ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ 'ಆಲೂಗಡ್ಡೆ ಡಯಟ್'

By: Suhani
Subscribe to Boldsky

ಈಗ ಎಲ್ಲರಿಗೂ ಇರುವ ಸಮಸ್ಯೆವೇನೆಂದರೆ ತೂಕ. ಕನ್ನಡಿ ಮುಂದೆ ನಿಂತು ಅಯ್ಯೋ ನಾನು ದಪ್ಪಗಾಗಿ ಬಿಟ್ಟೆ ಅಂತ ತುಂಬಾ ಜನ ಚಿಂತೆಗೆ ಒಳಗಾಗುತ್ತಾರೆ. ತೂಕ ಇಳಿಸೋಕೆ ಕೆಲವರು ಹರಸಾಹಸ ಮಾಡುತ್ತಾರೆ. ಬೆಳಗ್ಗೆದ್ದರೆ ಜಿಮ್, ವಾಕಿಂಗ್, ಏರೋಬಿಕ್ಸ್ ಹೀಗೆ ಹಲವಾರು. ತೂಕ ಜಾಸ್ತಿ ತುಂಬಾ ದಪ್ಪಗಿದ್ದೇನೆ ಎಂಬ ಚಿಂತೆ ಬೇಡ. ಇದಕ್ಕೆಲ್ಲಾ ನಾವು ಜಿಮ್, ಏರೋಬಿಕ್ಸ್ ಹೀಗೆ ಎಲ್ಲೆಂದರಲ್ಲಿ ಮೊರೆ ಹೋಗಬೇಕಿಲ್ಲ ಬದಲಾಗಿ ನಾವು ಮನೆಯಲ್ಲೇ ಪರಿಹಾರ ಕಂಡುಕೊಳ‍್ಳಬಹುದು.

Potato

ಮೊದಲಿಗೆ ಜನರ ಅಭಿಪ್ರಾಯಗಳ ಪ್ರಕಾರ ಆಲೂಗಡ್ಡೆಯ ಚಿಪ್ಸ್ ಸೇವನೆಯಿಂದ ತೂಕ ಜಾಸ್ತಿ ಹೊಂದುತ್ತೇವೆಂಬ ಭಾವನೆ ಎಲ್ಲರ ಮನದಲ್ಲಿತ್ತು. ಆದರೆ ನಿಜವಾಗಿಯೂ ಆಲೂಗಡ್ಡೆಯನ್ನು ಸರಿಯಾದ ವಿಧಾನದಲ್ಲಿ ಸೇವಿಸದಲ್ಲಿ ಶರೀರದ ತೂಕವನ್ನು ಕಡಿಮೆ ಮಾಡಬಹುದು!

ಆಲೂಗಡ್ಡೆಯನ್ನು ಎಣ‍್ಣೆಯೊಂದಿಗೆ ಕರಿದು ತಿಂದಲ್ಲಿ ಆರೋಗ್ಯಕ್ಕೂ ಹಾಳು ತೂಕವೂ ಜಾಸ್ತಿ. ಆದರೆ ಇದನ್ನು ಸೌತೆಕಾಯಿಯೊಂದಿಗೆ ಸೇವನೆ ಮಾಡಿದಲ್ಲಿ ತೂಕ ಆಶ್ಚರ್ಯಕರವಾಗಿ ಕಡಿಮೆ ಮಾಡಬಹುದು. ಅತ್ಯಂತ ಶರೀರದ ತೂಕದಿಂದ ನಮಗೆ ಕೊಲೆಸ್ಟ್ರಾಲ್, ಬಿಪಿ, ಶುಗರ್, ಗಂಟುನೋವು ಇತ್ಯಾದಿಗಳು ನಮ್ಮನ್ನು ಆವರಿಸಿಕೊಳ‍್ಳುತ್ತದೆ. ಅದಕ್ಕಾಗಿ ನಮ್ಮ ಶರೀರದ ತೂಕ ಕಡಿಮೆ ಮಾಡುವ ವಿಧಾನಗಳನ್ನು ನಾವು ಅಳವಡಿಸಿಕೊಳ‍್ಳೋಣ. ದಪ್ಪ ಶರೀರದವರು ಮಾನಸಿಕವಾಗಿ ವ್ಯಥೆಗೊಳ‍್ಳುವರು ಮತ್ತು ನೋಡಲು ಅಸಹ್ಯವೆನಿಸಬಹುದು.

