For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ಬೆಳ್ಳುಳ್ಳಿ ಸೇವಿಸಿ ಕೂಡ ತೂಕ ಕಳೆದುಕೊಳ್ಳಬಹುದಂತೆ!

|

ನಾಲಗೆಗೆ ರುಚಿ ಬರುವುದು ಎಂದು ನಾವು ಸಿಕ್ಕಿದೆಲ್ಲವನ್ನು ತಿನ್ನುತ್ತೇವೆ. ಅದೇ ರೀತಿಯಲ್ಲಿ ನಾವು ತಿನ್ನುವ ಅನಾರೋಗ್ಯಕಾರಿ ಆಹಾರದಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ಬೊಜ್ಜು ಬೆಳೆಯುವ ಪರಿಣಾಮವಾಗಿ ಅದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಬೊಜ್ಜು ಕರಗಿಸಿಕೊಂಡು ಆರೋಗ್ಯಕಾರಿ ತೂಕವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ಬೊಜ್ಜು ದೇಹದಿಂದಲೇ ಇಂದಿನ ದಿನಗಳಲ್ಲಿ ಹಲವಾರು ಉದ್ಯಮಗಳು ನಡೆಯುತ್ತಿದೆ. ಬೊಜ್ಜು ದೇಹ ಕರಗಿಸಲು ಹಲವಾರು ವ್ಯಾಯಾಮಗಳು, ತರಗತಿಗಳು, ಶಿಬಿರಗಳು ಮತ್ತು ಔಷಧಿಗಳು ಲಭ್ಯವಿದೆ.

Garlic

ಬೊಜ್ಜು ಎನ್ನುವುದು ನಮಗೆ ದೊಡ್ಡ ತಲೆನೋವು ಆದರೆ ಅದೇ ಬೊಜ್ಜು ಕೆಲವರಿಗೆ ಹಣದ ಥೈಲಿಯನ್ನು ದೊಡ್ಡದು ಮಾಡುವುದು. ಸರಿಯಾದ ಆಹಾರ ಕ್ರಮ ಹಾಗೂ ವ್ಯಾಯಾಮದಿಂದ ಬೊಜ್ಜು ದೇಹವನ್ನು ಕರಗಿಸಬಹುದು. ಇದಕ್ಕೆ ಯಾವುದೇ ರೀತಿಯ ಅಡ್ಡದಾರಿಗಳು ಇಲ್ಲ. ಆಹಾರ ಕ್ರಮವು ನಿಮ್ಮನ್ನು ಆರೋಗ್ಯವಾಗಿ ಇಡುವುದು ಮತ್ತು ವ್ಯಾಯಾಮವು ಫಿಟ್ ಆಗಿಡುವುದು. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀಡು ಕುಡಿಯುವುದ, ಹಸಿರು ತರಕಾರಿಗಳ ಸೇವನೆ ಇತ್ಯಾದಿಗಳು. ಇಂತಹ ಆಹಾರ ಕ್ರಮದಿಂದಾಗಿ ದೇಹದ ತೂಕವನ್ನು ವೇಗವಾಗಿ ಇಳಿಸಿಕೊಳ್ಳಬಹುದು. ದೇಹದ ಬೊಜ್ಜು ಕರಗಿಸಲು ಯಾವುದೇ ಅಡ್ಡದಾರಿಗಳು ಇಲ್ಲ. ಆದರೆ ಕೆಲವೊಂದು ಮನೆಮದ್ದುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಅದು ಪರಿಣಾಮಕಾರಿ ಆಗಿ ಇರುವುದು. ತೂಕ ಕಳೆದುಕೊಳ್ಳಲು ನೆರವಾಗುವಂತಹ ಕೆಲವೊಂದು ಮನೆಮದ್ದುಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ.

ಬೆಳ್ಳಳ್ಳಿ

ಬೆಳ್ಳಳ್ಳಿ

ನೀವು ಯಾವುದೇ ರಿತಿಯ ಮನೆಮದ್ದನ್ನು ಬಳಸಿಕೊಳ್ಳಲು ಬಯಸುತ್ತಿದ್ದರೆ ಆಗ ನೀವು ಬೆಳ್ಳಳ್ಳಿ ಬಳಸಬಹುದು. ಬೆಳ್ಳುಳ್ಳಿಯು ನಾವು ಸೇವಿಸುವಂತಹ ಪ್ರತಿಯೊಂದು ಆಹಾರದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದು ಸ್ವಲ್ಪ ಘಾಟು ವಾಸನೆ ಉಂಟು ಮಾಡಿದರೂ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ನಾರಿನಾಂಶ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕಬ್ಬಿನಾಂಶವು ಇದೆ. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಹೃದಯದ ಕಾಯಿಲೆ ತಡೆಯುವುದು ಮತ್ತು ರಕ್ತನಾಳಗಳಿಗೆ ಆರಾಮ ನೀಡುವುದು. ತೂಕ ಇಳಿಸಿಕೊಳ್ಳಲು ಬೆಳ್ಳುಳ್ಳಿ ಬಳಸುವುದು ಹೇಗೆ ಎಂದು ನಾವು ಇಲ್ಲಿ ತಿಳಿಯುವ

ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ

ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ

ಹೌದು ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ನಮಗೆ ಈಗಾಗಲೇ ತಿಳಿದಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವೇಳೆ ಬೆಳ್ಳುಳ್ಳಿ ಬಳಸಬಹುದು ಎಂದು ವಿವಿಧ ಅಧ್ಯಯನಗಳು ಕೂಡ ಹೇಳಿವೆ. ನಾವು ಹೇಗೆ ಬೆಳ್ಳುಳ್ಳಿ ಸೇವಿಸುತ್ತಿದ್ದೇವೆ ಎನ್ನುವುದು ಅತೀ ಮಹತ್ವದ್ದಾಗಿದೆ. ಬೆಳ್ಳುಳ್ಳಿಯನ್ನು ಯಾವ ರೀತಿ ಬಳಸುತ್ತೇವೆ ಎನ್ನುವ ಮೇಲೆ ಅದರ ಆರೋಗ್ಯ ಲಾಭಗಳು ಸಿಗುವುದು. ಬೆಳ್ಳುಳ್ಳಿಯು ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಮತ್ತು ಕ್ಯಾಲರಿ ದಹಿಸುವುದು. ಬೆಳ್ಳುಳ್ಳಿಯಲ್ಲಿ ಅಲ್ಲಿನೆಸ್ ಎನ್ನುವ ಕಿಣ್ವ ದೆ. ಇದು ಅಲ್ಲಿನ್ ನ್ನು ಅಲ್ಲಿಸಿನ್ ಆಗಿ ಪರಿವರ್ತನೆ ಮಾಡುವುದು. ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿಯನ್ನು 45 ನಿಮಿಷ ಕಾಲ ಓವನ್ ನಲ್ಲಿ ಹಾಕಿದರೆ ಆಗ ಅಲ್ಲಿನಾಸೆ ನಾಶವಾಗುವುದು ಮತ್ತು ಅದರಲ್ಲಿನ ಆರೋಗ್ಯ ಲಾಭಗಳು ಕೂಡ ಕುಂದುವುದು. ಬೆಳ್ಳುಳ್ಳಿ ಜಜ್ಜಿಕೊಳ್ಳಬೇಕು ಮತ್ತು ಅದನ್ನು ಹತ್ತು ನಿಮಿಷ ಹಾಗೆ ಬಿಟ್ಟು ಬಳಿಕ ಖಾದ್ಯಕ್ಕೆ ಬಳಸಿಕೊಂಡರೆ ಆಗ ಅದರಿಂದ ಅಧಿಕ ಆರೋಗ್ಯ ಲಾಭಗಳು ಸಿಗುವುದು ಎಂದು ಹೇಳಲಾಗಿದೆ. ತೂಕ ಇಳಿಸಲು ಬೆಳ್ಳುಳ್ಳಿ ಉಪಯೋಗಿಸುವುದು ಹೇಗೆ, ಮುಂದೆ ಓದಿ

Most Read: ಅಸ್ತಮಾಗೆ ಚಿಕಿತ್ಸೆ ನೀಡದೆ ಇದ್ದರೆ ಸಾವೂ ಬರಬಹುದಂತೆ! ಇದರ ನಿಯಂತ್ರಣಕ್ಕೆ ಮನೆಮದ್ದುಗಳು ಇವೆ

