For Quick Alerts
ALLOW NOTIFICATIONS  
For Daily Alerts

  ಬೆಳೆಯುವ ಮಕ್ಕಳ ತೂಕ ಶೀಘ್ರವಾಗಿ ಏರಿಸಲು ಸರಳ ಟಿಪ್ಸ್

  |

  ಬೆಳೆಯುತ್ತಿರುವ ಮಕ್ಕಳ ತೂಕ ಆರೋಗ್ಯಕರವಾಗಿ ಏರುತ್ತಿರಬೇಕು. ಒಂದು ವೇಳೆ ನಿಮ್ಮ ಮನೆಯ ಮಕ್ಕಳಲ್ಲಿ, ವಿಶೇಷವಾಗಿ ಬಾಲಕರು, ವಯಸ್ಸಿಗೆ ಸೂಕ್ತವಾದ ತೂಕವನ್ನು ಪಡೆಯದೇ ಇದ್ದಲ್ಲಿ ಪಾಲಕರಾಗಿ ಈ ಕೊರತೆಯನ್ನು ಒಂದು ಸಮಸ್ಯೆಯಂತೆ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳವುದು ನಿಮಗೆ ಅನಿವಾರ್ಯವಾಗಿದೆ. ಕೆಲವು ಬಾಲಕರಲ್ಲಿ ಜೀವ ರಾಸಾಯನಿಕ ಕ್ರಿಯೆ ಚುರುಕಾಗಿದ್ದರೂ ತೂಕ ಮಾತ್ರ ಅಗತ್ಯಕ್ಕೆ ತಕ್ಕಷ್ಟು ಏರುವುದಿಲ್ಲ.

  ಹಾಗಾದರೆ ಈ ಬಾಲಕರು ಸೂಕ್ತ ಬೆಳವಣಿಗೆ ಯಾವಾಗ ಪಡೆಯುತ್ತಾರೆ? ಈ ಪ್ರಶ್ನೆಗೆ ಮಾಯಾದಂಡ ತಿರುಗಿಸಿ ಉತ್ತರ ಪಡೆಯಲು ಸಾಧ್ಯವಿಲ್ಲ. ಆದರೆ ಕೆಲವು ಅಗತ್ಯ ಹಾಗೂ ಸೂಕ್ತಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಕೊರತೆಯನ್ನು ನೀಗಿಸಿ ಬಾಲಕರು ತಮ್ಮ ವಯಸ್ಸಿಗೆ ತಕ್ಕ ತೂಕವನ್ನು ಶೀಘ್ರವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

  ಉಳಿದವರಿಗೆ ತೂಕ ಬೇಗನೇ ಏರಿ ಇದನ್ನು ಇಳಿಸುವುದೇ ಬಹಳ ಕಷ್ಟವಾದರೆ ಈ ಬಾಲಕರಿಗೆ ತೂಕ ಏರಿಸಿಕೊಳ್ಳುವುದೂ ಅಷ್ಟೇ ಕಷ್ಟದ ವಿಷಯವಾಗಿದೆ. ಆದರೆ ಒಂದು ವೇಳೆ ನೀವು ಹತ್ತು ದಿನಗಳಲ್ಲಿ ತೂಕವನ್ನು ಹೆಚ್ಚಿಸುವ ಅಗತ್ಯತೆಯನ್ನು ಒಂದು ಸವಾಲಾಗಿ ಸ್ವೀಕರಿಸಿದರೆ ನೈಸರ್ಗಿಕವಾಗಿ ನಿಮ್ಮ ಮಕ್ಕಳು ಅಗತ್ಯ ತೂಕವನ್ನು ಪಡೆದುಕೊಳ್ಳಬಹುದು. ಇದನ್ನು ಹೇಗೆ ಸಾಧಿಸಬಹುದು ಎಂಬುದನ್ನು ಕೆಳಗೆ ವಿವರಿಸಲಾಗಿದೆ... 

