Just In
Don't Miss
- News
ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಇದೇ 7 ಕಾರಣದಿಂದಾಗಿ ಕೆಲಸ ಮಾಡುವ ಸ್ಥಳದಲ್ಲಿ, ನಿಮ್ಮ ತೂಕ ಹೆಚ್ಚಾಗುತ್ತಿರುವುದು!
ಕೆಲಸ ಮಾಡುವ ಸ್ಥಳ ಸಾಮಾನ್ಯವಾಗಿ ನಾವೆಲ್ಲ ದಿನದ ಹೆಚ್ಚು ಹೊತ್ತು ಕಳೆಯುವ ಸ್ಥಳವಾಗಿರುತ್ತದೆ.ಕೆಲಸ ಮಾಡುವ ಸಮಯದಲ್ಲಿ ದೇಹದ ತೂಕ ಹೆಚ್ಚಳವಾಗುವುದು ಸಹ ಅನೇಕರಲ್ಲಿ ಕಂಡು ಬರುತ್ತದೆ.
ಹಾಗಾದರೆ ಕೆಲಸದ ಅವಧಿಯಲ್ಲಿ ತೂಕ ಹೆಚ್ಚಾಗಲು ಕಾರಣಗಳೇನು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ.

ಕೆಲಸದ ಸ್ಥಳದಲ್ಲಿ ತೂಕ ಹೆಚ್ಚಾಗುವಿಕೆ
ನೀವು ಪ್ರತಿದಿನ ವ್ಯಾಯಾಮ ಮಾಡುತ್ತಿರಬಹುದು. ಭಾನುವಾರ ಸಹ ಬಿಡದೆ ನಿಮ್ಮ ದೇಹವನ್ನು ದಂಡಿಸುತ್ತಿರಬಹುದು. ಆದರೂ ದೇಹದ ತೂಕ ಮಾತ್ರ ಕಡಿಮೆಯಾಗುವ ಲಕ್ಷಣಗಳು ಕಾಣುವುದೇ ಇಲ್ಲ. ತೂಕ ಇಳಿಸಿಕೊಳ್ಳಲು ಬೇಕಾದ ಎಲ್ಲವನ್ನು ಮಾಡಿದರೂ ಯಾವುದೇ ಪ್ರಯೋಜನವಾಗುವುದೇ ಇಲ್ಲ. ಇತ್ತೀಚಿನ ಆಧುನಿಕ ಜೀವನಶೈಲಿಯಲ್ಲಿ ಕೆಲಸ ಹಾಗೂ ಜೀವನಕ್ರಮದ ಸಮತೋಲನ ಸಾಧ್ಯವಾಗದೆ ಅದು ಆರೋಗ್ಯದ ಮೇಲೂ ಪರಿಣಾಮ ಬೀರಲಾರಂಭಿಸಿದೆ. ತೂಕ ಕಡಿಮೆ ಮಾಡಿಕೊಳ್ಳಲು ಏನೇ ಮಾಡಿದರೂ ತೂಕ ಇಳಿಯದಿರಲು ಕೆಲ ಪ್ರಮುಖ ಕಾರಣಗಳನ್ನು ಇಲ್ಲಿ ತಿಳಿಸಲಾಗಿದ್ದು, ಓದಿ ತಿಳಿದುಕೊಳ್ಳಿ.

ಆಧುನಿಕ ಶೈಲಿಯ ಆಹಾರ ಕ್ರಮ
ಬಹುತೇಕ ಕಾರ್ಪೊರೇಟ್ ಕಂಪನಿಗಳಲ್ಲಿ ತಂಡ ರೂಪಿಸುವ ಕ್ರಮವಾಗಿ ಪುಷ್ಕಳ ಊಟವನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ. ತಿಂಗಳಲ್ಲಿ ಹಲವಾರು ಬಾರಿ ಈ ರೀತಿಯ ಆಹಾರ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ಔತಣಕೂಟಗಳಲ್ಲಿ ನಾವು ಮನೆಯಲ್ಲಿ ಸಾಮಾನ್ಯವಾಗಿ ಸೇವಿಸದ ಭೂರಿ ಭೋಜನಗಳನ್ನು ಸೇವಿಸುತ್ತೇವೆ. ಇದರಿಂದ ತೂಕ ಕಡಿಮೆ ಮಾಡಲು ಸಾಧ್ಯವಾಗುವುದೇ ಇಲ್ಲ. ಆದ್ದರಿಂದ ಯಾವುದೇ ಔತಣಕೂಟಕ್ಕೆ ಹೋದರೂ ಆದಷ್ಟೂ ಸಲಾಡ್, ಹಸಿ ತರಕಾರಿ, ಗೆಡ್ಡೆ ಗೆಣಸುಗಳನ್ನು ಹೆಚ್ಚಿಗೆ ಸೇವಿಸಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

