For Quick Alerts
ALLOW NOTIFICATIONS  
For Daily Alerts

  ನೈಸರ್ಗಿಕವಾಗಿ ದೇಹದ ತೂಕ ಇಳಿಸಲು ಇಲ್ಲಿವೆ ಸರಳ ವಿಧಾನಗಳು

  By Hemanth
  |

  ತೂಕ ಇಳಿಸಿಕೊಳ್ಳಬೇಕು ಎಂದರೆ ಅದು ಸುಲಭದ ಮಾತಲ್ಲ, ಇದಕ್ಕೆ ತುಂಬಾ ಶ್ರಮ ಬೇಕಾಗುತ್ತದೆ. ಕೆಲವೊಂದು ಹವ್ಯಾಸಗಳನ್ನು ಬಿಟ್ಟು ಸರಿಯಾದ ಆಹಾರಕ್ರಮ ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಆದರೆ ಇದರಿಂದ ಹಸಿವು ಹೆಚ್ಚಾಗುವುದು ಮತ್ತು ಆಹಾರವನ್ನು ನಿಮ್ಮ ದೇಹ ಬಯಸುವುದು. ಆದರೆ ಕೆಲವೊಂದು ಸಣ್ಣ ಬದಲಾವಣೆ ಮಾಡಿಕೊಂಡರೂ ನಿಮ್ಮ ತೂಕ ಇಳಿಸಿಕೊಳ್ಳಬಹುದು ಎಂದು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಒಂದು ಪೌಂಡ್ ಕೊಬ್ಬು ಅಂದರೆ ಸುಮಾರು 3,500 ಕ್ಯಾಲರಿಗಳು ಎಂದು ನಿಮಗೆ ತಿಳಿದಿದೆಯಾ? ಆಹಾರಕ್ರಮ ಮತ್ತು ವ್ಯಾಯಾಮದಿಂದ ಪ್ರತಿನಿತ್ಯ ನೀವು 500 ಕ್ಯಾಲರಿ ಕಳಕೊಂಡರೆ ಆಗ ನೀವು ವಾರಕ್ಕೆ ಸುಮಾರು ಒಂದು ಪೌಂಡ್ ಕಳಕೊಳ್ಳಬಹುದು.

  ಬೊಜ್ಜಿನ ದೇಹ ಹೊಂದಿರುವವರಿಗೆ ತೂಕ ಇಳಿಸಿಕೊಳ್ಳಬೇಕು ಎಂದರೆ ತುಂಬಾ ಪ್ರೇರಣೆ, ಬದ್ಧತೆ ಮತ್ತು ಕಠಿಣ ಪರಿಶ್ರಮ ಬೇಕಾಗುವುದು. ಆದರೆ ಕೆಲವು ಸರಳ ಮತ್ತು ಸಾಮಾನ್ಯ ತಂತ್ರಗಳನ್ನು ಬಳಸಿಕೊಂಡು ನೀವು ತೂಕ ಇಳಿಸಬಹುದು. ಇದರಲ್ಲಿ ಪ್ರಮುಖವಾಗಿ ನಿಮ್ಮ ಹವ್ಯಾಸಗಳನ್ನು ಬದಲಾಯಿಸುವುದು ಅತೀ ಮುಖ್ಯ. ಇದರಿಂದ ತುಕ ಕಳೆದುಕೊಳ್ಳುವ ನಿಮ್ಮ ಗುರಿ ಬೇಗನೆ ತಲುಪಬಹುದು.

  simple changes in diet to lose weight

  ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬಹುದು ಎಂದು ಲೇಖನ ಓದುತ್ತಾ ತಿಳಿಯಿರಿ.

