ಮಲಗುವ ಮುನ್ನ ಈ ಪಾನೀಯ ಸೇವಿಸಿ-ಸುಲಭವಾಗಿ ಕೊಬ್ಬು ಕರಗುತ್ತೆ!

By: manu
Subscribe to Boldsky

ಇಂದು ನಾಗರಿಕ ಜಗತ್ತಿನ ಕೊಡುಗೆಯಾಗಿರುವ ಸ್ಥೂಲಕಾಯ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಸಮಸ್ಯೆಯಾಗಿದ್ದು ಹೆಚ್ಚಿನವರು ಇದರಿಂದ ಬಿಡುಗಡೆ ಹೊಂದಲು ಇನ್ನಿಲ್ಲದ ವ್ಯರ್ಥ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ವಿಶೇಷವಾಗಿ ಸೊಂಟದ ಸುತ್ತ ತುಂಬಿಕೊಂಡಿರುವ ಕೊಬ್ಬು ದೇಹದ ಸೌಂದರ್ಯವನ್ನೇ ಕುಂದಿಸುವುದಲ್ಲದೇ ಹತ್ತು ಹಲವು ಆರೋಗ್ಯಸಂಬಂಧಿ ತೊಂದರೆಗಳನ್ನೂ ಆಹ್ವಾನಿಸುತ್ತದೆ. ಡೊಳ್ಳು ಹೊಟ್ಟೆ ಕರಗಿಸಲು-ಬಾಳೆ ಹಣ್ಣು+ಶುಂಠಿ ಸಾಕು!

ನಮ್ಮ ದೇಹದಲ್ಲಿ ಅತಿ ಕಡೆಯದಾಗಿ ಕರಗುವ ಕೊಬ್ಬು ಎಂದರೆ ಸೊಂಟದ ಕೊಬ್ಬು. ಇದೇ ಕಾರಣಕ್ಕೆ ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಸೊಂಟದ ಕೊಬ್ಬು ಇಂದು ಕೊಂಚ ಕರಗಿದಂತೆ ಕಂಡುಬಂದರೂ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಹಿಂದಿನ ರೂಪಕ್ಕೆ ಬಂದುಬಿಡುತ್ತದೆ. ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಇದೆ, ಒಂದು ಸರಳ ಉಪಾಯವನ್ನು ಅನುಸರಿಸಿದರೆ ಸಾಕು. ನೈಸರ್ಗಿಕ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸಿದ ಈ ಪೇಯವನ್ನು ನಿತ್ಯವೂ ಕುಡಿದರೆ ಎರಡೇ ವಾರದಲ್ಲಿ ಸೊಂಟದ ಕೊಬ್ಬು ಕರಗಿರುವುವನ್ನು ಗಮನಿಸಬಹುದು. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....  

ಅಗತ್ಯವಿರುವ ಸಾಮಾಗ್ರಿಗಳು:

ಅಗತ್ಯವಿರುವ ಸಾಮಾಗ್ರಿಗಳು:

ಸುಲಭವಾಗಿ ಲಭ್ಯವಾಗುವ ಸೌತೆ, ಪಾರ್ಸ್ಲೆ ಎಲೆಗಳು, ಲಿಂಬೆ, ಶುಂಠಿ, ಲೋಳೆಸರ ಮತ್ತು ಒಂದು ಲೋಟ ನೀರು. ಇಷ್ಟೇ....

ಲೋಳೆಸರ

ಲೋಳೆಸರ

ಒಂದು ದೊಡ್ಡಚಮಚದಷ್ಟು ಇದರ ಈಗತಾನೇ ಹಿಂಡಿದ ರಸವನ್ನು ಒಂದು ಲೋಟದಲ್ಲಿ ಸಂಗ್ರಹಿಸಿ. ಇದರಲ್ಲಿ ಉತ್ತಪ್ರಮಾಣದ ಆಂಟಿ ಆಕ್ಸಿಡೆಂಟುಗಲಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಲು ನೆರವಾಗುತ್ತದೆ. ತನ್ಮೂಲಕ ಸ್ಥೂಲಕಾಯವನ್ನು ಕರಗಿಸಲು ನೆರವಾಗುತ್ತದೆ. ಲೋಳೆಸರ ಎಂಬ ಬಹುಮೂಲ್ಯ ಸಸ್ಯ ಸಂಜೀವಿನಿ

ಪಾರ್ಸ್ಲೆ ಎಲೆಗಳು

ಪಾರ್ಸ್ಲೆ ಎಲೆಗಳು

ಒಂದು ಚಿಕ್ಕ ಕಟ್ಟು ಪಾರ್ಸ್ಲೆ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಈ ಎಲೆಗಳಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಕಡಿಮೆ ಕ್ಯಾಲೋರಿಗಳಿವೆ. ಅಲ್ಲದೇ ನೀರನ್ನು ವ್ಯರ್ಥವಾಗಲು ಬಿಡದೇ ಮತ್ತು ಕೊಬ್ಬನ್ನು ಸಂಗ್ರಹಗೊಳ್ಳಲು ಬಿಡದೇ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಲಿಂಬೆ ಮತ್ತು ರೋಸ್ ವಾಟರ್

ಲಿಂಬೆ ಮತ್ತು ರೋಸ್ ವಾಟರ್

ಲಿಂಬೆರಸದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಈ ಪೇಯಕ್ಕಾಗಿ ಒಂದು ದೊಡ್ಡ ಗಾತ್ರದ ಲಿಂಬೆಯ ಅಗತ್ಯವಿದೆ.

