For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಆಹಾರಕ್ರಮಗಳು-ಇವುಗಳು ಮರುದಿನದ ಮಲವಿಸರ್ಜನೆಯ ಮೇಲೆ ಎಸಗುವ ಪರಿಣಾಮಗಳು

|

ತೂಕ ಇಳಿಕೆಯಲ್ಲಿ ಪ್ರಧಾನ ಪಾತ್ರ ವಹಿಸುವ ಕ್ರಿಯೆ ಎಂದರೆ ಆಹಾರಕ್ರಮದಲ್ಲಿ ಬದಲಾವಣೆ. ಈ ಮೂಲಕ ನಮಗೆ ತೂಕದಲ್ಲಿ ಇಳಿಕೆ ಕಂಡುಬಂದರೂ ಇದರಿಂದ ದೇಹದ ನೈಸರ್ಗಿಕ ಕ್ರಿಯೆಗಳಲ್ಲಿ ಆಗಿರುವ ಬದಲಾವಣೆಗಳನ್ನು ನಾವು ಅಲಕ್ಷಿಸಿಬಿಡುತ್ತೇವೆ. ತೂಕ ಇಳಿಕೆಯ ಪ್ರಯತ್ನಕ್ಕೂ ಮುನ್ನ ಇದ್ದ ನಮ್ಮ ಆಹಾರಕ್ರಮ ಈಗ ಬದಲಾಗಿರುವ ಕಾರಣ ನಮ್ಮ ದೇಹದ ಕೆಲವು ಕ್ರಿಯೆಗಳೂ ಇದಕ್ಕನುಗುಣವಾಗಿ ಬದಲಾವಣೆಗೊಳ್ಳುವುದು ಅನಿವಾರ್ಯವಾಗುತ್ತದೆ. ಈ ಬದಲಾವಣೆಗಳಲ್ಲಿ ಪ್ರಮುಖವಾಗಿ ಬಾಧೆಗೊಳಗಾಗುವುದು ಎಂದರೆ ನಮ್ಮ ಜೀರ್ಣವ್ಯವಸ್ಥೆ.

ಅದರಲ್ಲೂ ವಿಶೇಷವಾಗಿ ವಿಸರ್ಜನಾಕ್ರಿಯೆ. ಇದುವರೆಗೆ ಯಾವುದೇ ತೊಂದರೆ ಇಲ್ಲದೇ ಜರುಗುತ್ತಿದ್ದ ಈ ನೈಸರ್ಗಿಕ ಕ್ರಿಯೆ ಈಗ ಬದಲಾಗಿದ್ದು ಕೊಂಚ ಕಷ್ಟಕರ ಅಥವಾ ಬದಲಾದ ಸಮಯಗಳಲ್ಲಿ ಜರುಗುತ್ತಿದ್ದಿರಬಹುದು. ಸಾಮಾನ್ಯವಾಗಿ ಮಲಬದ್ದತೆಯೂ ಕಾಣಿಸಿಕೊಳ್ಳಬಹುದು. ಹೀಗಾದಾಗ ದೊಡ್ಡದಾಗಿರುವ ಹೊಟ್ಟೆಯ ಕಾರಣ ಮನಸ್ಸೂ ಭಾರವಾಗಿಯೇ ಇರುತ್ತದೆ ಹಾಗೂ ಮಾನಸಿಕ ವಾಗಿಯೂ ಬಳಲಿಕೆಯುಂಟಾಗುತ್ತದೆ. ಆದ್ದರಿಂದ ನಮ್ಮ ತೂಕ ಇಳಿಕೆಯ ಕ್ರಮದಲ್ಲಿ ನಾವು ಸೇವಿಸುವ ಆಹಾರವೂ ನಮ್ಮ ಆರೋಗ್ಯಕ್ಕೆ ಪೂರಕವಾಗಿರಬೇಕು, ಆಗಲೇ ನಮ್ಮ ಜೀರ್ಣವ್ಯವಸ್ಥೆಯೂ ಆರೋಗ್ಯಕರವಾಗಿದ್ದು ಮರುದಿನದ ನಿತ್ಯಕರ್ಮಗಳನ್ನು ಸುಲಭವಾಗಿ ಎಂದಿನಂತೆ ನಿರ್ವಹಿಸಲು ಸಾಧ್ಯವಾಗುತ್ತದೆ.