  1. ದ್ರವ ಕ್ಯಾಲರಿ ಆಯ್ಕೆ

  ಸಿಹಿ ಪಾನೀಯಗಳು ಕ್ಯಾಲರಿ ಹೆಚ್ಚು ಮಾಡುವುದು. ಆದರೆ ಇದರಿಂದ ಘನಾಹಾರ ಸೇವನೆ ಮಾಡಿದಂತೆ ಹಸಿವು ಕಡಿಮೆ ಆಗುವುದಿಲ್ಲ. ಸಿಹಿ ಬೆರೆಸಿರುವ ಪಾನೀಯ ಸೇವನೆ ಕಡಿಮೆ ಮಾಡಿ ಮತ್ತು ಬಾಯಾರಿಕೆ ನೀಗಿಸಲು ನೀವು ಸಿಟ್ರಸ್ ಹಣ್ಣುಗಳನ್ನು ಹಾಕಿರುವ ನೀರು ಅಥವಾ ಮನೆಯಲ್ಲೇ ತಯಾರಿಸಿದ ಹಣ್ಣಿನ ಜ್ಯೂಸ್ ಕುಡಿಯಿರಿ. ಎರಡು ಹೊತ್ತಿನ ಊಟದ ಮಧ್ಯೆ ನಿಮಗೆ ತುಂಬಾ ಹಸಿವಾಗುತ್ತಲಿದ್ದರೆ ಆಗ ನೀವು ಒಂದು ಲೋಟ ಪೋಷಕಾಂಶಗಳು ಮತ್ತು ಕಡಿಮೆ ಕ್ಯಾಲರಿ ಹೊಂದಿರುವ ತರಕಾರಿ ಜ್ಯೂಸ್ ಸೇವಿಸಿ. ಆಲ್ಕೋಹಾಲ್ ಸೇವನೆ ಕೂಡ ಕ್ಯಾಲರಿ ಹೆಚ್ಚು ಮಾಡುವುದು. ಇದರಿಂದ ಆಲ್ಕೋಹಾಲ್ ಕುಡಿಯುವ ವೇಳೆ ಇದನ್ನು ಗಮನಿಸಿ.

  2. ತಾಜಾ ಉತ್ಪನ್ನಗಳನ್ನು ಸೇವಿಸಿ

  ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪರಿಮಾಣ ಇರುವಂತಹ ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡುವುದು ಅಧಿಕ ಕ್ಯಾಲರಿ ಮತ್ತು ಕೊಬ್ಬು ಹೊಂದಿರುವ ಆಹಾರಕ್ಕಿಂತ ಒಳ್ಳೆಯದು. ಆರೋಗ್ಯ ತಜ್ಞರ ಪ್ರಕಾರ ಮಧ್ಯಾಹ್ನ ಮತ್ತು ರಾತ್ರಿ ಊಟದ ಮೊದಲು ತರಕಾರಿ ಸಲಾಡ್ ಅಥವಾ ಸಾರು ಆಧಾರಿತ ಸೂಪ್ ಗಳನ್ನು ಕುಡಿಯಬೇಕು. ಇದರಲ್ಲಿ ಹೆಚ್ಚಿನ ವಿಟಮಿನ್ ಗಳು, ಖನಿಜಾಂಶಗಳು, ನಾರಿನಾಂಶ ಮತ್ತು ಫೈಥೋನ್ಯೂಟ್ರಿಯೆಂಟ್ಸ್ ಗಳು ಇವೆ. ಇದು ನಿಮ್ಮ ಹೊಟ್ಟೆ ತುಂಬಿಸಿ, ಬಯಕೆ ಕಡಿಮೆ ಮಾಡುವುದು.

