ಈ ಪ್ರೋಟೀನ್ ಜ್ಯೂಸ್ ಕುಡಿದರೆ ತಿಂಗಳೊಳಗೆ ದೇಹದ ತೂಕ ಇಳಿಯುವುದು!

Posted By: Divya pandith
Subscribe to Boldsky

ತೂಕ ನಷ್ಟಕ್ಕೆ ಸಹಾಯ ಮಾಡುವ ಜ್ಯೂಸ್ ಕುಡಿಯಿರಿ

ತೂಕನಷ್ಟಕ್ಕೆ ಸಹಾಯ ಮಾಡುವ ಪಾನೀಯಗಳು

ಪ್ರೋಟೀನ್‍ಗಳಿಂದ ದೇಹದ ತೂಕವನ್ನು ಕಳೆಯುವ ಬಗೆಯನ್ನು ಅರಿಯಿರಿ.

ಈ ಜ್ಯೂಸ್ ಸೇವಿಸಿದರೆ ತಿಂಗಳೊಳಗೆ ದೇಹದ ತೂಕ ಇಳಿಯುವುದು.

ದೇಹದ ತೂಕವನ್ನು ಇಳಿಸಿ, ಸದೃಢವಾದ ಮೈಕಟ್ಟನ್ನು ಹೊಂದಬೇಕೆಂದು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಆದರೆ ಅತಿಯಾದ ತೂಕ ಹೊಂದಿದವರಿಗೆ ಬಹುಬೇಗ ತೂಕ ಇಳಿಸುವುದು ಕಷ್ಟವೆಂದೇ ಹೇಳಬಹುದು. ಅದಕ್ಕಾಗಿ ಆಹಾರ ಸೇವನೆಯಲ್ಲಿ ನಿಯಂತ್ರಣ, ದೇಹ ದಂಡನೆ ಮತ್ತು ಅತಿಯಾದ ವ್ಯಾಯಾಮದ ಮೊರೆ ಹೋಗಬೇಕಾಗುತ್ತದೆ. ಕೆಲವು ಕ್ರಮಗಳಿಂದ ದೇಹದ ತೂಕ ಇಳಿಯುವ ಬದಲು ಅನಾರೋಗ್ಯಕರ ಲಕ್ಷಣಗಳು ತಲೆದೂರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ದೇಹದ ತೂಕ ಇಳಿಸುವ ಮನಸ್ಸಿದ್ದರೆ ಆರೋಗ್ಯಕರ ರೀತಿಯಲ್ಲಿಯೇ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ಒಂದೊಂದಾಗಿಯೇ ಪ್ರಾರಂಭವಾಗುತ್ತದೆ.

ಕೆಲವು ತಜ್ಞರ ಪ್ರಕಾರ ದೇಹದ ತೂಕವನ್ನು ಬಲು ಸುಲಭವಾಗಿ ಇಳಿಸಬಹುದು. ಅದಕ್ಕೆ ಪ್ರೋಟೀನ್ ಭರಿತ ಆಹಾರವು ಸಹಾಯ ಮಾಡುತ್ತದೆ ಎನ್ನಲಾಗುವುದು. ಪ್ರೋಟೀನ್ ಭರಿತ ಹಣ್ಣು ಹಾಗೂ ಆಹಾರ ಉತ್ಪನ್ನಗಳಿಂದ ತಯಾರಿಸಲಾಗುವ ಜ್ಯೂಸ್ ಸೇವನೆಯು ನಮ್ಮ ದೇಹದ ತೂಕವನ್ನು ಬಹು ಬೇಗ ಇಳಿಸುತ್ತದೆ. ನಿಮಗೂ ಈ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು ಅಥವಾ ನಿಮ್ಮ ದೇಹದ ತೂಕವನ್ನು ಇಳಿಸಬೇಕು ಎನ್ನುವ ಆಸೆ ಇದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

1. ಬಾದಾಮಿ + ತೆಂಗಿನಕಾಯಿ ಪ್ರೋಟೀನ್ ಶೇಕ್:

