For Quick Alerts
ALLOW NOTIFICATIONS  
For Daily Alerts

ಇಂಥ ವಿಚಿತ್ರ ಕಾರಣಗಳಿಂದಲೂ ದೇಹದ ತೂಕ ಹೆಚ್ಚಾಗುತ್ತದೆ.. ಜೋಕೆ!

|

ಬೊಜ್ಜು ಬರುವಿಕೆ ಅಥವಾ ದೇಹದ ತೂಕ ಹೆಚ್ಚಳದ ಸಮಸ್ಯೆ ಈಗ ವಿಶ್ವದ ಬಹಳಷ್ಟು ಜನರನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರೌಢ ವಯಸ್ಕರ ದೇಹ ತೂಕ ಹೆಚ್ಚಾಗಲು ಹಲವಾರು ಕಾರಣಗಳಿದ್ದರೂ ಇದರಿಂದ ಬಳಲುತ್ತಿರುವ ಅನೇಕರಿಗೆ ಯಾಕೆ ತಮಗೆ ಬೊಜ್ಜು ಬಂದಿದೆ ಎಂಬ ನಿಖರ ಕಾರಣ ತಿಳಿದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಈ ಕೆಳಗೆ ತಿಳಿಸಲಾದ ಕಾರಣಗಳಿಂದಲೂ ಬೊಜ್ಜು ಬರಬಹುದು ಎಂದು ತಿಳಿದು ಬಂದಿದೆ.

* ಹಾರ್ಮೋನ್‌ಗಳ ಏರುಪೇರು

* ಔಷಧಗಳ ಅಡ್ಡ ಪರಿಣಾಮ

* ವಿಟಮಿನ್‌ಗಳ ಕೊರತೆ

ಮನೋವಿಜ್ಞಾನ ವಿಷಯದ ಪ್ರಖ್ಯಾತ ಪ್ರೊಫೆಸರ್ ಆಗಿರುವ ರಾಬರ್ಟ್ ಜೆ. ಹೆದಾಯಾ ಅವರು ಹೇಳುವಂತೆ, ಜೀವನಶೈಲಿಯಲ್ಲಿನ ಬದಲಾವಣೆಯು ಬೊಜ್ಜು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ನಮ್ಮಲ್ಲಿ ಬಹುತೇಕರು ತಿಳಿದುಕೊಂಡಿದ್ದೇವೆ. ಆದರೆ ವಾಸ್ತವದಲ್ಲಿ ನಮ್ಮಿಂದ ನಿಯಂತ್ರಿಸಲಾಗದ ಹಲವಾರು ವಿಷಯಗಳನ್ನು ತನ್ನಷ್ಟಕ್ಕೆ ತಾನೇ ನಿಯಂತ್ರಿಸುವ ಶಕ್ತಿಯನ್ನು ನಮ್ಮ ದೇಹ ಹೊಂದಿದೆ. ಹಾರ್ಮೋನ್‌ಗಳ ವೈಪರೀತ್ಯದಿಂದ ಹಿಡಿದು ಔಷಧಗಳ ಅಡ್ಡಪರಿಣಾಮದವರೆಗೆ ಏನೇ ಕಾರಣಗಳಿದ್ದರೂ ಇವನ್ನು ಬಿಟ್ಟು ಕೆಲ ಗೊತ್ತಿರದ ವಿಚಿತ್ರ ಕಾರಣಗಳಿಂದಲೂ ದೇಹದ ತೂಕ ಹೆಚ್ಚಾಗಬಹುದು ಎಂದು ಅವರು ಹೇಳುತ್ತಾರೆ. ಯಾವೆಲ್ಲ ಗೊತ್ತಿರದ ವಿಚಿತ್ರ ಕಾರಣಗಳಿಂದ ದೇಹದ ತೂಕ ಹೆಚ್ಚಾಗಬಹುದು ಹಾಗೂ ಅವುಗಳ ಪರಿಹಾರೋಪಾಯಗಳೇನು ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು, ನೀವೂ ನೋಡಿ.