ಯಾವಾಗ ತಿನ್ನಬೇಕೆಂದು ವಿಚಾರ ಮಾಡದೆ ತಿನ್ನುವುದು
ತಿನ್ನುವ ಮುಂಚೆ ಯಾವಾಗ ತಿನ್ನಬೇಕು, ಏನನ್ನು ತಿನ್ನಬೇಕು ಎಂಬುದನ್ನು ಸರಿಯಾಗಿ ವಿಚಾರ ಮಾಡಬೇಕಾಗುತ್ತದೆ. ಮಧ್ಯಾಹ್ನ ಊಟದಲ್ಲಿ ಮನೆಯಿಂದ ತಂದ ಉತ್ತಮವಾದ ಊಟವನ್ನೇ ಸವಿದರೂ ಸಂಜೆ ನಾಲ್ಕಕ್ಕೆಲ್ಲ ಮತ್ತೆ ಹಸಿವಾದಂತಾಗಿ ಸ್ಯಾಂಡವಿಚ್ ಅಥವಾ ಇನ್ನೇನೋ ಜಂಕ್ ಫುಡ್ ತಿಂದು ಹೊಟ್ಟೆ ತುಂಬಿಸಿಕೊಳ್ಳುವಂತಾಗುತ್ತದೆ. ಹೀಗಾಗಿ ಸಂಜೆ ಹಸಿವಾದಾಗ ಸೇವಿಸಲು ಮನೆಯಿಂದಲೇ ಕೆಲ ಆರೋಗ್ಯಕರ ಹಾಗೂ ಎಣ್ಣೆ ರಹಿತವಾದ ಲಘು ಆಹಾರಗಳನ್ನು ತರುವುದು ಒಳಿತು.
Most Read: ತೂಕ ಇಳಿಸಿಕೊಳ್ಳಲು ಸಿಂಪಲ್ ಟಿಪ್ಸ್-ತಿಂಗಳೊಳಗೆ ಫಲಿತಾಂಶ

ವಾತಾವರಣದ ಪರಿಣಾಮ
ವೈಜ್ಞಾನಿಕ ಅಧ್ಯಯನಗಳ ಪ್ರಕಾರ ನಾವು ವಾಸಿಸುವ ಕೋಣೆಯಲ್ಲಿ ಮಂದವಾದ ಪ್ರಕಾಶವಿದ್ದರೆ ಆಹಾರ ಸೇವನೆಯ ಪ್ರಮಾಣ ಜಾಸ್ತಿಯಾಗುತ್ತದೆ ಎನ್ನಲಾಗಿದೆ. ಇದು ಕೋಣೆಯ ಉಷ್ಣತೆಗೂ ಅನ್ವಯಿಸುತ್ತದೆ. ಒಂದು ವೇಳೆ ನಿಮ್ಮ ಆಫೀಸ್ ಕೋಣೆಯಲ್ಲಿ ಮಂದ ಬೆಳಕಿರುತ್ತಿದ್ದರೆ ಆಗಾಗ ಹೊರಗೆ ಹೋಗಿ ಚಿಕ್ಕ ವಾಕ್ ಮಾಡಬೇಕು.

ಬೇಕಾಬಿಟ್ಟಿ ಕೆಲಸದ ಅವಧಿ
ತಡರಾತ್ರಿವರೆಗೆ ಕೆಲಸ ಹಾಗೂ ಬೆಳಗ್ಗೆ ಬೇಗ ಕೆಲಸ ಆರಂಭಿಸುವುದರಿಂದ ಊಟದ ಸಮಯದಲ್ಲಿ ಏರುಪೇರಾಗುತ್ತದೆ. ಸಮಯದ ಅಭಾವ ಉಂಟಾದಾಗ ಸಹಜವಾಗಿಯೇ ಎಲ್ಲ ವ್ಯಾಯಾಮ ಹಾಗೂ ಇನ್ನಿತರ ಕೆಲಸಗಳನ್ನು ಬದಿಗೊತ್ತಿ ಮಲಗುವುದು ಅನಿವಾರ್ಯವಾಗುತ್ತದೆ. ಇದರಿಂದ ದೇಹದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸವಾಗಿ ಯಾವಾಗಲೂ ಹಸಿವಿನ ಭಾವನೆ ಮೂಡುತ್ತದೆ. ಇಂಥ ಸಂದರ್ಭಗಳಲ್ಲಿ ಆದಷ್ಟೂ ವಾಕ್ ಅಥವಾ ದೈಹಿಕ ಶ್ರಮದ ಕೆಲಸ ಮಾಡುವುದು ಸೂಕ್ತ.

