For Quick Alerts
ALLOW NOTIFICATIONS  
For Daily Alerts

ನೆಲಗಡಲೆ ನೆನೆ ಹಾಕಿ ತಿಂದರೆ ದೊರೆಯುವ ಪ್ರಯೋಜನಗಳ ಬಗ್ಗೆ ಗೊತ್ತಾ?

|

ಬಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡೆಲೆಯಲ್ಲಿ ಅತ್ಯುತ್ತಮವಾದ ಕೊಬ್ಬಿನಂಶ, ನಾರಿನಂಶ, ಪೊಟಾಷ್ಯಿಯಂ, ರಂಜಕ, ವಿಟಮಿನ್ ಬಿ, ಮೆಗ್ನಿಷ್ಯಿಯಂ ಇದ್ದು ಇದನ್ನು ಅತ್ಯಂತ ಆರೋಗ್ಯಕರ ಸ್ನ್ಯಾಕ್ಸ್ ಆಗಿ ಪರಗಣಿಸಬಹುದು.

5 Amazing Health Benefits Of Soaked Peanuts | Boldsky Kannada
Amazing health Benefits Of Soaked Peanuts

ನೆಲಗಡಲೆಯನ್ನು ಕೆಲವರಿಗೆ ಬೇಯಿಸಿ ತಿನ್ನಲು ಇಷ್ಟ, ಇನ್ನು ಕೆಲವರಿಗೆ ಹುರಿದು ತಿನ್ನಲು ಇಷ್ಟ. ಇನ್ನು ಮನೆಯಲ್ಲಿ ಉಪ್ಪು, ಅವಲಕ್ಕಿ ಮಾಡುವಾಗ ಸ್ವಲ್ಪ ಹಾಕಿದರೆ ಅಡುಗೆಯ ರುಚಿಯೂ ಹೆಚ್ಚುವುದು.

ಆದರೆ ಎಂದಾದರೂ ಇದನ್ನು ನೆನೆಸಿ ತಿಂದಿದ್ದೀರಾ? ಬಹುಶಃ ನೀವು ಆ ಬಗ್ಗೆ ಯೋಚಿಸಿಯೇ ಇರುವುದಿಲ್ಲ. ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವೆಂದು ಗೊತ್ತು. ಇನ್ನು ಕೆಲವರ ಬಳಿ ದಿನಾ ಬಾದಾಮಿ ತಿನ್ನುವಷ್ಟು ಆರ್ಥಿಕ ಸ್ಥಿತಿಯೂ ಇರುವುದಿಲ್ಲ. ಆದರೆ ನೆಲಗಡಲೆಯನ್ನು ಬಡವ ಇರಲಿ, ಶ್ರೀಮಂತ ಇರಲಿ ಕೊಂಡು ತಿನ್ನಬಹುದು.

ಇಲ್ಲಿ ನಾವು ಬಾದಾಮಿಯನ್ನು ನೆನೆ ಹಾಕಿ ತಿನ್ನುವುದರಿಂದ ದೊರೆಯುವ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ, ಇದನ್ನು ಮಕ್ಕಳಿಗೆ ಕೊಟ್ಟರೆ ಅವರ ಬೆಳವಣಿಗೆಗೆ ತುಂಬಾ ಸಹಕಾರಿ.

1. ದೇಹದಾರ್ಢ್ಯಕ್ಕೆ ಸಹಾಯ ಮಾಡುತ್ತೆ

1. ದೇಹದಾರ್ಢ್ಯಕ್ಕೆ ಸಹಾಯ ಮಾಡುತ್ತೆ

ಕಟ್ಟು ಮಸ್ತಿನ ಮೈಕಟ್ಟು ಬೇಕೆಂದು ನೀವು ಜಿಮ್‌ನಲ್ಲಿ ಕೆಲ ತಾಸು ವರ್ಕೌಟ್‌ ಮಾಡುತ್ತಿದ್ದರೆ ಪೌಷ್ಠಿಕ ಆಹಾರಗಳ ಜೊತೆಗೆ ಸ್ವಲ್ಪ ನೆಲಗಡಲೆಯನ್ನು ನೆನೆಸಿ ತಿನ್ನುವುದನ್ನು ರೂಢಿ ಮಾಡಿಕೊಳ್ಳಿ. ಹೀಗೆ ಮಾಡಿವುದರಿಂದ ನೀವು ಬಯಸಿದ ಸದೃಢ ಮೈಕಟ್ಟು ಪಡೆಯುವಲ್ಲಿ ನೆಲಗಡಲೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಹಾಕಿ ಮೊಳಕೆ ಬರಿಸಿ ತಿಂದರೆ ಮತ್ತಷ್ಟು ಒಳ್ಳೆಯದು.

