For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲೇ ಇದೇ ತೂಕ ಕಳೆದುಕೊಳ್ಳುವ ಆಹಾರಗಳು

By Lekhaka
|

ತೂಕ ಹೆಚ್ಚಿಸಿಕೊಳ್ಳಲು ಹೆಚ್ಚಿನವರಿಗೆ ಯಾವುದೇ ಕಷ್ಟವಾಗುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳುವುದು ಅವರಿಗೆ ದೊಡ್ಡ ಸಮಸ್ಯೆಯಾಗಿರುವುದು. ದೇಹದಲ್ಲಿ ತುಂಬಿರುವ ಬೊಜ್ಜಿನಿಂದ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವರಿಗೆ ಮನಸ್ಸಾಗುವುದಿಲ್ಲ. ಇಂತಹ ಸಮಯದಲ್ಲಿ ತೂಕ ಕಡಿಮೆ ಮಾಡಬೇಕೆಂದು ಶತಪ್ರಯತ್ನ ಮಾಡುತ್ತಾರೆ.

ಮಾರುಕಟ್ಟೆಯಲ್ಲಿ ಸಿಗುವಂತಹ ತೂಕ ಇಳಿಸಿಕೊಳ್ಳುವ ಮಾತ್ರೆ, ಹುಡಿ ಇತ್ಯಾದಿಗಳನ್ನು ಸೇವಿಸಲು ಆರಂಭಿಸುವರು. ಆದರೆ ಇದು ತೂಕ ಇಳಿಸಿದರೂ ಇದರ ಸೇವನೆ ನಿಲ್ಲಿಸಿದ ಕೂಡಲೇ ಮತ್ತೆ ತೂಕ ಹೆಚ್ಚಳವಾಗುವುದು. ಇಂತಹ ಸಮಯದಲ್ಲಿ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ಮನೆಮದ್ದನ್ನುಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ತೂಕ ಇಳಿಸಿಕೊಳ್ಳಲು ನೀವು ಬಳಸಬಹುದಾದ ಮನೆಮದ್ದುಗಳನ್ನು ಈ ಲೇಖನದಲ್ಲಿನಿಮಗಾಗಿ ನೀಡಿದ್ದೇವೆ. ಇದು ಯಾವುದೆಂದು ತಿಳಿಯಲು ಮುಂದೆ ಓದಿಕೊಳ್ಳಿ....

ಶುಂಠಿ

ಶುಂಠಿ

ಶುಂಠಿಯು ಹೊಟ್ಟೆಯಲ್ಲಿ ತುಂಬಿರುವಂತಹ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸುಲಭವಾಗುವುದು ಮತ್ತು ಹೊಟ್ಟೆಯು ಸಣ್ಣದಾಗಿ ಕಾಣಿಸುವುದು. ಶುಂಠಿ ಸೇವಿಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಸ್ವಲ್ಪ ಘಾಟು. ಆದರೆ ಹಸಿ ಬೆಳ್ಳುಳ್ಳಿಯ ಕೆಲವು ಎಸಲುಗಳನ್ನು ಸೇವಿಸಿದರೆ ತೂಕ ಇಳಿಸಬಹುದು. ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ.

ದಾಲ್ಚಿನ್ನಿ

ದಾಲ್ಚಿನ್ನಿ

ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವ ದಾಲ್ಚಿನ್ನಿಯು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಬೆಳಗ್ಗೆ ನಿಮ್ಮ ಕಾಫಿಗೆ ದಾಲ್ಚಿನಿ ಹುಡಿ ಹಾಕಿದರೆ ಅದರಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು.

ಕೆಂಪು ಮೆಣಸು

ಕೆಂಪು ಮೆಣಸು

ಕೆಂಪು ಮೆಣಸಿನಲ್ಲಿ ಕಡಿಮೆ ಕ್ಯಾಲರಿ ಇದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಹಸಿವನ್ನು ಕಡಿಮೆ ಮಾಡಬಹುದು ಮತ್ತು ಕ್ಯಾಲರಿ ದಹಿಸಲು ಸಹಕಾರಿ ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ತೂಕ ಕಳೆದುಕೊಳ್ಳಲು ಇದು ತುಂಬಾ ಪರಿಣಾಮಕಾರಿ ಮನೆಮದ್ದು.

