ನಿಂಬೆ ಹಾಗೂ ಶುಂಠಿ ಪಾನೀಯ ಸೇವನೆಯಿಂದ ತೂಕ ಇಳಿಸಿ

By: Suhani B
Subscribe to Boldsky

ಬೆಳಗ್ಗೆ ಸಿಹಿ ನಿದ್ರೆಯಿಂದ ಎದ್ದ ತಕ್ಷಣ ಹೆಚ್ಚಿನವರಿಗೆ ಮನಸ್ಸಿನಲ್ಲಿ ಮೂಡುವುದೇ ತನ್ನ ದಿನಚರಿಯ ಬಗ್ಗೆ ಅದರಲ್ಲಿ ಮೊದಲ ಹೆಜ್ಜೆಯೇ ಬೆಳಗ್ಗೆ ವಾಕಿಂಗ್ ಮಾಡುವುದು. ನಂತರದ ಯೋಚನೆಯೇ ಕಾಫಿ ಅಥವಾ ಒಂದು ಲೋಟ ನೀರು ಕುಡಿಯುವ ಬಗ್ಗೆಯೇ ಇರುವುದು. ಆದರೆ ಕೆಲವರು ಕಾಫಿಯನ್ನು ಸ್ವೀಕರಿಸಲು ಇಚ್ಛೆ ಪಡುವರು

ಓಹ್! ಪ್ರತಿದಿನ ಬೆಳಿಗ್ಗೆ ನಾವು ಕುಡಿಯುವ ಪಾನೀಯದಿಂದ ಪವಾಡವಾಗಿ ನಮ್ಮ ದೇಹದ ತೂಕ ನಷ್ಟ ಹೊಂದಲು ಒಂದು ಪಾನೀಯವಿದೆ ಎಂದು ನಾವು ಹೇಳಿದರೆ ನೀವು ನಂಬುವಿರಿ ತಾನೆ?. ಈ ಪಾನೀಯದಿಂದ ನಿಮ್ಮ ದೇಹದ ತೂಕ ಅದೆಷ್ಟೋ ಕಡಿಮೆಗೊಳಿಸಲು ಅನುಕೂಲವಾಗುವುದು. 

weight loss

ಆದರೆ ಆ ಪಾನೀಯದ ಮಹತ್ವ ಮತ್ತು ಪ್ರಯೋಜನಗಳಿಗೆ ನಾವು ಬಂದಾಗ ಈ ಪಾನೀಯವೂ ತುಂಬಾ ಉತ್ತಮವಾಗಿದೆ ಮತ್ತು ಆರೋಗ್ಯಕ್ಕೆ ಪ್ರಯೋಜನಗಳಿವೆ. ಇದರಿಂದ ನಾಳೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯಬೇಕೆಂಬ ಭ್ರಮೆಯಿಂದ ದೂರವಿರುವಿರಿ. ನೀವು ನಿರಂತರ ರಾತ್ರಿ ಎಂಟು ಗಂಟೆಗಳ ಕಾಲ ನಿದ್ದೆ ಮಾಡುತ್ತೀರಿ ಮತ್ತು ಆ ಹೊತ್ತಿನಲ್ಲಿ ನೀರಿನ ಸೇವನೆ ಮಾಡದೆ ದೀರ್ಘ ಸಮಯ ಉಳಿಯುವ ಹೊತ್ತು. ಹಾಗಾಗಿ ನಿಮ್ಮ ದೇಹವು ನೀವು ಎಚ್ಚರಗೊಳ್ಳುವಾಗಲೇ ಜಲಸಂಚಯನ ಬೇಕಾಗುತ್ತದೆ. ಇದನ್ನು ಪರಿಹರಿಸಲು ನಿಂಬೆ ಮತ್ತು ಶುಂಠಿ ಮಿಶ್ರಣದ ನೀರು ಆ ಕಳೆದುಹೋದ ದ್ರವಗಳನ್ನು ಪುನಃಸ್ಥಾಪಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ಇದಲ್ಲದೆ, ಈ ಮಿಶ್ರಣದ ನೀರು ಜೀರ್ಣಕ್ರಿಯೆಗೆ ಸಹಕರಿಸುವುದು, ವಿಟಮಿನ್‌ಗಳ ಹೆಚ್ಚಿಸುವಿಕೆ ವ್ಯವಸ್ಥೆಯನ್ನು ಹೆಚ್ಚಿಸುವುದು, ಪಿತ್ತಜನಕಾಂಗ ಕ್ರಿಯೆಯನ್ನು ವರ್ಧಿಸುವುದು, ಕೆಫೀನ್ ದುಷ್ಪರಿಣಾಮ ತಪ್ಪಿಸಲು ಮತ್ತು ಹೆಚ್ಚು ಮುಖ್ಯವಾಗಿ ಹೆಚ್ಚಿನ ಆರೋಗ್ಯವನ್ನು ಸುಧಾರಿಸುತ್ತದೆ. 

