For Quick Alerts
ALLOW NOTIFICATIONS  
For Daily Alerts

ಮೀನು ತಿಂದರೆ ಆರೋಗ್ಯಕಾರಿಯಾಗಿ ತೂಕ ಇಳಿಸಿಕೊಳ್ಳಬಹುದು!

|

ಬೊಜ್ಜು ದೇಹದವರಿಗೆ ಸಮಾಜದಲ್ಲಿ ಬೆರೆಯಲು ಕೂಡ ಹಿಂಜರಿಕೆಯಾಗುವುದು. ತಮ್ಮ ದೇಹದ ಬಗ್ಗೆ ಇತರರು ಏನು ಹೇಳುತ್ತಾರೆಯಾ ಎನ್ನುವ ಭೀತಿ ಅವರಲ್ಲಿ ಕಾಡುತ್ತಲೇ ಇರುವುದು. ಇದರಿಂದಾಗಿ ಅವರು ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನ ಮಾಡುವರು. ಕೆಲವರು ಇದರಲ್ಲಿ ಸಫಲರಾದರೆ, ಇನ್ನು ಕೆಲವರು ಇನ್ನಷ್ಟು ದೇಹ ತೂಕ ಹೆಚ್ಚಿಸುವರು. ಆಧುನಿಕ ಜೀವನಶೈಲಿ, ಆಹಾರ ಕ್ರಮ, ಅನುವಂಶೀಯತೆ ಇತ್ಯಾದಿಗಳು ಬೊಜ್ಜು ದೇಹಕ್ಕೆ ಪ್ರಮುಖ ಕಾರಣವಾಗಿದೆ.

ದೇಹದ ತೂಕ ಆರೋಗ್ಯಕಾರಿಯಾಗಿದ್ದರೆ ಆಗ ಆರೋಗ್ಯವು ಸರಿಯಾಗಿದೆ ಎಂಧು ಹೇಳಬಹುದು. ತುಂಬಾ ಕಠಿಣ ಮತ್ತು ಕೆಲವೊಂದು ಆಹಾರ ಪಥ್ಯಗಳಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕವಾಗಿ ಸಮತೋಲಿತ ಆಹಾರ ಸೇವನೆ ಮಾಡಿದರೆ ಆಗ ಉತ್ತಮ ಆರೋಗ್ಯ ಕಾಪಾಡಬಹುದು. ಆರೋಗ್ಯಕಾರಿ ದೇಹದಿಂದ ಆರೋಗ್ಯಕಾರಿ ಮನಸ್ಸು ಇರುವುದು.

ಮೀನು ತಿಂದು ದೇಹದ ತೂಕ ಇಳಿಸಿಕೊಳ್ಳಿ!

ಮೀನು ತಿಂದು ದೇಹದ ತೂಕ ಇಳಿಸಿಕೊಳ್ಳಿ!

ತೂಕದಲ್ಲಿ ಮುಖ್ಯವಾಗಿ ನೀವು ಸೇವಿಸುವಂತಹ ಆಹಾರವು ಪ್ರಮುಖ ಪಾತ್ರ ವಹಿಸುವುದು. ಆಹಾರದ ಗುಣಮಟ್ಟವನ್ನು ಹೆಚ್ಚಿಸಲು ಕೆಲವೊಂದು ವಿಧಾಣಗಳು ಇವೆ ಮತ್ತು ಇದು ಬೊಜ್ಜು ದೇಹದ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯವನ್ನು ಕೂಡ ಸರಿಯಾಗಿ ಇಡುವುದು. ಸುಧಾರಿತ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡ ಕಡಿಮೆ ಮಾಡಿಕೊಳ್ಳುವುದು ತೂಕ ಇಳಿಕೆಯಿಂದ ಸಿಗುವಂತಹ ಪ್ರಮುಖ ಲಾಭಗಳು. ಆರೋಗ್ಯಕಾರಿ ತೂಕ ಪಡೆಯಲು ಕೆಲವೊಂದು ಪೋಷಕಾಂಶಗಳು ಇರುವಂತಹ ಆಹಾರ ಕ್ರಮ ಪಾಲಿಸಬೇಕು ಮತ್ತು ಅನಾರೋಗ್ಯಕರ ಆಹಾರವನ್ನು ತ್ಯಜಿಸಬೇಕು. ಆರೋಗ್ಯಕಾರಿ ದೇಹವನ್ನು ಕಾಪಾಡಲು ಪ್ರೋಟೀನ್ ಪ್ರಮುಖವಾದ ಪೋಷಕಾಂಶವಾಗಿದೆ. ಪ್ರೋಟೀನ್ ಸ್ನಾಯು ಖಂಡವನ್ನು ಕಾಪಾಡಲು ಮತ್ತು ಸರಿಪಡಿಸಲು ನೆರವಾಗುವುದು. ಇದು ತೂಕ ಕಳೆದುಕೊಳ್ಳಲು ಕೂಡ ಅತೀ ಮುಖ್ಯವಾಗಿದೆ. ಮೀನು ಮತ್ತು ಸಮುದ್ರ ಖಾದ್ಯಗಳು ಪ್ರೋಟೀನ್ ಹೊಂದಿರುವಂತಹ ತುಂಬಾ ಆರೋಗ್ಯಕಾರಿ ಮೂಲಗಳು ಎಂದು ಆಹಾರ ತಜ್ಞರು ಹೇಳುವರು. ಆದರೆ ವಿಜ್ಞಾನಿಗಳು ಈ ಬಗ್ಗೆ ತುಂಬಾ ಭಿನ್ನ ರಾಗ ಹಾಡುತ್ತಾರೆ. ಇದರಲ್ಲಿ ಹೆಚ್ಚಿನವರು ಮೀನು ಆರೋಗ್ಯಕ್ಕೆ ಒಳ್ಳೆಯದು ಎಂದು ಒಪ್ಪಿಕೊಳ್ಳುತ್ತಾರೆ. ಆರೋಗ್ಯಕಾರಿಯಾಗಿ ತೂಕ ಇಳಿಸಲು ಮೀನು ಯಾಕೆ ಸೇವಿಸಬೇಕು ಎಂದು ನಾವು ಇಲ್ಲಿ ವಿವರವಾಗಿ ಹೇಳಿದ್ದೇವೆ, ಮುಂದೆ ಓದಿ