  3. ಹಸಿವಿನ ಮಾತು ಕೇಳಿ

  ಆಹಾರ ಕ್ರಮದಲ್ಲಿ ಸಣ್ಣ ಬದಲಾವಣೆ ಮಾಡುವುದರಿಂದ ದೊಡ್ಡ ಮಟ್ಟದ ಲಾಭವು ನಿಮಗೆ ಆಗುವುದು. ತೂಕ ಕಳೆದುಕೊಳ್ಳಲು ನೀವು ಕಡಿಮೆ ಪ್ರಮಾಣದ ಆಹಾರ ಸೇವಿಸಿ. ಹಸಿವಿನ ಮಾತು ಕೇಳುತ್ತಾ ಹೀಗೆ ಮಾಡಿ. ನೀವು ತುಂಬಾ ನಿಧಾನವಾಗಿ ತಿನ್ನಬೇಕು, ತಿನ್ನುವ ಆಹಾರದತ್ತ ಗಮನವಿರಲಿ ಮತ್ತು ಪ್ರತೀ ತುತ್ತಿನ ರುಚಿ ಆನಂದಿಸಿ. ಇದರಿಂದ ನಿಮ್ಮ ದೇಹಕ್ಕೆ ಎಷ್ಟು ಕ್ಯಾಲರಿ ಬೇಕಿದೆ ಎಂದು ತಿಳಿಯುವುದು ಮತ್ತು ನೀವು ಅತಿಯಾಗಿ ಕ್ಯಾಲರಿ ಸೇವನೆ ಮಾಡುವುದು ತಪ್ಪುವುದು.

  4. ಪ್ರತಿನಿತ್ಯ ಸಲಾಡ್ ಸೇವಿಸಿ

  ನಿಮ್ಮ ಮಧ್ಯಾಹ್ನದ ಊಟವನ್ನು ಬದಲಾಯಿಸಿಕೊಳ್ಳಿ. ಇದರ ಬದಲಿಗೆ ಹೆಚ್ಚು ತರಕಾರಿ ಸಲಾಡ್ ತಿಂದರೆ ನಿಮ್ಮ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ನೀವು ಸಸ್ಯಾಹಾರಿಯಾಗಿದ್ದರೆ ನಿಮ್ಮ ಸಲಾಡ್ ನಲ್ಲಿ ಬೀಜಗಳು, ಅವಕಾಡೋ ಮತ್ತು ಎಲ್ಲಾ ರೀತಿಯ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಿ. ನೀವು ಮಾಂಸಾಹಾರಿಯಾಗಿದ್ದರೆ ತೆಳು ಪ್ರೋಟೀನ್ ಆಹಾರದಲ್ಲಿರಲಿ.

  5. ಲಿಂಬೆರಸದೊಂದಿಗೆ ಮೂರು ಲೀಟರ್ ನೀರು ಕುಡಿಯಿರಿ

  ಹೆಚ್ಚು ನೀರು ಸೇವನೆ ಮಾಡುವುದರಿಂದ ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿದೆ. ಪ್ರತಿನಿತ್ಯ ನೀವು ಲಿಂಬೆರಸ ಬೆರೆಸಿಕೊಂಡಿರುವ ಬಿಸಿನೀರನ್ನು ಮೂರು ಲೀಟರ್ ನಷ್ಟು ಸೇವಿಸಬೇಕು. ಲಿಂಬೆ ಮತ್ತು ಬಿಸಿ ನೀರು ತೂಕ ಕಳೆದುಕೊಳ್ಳಲು ಸಹಕಾರಿ. ಈ ನೀರು ನಿಮಗೆ ವಿಟಮಿನ್ ಸಿ ಮತ್ತು ಪೊಟಾಶಿಯಂ ಒದಗಿಸಿಕೊಡಲಿದೆ. ಲಿಂಬೆರಸದಲ್ಲಿ 11 ಕ್ಯಾಲರಿ, 48 ಮಿಲಿಗ್ರಾಂ ಪೊಟಾಶಿಯಂ ಮತ್ತು 18 ಮಿ.ಗ್ರಾಂ. ವಿಟಮಿನ್ ಸಿ ಇದೆ.