Lemon & Ginger Detox

ಈ ಲೇಖನದಲ್ಲಿ ನಿಂಬೆ ಮತ್ತು ಶುಂಠಿ ಬಳಸಿ ತೂಕ ನಷ್ಟಕ್ಕೆ ಸ್ವಾಭಾವಿಕ ಪರಿಹಾರಕ್ಕಾಗಿ ಪಾಕವಿಧಾನವನ್ನು ನಾವು ಉಲ್ಲೇಖಿಸಿದ್ದೇವೆ. ತೂಕ ನಷ್ಟಕ್ಕೆ ಈ ಅತ್ಯುತ್ತಮ ಮನೆಯ ಪರಿಹಾರವನ್ನು ಹೇಗೆ ತಯಾರಿಸಬೇಕೆಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು

12 ಔನ್ಸ್ ನೀರು 2 ಸ್ಪೂನ್

ನಿಂಬೆ ರಸ ½ ಇಂಚಿನ ಶುಂಠಿ 

lime juice

ತಯಾರಿ

ಒಂದು ಜಾರಿನಲ್ಲಿ 12 ಔನ್ಸ್ ನೀರನ್ನು ತೆಗೆದುಕೊಳ‍್ಳಿ. ನಿಂಬೆ ರಸವನ್ನು ನೀರಿಗೆ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಬೆರೆಸಿ. ತುರಿದ ಶುಂಠಿಯನ್ನು ನಿಂಬೆ ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಕದಡಿರಿ.

ಈ ಗರಿಷ್ಠ ಪ್ರಯೋಜನಗಳನ್ನು ಪಡೆಯುವ ಸಲುವಾಗಿ, ನೀವು ಬೆಳಿಗ್ಗೆ ಏಳುತ್ತಿದ್ದಂತೆಯೇ ನೀವು ಅದನ್ನು ಕುಡಿಯಬೇಕು. ಈ ಪಾನೀಯ ಸೇವನೆಯಿಂದ ಹೆಚ್ಚುವರಿ ಶರೀರದ ತೂಕವನ್ನು ಕಡಿಮೆ ಮಾಡುವುದಲ್ಲದೆ ಶರೀರಕ್ಕೆ ಬೇಕಾಗಿರುವ ನೀರಿನಾಂಶ ಒದಗಿಸಿ ಆರೋಗ್ಯವಂತರಾಗಿ ಇರುವಿರಿ... ಈ ಸುಲಭ ನೈಸರ್ಗಿಕ ವಿಧಾನವನ್ನು ಅನುಸರಿಸಿರಿ.

English summary

Lemon & Ginger Detox Water For Weight Loss

What is the first thing that you drink in the morning after waking up? Its probably a glass of water and some people might say a cup of coffee. But what if we tell that there is a miracle drink that can aid with weight loss if drink it in the morning everyday. This drink can also provide you with tons of benefits as well.
Subscribe Newsletter