2. ಜೀರ್ಣಕ್ರಿಯೆಗೆ ಒಳ್ಳೆಯದು

2. ಜೀರ್ಣಕ್ರಿಯೆಗೆ ಒಳ್ಳೆಯದು

ಕೆಲವರಲ್ಲಿ ಆಗಾಗ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಅಂಥವರು ದಿನಾ ಸ್ವಲ್ಪ ನೆಲಗಡಲೆ ನೆನೆ ಹಾಕಿ ತಿಂದು ನೋಡಿ ಹೊಟ್ಟೆ ಉಬ್ಬುವ ಸಮಸ್ಯೆ, ಗ್ಯಾಸ್ಟ್ರಿಕ್‌ ಸಮಸ್ಯೆ ದೂರವಾಗಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ.

3. ಹೃದಯ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು

3. ಹೃದಯ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು

ಹೃದಯದ ಆರೋಗ್ಯ ವೃದ್ಧಿಸುವ ಗುಣ ನೆಲಗಡಲೆಯಲ್ಲಿದೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಹೃದಯದ ಆರೋಗ್ಯ ವೃದ್ಧಿಸುವ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ನೆಲಗಡಲೆಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದರಿಂದ ಹೃದಯಾಘಾತ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿ, ಇದು ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

4. ಕ್ಯಾನ್ಸರ್‌ ಕಣಗಳ ಬೆಳವಣಿಗೆಯನ್ನು ಕುಗ್ಗಿಸುತ್ತದೆ

4. ಕ್ಯಾನ್ಸರ್‌ ಕಣಗಳ ಬೆಳವಣಿಗೆಯನ್ನು ಕುಗ್ಗಿಸುತ್ತದೆ

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತಿದೆ. ಇದಕ್ಕೆ ಕಾರಣ ಕಲುಷಿತ ವಾತಾವರಣ ಹಾಗೂ ರಾಸಾಯನಿಕ ಸಿಂಪಡಿಸಿದ ಆಹಾರ ವಸ್ತುಗಳ ಸೇವನೆ. ನಮ್ಮ ದೇಹದಲ್ಲಿರುವ ರಾಸಾಯನಿಕಗಳು ಅಂದರೆ ಫ್ರೀ ರ‍್ಯಾಡಿಕಲ್ಸ್ ಹೋಗಲಾಡಿಸುವಲ್ಲಿ ನೆನೆ ಹಾಕಿದ ನೆಲಗಡಲೆ ಸೇವನೆ ತುಂಬಾ ಸಹಕಾರಿ. ಇದರಲ್ಲಿ ಕಬ್ಬಿಣದಂಶ, ಫೋಲೆಟ್, ಕ್ಯಾಲ್ಸಿಯಂ, ಸತುವಿದ್ದು ಇದ್ದು ಕ್ಯಾನ್ಸರ್‌ ಕಣಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ.

5. ಬೆನ್ನು ನೋವು ಹೋಗಲಾಡಿಸುತ್ತದೆ

5. ಬೆನ್ನು ನೋವು ಹೋಗಲಾಡಿಸುತ್ತದೆ

ಬೆನ್ನು ನೋವು ಕಾಡಲು ವಯಸ್ಸಾಗಬೇಕೇನು ಇಲ್ಲ, ಚಿಕ್ಕ ಪ್ರಾಯದಲ್ಲಿಯೇ ಬೆನ್ನು ನೋವಿನ ಸಮಸ್ಯೆ ಕಾಡಲಾರಂಭಿಸುತ್ತದೆ. ನಾವು ಕೂರುವ ಭಂಗಿ ಮತ್ತಿತರ ಕಾರಣಗಳಿಂದ ಬೆನ್ನು ನೋವು ಉಂಟಾಗುವುದು. ನೆನೆ ಹಾಕಿದ ನೆಲಗಡಲೆ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ತಿನ್ನುವುದರಿಂದ ಇಂಥ ಬೆನ್ನು ನೋವು ಹೋಗಲಾಡಿಸಬಹುದು.

ಸೂಚನೆ: ಇಲ್ಲಿ ನೀಡಿರುವ ಸಲಹೆಗಳು ಯಾವುದೇ ಕಾಯಿಲೆಗೆ ವೈದ್ಯರು ನೀಡುವ ಔಷಧಿಗೆ ಪರ್ಯಾಯವಲ್ಲ.

English summary

Amazing health Benefits Of Soaked Peanuts

We all know soaked almond is super healthy but have you ever heard of having soaked peanuts? Here we have given super health benefits of soaked almond that will be surprising for you, Read on...
Story first published: Tuesday, May 5, 2020, 15:24 [IST]
X
Desktop Bottom Promotion