ಮಾನಸಿಕ ಖಿನ್ನತೆ

ಮಾನಸಿಕ ಖಿನ್ನತೆ

ತಜ್ಞರ ಪ್ರಕಾರ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳ ತೂಕ ಹೆಚ್ಚಾಗುವ ಸಾಧ್ಯತೆಗಳಿವೆ. ತೀರಾ ಖಿನ್ನತೆಯಿಂದ ಬಳಲುತ್ತಿರುವವರು ಖಿನ್ನತೆ ನಿವಾರಕ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ 5 ರಿಂದ 15 ಪೌಂಡ್‌ಗಳಷ್ಟು ತೂಕ ಹೆಚ್ಚಳವಾಗಬಹುದು. ತೂಕ ಹೆಚ್ಚಳಕ್ಕೂ ಖಿನ್ನತೆಗೂ ನೇರ ಸಂಬಂಧವಿದೆ ಎನ್ನುತ್ತಾರೆ ಪರಿಣಿತ ತಜ್ಞರು. 2010 ರಲ್ಲಿ ವೈದ್ಯಕೀಯ ಜರ್ನಲ್ ಒಂದರಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರ ಪ್ರಕಾರ ಸದಾ ದುಃಖಿತರು ಹಾಗೂ ಒಂಟಿಯಾಗಿರುವವರು ತೂಕ ಹೆಚ್ಚಳದ ಸಮಸ್ಯೆಗೆ ಒಳಗಾಗುವುದು ಜಾಸ್ತಿ ಎನ್ನಲಾಗಿದೆ.

ಖಿನ್ನತೆಯಿಂದ ಉಂಟಾಗುವ ತೂಕ ಹೆಚ್ಚಳ ತಡೆಯುವುದು ಹೇಗೆ?

ಖಿನ್ನತೆಯಿಂದ ಉಂಟಾಗುವ ತೂಕ ಹೆಚ್ಚಳ ತಡೆಯುವುದು ಹೇಗೆ?

ಕ್ಯಾಲಿಫೊರ್ನಿಯಾದ ಲೋಮಾ ಲಿಂಡಾ ವೈದ್ಯಕೀಯ ಕಾಲೇಜಿನ ಎಂಡಿ ಡಾಮಿನಿಕ್ ಫ್ರಾಡಿನ್ ಅವರ ಪ್ರಕಾರ, ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರು ಖಿನ್ನತೆ ನಿವಾರಕ ಔಷಧಿಗಳ ಸೇವನೆಯನ್ನು ನಿಧಾನವಾಗಿ ನಿಲ್ಲಿಸುವುದು ಸೂಕ್ತ. ವೆಲ್ಬುಟ್ರಿನ್ ಎಂಬ ಔಷಧಿ ಸೇವನೆ ಹಾಗೂ ವ್ಯಾಯಾಮಗಳಿಂದ ಕೆಲ ಮಟ್ಟಿಗೆ ತೂಕ ಕಡಿಮೆ ಮಾಡಿಕೊಳ್ಳಬಹುದು.

