For Quick Alerts
ALLOW NOTIFICATIONS  
For Daily Alerts

ರಾತ್ರಿ ಊಟಕ್ಕೆ ದಿನಾ ದಾಲ್ ರೈಸ್ ಸೇವಿಸಿದರೆ-ತೂಕ ಇಳಿಸಿಕೊಳ್ಳಬಹುದು!

|

ತೂಕ ಇಳಿಸುವ ಪ್ರಯತ್ನದಲ್ಲಿರುವವರಿಗೆ ರಾತ್ರಿಯೂಟದ ಆಯ್ಕೆ ಬಹಳ ಕಷ್ಟಕರವಾದದ್ದು. ಏಕೆಂದರೆ ರಾತ್ರಿ ಹೊತ್ತು ಸೇವಿಸಿದ ಈ ಆಹಾರ ದಿನದ ಅವಧಿಯಲ್ಲಿ ಕಷ್ಟಪಟ್ಟು ಕಳೆದುಕೊಂಡಿದ್ದ ಕೊಬ್ಬನ್ನು ಮತ್ತೆ ತುಂಬಿಕೊಳ್ಳಲು ಸಹಾಯ ಮಾಡಬಹುದು! ಈ ಆಹಾರದಲ್ಲಿ ಕಾರ್ಬೋಹೈಡ್ರೇಟುಗಳಿರಬೇಕೇ? ವಾರದಲ್ಲೆಷ್ಟು ದಿನ ಕೇವಲ ಸಾಲಾಡ್ ಸೇವ್ಸಬೇಕು?

WEIGHT LOSS

ವಾರದಲ್ಲೆಷ್ಟು ದಿನ ರಾತ್ರಿಯೂಟ ತ್ಯಜಿಸಬೇಕು? ತೂಕ ಇಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವವರಿಗೆ ಎದುರಾಗುವ ಪ್ರಶ್ನೆಗಳಿವು. ಇಂದಿನ ಲೇಖನದಲ್ಲಿ ರಾತ್ರಿಯೂಟದ ಬಗ್ಗೆ ಕೆಲವು ಮಾಹಿತಿಯನ್ನು ನೀಡಲಾಗಿದ್ದು ನಿತ್ಯವೂ ಸೇವಿಸಲು ಸೂಕ್ತವಾಗಿರುವ ಆಹಾರವೆಂದರೆ ಅತ್ಯುತ್ತಮ ಹಾಗೂ ಎಲ್ಲರಿಗೂ ಸುಲಭದರದಲ್ಲಿ ಲಭ್ಯವಿರುವ ದಾಲ್ ಚಾವಲ್ ಅಥವಾ ದಾಲ್ ರೈಸ್

ಆದರೆ ದಾಲ್ ರೈಸ್ ಏಕೆ?

ಆದರೆ ದಾಲ್ ರೈಸ್ ಏಕೆ?

ತೂಕ ಇಳಿಸುವ ನಿಟ್ಟಿನಲ್ಲಿ ರಾತ್ರಿಯೂಟಕ್ಕೆ ಸೇವಿಸಲು ಅತ್ಯಂತ ಸುರಕ್ಷಿತ ಆಹಾರವಾಗಿದೆ. ಏಕೆಂದರೆ ಒಂದು ವೇಳೆ ನಿಮ್ಮ ಆಹಾರ ಕಾರ್ಬೋಹೈಡ್ರೇಟುಗಳಿಂದ ಸಂಪೂರ್ಣವಾಗಿ ವಂಚಿತವಾಗಿದ್ದರೆ ದೇಹಕ್ಕೆ ಅಗತ್ಯ ಶಕ್ತಿ ಲಭಿಸುವುದಿಲ್ಲ ಹಾಗೂ ಈ ಆಹಾರ ಮಲಬದ್ದತೆಗೆ ನೇರವಾಗಿ ಕಾರಣವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಇರುವ ಯಾವುದೇ ವ್ಯಕ್ತಿ ಈ ಎರಡೂ ಸಂದರ್ಭಗಳನ್ನು ಬಯಸಲಾರರು. ಆದರೆ ವಾರದಲ್ಲಿ ನಾಲ್ಲರಿಂದ ಆರು ದಿನವೂ ರಾತ್ರಿಯೂಟಕ್ಕೆ ದಾಲ್ ಚಾವಲ್ ಸೇವಿಸಿದರೆ ಜೀರ್ಣಕ್ರಿಯೆಯೂ ಉತ್ತಮಗೊಳ್ಳುವುದು ಮಾತ್ರವಲ್ಲ ದಿನವಿಡೀ ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ. ಅಲ್ಲದೇ ನಿಮ್ಮ ತೂಕ ಇಳಿಕೆಯ ಪ್ರಯತ್ನಗಳಿಗೆ ಯಾವುದೇ ಅಡ್ಡಿಯುಂಟುಮಾಡದೇ ನಿಗದಿತ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ.