ಕೀಟೋಜೆನಿಕ್ ಆಹಾರಕ್ರಮ (Ketogenic diet)

ಕೀಟೋಜೆನಿಕ್ ಆಹಾರಕ್ರಮ (Ketogenic diet)

ಈ ಆಹಾರಕ್ರಮದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಪ್ರೋಟೀನುಗಳಿದ್ದು ಅತಿ ಕಡಿಮೆ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟುಗಳಿರುತ್ತವೆ. ಆದರೆ ಈ ಆಹಾರಕ್ರಮ ಪ್ರಾರಂಭಿಸಿದ ಬಳಿಕ ನಮ್ಮ ಜೀರ್ಣಕ್ರಿಯೆಗಳು ಪೂರ್ಣಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸೋಲುತ್ತವೆ. ಏಕೆಂದರೆ ಈ ಕ್ರಿಯೆಗೆ ಅಗತ್ಯವಿದ್ದಷ್ಟು ಕಾರ್ಬೋಹೈಡ್ರೇಟುಗಳ ಕೊರತೆ. ಪರಿಣಾಮ: ಅತಿಸಾರ! ಕೆಲವರಲ್ಲಿ ಇದು ವಿರುದ್ದವಾಗಿ ಕಾರ್ಯನಿರ್ವಹಿಸಿ ಮಲಬದ್ಧತೆಗೆ ಕಾರಣವಾಗಬಹುದು. ಹಾಗಾಗಿ ಮರುದಿನದ ನಿತ್ಯಕರ್ಮ ಎಂದಿನಂತಿರಬೇಕಾದರೆ ಈ ಆಹಾರಕ್ರಮವನ್ನು ಅನುಸರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು ಏಕೆಂದರೆ ಈ ಅಹಾರಕ್ರಮದಿಂದ ದೇಹ ಕಾರ್ಬೋಹೈಡ್ರೇಟುಗಳ ಬದಲಿಗೆ ದೇಹದ ಸಂಗ್ರಹದಲ್ಲಿರುವ ಕೊಬ್ಬನ್ನು ಬಳಸಿಕೊಂಡು ಶಕ್ತಿಯನ್ನು ಬಿಡುಗಡೆ ಮಾಡತೊಡಗುತ್ತದೆ.

Most Read: ಇದು ಸರಳ ಶೀತ ಎಂದು ನಿರ್ಲಕ್ಷಿಸಬೇಡಿ! ಇದರಿಂದ ಸೈನಸ್ ಸೋಂಕು ಬರಬಹುದು!!

ಜಿ ಎಂ ಆಹಾರಕ್ರಮ (GM diet)

ಜಿ ಎಂ ಆಹಾರಕ್ರಮ (GM diet)

ಜೆನೆರಲ್ ಮೋಟಾರ್ಸ್ ಸಂಸ್ಥೆಯ ಮೂಲಕ ಪ್ರಸ್ತುತಗೊಂಡ ಕಾರಣದಿಂದಲೇ ಇದೇ ಹೆಸರಿನಿಂದ ಕರೆಯಲ್ಪಡುವ ಈ ಆಹಾರಕ್ರಮ ಒಂದು ನಿರ್ಧಾರಿತ ಆಹಾರಪಟ್ಟಿಯಲ್ಲಿರುವ (food pyramid)ಆಹಾರಗಳನ್ನೇ ಕಡ್ಡಾಯವಾಗಿ ಸೇವಿಸಿ ಉಳಿದವನ್ನು ವರ್ಜಿಸುವ ಕ್ರಮವಾಗಿದೆ. ಆದರೆ ಏಕಾಏಕಿ ಈ ಕ್ರಮವನ್ನು ಅನುಸರಿಸುವುದರಿಂದ ದೇಹಕ್ಕೆ ಈ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಮಲಬದ್ದತೆ, ಅಜೀರ್ಣತೆ ಸಾಮಾನ್ಯವಾಗಿ ಎದುರಾಗುತ್ತದೆ. ಇದಕ್ಕೆರಡು ಕಾರಣಗಳಿವೆ. ಮೊದಲಿಗೆ ಆಹಾರ ಜೀರ್ಣಗೊಂಡು ತ್ಯಾಜ್ಯಗಳನ್ನು ಉತ್ಪಾದಿಸುವಷ್ಟು ನಾರು ಈ ಆಹಾರದಲ್ಲಿ ಇರುವುದಿಲ್ಲ. ಎರಡನೆಯದಾಗಿ ಒಮ್ಮೆಲೇ ಬದಲಾವಣೆಗೊಂಡ ಆಹಾರದಿಂದ ದೇಹ ಒಂದು ಬಗೆಯ ಆಘಾತಕ್ಕೆ ಒಳಗಾಗಿರುತ್ತದೆ. ಇದು ಕೇವಲ ದೇಹದ ಮೇಲೆ ಮಾತ್ರವಲ್ಲ, ಮನಸ್ಸಿನ ಮೇಲೂ ಒತ್ತಡವನ್ನು ಹೇರುತ್ತದೆ. ಈ ಆಹಾರ ಸತತವಾಗಿ ಅಭ್ಯಾಸವಾಗುವವರೆಗೂ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ತೊಂದರೆ ಮುಂದುವರೆಯುತ್ತದೆ.