Most Read: ತೂಕ ಇಳಿಸಿಕೊಳ್ಳಲು ಸಿಂಪಲ್ ಟಿಪ್ಸ್-ತಿಂಗಳೊಳಗೆ ಫಲಿತಾಂಶ

ನಿಧಾನ ಗತಿಯ ಜೀರ್ಣ ವ್ಯವಸ್ಥೆ

ನಿಧಾನ ಗತಿಯ ಜೀರ್ಣ ವ್ಯವಸ್ಥೆ

ಉಂಡ ಆಹಾರವು ತೀರಾ ನಿಧಾನ ಗತಿಯಲ್ಲಿ ಜೀರ್ಣವಾಗುವ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಇದೂ ಸಹ ಅಸಹಜ ದೇಹ ತೂಕ ಉಂಟಾಗಲು ಕಾರಣವಾಗುತ್ತದೆ. ಜೀರ್ಣ ಕ್ರಿಯೆ ನಿಧಾನವಾದಷ್ಟೂ ಬೇಡವಾದ ತೂಕ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ವ್ಯಕ್ತಿಯು ಆಹಾರ ಸೇವಿಸಿದಾಗ ಅದರಲ್ಲಿ ಕೆಲ ಭಾಗ ಶಕ್ತಿಯಾಗಿ ಪರಿವರ್ತನೆಗೊಂಡು ಉಳಿದ ಭಾಗ ವಿಸರ್ಜಿಸಲ್ಪಡುತ್ತದೆ. ಆದರೆ ಕರುಳು ಸರಿಯಾಗಿ ಕೆಲಸ ಮಾಡದಿದ್ದರೆ ಹೆಚ್ಚುವರಿ ಆಹಾರವು ಚರ್ಮದ ಕೆಳಗೆ ಬೊಜ್ಜಿನ ರೂಪದಲ್ಲಿ ಸಂಗ್ರಹವಾಗಲಾರಂಭಿಸುತ್ತದೆ. ನಾರಿನಂಶ ಕಡಿಮೆ ಇರುವ ಆಹಾರದ ಸೇವನೆ, ಮಲಬದ್ಧತೆ, ತರಕಾರಿಗಳ ಕಡಿಮೆ ಸೇವನೆಯಿಂದಲೂ ಜೀರ್ಣಕ್ರಿಯೆ ಹಾಳಾಗಬಹುದು.

ಅಜೀರ್ಣದಿಂದಾಗುವ ತೂಕ ಹೆಚ್ಚಳ ಸಮಸ್ಯೆ ಪರಿಹಾರ ಹೇಗೆ?

ಅಜೀರ್ಣದಿಂದಾಗುವ ತೂಕ ಹೆಚ್ಚಳ ಸಮಸ್ಯೆ ಪರಿಹಾರ ಹೇಗೆ?

ಮಲಬದ್ಧತೆಯು ನಿಮಗೆ ಬಾಧಿಸುತ್ತಿದ್ದಲ್ಲಿ ಪ್ರೊಬಯಾಟಿಕ್ ಸೇವಿಸಿದರೆ ಉತ್ತಮ ಪರಿಣಾಮಗಳನ್ನು ಕಾಣಬಹುದು. ಒಮ್ಮೆ ವಿಸರ್ಜನಾ ಮಾರ್ಗ ಉತ್ತಮಗೊಂಡರೆ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ಇನ್ನು ಯಾವಾಗಲೂ ನೀರು ಕುಡಿಯುತ್ತಿರುವುದು ಸಹ ಅಗತ್ಯವಾಗಿದೆ. ಆದಷ್ಟೂ ಹೆಚ್ಚು ನೀರು ಕುಡಿಯುತ್ತಿದ್ದರೆ ಖಂಡಿತವಾಗಿಯೂ ಜೀರ್ಣ ವ್ಯವಸ್ಥೆ ಸುಧಾರಿಸುತ್ತದೆ. ಈ ವಿಧಾನದಿಂದ ಅಷ್ಟು ಪರಿಣಾಮ ಬೀರದಿದ್ದರೆ ಫೈಬರ್ ಪೌಡರ್ ಮಿಶ್ರಣದ ನೀರು ಕುಡಿಯುವುದು ಸೂಕ್ತ. ಹೊಟ್ಟೆಯಲ್ಲಿನ ಬೇಡವಾದ ಕಲ್ಮಶಗಳನ್ನು ಸುಲಭವಾಗಿ ತೊಡೆದು ಹಾಕಲು ಇದು ಉತ್ತಮ ಉಪಾಯವಾಗಿದೆ.

