ಒಂದೇ ಒಂದು ಟೀ ಚಮಚ ಜೀರಿಗೆಯಿಂದ 15 ಕೆಜಿ ತೂಕ ಇಳಿಸಿ!

Subscribe to Boldsky

ತೂಕ ಇಳಿಸಿಕೊಳ್ಳಲು ನೀವು ಇನ್ನು ಮೂರು ಹೊತ್ತಿನ ಊಟ ಬಿಟ್ಟು ನಿಶ್ಯಕ್ತಿಯಿಂದ ಬಳಲಬೇಕಿಲ್ಲ. ಯಾಕೆಂದರೆ ನೀವು ಹಿತಮಿತವಾಗಿ ಆಹಾರ ಸೇವನೆಯೊಂದಿಗೆ ಜೀರಿಗೆಯನ್ನು ಕೂಡ ತಿಂದರೆ ಅದರಿಂದ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೊಟ್ಟೆಯ ಕೊಬ್ಬು ಕರಗಲು ಜೀರಿಗೆ ತುಂಬಾ ಪರಿಣಾಮಕಾರಿ ಮನೆಯೌಷಧಿ.

ಇದನ್ನು ಬಳಸಿದರೆ ಕೇವಲ 20 ದಿನಗಳಲ್ಲಿ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಬಹುದು ಎಂದು ಅಧ್ಯಯನಗಳು ಹೇಳಿವೆ. 88 ಮಂದಿ ಬೊಜ್ಜಿನ ಮಹಿಳೆಯರ ಮೇಲೆ ಜೀರಿಗೆ ಪ್ರಯೋಗ ಮಾಡಿದಾಗ ಈ ಅಂಶವು ಬಹಿರಂಗಗೊಂಡಿದೆ. ಇದು ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆ ಹೆಚ್ಚು ಮಾಡಿ ಕ್ಯಾಲರಿ ದಹಿಸುವುದು. ಇದರಿಂದ ದೇಹದಲ್ಲಿನ ಕೊಬ್ಬು ನಿಧಾನವಾಗಿ ಕರಗುವುದು. ತೂಕ ಇಳಿಸಲು ಪರಿಣಾಮಕಾರಿಯಾಗಿರುವಂತಹ ಜೀರಿಗೆಯಿಂದ ಇತರ ಹಲವಾರು ಆರೋಗ್ಯ ಲಾಭಗಳು ಇವೆ.

ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಹೃದಯಾಘಾತ ತಡೆಯುವುದು, ನೆನಪಿನ ಶಕ್ತಿ ಹೆಚ್ಚಿಸುವುದು, ರೋಗನಿರೋಧಕ ಶಕ್ತಿ ಬಲಪಡಿಸುವುದು, ರಕ್ತಿಹೀನತೆ ತಡೆದು, ಜೀರ್ಣಕ್ರಿಯೆ ಹೆಚ್ಚಿಸುವುದು, ಗ್ಯಾಸ್ ತಡೆದು ಹೊಟ್ಟೆಯುಬ್ಬರ ಇತ್ಯಾದಿಗಳನ್ನು ತಡೆಯುವಲ್ಲಿ ತುಂಬಾ ಪರಿಣಾಮಕಾರಿ. ತೂಕ ಕಳೆದುಕೊಳ್ಳಲು ಜೀರಿಗೆಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ಹೇಳಿಕೊಡಲಿದೆ. ಪ್ರತಿನಿತ್ಯ ಜೀರಿಗೆ ನೀರು ಕುಡಿಯಿರಿ ಅಥವಾ ಜಗಿದು ತಿಂದರೆ 15 ಕೆಜಿ ಕರಗುವುದು ಖಚಿತ. ತೂಕ ಕಳೆದುಕೊಳ್ಳಲು ಜೀರಿಗೆ ಹೇಗೆ ಪರಿಣಾಮಕಾರಿಯಾಗಲಿದ ಎಂದು ತಿಳಿಯಿರಿ....  