  6. ಕೆಂಪುಮಾಂಸ ಸೇವನೆ ಕಡಿಮೆ ಮಾಡಿ

  ಕೆಂಪುಮಾಂಸವು ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಕೊಂಡಿದ್ದರೆ ಆಗ ನೀವು ಇದನ್ನು ಬಿಡಬೇಕಾಗುತ್ತದೆ. ಕೆಂಪು ಮಾಂಸ ಕಡಿಮೆ ಮಾಡಿದರೆ ಕ್ಯಾಲರಿ ಕಡಿಮೆ ಮಾಡಿಕೊಂಡು ನೀವು ಬೇಗನೆ ಫಿಟ್ ದೇಹ ಪಡೆಯಬಹುದು. ನಿಮಗೆ ಈಗಲೂ ಮಾಂಸ ಸೇವನೆ ಮಾಡಬೇಕೆಂದಿದ್ದರೆ ಆಗ ವಾರದಲ್ಲಿ ಒಂದು ಅಥವಾ ಎರಡು ಸಲ ಸೇವಿಸಿ.

  7. ಬಾದಾಮಿ

  ಹೊರಗಡೆ ನೀವು ಹೋದಾಗ ಹಸಿವಾದರೆ ಏನು ಮಾಡುತ್ತೀರಿ? ಒಂದಾ ಬರ್ಗರ್ ಅಥವಾ ಸ್ಯಾಂಡ್ ವಿಚ್ ಸೇವಿಸುತ್ತೀರಿ. ಹೀಗೆ ಮಾಡಿದರೆ ಇದರಿಂದ ನಿಮ್ಮ ಆಹಾರ ಕ್ರಮದ ಮೇಲೆ ಪರಿಣಾಮ ಬೀರುವುದು. ಆರೋಗ್ಯಕರವಾದ ಆಹಾರ ಕ್ರಮವೆಂದರೆ ನೀವು ಬೀಜಗಳಾದ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿ ಸೇವಿಸಿ. ಬೀಜಗಳು ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವುದು. 22 ಬಾದಾಮಿ ಮತ್ತು 15 ಗೋಡಂಬಿ ತಿಂದರೆ ಅದರಿಂದ ತೂಕ ಕಡಿಮೆ ಮಾಡಿ, ಬಯಕೆ ನಿಯಂತ್ರಣದಲ್ಲಿಡಬಹುದು.

  8. ಪ್ರೋಟೀನ್ ಪ್ರತೀ ಊಟದಲ್ಲಿರಲಿ

  ಪ್ರತೀ ಸಲದ ತಿಂಡಿ ತಿನ್ನುವಾಗ ಅಥವಾ ಊಟದ ವೇಳೆ ಪ್ರೋಟೀನ್ ಸೇವನೆ ಮಾಡಿದರೆ ಅದರಿಂದ ದೀರ್ಘ ಸಮಯದ ತನಕ ಹೊಟ್ಟೆ ತುಂಬಿದಂತೆ ಇರುವುದು. ಕಡಿಮೆ ಕೊಬ್ಬು ಇರುವ ಮೊಸರು, ಸಣ್ಣ ಪ್ರಮಾಣದಲ್ಲಿ ಬೀಜಗಳು, ಮೊಟ್ಟೆಗಳು, ಬೀನ್ಸ್, ತೆಳು ಮಾಂಸ ಮತ್ತು ನೆಲಗಡಲೆ ಬೆಣ್ಣೆ ಸೇವಿಸಿ. ಪ್ರತೀ ಮೂರು ಅಥವಾ ನಾಲ್ಕು ಗಂಟೆಗೊಮ್ಮೆ ಸಣ್ಣ ಮಟ್ಟದ ಊಟ ಮಾಡುವುದರಿಂದ ನಿಮ್ಮ ಸಕ್ಕರೆ ಮಟ್ಟವು ಸ್ಥಿರವಾಗಿರುವುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