   ಹೆಚ್ಚು ಆಹಾರ ಸೇವಿಸಲು ನೀಡಿ

  ಹೆಚ್ಚು ಆಹಾರ ಸೇವಿಸಲು ನೀಡಿ

  ಆಹಾರ ಕಡಿಮೆ ಮಾಡಿ ತೂಕ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳು ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದ ಆಹಾರ ಸೇವಿಸಲೇಬೇಕು. ಆದರೆ ಹೆಚ್ಚು ಆಹಾರ ಎಂದ ತಕ್ಷಣ ಹೆಚ್ಚಿನ ಕೊಬ್ಬಿನ ಅಥವಾ ಎಣ್ಣೆಯ ಆಹಾರಗಳನ್ನೇ ತಿನ್ನಿಸಬೇಕಾಗಿಲ್ಲ. ಹೀಗೆ ಮಾಡಿದರೆ ಅನಾರೋಗ್ಯಕರ ತೂಕ ಏರುತ್ತದೆ. ಆದ್ದರಿಂದ ಹೆಚ್ಚಿನ ಕ್ಯಾಲೋರಿಗಳಿರುವ, ಕಾರ್ಬೋಹೈಡ್ರೇಟುಗಳಿಂದ ತುಂಬಿರುವ ಪ್ರೋಟೀನ್ ಯುಕ್ತ ಹಾಗೂ ಆರೋಗ್ಯಕರ ಕೊಬ್ಬು ಇರುವ ಆಹಾರಗಳನ್ನೇ ನೀಡಬೇಕು. ಕಾರ್ಬೋಹೈಡ್ರೇಟುಗಳು ಹೆಚ್ಚಿರುವ ಆಹಾರಗಳೆಂದರೆ..ಅನ್ನ, ಪಾಸ್ತಾ, ಬ್ರೆಡ್, ಆಲುಗಡ್ಡೆ, ಬೀನ್ಸ್, ಯಾಮ್, ಓಟ್ಸ್ ರವೆ, ತಾಜಾ ಹಣ್ಣುಗಳು ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳಾಗಿವೆ. ಪ್ರೋಟೀನ್ ಯುಕ್ತ ಆಹಾರಗಳು: ಕೋಳಿಮಾಂಸ, ಬೇಯಿಸಿದ ಬಿಳಿಮಾಂಸ, ಕಡಿಮೆ ಕೊಬ್ಬಿನ ಬೀಫ್, ಮೊಟ್ಟೆಗಳು, ಸಾಲ್ಮನ್ ಮೀನು, ಹಾಲು ಕಾಟೇಜ್ ಚೀಸ್ ಇತ್ಯಾದಿ. ಆರೋಗ್ಯಕರ ಕೊಬ್ಬು ಹೆಚ್ಚಿರುವ ಅಹಾರಗಳೆಂದರೆ: ಆಲಿವ್ ಎಣ್ಣೆ, ಬೆಣ್ಣೆಹಣ್ಣು, ಒಣಫಲಗಳು, ಪೀನಟ್ ಬಟರ್ ಹಾಗೂ ಅಗಸೆಬೀಜದ ಎಣ್ಣೆ (flax oil)

  ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ನೀಡಿ

  ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ನೀಡಿ

  ಶೀಘ್ರವಾಗಿ ತೂಕ ಏರಬೇಕೆಂದರೆ ಆಹಾರ ಸೇವನೆಯ ಸಮಯವೂ ಕ್ಲುಪ್ತವಾಗಿರಲೇಬೇಕು. ಆಹಾರ ಜೀರ್ಣವಾಗುವ ಸಮಯವನ್ನು ಅನುಸರಿಸಿ ಸೂಕ್ತ ಆಹಾರವನ್ನು ಸೇವಿಸುವಂತೆ ಮಾಡಿದರೆ ಬಾಲಕರ ತೂಕ ಏರಿಕೆಗೆ ಸಹಕಾರಿಯಾಗುತ್ತದೆ. ಇದನ್ನು ಸಾಧ್ಯವಾಗಿಸಲು ಹೀಗೆ ಮಾಡಿ:ಪ್ರತಿ ಎರಡು ಅಥವಾ ಮೂರು ಗಂಟೆಗಳಿಗೊಮ್ಮೆ ಆಹಾರವನ್ನು ಸೇವಿಸಲು ನೀಡಿ. ಬೆಳಿಗ್ಗೆದ್ದ ಹದಿನೈದು ನಿಮಿಷಗಳ ಬಳಿಕ ಮುಂಜಾನೆಯ ಉಪಾಹಾರ ನೀಡುವ ಮೂಲಕ ಪ್ರಾರಂಭಿಸಿ. ಆದರೆ ಉಪಾಹಾರವೂ ಆರೋಗ್ಯಕರ ಆಹಾರವೇ ಇರಲಿ, ಮಕ್ಕಳಿಗೆ ಇಷ್ಟ ಎಂದು ಕಾರ್ನ್ ಫ್ಲೇಕ್ಸ್ ಮೊದಲಾದ ಸಿದ್ಧ ಆಹಾರ ಬೇಡ