ವಯಸ್ಸು ಹೆಚ್ಚಾದಂತೆ ತೂಕ ಹೆಚ್ಚಾಗುವಿಕೆ

ವಯಸ್ಸು ಹೆಚ್ಚಾದಂತೆ ತೂಕ ಹೆಚ್ಚಾಗುವಿಕೆ

ವಯಸ್ಸು ಹೆಚ್ಚಾದಂತೆ ಕೆಲವರ ದೇಹ ತೂಕವೂ ಹೆಚ್ಚಾಗುವುದು ಕಂಡು ಬರುತ್ತದೆ. ಯೌವನದಲ್ಲಿರುವಾಗ ದೇಹದ ಚಯಾಪಚಯ ಕ್ರಿಯೆಗಳು ಅತ್ಯಂತ ಸುಸೂತ್ರವಾಗಿ ಕೆಲಸ ಮಾಡುತ್ತಿರುತ್ತವೆ. ಹೀಗಾಗಿ ಎಳೆ ವಯಸ್ಸಿನಲ್ಲಿ ಜೀರ್ಣ ಸಮಸ್ಯೆಗಳು ಕಂಡು ಬರುವುದು ಅಪರೂಪ. ಸಣ್ಣ ವಯಸ್ಸಿನಲ್ಲಿ ತುಸು ಹೆಚ್ಚು ತಿಂದರೂ ದೇಹಕ್ಕೆ ಅದನ್ನು ಅರಗಿಸಿಕೊಳ್ಳುವ ತಾಕತ್ತಿರುತ್ತದೆ. ಆದರೆ ವಯಸ್ಸಾದಂತೆ ಚಯಾಪಚಯ ಕ್ರಿಯೆ ನಿಧಾನವಾಗುತ್ತ ಹೋಗುತ್ತದೆ. ಹೀಗಾಗಿ ಕ್ಯಾಲೊರಿಗಳನ್ನು ಕರಗಿಸುವುದು ತೀರಾ ಕಷ್ಟವಾಗುತ್ತದೆ. 20 ರ ವಯಸ್ಸಿನಲ್ಲಿ ಕ್ಯಾಲೊರಿಗಳನ್ನು ಕರಗಿಸುವ ಶಕ್ತಿ ಇದ್ದಷ್ಟು 40 ರಲ್ಲಿ ಇರಲಾರದು.

ವಯಸ್ಸು ಹೆಚ್ಚಾದಂತೆ ತೂಕ ಹೆಚ್ಚಳದ ಸಮಸ್ಯೆ ನಿವಾರಣೆ ಹೇಗೆ?

ವಯಸ್ಸು ಹೆಚ್ಚಾದಂತೆ ತೂಕ ಹೆಚ್ಚಳದ ಸಮಸ್ಯೆ ನಿವಾರಣೆ ಹೇಗೆ?

ದೇಹತೂಕಕ್ಕೆ ಹೋಲಿಸಿದಲ್ಲಿ ಕ್ಯಾಲೊರಿಗಳ ಸೇವನೆ ಕಡಿಮೆಯೇ ಇರಬಹುದು. ಆದರೆ ಕ್ಯಾಲೊರಿಗಳ ಕರಗಿಸುವಿಕೆಯೇ ಸಮಸ್ಯೆಯಾಗಿರುತ್ತದೆ. ಹೀಗಾಗಿ ಸುಲಭವಾಗಿ ಜೀರ್ಣವಾಗುವ ನೇರವಾಗಿ ಪ್ರೋಟೀನ್ ಒದಗಿಸುವ ಆಹಾರಗಳನ್ನು ಸೇವಿಸುವುದು ಒಳಿತು. ವಯಸ್ಸಾದಂತೆ ಕಡಿಮೆ ಫ್ಯಾಟ್ ಹೆಚ್ಚು ಪ್ರೋಟೀನ್ ಇರುವ ಆಹಾರ ಸೇವನೆ ಆರೋಗ್ಯಕರವಾಗಿದೆ. ಇದರಿಂದ ತೂಕ ಹೆಚ್ಚಳ ಸಮಸ್ಯೆಯನ್ನು ಬಹುಮಟ್ಟಿಗೆ ನಿಯಂತ್ರಿಸಬಹುದು.