1. ಬಾದಾಮಿ + ತೆಂಗಿನಕಾಯಿ ಪ್ರೋಟೀನ್ ಶೇಕ್:

ಪ್ರೋಟೀನ್‍ಗಳ ಸಮೃದ್ಧ ಮೂಲವಾದ 20 ಬಾದಾಮಿಯಲ್ಲಿ 5 ಗ್ರಾಂ ಪ್ರೋಟೀನ್ ಅಡಗಿರುತ್ತದೆ. ತೆಂಗಿನಕಾಯಿಯಲ್ಲಿ ಕೊಲೆಸ್ಟ್ರೋಲೈಡ್‍ಗಳು ಇರುತ್ತವೆ. ಬಾದಾಮಿಯಲ್ಲಿರುವ ಉತ್ತಮ ಪ್ರೋಟೀನ್‍ಗಳು ದೇಹಕ್ಕೆ ಪ್ರೋಟೀನ್ ಪೂರೈಸುತ್ತದೆ. ತೆಂಗಿನಕಾಯಿಯಲ್ಲಿರುವ ಕೊಲೆಸ್ಟ್ರೋಲೈಟ್ ಗಳು ದೇಹವನ್ನು ಹೈಡ್ರೀಕರಿಸುತ್ತದೆ.

-ರಾತ್ರಿ ಬಾದಾಮಿ ಬೀಜ ಮತ್ತು ತೆಂಗಿನಕಾಯಿ ಚೂರುಗಳನ್ನು ನೆನೆಯಿಡಿ.

-ಬೆಳಗ್ಗೆ ನೀರನ್ನು ಬೇರ್ಪಡಿಸಿ.

-ಬಾದಾಮಿ, ತೆಂಗಿನಕಾಯಿ ಚೂರು ಮತ್ತು ಹಾಲನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.

- ನಂತರ ಅದರ ರುಚಿ ಹೆಚ್ಚಿಸಲು ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪವನ್ನು ಸೇರಿಸಿ, ಸವಿಯಿರಿ.

2. ಚಾಕೋಲೇಟ್+ ಬಾಳೆಹಣ್ಣು ಪ್ರೋಟೀನ್ ಶೇಕ್:

2. ಚಾಕೋಲೇಟ್+ ಬಾಳೆಹಣ್ಣು ಪ್ರೋಟೀನ್ ಶೇಕ್:

ಚಾಕಲೇಟ್ ಮತ್ತು ಬಾಳೆಹಣ್ಣು ದೇಹಕ್ಕೆ ಬೇಕಾದ ಸೂಕ್ತ ಜೀವಸತ್ವ ಮತ್ತು ಖನಿಜಗಳನ್ನು ಒದಗಿಸುತ್ತವೆ.

- ಒಂದು ಕಪ್ ಬಾಳೆಹಣ್ಣಿಗೆ 1 ಟೇಬಲ್ ಚಮಚ ಚಾಕೋಲೇಟ್ ಪುಡಿಯನ್ನು ಸೇರಿಸಿ, ರುಬ್ಬಿಕೊಳ್ಳಿ.

- ಅದನ್ನು ಜ್ಯೂಸ್ ರೀತಿಯಾಗಿ ತೆಳುವಾಗಿ ಮಾಡಲು ಹಾಲು ಅಥವಾ ಮೊಸರನ್ನು ಸೇರಿಸಿಕೊಳ್ಳಿ.

- ರುಚಿ ಹೆಚ್ಚಿಸಿಕೊಳ್ಳಲು ದಾಲ್ಚಿನ್ನಿ ಪುಡಿಯನ್ನು ಸೇರಿಸಬಹುದು.