  ಉಪಹಾರದ ಪ್ರಮಾಣವೂ ದೊಡ್ಡದೇ ಇರಲಿ:

  ಉಪಹಾರದ ಪ್ರಮಾಣವೂ ದೊಡ್ಡದೇ ಇರಲಿ:

  ಮನೆಯಲ್ಲಿಯೇ ಮಾಡಿದ ಪರೋಟ ಅಥವಾ ಚಪಾತಿ, ಮೊಸರು, ಕೊಂಚ ಹಣ್ಣುಗಳು, ಒಂದು ಲೋಟ ಹಾಲು ಹಾಗೂ ಕೊಂಚ ಹೆಚ್ಚೇ ಚೀಸ್ ಇರಲಿ. ಜೊತೆಗೊಂದು ಮೊಟ್ಟೆಯ ಸ್ಯಾಂಡ್ ವಿಚ್ ಸಹಾ ಇರಲಿ. ಅಲ್ಲದೇ ಇಡಿಯ ದಿನ ಸಾಕಷ್ಟು ನೀರು ಕುಡಿಯುವ ಮೂಲಕ ನಿರ್ಜಲೀಕರಣಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳಿ. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸುವಂತೆ ನೋಡಿಕೊಳ್ಳಿ.

  ಆರೋಗ್ಯಕರ ಪೇಯಗಳನ್ನೂ ಕುಡಿಯಲು ನೀಡಿ

  ಆರೋಗ್ಯಕರ ಪೇಯಗಳನ್ನೂ ಕುಡಿಯಲು ನೀಡಿ

  ತೂಕ ಏರಿಕೆಗೆ ಹಾಗೂ ಆರೋಗ್ಯ ಉತ್ತಮವಾಗಿರಲು ಘನ ಆಹಾರಗಳ ಜೊತೆಗೇ ದ್ರವಾಹಾರಗಳೂ ಅಗತ್ಯವಾಗಿವೆ. ಆದರೆ ಈ ದ್ರವಾಹಾರಗಳೂ ಆರೋಗ್ಯಕರವಾಗಿರುವುದು ಇನ್ನೂ ಅಗತ್ಯ. ಪ್ರೋಟೀನ್ ಶೇಕ್ ಇದಕ್ಕೆ ಉತ್ತಮ ಆಯ್ಕೆಯಾಗಿದೆ. ಇದು ಮಕ್ಕಳ ವ್ಯಾಯಾಮಕ್ಕೆ ಹಾಗೂ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ. ಈ ಪೇಯಗಳನ್ನು ದಿನಕ್ಕೆರಡು ಲೋಟಗಳನ್ನಾದರೂ ಕುಡಿಯುವಂತೆ ನೋಡಿಕೊಳ್ಳಿ. ಜೊತೆಗೇ ಕೊಂಚ ಪ್ರೋಟೀನ್ ಬಿಸ್ಕತ್ ಸಹಾ ಇರಲಿ. ಈ ಅಗತ್ಯತೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಇಂದು ತರವೇತರ ಪ್ರೋಟೀನ್ ಶೇಕ್ ಗಳು ಸಿದ್ಧ ರೂಪದಲ್ಲಿ ಸಿಗುತ್ತಿವೆ. ಪರ್ಯಾಯವಾಗಿ ನೀವೇ ಸುಲಭವಾಗಿ ಮನೆಯಲ್ಲಿಯೇ ನಿಮ್ಮ ಆಯ್ಕೆಯ ಪೇಯಗಳನ್ನೂ ತಯಾರಿಸಿ ನೀಡಬಹುದು.

