ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ ತೂಕವನ್ನು ಇಳಿಸಿ

By Divya Pandith
Subscribe to Boldsky

ತೂಕವನ್ನು ತ್ವಚರಿತವಾಗಿ ಇಳಿಸಲು ಸಮೃದ್ಧವಾದ ಪ್ರೋಟೀನ ಭರಿತ ಆಹಾರವನ್ನು ಸೇವಿಸಬೇಕು. ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪ್ರೋಟೀನ್ ಭರಿತ ಆಹಾರವನ್ನು ಅಳವಡಿಸಿಕೊಂಡರೆ ಕೊಬ್ಬು ತಾನಾಗಿಯೇ ಕರಗುತ್ತದೆ ಎನ್ನುವ ವಿಶೇಷ ವಿಚಾರಗಳನ್ನು ಇಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಅಲ್ಲದೆ ಸಮೃದ್ಧವಾದ ಸಸ್ಯಹಾರಿ ಪದಾರ್ಥಗಳು ತೂಕ ನಷ್ಟ ಮಾಡುವಲ್ಲಿ ವಿಶೇಷ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದನ್ನು ಪರಿಚಯಿಸಿಕೊಡುತ್ತದೆ.

ತೂಕ ನಷ್ಟಕ್ಕೆ ಒಳ್ಳೆಯ ಸಾಥ್ ನೀಡುವ ಆಹಾರ ಪದಾರ್ಥಗಳು ಭಾರತೀಯ ಆಹಾರ ಪದ್ಧತಿಯ ಪಟ್ಟಿಯಲ್ಲಿ ಬರುವ ಸಸ್ಯಹಾರಿ ಪದಾರ್ಥಗಳು. ಇದು ನಿಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶವನ್ನು ಒದಗಿಸುತ್ತದೆ. ಜೊತೆಗೆ ಅನಗತ್ಯ ಕೊಬ್ಬನ್ನು ಕರಗಿಸಿ, ನಿಮ್ಮ ವ್ಯಕ್ತಿತ್ವವು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ತೂಕ ನಷ್ಟಕ್ಕೆ ಕಾರಣವಾಗುವ ಪ್ರೋಟಿನ್ ಭರಿತ ಆಹಾರ ಸೇವನೆಯೊಂದಿಗೆ ಸಮೃದ್ಧವಾಗಿ ನೀರನ್ನು ಕುಡಿಯಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

ಭಾರತದ ಶ್ರೀಮಂತ ಪ್ರೋಟೀನ್‍ಯುಕ್ತ ಆಹಾರವು ಹೆರಳವಾದ ಫೈಬರ್ ಮತ್ತು ಖನಿಜಾಂಶಗಳನ್ನು ಒಳಗೊಂಡಿದೆ. ಇದು ಜೀರ್ಣಾಂಗ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದಕ್ಕೆ ದ್ರವವು ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ನಿಮಗೂ ನಿಮ್ಮ ದೇಹದಲ್ಲಿರುವ ನಿರುಪಯುಕ್ತ ಕೊಬ್ಬನ್ನು ಇಳಿಸಬೇಕು, ಸಮಾಜದಲ್ಲಿ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವರಂತೆ ಬಾಳಬೇಕೆಂಬ ಕನಸಿದ್ದರೆ ಈ ಆಹಾರಗಳನ್ನು ಸೇವಿಸಿ. ಸ್ವಲ್ಪ ದಿನದಲ್ಲೇ ನಿಮ್ಮ ದೇಹದಲ್ಲಿ ಉಂಟಾದ ಬದಲಾವಣೆಯನ್ನು ಗಮನಿಸಿ...

ಬೇಳೆ/ದಾಲ್

ಬೇಳೆ/ದಾಲ್

ಬೇಳೆಕಾಳುಗಳು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯಮಾಡುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುವ 10 ಕ್ಕಿಂತಲೂ ಹೆಚ್ಚು ವಿವಿಧ ಬಗೆಯ ಬೇಳೆ/ದಾಲ್‍ಗಳಿರುವುದು ವಿಶೇಷ. ಇವುಗಳನ್ನು ಸುಮಾರು 1/2 ಕಪ್ ಸೇವಿಸಿದರೆ ಪ್ರತಿ ದ್ರಾವಣ ಸುಮಾರು 4-9 ಗ್ರಾಂ ಪ್ರೋಟೀನ್‍ಅನ್ನು ಹೊಂದಿರುತ್ತದೆ. ಹಾಗಾಗಿ ಇವುಗಳನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಸಹ ತೂಕವನ್ನು ಬಹು ಬೇಗ ಇಳಿಸಬಹುದು.