Potato

ಲಘು ವ್ಯಾಯಾಮ, ಸೈಕ್ಲಿಂಗ್, ಆಹಾರ ಪದ್ಧತಿಗಳಲ್ಲಿ ವ್ಯತ್ಯಾಸ ವಂಶಪಾರಂಪರಿಕವಾಗಿ ಬರುವುದು ಶಾರೀರಿಕ ಶ್ರಮ ಪಡದೇ ಇರುವುದು ಇತ್ಯಾದಿಗಳಿಂದ ದೇಹದ ತೂಕ ಜಾಸ್ತಿಯಾಗಬಹುದು. ಅದಕ್ಕಾಗಿ ಸಮಯಕ್ಕೆ ಅನುಗುಣವಾಗಿ ಆಹಾರ ಸೇವನೆ, ಹಸಿರು ಸೊಪ್ಪು ತರಕಾರಿಗಳು ಹಿತಮಿತವಾಗಿ ಸೇವನೆ ಯೋಗ, ಲಘು ವ್ಯಾಯಾಮ ಮಾಡುತ್ತಾ ಬಂದಲ್ಲಿ ತೂಕ ಕಡಿಮೆ ಮಾಡಬಹುದು. ಹೃದಯದ ಕಾಯಿಲೆಗಳಿಂದ ದೂರವಿಡಬಹುದು.

ನಮ್ಮ ಮನೆಯಲ್ಲೇ ಮಾಡಬಹುದಾದ ಒಂದು ವಿಧದಲ್ಲಿ ಆಲುಗಡ್ಡೆಯನ್ನು ಈ ವಿಧಾನವಾಗಿ ಬಳಸಬಹುದು.

ಬೇಯಿಸಿದ ಆಲುಗಡ್ಡೆ - 2

ಮೊಸರು - 1 ಕಪ್   

ಉಪ್ಪು -ರುಚಿಗೆ ತಕ್ಕಷ್ಟು

Salt

ರುಚಿಗೆ ಉಪ್ಪು ಅದನ್ನು ನಿರಂತರ ಮಿತವಾಗಿ ಸೇವನೆ ಮತ್ತು ದಿನಾ 45 ನಿಮಿಷದ ವ್ಯಾಯಾಮಗಳು. ಆಲುಗಡ್ಡೆಯಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಹೇರಳವಾಗಿರುವುದರಿಂದ ಕೊಬ್ಬಿನಾಂಶಗಳನ್ನು ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ.

curd

ಮೊಸರು, ಮೊಸರಿನಲ್ಲಿ ಹೆಚ್ಚಿನ ಪ್ರೋಟೀನ್ ಗಳಿರುವುದರಿಂದ ಬೊಜ್ಜು ನಿವಾರಕವಾಗಿ ಮತ್ತು ಮಾಂಸಖಂಡಗಳಿಗೆ ಉತ್ತಮ ಶಕ್ತಿಯನ್ನು ನೀಡಿ ಶರೀರದ ತೂಕ ಹೆಚ್ಚಿಸಲು ಸಹಕಾರಿಯಾಗುವುದಿಲ್ಲ. ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಮಾಡಿ ಮೊಸರಿನೊಂದಿಗೆ ಸ್ವಲ್ಪ ಬೆರೆಸಿ ಪ್ರತಿ ದಿನ ರಾತ್ರಿ ಊಟಕ್ಕೆ 2 ತಿಂಗಳು ಉಪಯೋಗಿಸಿದಲ್ಲಿ ಆರೋಗ್ಯಕ್ಕೂ ಒಳ‍್ಳೆಯದೆಂದು ವೈದ್ಯರ ಅಂಬೋಣ. ಹೀಗೆ ಆಲೂಗಡ್ಡೆಯಿಂದ ಹಲವಾರು ಸಲಾಡ್‌ಗಳನ್ನು ಮಾಡಿ ನಮ್ಮ ಶರೀರದ ತೂಕವನ್ನು ಸಮತೋಲನವಾಗಿ ಕಾಪಾಡಿಕೊಳ‍್ಳಬಹುದು.

English summary

Simple Potato Diet To Lose Weight Quickly!

Many of us would have done a double-take when we read the title of this article, because usually the words potato and weight loss do not go together at all, right? Well, it is natural for you to feel surprised because potato and dishes made from potatoes have been associated with weight gain for many years now. However, just like with a lot of other nutritional facts, this fact too is slightly confusing for the general population.
Subscribe Newsletter