ಕರಿಮೆಣಸು

ಕರಿಮೆಣಸು

ಇದು ಮೂಗುಕಟ್ಟುವಿಕೆಯನ್ನು ನಿವಾರಿಸುವ ನೈಸರ್ಗಿಕ ಔಷಧಿಯಾಗಿದ್ದು, ಇದು ಕೂಡ ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡುವುದು.

ಸಾಸಿವೆ ಕಾಳುಗಳು

ಸಾಸಿವೆ ಕಾಳುಗಳು

ಸಾಸಿವೆ ಕಾಳುಗಳಲ್ಲಿ ಸೆಲೇನಿಯಂ ಅಂಶವಿದೆ. ಈ ಖನಿಜಾಂಶವು ದೇಹದಲ್ಲಿ ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ಇದು ಕೂಡ ತೂಕ ಇಳಿಸಲು ಸಹಕಾರಿ.

ಲಿಂಬೆ

ಲಿಂಬೆ

ಲಿಂಬೆಯು ಆಹಾರದ ರುಚಿಯನ್ನು ಹೆಚ್ಚಿಸುವುದು ಎನ್ನುವುದರಲ್ಲಿ ಸಂಶಯವಿಲ್ಲ. ಇದರಲ್ಲಿ ಕ್ಯಾಲರಿ ಇಲ್ಲದಿರುವುದು ತೂಕ ಕಳೆದುಕೊಳ್ಳಲು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಬಹುದು.

ಕ್ವಿನೋ

ಕ್ವಿನೋ

ಈ ಅದ್ಭುತ ಆಹಾರದಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದರಿಂದ ನಿಮಗೆ ಹೊಟ್ಟೆ ತುಂಬಿದಂತೆ ಆಗುವುದು. ಇದು ತೂಕ ಕಳೆದುಕೊಳ್ಳಲು ಒಳ್ಳೆಯದು.

ಬಾದಾಮಿ

ಬಾದಾಮಿ

ಬಾದಾಮಿಯನ್ನು ನಿಯಮಿತವಾಗಿ ಸೇವನೆ ಮಾಡುವವರು ತೂಕ ಕಳೆದುಕೊಳ್ಳುವ ಆಹಾರ ಕ್ರಮ ಪಾಲಿಸಬೇಕಿಲ್ಲವೆಂದು ಅಧ್ಯಯನಗಳು ಹೇಳಿವೆ.

ಕೋಕಾ ಹುಡಿ

ಕೋಕಾ ಹುಡಿ

ಕೋಕಾ ಹುಡಿಯಲ್ಲಿ ಇರುವಂತಹ ಫ್ಲೆವನಾಲ್ ಅಂಶವು ದೇಹದ ಕೊಬ್ಬು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು. ಇದರಿಂದ ಆಹಾರ ಕ್ರಮದಲ್ಲಿ ಕೋಕಾಹುಡಿ ಸೇರಿಸಿ.

ಓಟ್ಸ್

ಓಟ್ಸ್

ಓಟ್ಸ್ ನಲ್ಲಿ ತೂಕ ಕಳೆದುಕೊಳ್ಳಲು ಸಹಕಾರಿಯಾಗುವ ಹಲವಾರು ಅಂಶಗಳಿವೆ. ಓಟ್ಸ್ ತಿನ್ನುವ ಬಯಕೆ ಕಡಿಮೆ ಮಾಡುವುದು. ನಿಯಮಿತವಾಗಿ ಇದನ್ನು ಸೇವಿಸಿದರೆ ತೂಕ ಕಳೆದುಕೊಳ್ಳಲು ಸಹಕಾರಿ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ ಮತ್ತು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ತೂಕ ಕಳೆದುಕೊಳ್ಳಲು ಸಹಕಾರಿ. ಮನೆಯಲ್ಲೇ ಸಿಗುವಂತಹ ತೂಕ ಕಳೆದುಕೊಳ್ಳುವ ಆಹಾರಗಳಲ್ಲಿ ಇದು ಒಂದು.

ಕಪ್ಪು ಬೀಜಗಳು

ಕಪ್ಪು ಬೀಜಗಳು

ಈ ಬೀಜಗಳಲ್ಲಿ ಪ್ರೋಟೀನ್ ಮತ್ತು ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿದೆ. ಇದರ ಪರಿಣಾಮ ಹೊಟ್ಟೆ ತುಂಬಿದಂತೆ ಆಗಿ ತೂಕ ಕಳೆದುಕೊಳ್ಳಬಹುದು.