ಮೊಸರು

ಮೊಸರು

ಮೊಸರು ಸಸ್ಯಹಾರಿಗಳ ಒಂದು ವಿಶೇಷ ಆಹಾರ ಪದಾರ್ಥ ಎನ್ನಬಹುದು. ಇದನ್ನು ಸೇವಿಸಲು ಯಾವುದೇ ವಯಸ್ಸು ಅಥವಾ ಆರೋಗ್ಯದ ಮಿತಿಯಿಲ್ಲ. ಇದರಲ್ಲಿ ಗಣನೀಯವಾದ ಔಷಧೀಯ ಗುಣಗಳಿವೆ. ಇದರ ಸೇವನೆಯು ದೇಹಕ್ಕೆ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ. ಇದರಲ್ಲಿ ಸುಮಾರು 11 ಗ್ರಾಂ ಪ್ರೋಟೀನ್ ಇರುವುದನ್ನು ಕಾಣಬಹುದು. ತೂಕ ನಷ್ಟಕ್ಕಾಗಿ ಇದನ್ನು ಅನ್ನದ ಜೊತೆ ಸೇವಿಸುವುದು ಅಥವಾ ಪಾನೀಯ ರೂಪದಲ್ಲೂ ಸಹ ಸೇವಿಸಬಹುದು.

ಹೆಸರು ಕಾಳು

ಹೆಸರು ಕಾಳು

ಹೆಸರು ಕಾಳು ದೇಹದ ತೂಕ ಇಳಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರ ಪದಾರ್ಥಗಳಲ್ಲಿ ಒಂದು. ಪ್ರೋಟೀನ್‍ನ್ನು ಸಮೃದ್ಧವಾಗಿ ಹೊಂದಿರುವ ಈ ಹೆಸರು ಕಾಳನ್ನು ಸಾರು, ಪಲ್ಯ, ಕೋಸಂಬರಿ ಅಥವಾ ಬೇಯಿಸಿದ ನೀರಿನ ರೂಪದಲ್ಲೂ ಸಹ ಸೇವಿಸಬಹುದು. ಇದರ ಸೇವನೆಯು ತೂಕ ನಷ್ಟ ಮಾಡುವಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುವುದು.

ಚೀಸ್/ಗಿಣ್ಣು

ಚೀಸ್/ಗಿಣ್ಣು

ಪ್ರೋಟೀನ್‍ಅನ್ನು ಸಮೃದ್ಧವಾಗಿ ಹೊಂದಿರುವ ಆಹಾರ ಪದಾರ್ಥಗಳಲ್ಲಿ ಚೀಸ್/ಗಿಣ್ಣು ಸಹ ಒಂದು. ಇದರ ಒಂದು ಬೌಲ್‍ಗೆ ಸುಮಾರು 18 ಗ್ರಾಂಪ್ರೋಟೀನ್ ಇರುತ್ತದೆ ಎನ್ನಲಾಗುತ್ತದೆ. ಕೆಲವರು ಇದನ್ನು ಸೇವಿಸಿದರೆ ತೂಕ ಹೆಚ್ಚಾಗುವುದು ಎನ್ನುವ ತಪ್ಪುಕಲ್ಪನೆಯನ್ನು ಹೊಂದಿದ್ದಾರೆ. ಇದನ್ನು ನಿಮ್ಮ ಸ್ಯಾಂಡ್ವಿಜ್‍ಗಳಿಗೆ ಬಳಸಿಕೊಂಡು ಸೇವಿಸಬಹುದು. ಇದು ಉತ್ತಮವಾಗಿ ಕಾರ್ಯ ನಿರ್ವಹಿಸುವುದು.

ಬಸಳೆ

ಬಸಳೆ

ಆರೋಗ್ಯಕ್ಕೆ ಉತ್ತಮ ಪೋಷಕಾಂಶವನ್ನು ಒದಗಿಸುವ ಎಲೆ ತರಕಾರಿಗಳಲ್ಲಿ ಬಸಳೆಯು ಒಂದು. ಸಮೃದ್ಧವಾದ ಪ್ರೋಟೀನ್ ಹೊಂದಿರುವ ಬಸಳೆಯು ತೂಕ ನಷ್ಟ ಮಾಡುವಲ್ಲಿ ಬಹಳ ಸಹಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರ ಒಂದು ಬೌಲ್ ಸೇವನೆಗೆ ಸುಮಾರು 2.9 ಗ್ರಾಂಗಳಷ್ಟು ಪ್ರೋಟೀನ್ ದೊರೆಯುತ್ತದೆ.