ಹಸಿಶುಂಠಿ

ಹಸಿಶುಂಠಿ

ಶುಂಠಿಯಲ್ಲಿ ಹಲವಾರು ಆರೋಗ್ಯಕರ ಗುಣಗಳಿದ್ದು ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿವೆ. ಈ ರಸ ಜೀವರಾಸಾಯನಿಕ ಕ್ರಿಯೆ ಚುರುಕುಗೊಳಿಸುವ ಮೂಲಕ ಹೆಚ್ಚು ಕ್ಯಾಲೋರಿಗಳು ದಹಿಸುವಂತೆ ಮಾಡುತ್ತದೆ. ಹಸಿಶುಂಠಿಯನ್ನು ಚಿಕ್ಕದಾಗಿ ಹೆಚ್ಚಿ ಊಟದ ನಡುವೆ ಸೇವಿಸುವುದೂ ಉತ್ತಮ. ಈ ಪೇಯಕ್ಕೆ ಸುಮಾರು ಒಂದು ಇಂಚಿನಷ್ಟು ದೊಡ್ಡ ಶುಂಠಿಯ ತುಂಡು ಬೇಕು. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

ಸೌತೆಕಾಯಿ

ಸೌತೆಕಾಯಿ

ಈ ಪೇಯಕ್ಕೆ ಸುಮಾರು ಮಧ್ಯಮ ಗಾತ್ರದ ಒಂದು ಸೌತೆಕಾಯಿ ಬೇಕು. ಇದರಲ್ಲಿ ನೀರು ಮತ್ತು ಕರಗುವ ನಾರು ಅತಿ ಹೆಚ್ಚಾಗಿದ್ದು ಕ್ಯಾಲೋರಿಗಳು ಅತಿ ಕಡಿಮೆ ಇವೆ. ಸೌತೆಯನ್ನು ಸೇವಿಸುವ ಮೂಲಕವೂ ಹೆಚ್ಚಿನ ಕೊಬ್ಬನ್ನು ದಹಿಸಲು ಸಾಧ್ಯ.ನಿತ್ಯವೂ ಹಸಿ ಸೌತೆಕಾಯಿ ತಿನ್ನಿ, ಆರೋಗ್ಯಕ್ಕೆ ಬಹಳ ಒಳ್ಳೆಯದು....

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಮಿಕ್ಸಿಯ ಬ್ಲೆಂಡರ್‌ನಲ್ಲಿ ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಅರ್ಧ ಲೋಟ ನೀರಿನೊಂದಿಗೆ ಕಡೆಯಿರಿ. ಈ ಪೇಯವನ್ನು ನಿತ್ಯವೂ ರಾತ್ರಿ ಮಲಗುವ ಮುನ್ನ ಸೇವಿಸಿ ಕೊಂಚ ಹೊತ್ತು ನಡೆದಾಡಿ ಬಳಿಕ ಮಲಗಿ. ಇದರಿಂದ ಸುಖವಾದ ನಿದ್ದೆ ಆವರಿಸುತ್ತದೆ ಹಾಗೂ ರಾತ್ರಿ ಹೊತ್ತು ಈ ಪೇಯವನ್ನು ಅರಗಿಸಿಕೊಳ್ಳಲು ದೇಹಕ್ಕೆ ಅನಿವಾರ್ಯವಾಗಿ ಹೆಚ್ಚಿನ ಕೊಬ್ಬನ್ನು ದಹಿಸಲೇಬೇಕಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ಶ್ರಮವಿಲ್ಲದೇ ಕೊಬ್ಬು ಕರಗುತ್ತದೆ ಹಾಗೂ ಇನ್ನಷ್ಟು ಕೊಬ್ಬು ತುಂಬಿಕೊಳ್ಳುವುದನ್ನು ತಡೆದಂತಾಗುತ್ತದೆ. ಇದರ ಪರಿಣಾಮವನ್ನು ಎರಡೇ ವಾರದಲ್ಲಿ ಕಾಣಬಹುದು.

 
English summary

Reduce excess body fat with this drink ginger cucumber lemon

Excess body fat is something that none of us want to have. Especially the fat that gets deposited around your abdomen makes you uncomfortable and looks ugly too. This fat gets so stubborn that despite several attempts and measures it gets difficult to get rid of it.
Story first published: Monday, February 27, 2017, 23:14 [IST]
Please Wait while comments are loading...
Subscribe Newsletter