ಫ್ಲೆಕ್ಸ್ ಸೀಡ್ಸ್

ಫ್ಲೆಕ್ಸ್ ಸೀಡ್ಸ್

ಒಂದು ಚಮಚ ಫ್ಲೆಕ್ಸ್ ಬೀಜಗಳನ್ನು ಸೇವನೆ ಮಾಡಿದರೆ ಅದರಿಂದ ತಿನ್ನುವ ಬಯಕೆ ಮತ್ತು ಹಸಿವು ನಿಯಂತ್ರಣದಲ್ಲಿರುವುದು. ಇದರಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ.

ಚಿಯಾ ಬೀಜಗಳು

ಚಿಯಾ ಬೀಜಗಳು

ತೂಕ ಕಳೆದುಕೊಳ್ಳುವ ಆಹಾರಗಳ ಪಟ್ಟಿಗೆ ಚಿಯಾ ಬೀಜವು ಹೊಸ ಸೇರ್ಪಡೆ ಯಾಗಿದೆ. ಇದು ಹೀರಿಕೊಳ್ಳುವ ನಾರಿನಾಂಶ, ಆರೋಗ್ಯಕರ ಕೊಬ್ಬು ಮತ್ತು ಅಧಿಕ ಮಟ್ಟದ ಕ್ಯಾಲ್ಸಿಯಂನ್ನು ಒಳಗೊಂಡಿದೆ.

ಬಾಲ್ಸಾಮಿಕ್ ವಿನೇಗರ್

ಬಾಲ್ಸಾಮಿಕ್ ವಿನೇಗರ್

ಇತರ ಸಲಾಡ್ ಅಲಂಕಾರಗಳಿಗೆ ಹೋಲಿಸಿದರೆ ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ. ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿದರೆ ಬೇರೆ ಕ್ಯಾಲರಿ ಅಧಿಕವಾಗಿರುವ ಆಹಾರ ತಡೆಯಬಹುದು.

ಧಾನ್ಯಗಳು

ಧಾನ್ಯಗಳು

ಧಾನ್ಯಗಳಲ್ಲಿ ಸಸ್ಯಮೂಲದ ಪ್ರೋಟೀನ್ ಮತ್ತು ನಾರಿನಾಂಶವು ಉತ್ತಮ ಪ್ರಮಾಣದಲ್ಲಿರುವುದು. ಇದು ಪೂರ್ಣ ಸಂತೃಪ್ತಿಯನ್ನು ನೀಡಿ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಇದು ಮನೆಯಲ್ಲೇ ಸಿಗುವ ತೂಕ ಕಳೆದುಕೊಳ್ಳುವ ಆಹಾರಗಳಲ್ಲಿ ಒಂದಾಗಿದೆ.

ಮೊಸರು

ಮೊಸರು

ಕ್ಯಾಲ್ಸಿಯಂ ಅಧಿಕವಾಗಿರುವಂತಹ ಮೊಸರನ್ನು ಸೇವನೆ ಮಾಡುವುದರಿಂದ ತೂಕ ಕಳೆದು ಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. ಇದು ಕ್ಯಾಲ್ಸಿಯಂ ಮಾತ್ರೆಗಳ ಸೇವನೆಗಿಂತ ಪರಿಣಾಮಕಾರಿ.

ಆಲಿವ್ ತೈಲ

ಆಲಿವ್ ತೈಲ

ಆಲಿವ್ ತೈಲದಲ್ಲಿ ಆರೋಗ್ಯಕರ ಕೊಬ್ಬಿನಾಂಶವಿದೆ. ಇದರಿಂದ ಹೊಟ್ಟೆ ತುಂಬಿದಂತೆ ಆಗುವುದು. ಆರೋಗ್ಯಕರ ಕೊಬ್ಬು ಪೂರ್ಣಸಂತೃಪ್ತಿಯನ್ನು ನೀಡುವುದು ಮತ್ತು ವಿಟಮಿನ್ ಹೀರಿಕೊಳ್ಳಲು ನೆರವಾಗುವುದು.

ಬೆರ್ರಿಗಳು

ಬೆರ್ರಿಗಳು

ಬೆರ್ರಿಗಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವಂತಹ ಜನರು ಯಾವಾಗಲೂ ತಮ್ಮ ತೂಕದಲ್ಲಿ ಹೆಚ್ಚಳ ಮಾಡಿಕೊಳ್ಳಲ್ಲ ಎಂದು ಅಧ್ಯಯನಗಳು ಹೇಳಿವೆ.

 ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜ

ತೂಕ ಕಳೆದುಕೊಳ್ಳಲು ಪ್ರಮುಖವಾಗಿ ಬೇಕಾಗಿರುವಂತಹ ಪ್ರೋಟೀನ್ ಮತ್ತು ನಾರಿನಾಂಶವು ಕುಂಬಳಕಾಯಿ ಬೀಜದಲ್ಲಿದೆ. ಇದು ತುಂಬಾ ಆರೋಗ್ಯಕಾರಿ ಆಹಾರವಾಗಿದೆ.

ಕಡಿಮೆ ಉಪ್ಪಿರುವ ಸಾರು

ಕಡಿಮೆ ಉಪ್ಪಿರುವ ಸಾರು

ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವ ನಿರ್ಧಾರ ಮಾಡಿಕೊಂಡಿದ್ದರೆ ಆಗ ನೀವು ತರಕಾರಿಗಳನ್ನು ಕಡಿಮೆ ಉಪ್ಪಿರುವ ಮಾಂಸ ಅಥವಾ ತರಕಾರಿ ಸಾರಿನೊಂದಿಗೆ ಬೇಯಿಸಿ. ಇದು ಅತ್ಯುತ್ತಮವಾದ ತೂಕ ಕಳೆದುಕೊಳ್ಳುವ ಆಹಾರ.

ಕಡಲೆಬೀಜ

ಕಡಲೆಬೀಜ

ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಅಧಿಕವಾಗಿದೆ. ಕಡಲೆಬೀಜವನ್ನು ನಿಮ್ಮ ಸಲಾಡ್ ಜತೆಗೆ ಸೇರಿಸಿದರೆ ಅದರಿಂದ ಹೊಟ್ಟೆಯ ಕೊಬ್ಬು ಕರಗುವುದು.

ಟೊಮೆಟೋ ಪೇಸ್ಟ್

ಟೊಮೆಟೋ ಪೇಸ್ಟ್

ಮಾರುಕಟ್ಟೆಯಲ್ಲಿ ಸಿಗುವ ಟೊಮೆಟೋ ಕ್ಯಾಚಪ್ ನಲ್ಲಿ ಹೆಚ್ಚಿನ ಸಕ್ಕರೆಅಂಶ ಇರಬಹುದು. ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಿ. ಇದರಲ್ಲಿ ಅಧಿಕ ಪೋಷಕಾಂಶಗಳು ಮತ್ತು ಸಕ್ಕರೆ ಕಡಿಮೆ ಇರುವ ಕಾರಣ ತೂಕ ಕಳಕೊಳ್ಳಲು ಸಹಕಾರಿ.

ಪುದೀನಾ

ಪುದೀನಾ

ತಾಜಾ ಪುದೀನಾ ಜಗಿದು ತಿಂದರೆ ಅದರಿಂದ ಹೊಟ್ಟೆಯ ಬೊಜ್ಜು ಕರಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಜೀರ್ಣಕ್ರಿಯೆಗೂ ತುಂಬಾ ಪರಿಣಾಮಕಾರಿ.

ಅರಿಶಿನ

ಅರಿಶಿನ

ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ ಮತ್ತು ನೀವು ತಿನ್ನುವಂತಹ ಪ್ರತಿಯೊಂದು ಆಹಾರದಲ್ಲೂ ಇದನ್ನು ರುಚಿ ವರ್ಧಕವಾಗಿ ಬಳಸಬಹುದು.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿಯಾಗಲಿದೆ. ಇದು ದೇಹದಲ್ಲಿ ತೂಕ ಕಳೆದುಕೊಳ್ಳುವಂತಹ ಪ್ರಕ್ರಿಯೆಗೆ ಚಾಲನೆ ನೀಡುವುದು. ಇದು ಹೊಟ್ಟೆಯ ಬೊಜ್ಜನ್ನು ನಿಯಂತ್ರಣದಲ್ಲಿಡುವುದು.

English summary

Weight Loss Ingredients Straight From Your Kitchen

If you have these weight loss ingredients stashed away in your shelves all the time, then you''ll have no other option in other than whip up meals using these healthy ingredients. In this article we have listed some of the best weight loss ingredients found at home. Read further to know about the list of weight loss ingredients.
Story first published: Friday, December 1, 2017, 20:03 [IST]
X
Desktop Bottom Promotion