Most Read: ವ್ಯಾಯಾಮವು ಹೃದಯ ರೋಗಿಯ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆಯಂತೆ

ದಾಲ್ ನ ಪೌಷ್ಟಿಕಾಂಶಗಳ ವಿವರಗಳು

ದಾಲ್ ನ ಪೌಷ್ಟಿಕಾಂಶಗಳ ವಿವರಗಳು

ದಾಲ್ ನಲ್ಲಿ ಅವಶ್ಯಕ ಪ್ರೋಟೀನುಗಳು, ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟುಗಳು ಹಾಗೂ ಕರಗದ ನಾರು ಇದ್ದು ರಾತ್ರಿಯೂಟಕ್ಕೆ ಸೂಕ್ತವಾದ ಪ್ರಮಾಣದಲ್ಲಿವೆ. ಭಾರತದಲ್ಲಿ ಹಲವು ಬಗೆಯ ಬೇಳೆಗಳನ್ನು ಬಳಸಲಾಗುತ್ತದೆ ಹಾಗೂ ಆಗಾಗ ಇವುಗಳನ್ನು ಬದಲಿಸುವ ಮೂಲಕ ಆಹಾರದಲ್ಲಿ ಏಕತಾನತೆ ಇಲ್ಲದೇ ವೈವಿಧ್ಯತೆ ಮೂಡುತ್ತದೆ. ಅಲ್ಲದೇ ಈಗಾಗಲೇ ಹಲವು ಬಗೆಯ ರುಚಿಗಳಿಗೆ ಒಗ್ಗಿ ಹೋಗಿರುವ ನಮ್ಮ ನಾಲಿಗೆಗಳು ಈ ದಾಲ್ ಚಾವಲ್ ಬದಲಾವಣೆಗೂ ಯಾವುದೇ ತಕರಾರು ಒಡ್ಡದೇ ಒಗ್ಗಿಕೊಳ್ಳುತ್ತವೆ. ತನ್ಮೂಲಕ ಅನಾರೋಗ್ಯಕರ ಸಿದ್ಧ ಆಹಾರಗಳತ್ತ ಒಲವು ಮೂಡದಿರಲು ಸಾಧ್ಯವಾಗುತ್ತದೆ.

ಚಾವಲ್ ಅಥವಾ ಅನ್ನದ ಪೌಷ್ಟಿಕಾಂಶಗಳ ವಿವರಗಳು:

ಚಾವಲ್ ಅಥವಾ ಅನ್ನದ ಪೌಷ್ಟಿಕಾಂಶಗಳ ವಿವರಗಳು:

ಜೀರ್ಣಕ್ರಿಯೆ ಸುಲಭವಾಗಿ ಆಗುವ ಅನ್ನ ಪ್ರೋಟೀನ್ ಭರಿತವಾಗಿದ್ದು ಕಡಿಮೆ ಕಾರ್ಬೋಹೈಡ್ರೇಟುಗಳಿಂದ ಕೂಡಿದೆ. ಇದು ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿಸಿ ತೃಪ್ತಿಯ ಭಾವನೆಯನ್ನು ಮೂಡಿಸುತ್ತದೆ. ಅಲ್ಲದೇ ಅನ್ನದಲ್ಲಿರುವ ಫೈಟೋ ನ್ಯೂಟ್ರಿಯೆಂಟ್ ಮತ್ತು ವಿಟಮಿನ್ ಗಳು ಆರೋಗ್ಯಕರ ಶರೀರಕ್ಕೆ ಅವಶ್ಯಕವಾಗಿವೆ. ಸಾಮಾನ್ಯವಾಗಿರುವ ನಂಬಿಕೆಗೆ ವಿರುದ್ದವಾಗಿ ಅನ್ನದಲ್ಲಿ ರೊಟ್ಟಿಗಿಂತಲೂ ಕಡಿಮೆ ಕಾರ್ಬೋಹೈಡ್ರೇಟುಗಳಿವೆ ಹಾಗೂ ಗೋಧಿಗಿಂತಲೂ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ.