Most Read: ಕೇವಲ ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ?

ತಪ್ಪು ಔಷಧಿಗಳ ಸೇವನೆ

ತಪ್ಪು ಔಷಧಿಗಳ ಸೇವನೆ

ಬೇಡವಾದ ಔಷಧಿಗಳ ಸೇವನೆಯಿಂದಲೂ ಸಹ ತೂಕ ಹೆಚ್ಚಳದ ಸಮಸ್ಯೆ ಉಂಟಾಗುತ್ತದೆ. ಕೆಲ ಹೆಣ್ಣು ಮಕ್ಕಳು ಅತಿಯಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಪ್ರಾಣಕ್ಕೆ ಅಪಾಯಕಾರಿಯಾಬಹುದು. ಅತಿಯಾದ ಹಾರ್ಮೋನ್ ಔಷಧಿಗಳ ಸೇವನೆ ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸ್ತನ ಕ್ಯಾಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಲ್ಲಿ, ಗರ್ಭ ನಿರೋಧಕ ಮಾತ್ರೆ ಸೇವಿಸುತ್ತಿದ್ದಲ್ಲಿ ಅಥವಾ ಸ್ಟೆರಾಯ್ಡ್ ಬಳಸುತ್ತಿದ್ದಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ.

ಔಷಧಿಗಳ ಸೇವನೆಯಿಂದಾಗುವ ತೂಕ ಹೆಚ್ಚಳ ನಿಯಂತ್ರಣ ಹೇಗೆ?

ಔಷಧಿಗಳ ಸೇವನೆಯಿಂದಾಗುವ ತೂಕ ಹೆಚ್ಚಳ ನಿಯಂತ್ರಣ ಹೇಗೆ?

ನೀವು ಸೇವಿಸುತ್ತಿರುವ ಔಷಧಿಗಳ ಕಾರಣದಿಂದಲೇ ನಿಮ್ಮ ತೂಕ ಹೆಚ್ಚಾಗುತ್ತಿದೆ ಎಂಬುದು ನಿಮಗೆ ಖಚಿತವಾದಲ್ಲಿ ಈ ವಿಷಯವನ್ನು ತಕ್ಷಣ ನಿಮ್ಮ ವೈದ್ಯರ ಗಮನಕ್ಕೆ ತರುವುದು ಒಳಿತು. ವೈದ್ಯರು ಔಷಧಗಳನ್ನು ಮತ್ತೆ ಪರಿಶೀಲಿಸಿ ಅಡ್ಡಪರಿಣಾಮಗಳಿರದ ಪರ್ಯಾಯ ಔಷಧಿಗಳನ್ನು ಸೂಚಿಸಬಹುದು.