ಬೆಳ್ಳುಳ್ಳಿ ಮತ್ತು ಜೇನುತುಪ್ಪ

ಬೆಳ್ಳುಳ್ಳಿ ಮತ್ತು ಜೇನುತುಪ್ಪ

ಜೇನುತುಪ್ಪ ಮತ್ತು ಹಸಿ ಬೆಳ್ಳುಳ್ಳಿ ಮಿಶ್ರಣವು ತೂಕ ಕಳೆದುಕೊಳ್ಳಲು ತುಂಬಾ ಪರಿಣಾಮಕಾರಿ ಆಗಿದೆ. ಈ ಮಿಶ್ರಣವನ್ನು ತಯಾರಿಸಿಕೊಳ್ಳುವುದು ತುಂಬಾ ಸುಲಭ. 2-3 ಬೆಳ್ಳುಳ್ಳಿ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಜಜ್ಜಿಕೊಂಡು ಜೇನುತುಪ್ಪದ ಜತೆಗೆ ಮಿಶ್ರಣ ಮಾಡಿ. ಸ್ವಲ್ಪ ಸಮಯ ಇದು ಹಾಗೆ ಇರಲಿ, ಬಳಿಕ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ತಾಜಾ ಜೇನುತುಪ್ಪವನ್ನು ಬಳಸಿಕೊಳ್ಳಿ. ಯಾಕೆಂದರೆ ಇದರಲ್ಲಿ ನೈಸರ್ಗಿಕ ಸಕ್ಕರೆ ಇರುವುದು. ಇದನ್ನು ಸಂಸ್ಕರಿಸಿರುವುದಿಲ್ಲ ಮತ್ತು ಪಾಶ್ಚ್ಯರೀಕರಿಸಿರುವುದಿಲ್ಲ.

ಬೆಳ್ಳುಳ್ಳಿ ಮತ್ತು ಲಿಂಬೆರಸ

ಬೆಳ್ಳುಳ್ಳಿ ಮತ್ತು ಲಿಂಬೆರಸ

ಬೆಳ್ಳುಳ್ಳಿಯನ್ನು ಲಿಂಬೆರಸದೊಂದಿಗೆ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಲಿಂಬೆರಸ ಬೆರೆಸಿ ಮತ್ತು ಅದಕ್ಕೆ ಒಂದು ಜಜ್ಜಿಕೊಂಡು ಬೆಳ್ಳುಳ್ಳಿ ಹಾಕಿ. ತಜ್ಞರ ಪ್ರಕಾರ ಲಿಂಬೆರಸ ಮತ್ತು ಬೆಳ್ಳುಳ್ಳಿಯು ತೂಕ ಕಳೆದುಕೊಳ್ಳಲು ನೆರವಾಗುವುದು.

Most Read:ಇದಕ್ಕೇ ಹೇಳುವುದು ಜೇನು ತುಪ್ಪ ಮತ್ತು ದಾಲ್ಚಿನ್ನಿ ಒಳ್ಳೆಯ ಸಂಯೋಜನೆ ಎಂದು

ಬೆಳ್ಳುಳ್ಳಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಬೆಳ್ಳುಳ್ಳಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನ ಜತೆಗೆ ಬೆಳ್ಳುಳ್ಳಿ ಸೇವಿಸಬೇಕು. ಇದರಿಂದ ತೂಕ ಕಳೆದುಕೊಳ್ಳಲು ಬೇಕಾಗುವ ಅತ್ಯಧಿಕ ಲಾಭಗಳು ಬೆಳ್ಳುಳ್ಳಿಯಿಂದ ಸಿಗುವುದು. ಬೇಯಿಸಿದ ಬೆಳ್ಳುಳ್ಳಿಗಿಂತ ಹಸಿ ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿ. ಇದು ತೂಕ ಇಳಿಸುವ ಪ್ರಮುಖ ಅಂಶವಾಗಿದೆ. 2-3 ಬೆಳ್ಳುಳ್ಳಿ ಜಜ್ಜಿಕೊಳ್ಳಿ ಮತ್ತು ಅದನ್ನು ಹತ್ತು ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ನೀರಿಗೆ ಹಾಕಿ ಕುಡಿಯಿರಿ.

ಬೆಳ್ಳುಳ್ಳಿಯನ್ನು ನೀವು ತೂಕ ಕಳೆದುಕೊಳ್ಳಲು ಬಳಸುವ ಮೊದಲು ಆಹಾರ ತಜ್ಞರು ಅಥವಾ ಪೋಷಕಾಂಶ ತಜ್ಞರ ಮಾಹಿತಿ ಪಡೆಯಿರಿ. ಅತಿಯಾಗಿ ಬೆಳ್ಳುಳ್ಳಿ ಸೇವಿಸಬೇಡಿ.

English summary

Did You Know Garlic also helpfull for Weight Loss!

Proper diet and intense workout are the ultimate solutions if you plan to lose weight. There are no shortcuts in between. Diet keeps you healthy and workout makes you fit. Drinking warm water in morning, eating green, etc; are some good dietary practices that can help you lose weight faster. It is true that there are no shortcuts for weight loss but you might agree that home remedies sometimes works really great to lose weight. Home remedies are like hacks that give boost to your weight loss mission.
X
Desktop Bottom Promotion