯು ನಿಮ್ಮ ದೇಹದಲ್ಲಿ ಕೊಬ್ಬನ್ನು ಉತ್ಪಾದಿಸುತ್ತದೆ. ಇದರಿಂದ ತೂಕ ಇನ್ನೂ ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ. ಜ್ಯೂಸ್‌ಗೆ ಬದಲಾಗಿ ನೀರನ್ನು ಸೇವಿಸುವುದು ಉತ್ತಮ ಆಯ್ಕೆಯಲ್ಲ.

ಓವರ್ ಡಯಟಿಂಗ್ ತಪ್ಪಿಸಿ

ಓವರ್ ಡಯಟಿಂಗ್ ತಪ್ಪಿಸಿ

ಕೆಲವರು ತೂಕ ಕಡಿಮೆ ಮಾಡಲು ಡಯಟ್ ಮಾಡುತ್ತಾರೆ. ಅವರ ತಮ್ಮ ನಿಯಮಿತ ಆಹಾರಕ್ರಮವನ್ನು ಪಾಲಿಸದೇ ಸಂಪೂರ್ಣವಾಗಿ ತಿನ್ನುವುದನ್ನು ಮತ್ತು ಕುಡಿಯುವುದನ್ನೇ ನಿಲ್ಲಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ತೂಕವು ಕಡಿಮೆಯಾಗುವುದಿಲ್ಲ ಬದಲಾಗಿ ಹೆಚ್ಚಾಗುತ್ತದೆ.

ಬೆಳಗಿನ ಉಪಾಹಾರ ಬಿಡಬಾರದು

ಬೆಳಗಿನ ಉಪಾಹಾರ ಬಿಡಬಾರದು

ಆರೋಗ್ಯವಾಗಿರಲು ಬೆಳಗಿನ ಉಪಾಹಾರ ಸೇವಿಸುವುದು ಬಹಳ ಮುಖ್ಯ. ಬೆಳಗಿನ ಉಪಾಹಾರ ಸೇವಿಸದೆ ಇದ್ದರೆ ಚಯಾಪಚಯವು ಕಡಿಮೆಯಾಗುತ್ತದೆ, ಇದರಿಂದಾಗಿ ದೇಹದಲ್ಲಿ ಕೊಬ್ಬು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದು ಮತ್ತೆ ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು, ಈ ಬಗ್ಗೆ ಗಮನವಿರಲಿ.

ಹಸಿರು ತರಕಾರಿ ತಿನ್ನಿ

ಹಸಿರು ತರಕಾರಿ ತಿನ್ನಿ

ಇಂದಿನ ಮಕ್ಕಳು ಮತ್ತು ಯುವಕರು ಹಸಿರು ತರಕಾರಿ ತಿನ್ನುವುದರಿಂದ ದೂರ ಸರಿಯುತ್ತಿದ್ದಾರೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ.

ನೀವು ಏನು ತಿನ್ನುತ್ತಿದ್ದೀರಿ ಎಂಬುದನ್ನು ಟ್ರ್ಯಾಕ್ ಮಾಡಿ

ನೀವು ಏನು ತಿನ್ನುತ್ತಿದ್ದೀರಿ ಎಂಬುದನ್ನು ಟ್ರ್ಯಾಕ್ ಮಾಡಿ

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅರಿವು ನಂಬಲಾಗದಷ್ಟು ಮುಖ್ಯವಾಗಿದೆ. ಅನೇಕ ಜನರಿಗೆ ಅವರು ನಿಜವಾಗಿಯೂ ಎಷ್ಟು ತಿನ್ನುತ್ತಿದ್ದಾರೆ ಎಂಬುದರ ಬಗ್ಗೆ ಸುಳಿವೇ ಇರುವುದಿಲ್ಲ. ಇನ್ನು ಹಲವರು ಬಯಸಿದಾಗಲೆಲ್ಲಾ ತಿನ್ನುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಜಂಕ್‌ಫುಡ್‌ಗಳ ದುರಭ್ಯಾಸ ಸಹ ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ನಿಮ್ಮ ಆಹಾರ ಸೇವನೆಯ ಬಗ್ಗೆ ನಿಗಾ ಇಡುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

English summary

Bad Habits Preventing You from Losing Weight in Kannada

Here we are discussing about Bad Habits Preventing You from Losing Weight in Kannada. Read more.
Story first published: Saturday, December 3, 2022, 12:03 [IST]
X
Desktop Bottom Promotion