  9. ಇಡೀ ಧಾನ್ಯ ಬಳಸಿ

  ಸಂಸ್ಕರಿತ ಧಾನ್ಯದ ಬದಲಿಗೆ ಇಡೀ ಧಾನ್ಯದಿಂದ ಮಾಡಿದಂತಹ ಕಂದು ಬ್ರೆಡ್, ಇಡೀ ಧಾನ್ಯದ ಬ್ರೆಡ್, ಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಬೇಕು. ಇದರಲ್ಲಿ ಇರುವಂತಹ ನಾರಿನಾಂಶವು ನಿಮ್ಮ ಹೊಟ್ಟೆ ಬೇಗನೆ ತುಂಬುವಂತೆ ಮಾಡುವುದು. ಗೋಧಿ ಬ್ರೆಡ್ ಮತ್ತು ಪಾಸ್ತಾವನ್ನು ಬಳಸಬಹುದು.

  10. ಪ್ರತಿನಿತ್ಯ ಉಪಾಹಾರ ಸೇವಿಸಿ

  ಬೆಳಗ್ಗೆ ಉಪಾಹಾರ ಸೇವನೆ ಮಾಡದಿದ್ದರೆ ತೂಕ ಕಳೆದುಕೊಳ್ಳಬಹುದು ಎಂದು ಹೆಚ್ಚಿನವರು ಭಾವಿಸಿರುವರು. ಆದರೆ ಉಪಾಹಾರ ಸೇವನೆ ಮಾಡಿದರೆ ಹೊಟ್ಟೆ ತುಂಬಿರುವುದು ಮತ್ತು ತಿನ್ನುವ ಬಯಕೆ ಇದು ಕಡಿಮೆ ಮಾಡುವುದು. ಬೆಳಗ್ಗೆ ನೀವು ಉಪಾಹಾರ ಸೇವನೆ ಮಾಡದೆ ಇದ್ದರೆ ಆಗ ಹಸಿವು ಹೆಚ್ಚಾಗುವುದು ಮತ್ತು ಮಧ್ಯಾಹ್ನ ಅತಿಯಾಗಿ ತಿನ್ನುವಿರಿ. ಇದು ನಿಮ್ಮ ತೂಕ ಹೆಚ್ಚಿಸುವುದು. ಇದರಿಂದ ನೀವು ಇಡೀ ಧಾನ್ಯದ ಸೀರಲ್ ನೊಂದಿಗೆ ಹಣ್ಣುಗಳು ಮತ್ತು ಕಡಿಮೆ ಕೊಬ್ಬು ಇರುವ ಹಾಲಿನ ಉತ್ಪನ್ನಗಳನ್ನು ಸೇವಿಸಿ.

  11. ಪ್ರಮಾಣ

  ನಿಮ್ಮ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ಇದರಿಂದ ತೂಕ ಕಳೆದುಕೊಳ್ಳಲು ನಿಮಗೆ ನೆರವಾಗುವುದು. ಮನೆಯಲ್ಲಿ ನೀವು ಅಳತೆಗೆ ಕಪ್ ಬಳಸಿದರೆ ಅದರಿಂದ ನಿಮಗೆ ಎಷ್ಟು ಸೇವನೆ ಮಾಡಬಹುದು ಎಂದು ತಿಳಿಯುವುದು. ಸಣ್ಣ ಕಪ್ ಗಳನ್ನು ಇಟ್ಟುಕೊಳ್ಳಿ. ಇದರಿಂದ ಆಹಾರ ಸೇವನೆ ಪ್ರಮಾಣ ಕಡಿಮೆಯಾಗುವುದು.

  English summary

  11 Simple Changes In Diet To Lose Weight

  Losing weight needs a lot of effort. Of course, there are plenty of fad diets that work to shed off that unwanted fat rapidly, but the downside of these diets is they leave you feeling hungry and deprived of food. So, today in this article, we will be discussing the simple changes to make in your diet to lose weight. Do you know one pound of fat is equal to 3,500 calories? By shedding off around 500 calories a day through dietary and exercise regime, you could lose about a pound a week.
  Story first published: Sunday, June 24, 2018, 10:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more