ಒತ್ತಡದಲ್ಲಿ ತಿನ್ನುವುದು
ಈಗಿನ ಜೀವನಶೈಲಿಯಲ್ಲಿ ಬಹುತೇಕ ಎಲ್ಲರೂ ಒತ್ತಡದಿಂದ ಬಳಲುವಂತಾಗಿದೆ. ಮಾನಸಿಕ ಒತ್ತಡದಿಂದ ಅವಶ್ಯಕತೆಗಿಂತಲೂ ಹೆಚ್ಚು ಆಹಾರ ಸೇವಿಸುವಂತಾಗುತ್ತದೆ. ಅನವಶ್ಯಕ ಸಮಯದಲ್ಲಿ ಹೊಟ್ಟೆ ಚುರುಗುಡಲಾರಂಭಿಸಿ ಹಸಿವಾಗತೊಡಗುತ್ತದೆ. ಇದರಿಂದ ನಾವು ಬಯಸದಿದ್ದರೂ ಏನನ್ನೋ ತಿಂದು ಸಮಾಧಾನ ಪಡಬೇಕಾಗುತ್ತದೆ. ಉತ್ತಮ ನಿದ್ರೆ ಮಾಡುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಇಂಥ ಸಮಸ್ಯೆಗಳಿಂದ ಪಾರಾಗಬಹುದು.
Most Read: ಶೀತ ಹಾಗೂ ಕೆಮ್ಮಿಗೆ 'ಇಂಗಿನ ಔಷಧಿ'-ಒಂದೆರಡು ದಿನಗಳಲ್ಲಿಯೇ ಪರಿಹಾರ

ಏಕ ಕಾಲಕ್ಕೆ ಹಲವಾರು ಕೆಲಸ
ಮಾನವನ ದೇಹವು ಏಕಕಾಲಕ್ಕೆ ಹಲವಾರು ಕೆಲಸಗಳನ್ನು ಮಾಡಲು ಶಕ್ತವಾಗಿದೆಯಾದರೂ ಸತತವಾಗಿ ಏಕಕಾಲಕ್ಕೆ ಹಲವಾರು ಕೆಲಸಗಳಲ್ಲಿ ತೊಡಗಿದರೆ ಒತ್ತಡ ಜಾಸ್ತಿಯಾಗಿ ಹಸಿವು ಹೆಚ್ಚಾಗುತ್ತದೆ. ದಿನವಿಡೀ ನಿಮ್ಮ ದೇಹ ಹಾಗೂ ಮನಸ್ಸುಗಳೆರಡೂ ಬೇರೆ ಬೇರೆ ರೀತಿಯ ಕೆಲಸಗಳಲ್ಲಿ ತೊಡಗಿರುತ್ತವೆ. ಹೀಗಾಗಿ ಕೆಲಸ ಮುಗಿದ ತಕ್ಷಣವೇ ಆಯಾಸ ಆವರಿಸಿದಂತಾಗುತ್ತದೆ. ಇಂಥ ಸ್ಥಿತಿಯಲ್ಲಿ ಕೈಗೆ ಸಿಕ್ಕಿದ್ದನ್ನು ತಿಂದು ನೆಮ್ಮದಿ ಪಡೆಯುವಂತಾಗುತ್ತದೆ. ಇಂಥ ಸ್ಥಿತಿಗಳಲ್ಲಿ ಆದಷ್ಟೂ ಡ್ರೈ ಫ್ರೂಟ್‌ಗಳನ್ನು ಸೇವಿಸುತ್ತ ಜಂಕ್ ಫುಡ್‌ಗಳಿಂದ ದೂರವಿರಲು ಯತ್ನಿಸಬೇಕು.

ಕಡಿಮೆ ನೀರು ಸೇವನೆ
ಕಡಿಮೆ ನೀರು ಸೇವಿಸುವುದು ಕೆಲಸದ ಸ್ಥಳದಲ್ಲಿ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಸತತ ಕೆಲಸದ ಮಧ್ಯೆ ನೀರು ಕುಡಿಯುವುದು ಸಹ ಮರೆತು ಹೋಗಿರುತ್ತದೆ. ಕಡಿಮೆ ನೀರು ಸೇವನೆ ಹಾಗೂ ಜಾಸ್ತಿ ಟೀ, ಕಾಫಿ ಸೇವಿಸುವುದರಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾದರೂ ನಂತರ ಸಿಕ್ಕಾಪಟ್ಟೆ ಬಳಲಿಕೆ ಆವರಿಸುತ್ತದೆ. ಅಲ್ಲದೆ ಇದರಿಂದ ಸುಖಾಸುಮ್ಮನೆ ತೂಕ ಹೆಚ್ಚಿಸಿಕೊಂಡಂತಾಗುತ್ತದೆ. ಕೆಲಸದ ಟೇಬಲ್ ಮೇಲೆ ಯಾವಾಗಲೂ ನೀರಿನ ಬಾಟಲ್ ಇಟ್ಟುಕೊಂಡು ಆಗಾಗ ನೀರು ಸೇವಿಸುತ್ತಿರುವುದು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.