ಉನ್ನತ ಗುಣ ಮಟ್ಟದ ಪ್ರೋಟೀನ್

ಉನ್ನತ ಗುಣ ಮಟ್ಟದ ಪ್ರೋಟೀನ್

ಮೀನಿನಲ್ಲಿ ಉನ್ನತ ಮಟ್ಟದ ತೆಳು ಪ್ರೋಟೀನ್ ಇದೆ. ನೀವು ಯಾವ ಜಾತಿಯ ಮೀನು ಸೇವಿಸುತ್ತಿದ್ದೀರಿ ಎನ್ನುವುದರ ಮೇಲೆ ಅದರಲ್ಲಿ ಎಷ್ಟು ಪ್ರಮಾಣದ ಪ್ರೋಟೀನ್ ಇದೆ ಎಂದು ಹೇಳಬಹುದು. ಮೀನಿನಲ್ಲಿ ಉನ್ನತ ಗುಣಮಟ್ಟದ ಪ್ರೋಟೀನ್ ಇದೆ ಇದು ನಿಮಗೆ ತೂಕ ಇಳಿಸಿಕೊಳ್ಳಲು ತುಂಬಾ ನೆರವಿಗೆ ಬರುವುದು. ಪ್ರೋಟೀನ್ ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ವ್ಯಾಯಾಮಕ್ಕೂ ನೆರವಾಗುವುದು. ಯಾಕೆಂದರೆ ಇದು ಬೇಗನೆ ಸ್ನಾಯುಗಳನ್ನು ಸರಿಪಡಿಸುವುದು.

Most Read: ಮೀನು ತಿಂದವರಿಗೆ ಈ ಹತ್ತು ಆರೋಗ್ಯ ಲಾಭಗಳು ಖಚಿತ

ಆರೋಗ್ಯಕಾರಿ ಕೊಬ್ಬು

ಆರೋಗ್ಯಕಾರಿ ಕೊಬ್ಬು

ಸಾಮಾನ್ಯ ನಂಬಿಕೆಗೆ ಇದು ವಿರುದ್ಧವಾಗಿದೆ. ಯಾಕೆಂದರೆ ಮೀನಿನಲ್ಲಿರುವ ಕೊಬ್ಬು ತೂಕ ಇಳಿಸಿಕೊಳ್ಳಲು ನೆರವಾಗಲಿದೆ. ಮೀನುಗಳಲ್ಲಿ ಹೆಚ್ಚಾಗಿ ಒಮೆಗಾ-3 ಕೊಬ್ಬಿನಾಮ್ಲಗಳು ಇವೆ. ಇದು ಹೃದಯವನ್ನು ರಕ್ಷಿಸುವುದು ಮತ್ತು ಸಮತೋಲಿತ ತೂಕಕ್ಕೆ ಇದು ನೆರವಾಗುವುದು.