   ಕ್ಯಾಲೋರಿಗಳ ಬಗ್ಗೆ ಗಮನವಿರಲಿ

  ಕ್ಯಾಲೋರಿಗಳ ಬಗ್ಗೆ ಗಮನವಿರಲಿ

  ಆರೋಗ್ಯಕರ ತೂಕವನ್ನು ಶೀಘ್ರವೇ ಪಡೆಯಬೇಕಾದರೆ ಬಾಲಕರ ತೂಕಕ್ಕನುಸಾರವಾಗಿ ಪ್ರತಿ ಕೆಜಿಗೆ ಇಪ್ಪತ್ತು ಕಿಲೋಕ್ಯಾಲೋರಿಗಳಷ್ಟು ಪ್ರಮಾಣವನ್ನು ಸೇವಿಸಬೇಕಾಗುತ್ತದೆ. ಆದ್ದರಿಂದ ಬಾಲಕರಿಗೆ ನೀಡುವ ಅಹಾರದಲ್ಲಿ ಹೆಚ್ಚು ಕ್ಯಾಲೋರಿಗಳು ಸಾಂದ್ರೀಕೃತವಾಗಿರುವಂತೆ ನೋಡಿಕೊಳ್ಳಿ. ಉದಾಹರಣೆಗೆ ನೂರು ಗ್ರಾಮ್ ಪೀನಟ್ ಬಟರ್ ನಲ್ಲಿ 500 ಕಿಲೋಕ್ಯಾಲೋರಿಗಳಿರುತ್ತವೆ ಹಾಗೂ ನೂರು ಗ್ರಾಂ ಪಾಸ್ತಾದಲ್ಲಿ 380 ಕಿಲೋಕ್ಯಾಲೋರಿಗಳಿರುತ್ತವೆ. ಆ ಪ್ರಕಾರ ಪ್ರತಿ ಆಹಾರದಲ್ಲಿಯೂ ಕ್ಯಾಲೋರಿಗಳ ವಿವರಗಳಿರುತ್ತವೆ. ಯಾವ ಆಹಾರದಲ್ಲಿ ಎಷ್ಟು ಕ್ಯಾಲೋರಿಗಳಿರುತ್ತವೆ ಎಂಬ ಸುಲಭ ಲೆಕ್ಕಾಚಾರದ ಮೂಲಕ ಬಾಲಕರಿಗೆ ನಿತ್ಯದ ಅಗತ್ಯದ ಪೋಷಕಾಂಶಗಳು ಲಭಿಸುತ್ತಿವೆ ಎಂದು ಖಾತರಿಪಡಿಸಿಕೊಳ್ಳಿ.

  ನಿತ್ಯವೂ ಅಗತ್ಯ ವ್ಯಾಯಾಮಗಳನ್ನೂ ಮಾಡುವಂತೆ ನೋಡಿಕೊಳ್ಳಿ

  ನಿತ್ಯವೂ ಅಗತ್ಯ ವ್ಯಾಯಾಮಗಳನ್ನೂ ಮಾಡುವಂತೆ ನೋಡಿಕೊಳ್ಳಿ

  ತೂಕ ಏರಿಸಲು ಕೇವಲ ಹೊಟ್ಟೆ ತುಂಬಾ ತಿಂದರೆ ಸಾಕು ಎಂಬ ಭಾವನೆ ಇದ್ದರೆ ಇದು ದೊಡ್ಡ ತಪ್ಪಾಗಿದೆ. ಆರೋಗ್ಯಕರ ಆಹಾರ ಸೇವನೆಯಷ್ಟೇ ಸೂಕ್ತ ಪ್ರಮಾಣದ ವ್ಯಾಯಾಮವೂ ಅಗತ್ಯ. ದಿನವೂ ಸಾಕಷ್ಟು ವ್ಯಾಯಾಮವನ್ನು ಮಾಡಲೇಬೇಕೆಂದು ಕಟ್ಟಪ್ಪಣೆ ನೀಡಿ ಆ ಪ್ರಕಾರ ಅನುಸರಿಸುವಂತೆ ನೋಡಿಕೊಳ್ಳಿ. ದೇಹವನ್ನು ಬಾಗಿಸುವ, ತಿರುಗಿಸುವ, ಸ್ಕ್ವಾಟ್, ಬಸ್ಕಿ, ದಂಡ ಮೊದಲಾದ ಸುಲಭ ವ್ಯಾಯಾಮಗಳನ್ನು ನಿತ್ಯವೂ ಅನುಸರಿಸುವಂತೆ ನೋಡಿಕೊಳ್ಳಿ. ಅಗತ್ಯ ಬಿದ್ದರೆ ಪರಿಣಿತ ದೈಹಿಕ ಶಿಕ್ಷಕರನ್ನು ಭೇಟಿಯಾಗಿ ಅವರ ನಿರ್ದೇಶನಗಳನ್ನು ಅನುಸರಿಸಿ.