3. ಬೆರ್ರಿ ಪ್ರೋಟೀನ್ ಶೇಕ್:

3. ಬೆರ್ರಿ ಪ್ರೋಟೀನ್ ಶೇಕ್:

ಬೆರ್ರಿ ಹಣ್ಣುಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿರುತ್ತವೆ. ಅವು ತೂಕವನ್ನು ಇಳಿಸಲು ಸಹಾಯ ಮಾಡುವ ಫೈಬರ್ ಅಂಶವನ್ನು ನೀಡುತ್ತದೆ. ಇದಕ್ಕೆ ವಿವಿಧ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.

- 7-8 ಬೆರ್ರಿ ಹಣ್ಣು, 1/2 ಕಪ್ ಹಾಲಿನ ಕಾಟೇಜ್ ಚೀಸ್, 1/4 ಕಪ್ ನೀರನ್ನು ಸೇರಿಸಿ, ರುಬ್ಬಿಕೊಳ್ಳಿ.

- ನಂತರ ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ, ಸೇವಿಸಿ.

4. ಕಡಲೆಕಾಯಿ ಬೆಣ್ಣೆ ಪ್ರೋಟೀನ್ ಶೇಕ್:

4. ಕಡಲೆಕಾಯಿ ಬೆಣ್ಣೆ ಪ್ರೋಟೀನ್ ಶೇಕ್:

ಕಡಲೆಕಾಯಿ ಬೆಣ್ಣೆ ಶ್ರೀಮಂತ ಪ್ರೋಟೀನ್‍ಗಳನ್ನು ಒಳಗೊಂಡಿದೆ.

-1 ಕಪ್ ಮೊಸರು, 1/2 ಕಪ್ ಬಾದಾಮಿ ಹಾಲು ಮತ್ತು 2 ಟೇಬಲ್ ಚಮಚ ಕಡಲೆಕಾಯಿ ಬೆಣ್ಣೆಯನ್ನು ಸೇರಿಸಿ, ರುಬ್ಬಿ.

- ಬೇಕಿದ್ದರೆ ಬಾಳೆ ಹಣ್ಣನ್ನು ಸೇರಿಸಿ ಸವಿಯಬಹುದು.

5. ವೆಗಾನ್ ಪ್ರೋಟೀನ್ ಶೇಕ್:

5. ವೆಗಾನ್ ಪ್ರೋಟೀನ್ ಶೇಕ್:

ಡೈರಿ ಉತ್ಪನ್ನಗಳಿಂದ ಅಲರ್ಜಿ ಹೊಂದಿರುವ ವ್ಯಕ್ತಿಗಳು ವೆಗಾನ್ ಶೇಕ್‍ನ ಮೊರೆ ಹೋಗಬಹುದು. ಸಸ್ಯಹಾರಿ ಉತ್ಪನ್ನವಾದ ಇದರಲ್ಲಿ ಲ್ಯಾಕ್ಟೋಸ್ ಅಧಿಕವಾಗಿ ಇರುತ್ತದೆ.

-ಬಾದಾಮಿ ಅಥವಾ ಗೋಡಂಬಿ ಬೀಜ 1 ಕಪ್, 1 ಬಾಳೆಹಣ್ಣು, 1 ಟೀ ಚಮಚ ಜೇನುತುಪ್ಪ, 1 ಟೀಚಮಚ ವೆನಿಲ್ಲಾ ಸಾರ.

-ಇವೆಲ್ಲವನ್ನು ಮಿಶ್ರಗೊಳಿಸಿ ಜ್ಯೂಸ್ ಮಾಡಿ, ಫ್ರಿಜ್‍ನಲ್ಲಿ ಇಡಿ.

-ನಂತರ ತಂಪಾದ ಪ್ರೋಟೀನ್ ಶೇಕ್‍ಅನ್ನು ಸೇವಿಸಿ.