ಕಡಿಮೆ ಕ್ಯಾಲರಿ

ಕಡಿಮೆ ಕ್ಯಾಲರಿ

ಸ್ಯಾಚುರೇಟೆಡ್ ಕೊಬ್ಬು ತುಂಬಾ ಕಡಿಮೆ ಇರುವಂತಹ ತಿನ್ನಲು ಯೋಗ್ಯವಾದ ಮೀನಿನಲ್ಲಿ ಕ್ಯಾಲರಿ ಕೂಡ ಕಡಿಮೆ ಇದೆ. ಕ್ಯಾಲರಿ ಕಡಿಮೆ ಇರುವ ಕಾರಣದಿಂದಾಗಿ ದೇಹವನ್ನು ಸಮತೂಕದಲ್ಲಿ ಇರಿಸಿಕೊಳ್ಳಲು ನೆರವಾಗುವುದು.

Most Read: ನಾನ್‌ವೆಜ್ ಪ್ರಿಯರಿಗೆ ಸಿಹಿ ಸುದ್ದಿ: ಮೀನು ತಿನ್ನಿ ಕೊಬ್ಬು ಕರಗಿಸಿ!

ಆರೋಗ್ಯಕಾರಿ ಚಯಾಪಚಯ ಕ್ರಿಯೆ ಕಾಪಾಡಲು

ಆರೋಗ್ಯಕಾರಿ ಚಯಾಪಚಯ ಕ್ರಿಯೆ ಕಾಪಾಡಲು

ಮೀನಿನಲ್ಲಿ ಉನ್ನತ ಮಟ್ಟದ ಐಯೋಡಿನ್ ಇದೆ. ಇದು ಥೈರಾಯ್ಡ್ ಹಾರ್ಮೋನ್ ನ ಕಾರ್ಯವನ್ನು ಸರಿಯಾಗಿ ನಿರ್ವಹಿಸುವಂತೆ ಮಾಡುವುದು. ಪೋಷಕಾಂಶಗಳು ಥೈರಾಯ್ಡ್ ನ ಮಟ್ಟವನ್ನು ಹೆಚ್ಚು ಮಾಡುವುದು ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು ಎತ್ತರದಲ್ಲಿ ಇರಿಸುವುದು. ಇದರಿಂದಾಗಿ ದೇಹವು ಸಾಮಾನ್ಯವಾಗಿ ಕ್ಯಾಲರಿ ದಹಿಸಲು ನೆರವಾಗುವುದು.

ತೂಕ ಇಳಿಸಿಕೊಳ್ಳಲು ಸಹಾಯವಾಗುವ ಮೀನುಗಳು

ತೂಕ ಇಳಿಸಿಕೊಳ್ಳಲು ಸಹಾಯವಾಗುವ ಮೀನುಗಳು

ತೂಕ ಇಳಿಸಿಕೊಳ್ಳಲು ಸೇವಿಸಬೇಕಾದ ಕೆಲವೊಂದು ಮೀನುಗಳೆಂದರೆ ಸಾಲ್ಮನ್, ಟ್ಯೂನಾ, ಪೆಸಿಫಿಕ್ ಕೊಡ್, ಟ್ರಾಟ್, ಬೂತಾಯಿ, ಬಂಗುಡೆ ಮತ್ತು ಹಿಲ್ಸಾದಂತಹ ಕೆಲವೊಂದು ದೇಶೀಯ ಮೀನುಗಳು. ದಿನಕ್ಕೆ 140 ಗ್ರಾಂನಷ್ಟು ಮೀನು ಸೇವನೆ ಮಾಡಬೇಕು ಎಂದು ಬ್ರಿಟನ್ ಮೂಲಕ ನ್ಯಾಷನಲ್ ಹೆಲ್ತ್ ಸರ್ವೀಸಸ್ ಹೇಳಿದೆ. ಎಣ್ಣೆಯುಕ್ತ ಮೀನನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಅದಾಗ್ಯೂ, ನೀವು ಪೋಷಕಾಂಶ ತಜ್ಞ ಅಥವಾ ಆಹಾರ ತಜ್ಞರ ಸಲಹೆ ಪಡೆದುಕೊಂಡು ಬಳಿಕ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಮೀನನ್ನು ಸೇರಿಸಿಕೊಳ್ಳಿ.

English summary

Eating Fish Help You Weight Loss In A Healthy Way

A healthy body weight is generally considered to be an indicator of good health. Although it's not advisable to follow fad or crash diets to lose weight, as these might end up doing more damage than good, one must generally try to incorporate a little bit of physical activity and follow a balanced diet to maintain the body in good health.A healthy body may also translate in a healthy mind and diet is one of the most important factors that influence your weight.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more