ಪೋಷಕಾಂಶಗಳ ಕೊರತೆಯಿಂದ ತೂಕ ಹೆಚ್ಚಳ

ಪೋಷಕಾಂಶಗಳ ಕೊರತೆಯಿಂದ ತೂಕ ಹೆಚ್ಚಳ

ದೇಹಕ್ಕೆ ನಿತ್ಯ ಅಗತ್ಯವಾದ ಪೋಷಕಾಂಶ ಭರಿತ ಆಹಾರ ಸೇವಿಸದಿದ್ದಲ್ಲಿ ಹಲವಾರು ಅಡ್ಡ ಪರಿಣಾಮಗಳು ಕಂಡುಬರುತ್ತವೆ. ಕಬ್ಬಿಣಾಂಶ, ವಿಟಮಿನ್ ಡಿ ಹಾಗೂ ಮ್ಯಾಗ್ನೇಶಿಯಂಗಳು ನಮ್ಮ ದೇಹಕ್ಕೆ ಅತಿ ಅಗತ್ಯವಾಗಿ ಬೇಕಾದ ಪೋಷಕಾಂಶಗಳಾಗಿವೆ. ಇವು ದೇಹದ ರೋಗ ಪ್ರತಿಬಂಧಕ ಶಕ್ತಿಯನ್ನು ಹೆಚ್ಚಿಸಿ ದೇಹಕ್ಕೆ ಚೈತನ್ಯ ನೀಡುವ ಅಂಶಗಳನ್ನು ಹೊಂದಿವೆ. ಇವುಗಳಲ್ಲಿ ಯಾವುದೇ ಪೋಷಕಾಂಶದ ಕೊರತೆಯಾದರೂ ಇಡೀ ಚಯಾಪಚಯ ಕ್ರಿಯೆ ಏರುಪೇರಾಗುತ್ತದೆ.

Most Read: ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!

ಪೋಷಕಾಂಶಗಳ ಕೊರತೆಯಿಂದ ತೂಕ ಹೆಚ್ಚಳವಾಗುವುದನ್ನು ತಪ್ಪಿಸುವುದು ಹೇಗೆ?

ಪೋಷಕಾಂಶಗಳ ಕೊರತೆಯಿಂದ ತೂಕ ಹೆಚ್ಚಳವಾಗುವುದನ್ನು ತಪ್ಪಿಸುವುದು ಹೇಗೆ?

ಕೆಲ ವಿಧಾನಗಳ ಮೂಲಕ ಯಾವ ಪೋಷಕಾಂಶಗಳ ಕೊರತೆ ದೇಹಕ್ಕೆ ಬಾಧಿಸುತ್ತದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ನಂತರ ಕಬ್ಬಿಣಾಂಶ ಅಧಿಕವಿರುವ ಪಾಲಕ ಸೊಪ್ಪು ಅಥವಾ ಮಾಂಸ ಸೇವನೆ ಆರಂಭಿಸಬಹುದು. ಉತ್ತಮ ಜೀವನ ಶೈಲಿಯಿಂದ ದೇಹದಲ್ಲಿ ಮ್ಯಾಗ್ನೇಶಿಯಂ ಅಂಶ ವೃದ್ಧಿಸಿಕೊಳ್ಳಬಹುದು. ಕಡಿಮೆ ಫ್ಯಾಟ್ ಇರುವ ಏಡಿ, ಕೆಫೀನ್ ಹಾಗೂ ಸಿಹಿ ತಿಂಡಿಗಳಿಂದ ಈ ಕೊರತೆ ಕಡಿಮೆ ಮಾಡಬಹುದು. ಇನ್ನು ಸರಿಯಾದ ಪ್ರಮಾಣದ ವಿಟಮಿನ್ ಡಿ ಸೇವನೆ ಮಾಡುತ್ತಿದ್ದರೆ ಪೋಷಕಾಂಶಗಳ ಕೊರತೆಯನ್ನು ಬಹಳಷ್ಟು ಮಟ್ಟಿಗೆ ನೀಗಿಸಬಹುದಾಗಿದೆ. ಆದರೆ ಅತಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ಸೇವನೆಯಿಂದ ಕಿಡ್ನಿ ಸ್ಟೋನ್‌ಗಳಾಗುವ ಸಾಧ್ಯತೆ ಇರುತ್ತದೆ ಎಂಬುದು ಗಮನದಲ್ಲಿರಲಿ.

English summary

Some weird reasons behind gaining weight

Recently, gaining weight has become a serious problem to people throughout the world. The reasons of weight gain can be many but what is the exact reason for weight gain in adults is hardly found out by the sufferers. According to the recent studies, weight gain can take place due to the reasons like Hormonal imbalance Side effects of prescribed medicine Deficiency of vitamins
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more