ತೂಕ ಇಳಿಸಲು ಜೀರಿಗೆಯ ಪಾನೀಯ

ತೂಕ ಇಳಿಸಲು ಜೀರಿಗೆಯ ಪಾನೀಯ

ಒಂದು ದೊಡ್ಡಲೋಟ ನೀರಿನಲ್ಲಿ ಎರಡು ದೊಡ್ಡಚಮಚ ಜೀರಿಗೆಯನ್ನು ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ಕುದಿಸಿ ಕೊಂಚ ಹೊತ್ತಿನ ಬಳಿಕ ಸೋಸಿ ಜೀರಿಗೆಯ ಕಾಳುಗಳನ್ನು ನಿವಾರಿಸಿ.ಇನ್ನು ಈ ನೀರಿಗೆ ಅರ್ಧ ಲಿಂಬೆಯ ಹಣ್ಣನ್ನು ಹಿಂಡಿ ರಸವನ್ನು ಸೇರಿಸಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ ಮುಂದಿನ ಮುಕ್ಕಾಲು ಘಂಟೆ ಏನೂ ಸೇವಿಸದಿರಿ. ಎರಡೇ ವಾರದಲ್ಲಿ ತೂಕ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ.ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಮೂರು ಗ್ರಾಂ ಜೀರಿಗೆ ಪುಡಿ ಮತ್ತು ಕೆಲವು ಹನಿ ಜೇನನ್ನು ಸೇರಿಸಿ ಮಿಶ್ರಣ ಮಾಡಿ ಬಳಿಕ ಕುಡಿಯಿರಿ.

ಜೀರಿಗೆ ಹುಡಿ ಮತ್ತು ಮೊಸರು

ಜೀರಿಗೆ ಹುಡಿ ಮತ್ತು ಮೊಸರು

ಜೀರಿಗೆಯನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡಬಹುದು. ಒಂದು ಚಮಚ ಜೀರಿಗೆ ಹುಡಿಯನ್ನು ಐದು ಗ್ರಾಂ ಮೊಸರಿನ ಜತೆಗೆ ಬೆರೆಸಿಕೊಂಡು ಪ್ರತಿನಿತ್ಯ ಸೇವಿಸಿ.

ತರಕಾರಿಗಳನ್ನು ಬಳಸಿ ಮಾಡಿದ ಸೂಪ್

ತರಕಾರಿಗಳನ್ನು ಬಳಸಿ ಮಾಡಿದ ಸೂಪ್

ವಿವಿಧ ತರಕಾರಿಗಳನ್ನು ಬಳಸಿ ಸೂಪ್ ತಯಾರಿಸಿ ಇದಕ್ಕೆ ಒಂದು ಚಿಕ್ಕಚಮಚ ಜೀರಿಗೆಯನ್ನು ಸೇರಿಸಿ. ಇದಕ್ಕೆ ಒಂದು ಚಮಚ ಕಂದು ಅಕ್ಕಿಯ ಹಿಟ್ಟನ್ನು ಸೇರಿಸುವ ಮೂಲಕ ರುಚಿ ಹೆಚ್ಚುತ್ತದೆ ಹಾಗೂ ತೂಕ ಇಳಿಸಲೂ ನೆರವಾಗುತ್ತದೆ.

ಇತರ ವಿಧಾನಗಳು

ಇತರ ವಿಧಾನಗಳು

ಮೂರು ಗ್ರಾಂ ಜೀರಿಗೆ ಹುಡಿಯನ್ನು ನೀರಿಗೆ ಹಾಕಿ ಮತ್ತು ಅದಕ್ಕೆ ಕೆಲವು ಹನಿ ಜೇನುತುಪ್ಪ ಹಾಕಿ ಕುಡಿಯಿರಿ. ತರಕಾರಿಗಳ ಸೂಪ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಜೀರಿಗೆ ಹುಡಿ ಹಾಕಿ ಸೇವಿಸಿ. ಕುಚ್ಚಲಕ್ಕಿಯ ಅನ್ನಕ್ಕೆ ಒಂದು ಚಮಚ ಜೀರಿಗೆ ಹುಡಿ ಹಾಕಿಕೊಂಡು ಸೇವಿಸಿದರೆ ಅದರ ಸುವಾಸನೆ ಹಾಗೂ ರುಚಿ ಹೆಚ್ಚುವುದು ಮಾತ್ರವಲ್ಲದೆ ತೂಕ ಕಳೆದುಕೊಳ್ಳಲು ಇದು ಸಹಕಾರಿ.