6. ಬಾಳೆಹಣ್ಣು -ಸ್ಟ್ರಾಬೆರ್ರಿ +ಚಿಯಾ ಬೀಜಗಳ ಪ್ರೋಟೀನ್ ಶೇಕ್:

6. ಬಾಳೆಹಣ್ಣು -ಸ್ಟ್ರಾಬೆರ್ರಿ +ಚಿಯಾ ಬೀಜಗಳ ಪ್ರೋಟೀನ್ ಶೇಕ್:

ಚಿಯಾ ಬೀಜಗಳು ಉತ್ತಮ ಪ್ರೋಟೀನ್, ಬಾಳೆಹಣ್ಣುಗಳು ಪೊಟ್ಯಾಸಿಯಮ್ ಗಳಿಂದ ತುಂಬಿರುತ್ತದೆ. ಇವುಗಳ ಮಿಶ್ರಣದಿಂದ ಶೇಕ್ ತಯಾರಿಸಿ.

- ಸ್ವಲ್ಪ ಚಿಯಾ ಬೀಜಗಳು, 1, ಬಾಳೆ ಹಣ್ಣು, ಸ್ಟ್ರಾಬೆರ್ರಿ, ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ, ರುಬ್ಬಿ.

- ನಂತರ ಐಸ್ ಚೂರುಗಳನ್ನು ಸೇರಿಸಿ ದಪ್ಪವಾದ ಪ್ರೋಟೀನ್ ಶೇಕ್‍ಅನ್ನು ಸವಿಯಿರಿ.

7. ಮಾವಿನ ಹಣ್ಣು+ಬಾಳೆಹಣ್ಣು ಪ್ರೋಟೀನ್ ಶೇಕ್:

7. ಮಾವಿನ ಹಣ್ಣು+ಬಾಳೆಹಣ್ಣು ಪ್ರೋಟೀನ್ ಶೇಕ್:

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಹಾಗೂ ಪೊಟ್ಯಾಸಿಯಮ್ ಇರುತ್ತದೆ. ಇದರೊಂದಿಗೆ ಪ್ರೋಟೀನ್ ಭರಿತ ಬಾಳೆಹಣ್ಣನ್ನು ಸೇರಿಸಿದರೆ ಉತ್ತಮ ಪಾನೀಯವಾಗುವುದು.

- ರುಬ್ಬಿಕೊಂಡ ಮಾವಿನ ಹಣ್ಣಿಗೆ, ಬಾಳೆಹಣ್ಣಿನ ಪೇಸ್ಟ್, ಕಡಲೇಕಾಯಿ ಬೆಣ್ಣೆ ಮತ್ತು ಹಾಲನ್ನು ಸೇರಿಸಿ, ನಯವಾಗಿ ರುಬ್ಬಿ.

- ಐಸ್ ಪುಡಿಯನ್ನು ಸೇರಿಸಿ ತಕ್ಷಣವೇ ಸೇವಿಸಿ.

8. ಬ್ಲೂಬೆರ್ರಿ-ಬಾದಾಮಿ ಬೆಣ್ಣೆ+ ಬಾಳೆಹಣ್ಣಿನ ಶೇಕ್:

8. ಬ್ಲೂಬೆರ್ರಿ-ಬಾದಾಮಿ ಬೆಣ್ಣೆ+ ಬಾಳೆಹಣ್ಣಿನ ಶೇಕ್:

ಬ್ಲೂಬೆರ್ರಿ ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಸಿ ಯೊಂದಿಗೆ ಆವೃತ್ತವಾಗಿರುತ್ತದೆ. ಇದನ್ನು ಬಾದಾಮಿ ಮತ್ತು ಮೊಸರಿನೊಂದಿಗೆ ಸೇರಿಸಿದರೆ ಸಮೃದ್ಧವಾದ ಪ್ರೋಟೀನ್ ಶೇಕ್ ಆಗುತ್ತದೆ.

- ಬ್ಲೂಬೆರ್ರಿ ಹಣ್ಣುಗಳು, ಬಾಳೆ ಹಣ್ಣು, ಬಾದಾಮಿ ಬೆಣ್ಣೆ ಮತ್ತು ಮೊಸರನ್ನು ಸೇರಿಸಿ, ರುಬ್ಬಿ.