Most Read: ಟೈಫಾಯ್ಡ್‌ ಜ್ವರ ಗುಣಪಡಿಸುವ ಪವರ್‌ಫುಲ್ ಮನೆಮದ್ದುಗಳು

ದಾಲ್ ಮತ್ತು ಚಾವಲ್ ನ ಜೋಡಿ

ದಾಲ್ ಮತ್ತು ಚಾವಲ್ ನ ಜೋಡಿ

ತೂಕ ಇಳಿಯಲೂ ಬೇಕು ಹಾಗೂ ನಿತ್ಯದ ಆಹಾರದ ಚಪಲವನ್ನು ಬಿಡಲೂ ಸಾಧ್ಯವಿಲ್ಲ ಎನ್ನುವವರಿಗೆ ದಾಲ್ ಚಾವಲ್ ಅತ್ಯುತ್ತಮ ಆಯ್ಕೆಯಾಗಿದೆ. ಈ ಜೋಡಿಯಲ್ಲಿರುವ ಅವಶ್ಯಕ ಪ್ರೋಟೀನ್, ಕಾರ್ಬೋಹೈಡ್ರೇಟುಗಳು ಹಾಗೂ ಕರಗದ ನಾರು ತೂಕ ಇಳಿಕೆಗೆ ಅತ್ಯುತ್ತಮವಾದ ಆಯ್ಕೆಯಾಗಿದೆ ಹಾಗೂ ಆರೋಗ್ಯವನ್ನು ಯಾವುದೇ ಬಗೆಯಲ್ಲಿ ಬಾಧಿಸುವುದಿಲ್ಲ. ತೂಕ ಇಳಿಸುವ ಪ್ರಯತ್ನದಲ್ಲಿರುವವರು ವಾರದಲ್ಲಿ ಕನಿಷ್ಟ ನಾಲ್ಕು ದಿನವಾದರೂ ದಾಲ್ ಚಾವಲ್ ಸೇವಿಸಿಯೂ ತೂಕ ಇಳಿಕೆಯ ಗುರಿಗಳನ್ನು ಸಾಧಿಸಬಹುದು.

ಕೆಲವು ಅವಶ್ಯಕ ಸಲಹೆಗಳು

ಕೆಲವು ಅವಶ್ಯಕ ಸಲಹೆಗಳು

ಆರೋಗ್ಯ ತಜ್ಞರಾದ ರುಜುತಾ ದಿವೇಕರ್ ರವರು ತೂಕ ಇಳಿಕೆಯ ನಿಟ್ಟಿನಲ್ಲಿ ರಾತ್ರಿಯೂಟಕ್ಕೆ ಮನೆಯೂಟವೇ ಉತ್ತಮ ಹಾಗೂ ಇದರಲ್ಲಿ ದಾಲ್ ಚಾವಲ್ ಅತಿ ಸೂಕ್ತವಾದ ಆಹಾರ ಎಂದು ವಿವರಿಸುತ್ತಾರೆ. ಆದರೆ ರಾತ್ರಿಯೂಟವನ್ನು ಎಂಟು ಘಂಟೆಗೂ ಮುನ್ನವೇ ಸೇವಿಸಬೇಕು ಹಾಗೂ ನಿದ್ದೆ ಮಾಡುವ ಎರಡು ಘಂಟೆಗೂ ಮುನ್ನ ನಿಮ್ಮ ರಾತ್ರಿಯೂಟ ಮುಗಿದಿರಬೇಕು. ಅಲ್ಲದೇ ನಿತ್ಯವೂ ಕನಿಷ್ಟ ನಲವತ್ತೈದು ನಿಮಿಷಗಳ ವ್ಯಾಯಾಮ ಅಗತ್ಯವಾಗಿದೆ ಹಾಗೂ ಪ್ರತಿದಿನ ಸೇವಿಸುವ ದಾಲ್ ಚಾವಲ್ ನ ಪ್ರಮಾಣವೂ ಮಿತವಾಗಿರುವುದು ಅವಶ್ಯಕವಾಗಿದೆ.

English summary

Dal Rice for dinner is great for WEIGHT LOSS!

Dinner options are the biggest worry for any weight loss fanatic. Should you eat carbs? How many times will you eat salad in a week? And how many times will you end up starving yourself to sleep to lose weight? As someone wanting to lose weight, these are important questions you should be asking yourself. Fret not, we have the perfect affordable and easily available everyday dinner idea for you
Story first published: Monday, May 6, 2019, 16:54 [IST]
X
Desktop Bottom Promotion