ಲಿಂಬೆ, ಶುಂಠಿ ಮತ್ತು ಜೀರಿಗೆಯ ಮಿಶ್ರಣದಿಂದ ತೂಕ ಕಳೆದುಕೊಳ್ಳುವುದು

ಲಿಂಬೆ, ಶುಂಠಿ ಮತ್ತು ಜೀರಿಗೆಯ ಮಿಶ್ರಣದಿಂದ ತೂಕ ಕಳೆದುಕೊಳ್ಳುವುದು

ಇದು ತುಂಬಾ ಪರಿಣಾಮಕಾರಿಯಾಗಿರುವಂತಹ ಮನೆಮದ್ದು. ಶುಂಠಿ ಮತ್ತು ಲಿಂಬೆ ಜೀರಿಗೆಯಲ್ಲಿರುವ ತೂಕ ಇಳಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು. ಒಂದು ಶುಂಠಿ ತುರಿದುಕೊಳ್ಳಿ, ಕ್ಯಾರೆಟ್ ಮತ್ತು ಇತರ ಕೆಲವು ತರಕಾರಿ ನೀರಿಗೆ ಹಾಕಿ ಬೇಯಿರಿ. ಇದಕ್ಕೆ ಸ್ವಲ್ಪ ಜೀರಿಗೆ ಹುಡಿ, ಲಿಂಬೆರಸ, ತುರಿದ ಶುಂಠಿ ಹಾಕಿ ಮತ್ತು ಇದನ್ನು ರಾತ್ರಿ ಊಟದ ವೇಳೆ ಸೇವಿಸಿ.

ಹೊಟ್ಟೆ ಕೊಬ್ಬು ಕರಗಿಸಲು ಜೀರಿಗೆ

ಹೊಟ್ಟೆ ಕೊಬ್ಬು ಕರಗಿಸಲು ಜೀರಿಗೆ

ಜೀರಿಗೆಯು ಹೆಚ್ಚುವರಿ ಕ್ಯಾಲರಿ ದಹಿಸುವುದು ಮತ್ತು ಹೊಟ್ಟೆಯ ಕೊಬ್ಬು ಕರಗಿಸುವುದು. ಇದರಲ್ಲಿ ಇರುವಂತಹ ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಚಯಪಚಾಯ ಕ್ರಿಯೆ ಹೆಚ್ಚಿಸಿ ದೇಹದಲ್ಲಿ ಕ್ಯಾಲರಿ ದಹಿಸಲು ಮತ್ತು ಹೊಟ್ಟೆಯ ಕೊಬ್ಬು ವೇಗವಾಗಿ ಕರಗಲು ಸಹಕಾರಿ.

ಜೀರ್ಣಕ್ರಿಯೆ ಹೆಚ್ಚಿಸಿ ಗ್ಯಾಸ್ ತಡೆಯುವುದು

ಜೀರ್ಣಕ್ರಿಯೆ ಹೆಚ್ಚಿಸಿ ಗ್ಯಾಸ್ ತಡೆಯುವುದು

ಜೀರಿಗೆಯು ಆಹಾರವು ಸರಿಯಾಗಿ ಜೀರ್ಣವಾಗಲು ನೆರವಾಗುವುದು ಮತ್ತು ಇದರಿಂದ ಗ್ಯಾಸ್ ತಡೆಯುವುದು. ಅಜೀರ್ಣವಾದರೆ ಹೊಟ್ಟೆಯುಬ್ಬರ ಮತ್ತು ತೇಗು ಬರುವುದು ಸಾಮಾನ್ಯ. ಜೀರಿಗೆಯು ಹೊಟ್ಟೆಯಲ್ಲಿ ವಾಯು ನಿಲ್ಲದಂತೆ ಮಾಡಿ ಆಹಾರವು ಸರಿಯಾಗಿ ಜೀರ್ಣವಾಗುವಂತೆ ನೋಡಿಕೊಳ್ಳುವುದು.

ಹೃದಯಾಘಾತ ತಡೆಯುವುದು

ಹೃದಯಾಘಾತ ತಡೆಯುವುದು

ಆಹಾರದಲ್ಲಿರುವ ಕೆಟ್ಟ ಕೊಬ್ಬು ಮತ್ತು ಕೊಲೆಸ್ಟ್ರಾಲ್ ದೇಹ ಹೀರಿಕೊಳ್ಳುವುದನ್ನು ಜೀರಿಗೆಯು ತಡೆಯುವುದು. ಇದರೊಂದಿಗೆ ಜೀರಿಗೆಯು ತೂಕ ಕಳೆದುಕೊಳ್ಳಲು ನೆರವಾಗುವುದು ಮಾತ್ರವಲ್ಲದೆ ಹೃದಯಾಘಾತ ತಡೆಯುವುದು.

For Quick Alerts
ALLOW NOTIFICATIONS
For Daily Alerts

    English summary

    Only one teaspoon of this spice per day enough for weight loss

    Do you know that this spice has got a unique weight loss power too? You can lose your belly fat within just 15days by eating cumin regularly. Also, your overall body weight can be reduced after eating cumin on a daily basis.
    Story first published: Thursday, February 1, 2018, 13:45 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more