ಆಟ್ಕಿನ್ಸ್ ಆಹಾರಕ್ರಮ (​Atkins diet)

ಆಟ್ಕಿನ್ಸ್ ಆಹಾರಕ್ರಮ (​Atkins diet)

ಈ ಆಹಾರಕ್ರಮದಲ್ಲಿ ಅತಿ ಹೆಚ್ಚು ಪ್ರೋಟೀನ್ ಮತ್ತು ಅತಿ ಹೆಚ್ಚು ಕೊಬ್ಬನ್ನು ಆಹಾರದ ಮೂಲಕ ಸೇವಿಸಲಾಗುತ್ತದೆ. ಅಂದರೆ ಕಾರ್ಬೋಹೈಡ್ರೇಟುಗಳ ಪ್ರಮಾಣ ಅತ್ಯಂತ ಕಡಿಮೆ ಅಥವಾ ಸೀಮಿತ! ಹಾಗಾಗಿ ಜೀರ್ಣಾಂಗಗಳು ಅತಿ ಹೆಚ್ಚು ಬಾಧೆಗೊಳಗಾಗುತ್ತವೆ. ಇದನ್ನು ತಡೆಯಲು ಈ ಆಹಾರಕ್ರಮದಲ್ಲಿ ಕೊಂಚ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳುವುದು ಅನಿವಾರ್ಯ. ಅಲ್ಲದೇ ಈ ಆಹಾರಕ್ರಮದಲ್ಲಿ ಮಾಂಸಾಹಾರವೇ ಪ್ರಮುಖವಾಗಿರುವ ಕಾರಣ ಇವು ತರಕಾರಿಗಳಿಗಿಂತಲೂ ಬೇಗನೇ ಜೀರ್ಣಗೊಂಡು ದೇಹದ ನೈಸರ್ಗಿಕ ವಿಧಾನವನ್ನೇ ಬದಲಿಸಿಬಿಡುತ್ತವೆ.

ವೇಗನ್ ಆಹಾರಕ್ರಮ (Vegan diet)

ವೇಗನ್ ಆಹಾರಕ್ರಮ (Vegan diet)

ಕೇವಲ ಸಸ್ಯಾಹಾರವನ್ನೇ ಒಳಗೊಂಡಿರುವ ಈ ಕ್ರಮದಲ್ಲಿ ತರಕಾರಿ, ಧಾನ್ಯಗಳು, ಒಣಫಲಗಳು ಮತ್ತು ಹಣ್ಣುಗಳನ್ನೇ ತಿನ್ನಬೇಕಾಗುತ್ತದೆ. ಈ ಆಹಾರದಲ್ಲಿ ಡೈರಿ ಉತ್ಪನ್ನಗಳು ಇರುವುದಿಲ್ಲವಾದುದರಿಂದ ಜೀರ್ಣಕ್ರಿಯೆ ಮತ್ತು ವಿಸರ್ಜನಾಕ್ರಿಯೆಯಲ್ಲಿ ಯಾವುದೇ ತೊಂದರೆ ಎದುರಾಗದು. ಏಕೆಂದರೆ ಈ ಎಲ್ಲಾ ಆಹಾರಗಳಲ್ಲಿ ಸಾಕಷ್ಟು ನಾರಿನ ಪ್ರಮಾಣವಿದೆ. ಅಲ್ಲದೇ ಡೈರಿ ಉತ್ಪನ್ನಗಳಿಲ್ಲದೇ ಇರುವುದರಿಂದ ವಾಯುಪ್ರಕೋಪವೂ ಇರುವುದಿಲ್ಲ.

Most Read: ಚಿಕನ್ ತಿಂದರೆ ದೇಹದ ತೂಕ ಕಡಿಮೆ ಆಗುತ್ತದೆಯೇ? ಖಂಡಿತವಾಗಿಯೂ ಹೌದು!