  ಎಚ್ಚರಿಕೆ

  ಎಚ್ಚರಿಕೆ

  ಎಂದಿಗೂ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಕೂಡದು. ಇದು ತೂಕ ಏರಿಕೆಯ ಪ್ರಕ್ರಿಯೆಗೇ ವಿರೋಧವೊಡ್ಡುತ್ತದೆ ಹಾಗೂ ಇತರ ತೊಂದರೆಗಳೂ ಎದುರಾಗಬಹುದು. ವ್ಯಾಯಾಮಕ್ಕೂ ಮೊದಲು ಪ್ರೋಟೀನ್ ಶೇಕ್ ಹಾಗೂ ಕೊಂಚ ಹಣ್ಣುಗಳನ್ನು ಸೇವಿಸಿ ಕೊಂಚ ಹೊತ್ತಿನ ಬಳಿಕವೇ ಪ್ರಾರಂಭಿಸಿ. ಅಲ್ಲದೇ ನಿಮ್ಮ ಮಕ್ಕಳಿಗೆ ತೂಕ ಏರಿಸಬೇಕೆಂದೂ, ತೂಕ ಇಳಿಸಲು ಅಲ್ಲವೆಂದೂ ಮೊದಲೇ ದೈಹಿಕ ಶಿಕ್ಷಕರಿಗೆ ಸ್ಪಷ್ಟಪಡಿಸಿ. ಏಕೆಂದರೆ ಇವರಲ್ಲಿ ಸಲಹೆಗೆ ಬರುವ ಹೆಚ್ಚಿನವರು ತೂಕ ಇಳಿಕೆಗೆಂದೇ ಬಂದಿರುತ್ತಾರೆ.

  ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಕೆಲವು ಅಗತ್ಯ ಕ್ರಮಗಳನ್ನು ಪಾಲಿಸಿ

  ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಕೆಲವು ಅಗತ್ಯ ಕ್ರಮಗಳನ್ನು ಪಾಲಿಸಿ

  * ತೂಕವನ್ನು ಹೆಚ್ಚಿಸಿಕೊಳ್ಳಲು ಫ್ರೀ ವೇಯ್ಟ್ ಅಥವಾ ಯಾವುದೇ ಉಪಕರಣಕ್ಕೆ ಹೊಂದಿರದ, ಪ್ರತ್ಯೇಕವಾಗಿ ಎತ್ತಬಹುದಾದ ತೂಕದ ಸಲಕರಣೆಗಳು ಉತ್ತಮ ಆಯ್ಕೆಯಾಗಿವೆ. ಪ್ರಾರಂಭದಲ್ಲಿ ಕಡಿಮೆ ತೂಕದ ಸಲಕರಣೆಗಳನ್ನು ಬಳಸಿ ಹಾಗೂ ಸೂಕ್ತ ನಿರ್ದೇಶನದ ಪ್ರಕಾರ ನಿಧಾನವಾಗಿ ಈ ತೂಕವನ್ನು ಹೆಚ್ಚಿಸಿಕೊಳ್ಳುತ್ತಾ ಮುಂದುವರೆಯಲಿ.

  * ತೂಕ ಏರಿಸಲು ಸ್ಕ್ವಾಟ್ ಅಥವಾ ಕೈಗಳನ್ನು ಮುಂದೆ ಚಾಚಿ ಹೊಡೆಯುವ ಬಸ್ಕಿ ಉತ್ತಮ ವ್ಯಾಯಾಮವಾಗಿದೆ.

  * ಡೆಡ್ ಲಿಫ್ಟ್, ಬೆಂಚ್ ಪ್ರೆಸ್, ಓವರ್ ಹೆಡ್ ಲಿಫ್ಟ್, ಪುಲ್ ಅಪ್ ಹಾಗೂ ದಂಡ ಮೊದಲಾದ ಇತರ ವ್ಯಾಯಾಮಗಳೂ ತೂಕ ಹೆಚ್ಚಿಸಿಕೊಳ್ಳಲು ಹಾಗೂ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

  * ನೆನಪಿರಲಿ, ದೇಹ ವಿಶ್ರಾಂತ ಸ್ಥಿತಿಯಲಿದ್ದಾಗ ಮಾತ್ರವೇ ಸ್ನಾಯುಗಳು ಬೆಳೆಯುತ್ತವೆ. ಆದ್ದರಿಂದ ಪ್ರತಿದಿನವೂ ವ್ಯಾಯಾಮ ಬೇಡ, ದಿನ ಬಿಟ್ಟು ದಿನ ಉತ್ತಮವಾಗಿದೆ.

  English summary

  how-gain-weight-naturally-skinny-guys

  If you have been looking for an answer to how to gain weight fast, you need to prepare yourself for it and take up the challenge. Are you one of the those skinny boys who have fast metabolism and no matter howmuch you want to, you cannot gain weight. How to gain weight fast for boys? There is no magic trick but some things that canensure that you’ll do it in some time. Putting on weight is equally difficult as losing weight. If you are up for 10-day weight gain challenge, here’s everything you need to find on how to gain weight for boy in 10 days naturally.
  Story first published: Tuesday, March 27, 2018, 8:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more