- ಮಿಶ್ರಣಕ್ಕೆ ಐಸ್ ಚೂರುಗಳನ್ನು ಸೇರಿಸಿ, ಸವಿಯಿರಿ.

9. ಓಟ್‍ಮೀಲ್+ಸೇಬು ಪ್ರೋಟೀನ್ ಶೇಕ್:

9. ಓಟ್‍ಮೀಲ್+ಸೇಬು ಪ್ರೋಟೀನ್ ಶೇಕ್:

ಸೇಬು ಹಣ್ಣಿನಲ್ಲಿರುವ ಫೈಟೊನ್ಯೂಟ್ರಿಯಂಟ್‍ಗಳು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸ್ಥಿರವಾಗಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಓಟ್ ಮೀಲ್‍ನೊಂದಿಗೆ ಸೇಬುವನ್ನು ಸೇರಿಸುವುದರಿಂದ ಉತ್ತಮ ಫೈಬರ್‍ಅಂಶವನ್ನು ಪಡೆಯಬಹುದು.

- ಓಟ್‍ಮೀಲ್, ಹಾಲು, ಸೇಬು ಮತ್ತು ಜೇನುತುಪ್ಪವನ್ನು ಸೇರಿಸಿ, ರುಬ್ಬಿಕೊಳ್ಳಿ.

- ದಪ್ಪವಾದ ಈ ಮಿಶ್ರಣವನ್ನು ತಂಪಾಗಿಸಿಕೊಂಡು ಸವಿಯಿರಿ.

10. ಆವಕಾಡೊ+ ಬಾಳೆಹಣ್ಣು ಪ್ರೋಟೀನ್ ಶೇಕ್:

10. ಆವಕಾಡೊ+ ಬಾಳೆಹಣ್ಣು ಪ್ರೋಟೀನ್ ಶೇಕ್:

ಆವಕಾಡೊ ಅಥವಾ ಬೆಣ್ಣೆ ಹಣ್ಣು ಉತ್ತಮ ಕೊಬ್ಬಿನಾಮ್ಲ ಮತ್ತು ಫೈಬರ್‍ನಿಂದ ತುಂಬಿಕೊಂಡಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುವುದು.

- ಬಾಳೆಹಣ್ಣು, ಆವಕೊಡಾ ಮತ್ತು ಹಾಲನ್ನು ಸೆರಿಸಿ, ರುಬ್ಬಿ

- ನಯವಾದ ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ, ತಣ್ಣಗಾಗಿಸಿ ಸೇವಿಸಿ.

11. ಮೊಟ್ಟೆ ಪ್ರೋಟೀನ್ ಶೇಕ್:

11. ಮೊಟ್ಟೆ ಪ್ರೋಟೀನ್ ಶೇಕ್:

ತೂಕವನ್ನು ಇಳಿಸಲು ಸಹಾಯ ಮಾಡುವ ಪ್ರೋಟಿನ್ ಶೇಕ್‍ಗಳಲ್ಲಿ ಮೊಟ್ಟೆ ಪ್ರೋಟೀನ್ ಶೇಕ್ ಸಹ ಒಂದು.

- 1 ಹಸಿ ಮೊಟ್ಟೆ, ಹಾಲು, ಬಾಳೆಹಣ್ಣು, ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿ ಸೇರಿಸಿ ಮಿಶ್ರಗೊಳಿಸಿ.

- ತಂತರ ಫ್ರಿಜ್‍ನಲ್ಲಿ ತಣ್ಣಗಾಗಿಸಿ ಸವಿಯಿರಿ.

English summary

Indian Homemade Protein Shakes For Weight Loss

Are you simply tired of experimenting with the costly protein powder for weight loss? If yes, then you should know that protein powder is not the only option to lose weight. There are other good-quality protein foods that you can add in your diet to lose weight the healthy way. Apart from protein powder, one of the most important options for weight loss is protein shakes. They are a convenient way to add protein to your diet. Protein shakes fulfil the exact requirement of calories and nutrients.