ಜ್ಯೂಸ್ ಡಿಟಾಕ್ಸ್ ಆಹಾರ ಕ್ರಮ (Juice detox diet)

ಜ್ಯೂಸ್ ಡಿಟಾಕ್ಸ್ ಆಹಾರ ಕ್ರಮ (Juice detox diet)

ಈ ವಿಧಾನದಲ್ಲಿ ದ್ರವಾಹಾರವನ್ನೇ ಪ್ರಮುಖ ಆಹಾರವನ್ನಾಗಿ ಸೇವಿಸಲಾಗುತ್ತದೆ. ಆದರೆ ಇದರಿಂದ ದೇಹದ ಜೀವರಾಸಾಯನಿಕ ಕ್ರಿಯೆಗಳ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. ಅಲ್ಲದೇ ವಿಸರ್ಜಿಸುವ ಕಲ್ಮಶಗಳ ಪ್ರಮಾಣ ಅತ್ಯಂತ ಕಡಿಮೆಯಾಗಿಬಿಡುತ್ತದೆ! ನಮ್ಮ ಆಹಾರದಲ್ಲಿ ಸಾಕಷ್ಟು ನಾರು ಇರಬೇಕು ಹಾಗೂ ಕರುಳುಗಳಲ್ಲಿ ಸುಲಭವಾಗಿ ಚಲಿಸುವಂತಿರಬೇಕು. ಈಗ ನಾರೇ ಇಲ್ಲದಿದ್ದರೆ ಈ ವ್ಯವಸ್ಥೆಯೇ ಕುಸಿಯುತ್ತದೆ ಹಾಗೂ ಕರುಳುಗಳಿಂದ ಜೀರ್ಣಗೊಂಡ ಆಹಾರದಿಂದ ಪೋಷಕಾಂಶಗಳನ್ನು ಹೀರಲ್ಪಡುವುದೂ ಸಾಧ್ಯವಾಗುವುದಿಲ್ಲ. ಹಾಗಾಗಿ ಇಲ್ಲಿ ಸಾಕಷ್ಟು ಕಲ್ಮಶಗಳು ಸಂಗ್ರಹವಾಗುವವರೆಗೆ ಮಲವಿಸರ್ಜನೆಯಾಗುವುದೇ ಇಲ್ಲ. ಕೇವಲ ದ್ರವಾಹಾರವನ್ನು ನೆಚ್ಚಿಕೊಂಡರೆ ಮಲಬದ್ಧತೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಇಡಿಯ ಆಹಾರಕ್ರಮ (​Whole30 diet)

ಇಡಿಯ ಆಹಾರಕ್ರಮ (​Whole30 diet)

ಈ ಕ್ರಮದಲ್ಲಿ ಕೆಲವು ಸಂಸ್ಕರಿತ ಆಹಾರಗಳನ್ನು ಸೇವಿಸಬೇಕಾಗುತ್ತದೆ ಹಾಗೂ ಕೆಲವನ್ನು ವರ್ಜಿಸಬೇಕಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ, ಸಂಸ್ಕರಿತ ಆಹಾರಗಳನ್ನು ಆಗಾಗ ಮಾತ್ರವೇ ಸೇವಿಸುತ್ತಿದ್ದು ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುತ್ತಿದ್ದರೆ ಇವರಲ್ಲಿ ಮಲವಿಸರ್ಜನೆ ಸುಲಭವಾಗಿ ಆಗುತ್ತಿರುತ್ತದೆ. ಏಕೆಂದರೆ ಸಿದ್ಧ ಆಹಾರಗಳಲ್ಲಿರುವ ಸಂರಕ್ಷಕಗಳು ಈ ವ್ಯಕ್ತಿಗಳ ಕರುಳಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿರುತ್ತವೆ ಹಾಗೂ ಇವು ಆಹಾರದ ಚಲನೆಗೆ ಅಡ್ಡಿಯುಂಟುಮಾಡುವ ಸಾಧ್ಯತೆಯೂ ಅತ್ಯಲ್ಪವೇ ಆಗಿರುತ್ತದೆ. ಹಾಗಾಗಿ ಈ ವಿಧಾನ ಅನುಸರಿಸುವುದು ಕಷ್ಟವೇ ಆಗಿದ್ದರೂ ಇದರಿಂದ ಕೆಲವಾರು ಪ್ರಯೋಜನಗಳೂ ಇವೆ.

English summary

weight loss plans and how they affect your poop

To lose weight, we often start on a diet that promises us chop-chop results. But, what we often overlook is that how our bodies, which have been fed in a certain way till now, respond to the changed diet. Sure, one part of the change could be drop in kilos. However, another aspect to it could be an inability to poop properly. The most common problem that one comes across when starting on a new diet is bowel movement issues
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more