ಪನ್ನೀರ್

ಪನ್ನೀರ್

ಕಾಟೇಜ್ ಚೀಸ್ ಪಾನೀಯವನ್ನು ಭಾರತೀಯರು ಹೆಚ್ಚು ಪ್ರೀತಿಸುತ್ತಾರೆ. ಪನ್ನೀರಿನಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇರುವುದರಿಂದ ತೂಕ ನಷ್ಟಕ್ಕೆ ಬಹು ಉಪಯೋಗಿ ಎಂದು ಹೇಳಬಹುದು. ಕೆಲವರು ಇದನ್ನು ಸೇವಿಸಿದರೆ ತೂಕ ಹೆಚ್ಚುವುದು ಹಾಗೂ ದೇಹವು ಹೆಚ್ಚು ಉಷ್ಣತೆ ಪಡೆದುಕೊಳ್ಳುವುದು ಎನ್ನುವ ತಪ್ಪುಕಲ್ಪನೆಯನ್ನು ಹೊಂದಿದ್ದಾರೆ. ಇದನ್ನು ಕೆಲವು ಆಹಾರ ಪದಾರ್ಥಗಳೊಂದಿಗೆ ಬರೆಸಿ ಆಹಾರ ಪದಾರ್ಥವನ್ನು ಸವಿಯಬಹುದು. ಹೆಚ್ಚು ರುಚಿ ಹಾಗೂ ಆರೋಗ್ಯಕರವಾಗಿರುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಯು ಅಧಿಕ ಪ್ರಮಾಣದ ಜೀವಸತ್ವ, ಪ್ರೋಟೀನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿದೆ. ಬಾದಾಮಿಯಲ್ಲಿ ಸುಮಾರು 21 ಗ್ರಾಂ.ಗಳಷ್ಟು ಪ್ರೋಟೀನ್‍ಗಳನ್ನು ಒಳಗೊಂಡಿದೆ ಎಂದು ಹೇಳಬಹುದು. ಒಮ್ಮೆ ಇದರ ನಿಯಮಿತ ಸೇವನೆ ಮಾಡಲು ಪ್ರಾರಂಭಿಸಿದರೆ ತೂಕವ ನಷ್ಟವಾಗುವುದು.

ಕಿಡ್ನಿ ಬೀನ್ಸ್

ಕಿಡ್ನಿ ಬೀನ್ಸ್

ಪ್ರೋಟೀನ್ ಯುಕ್ತ ಆಹಾರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಆಹಾರ ಧಾನ್ಯಗಳಲ್ಲಿ ಕಿಡ್ನಿ ಬೀನ್ ಸಹ ಒಂದು. ಅಧಿಕ ಪ್ರೋಟೀನ್ ಹೊಂದಿರುವ ಕಿಡ್ನಿ ಬೀನ್ ಅಜೀರ್ಣವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದರ ಸೇವನೆ ಮಾಡಿದಾಗ ಅಧಿಕ ಪ್ರಮಾಣದ ನೀರನ್ನು ಸೇವಿಸಬೇಕು.

ಮೊಳಕೆ ಬಂದ ಕಾಳುಗಳು

ಮೊಳಕೆ ಬಂದ ಕಾಳುಗಳು

ಮೊಳಕೆ ಬಂದ ಕಾಳುಗಳಲ್ಲಿ ಪ್ರೋಟೀನ್ ಹೇರಳವಾಗಿರುತ್ತದೆ. ಒಂದು 100 ಗ್ರಾಂ. ಮೊಳಕೆ ಕಾಳುಗಳಲ್ಲಿ 4ಗ್ರಾಂ. ನಷ್ಟು ಪ್ರೋಟೀನ್ ಇರುತ್ತದೆ. ಇದು ಅಧಿಕ ಪ್ರಮಾಣದ ಕ್ಯಾಲೋರಿಯನ್ನು ನಷ್ಟಗೊಳಿಸುತ್ತದೆ. ಅಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯ ಪೋಷಕಾಂಶವು ದೇಹಕ್ಕೆ ಸೇರುತ್ತದೆ.

ಭಾರತೀಯ ಶೈಲಿಯ ಸಾಂಬರ್ ಪದಾರ್ಥ

ಭಾರತೀಯ ಶೈಲಿಯ ಸಾಂಬರ್ ಪದಾರ್ಥ

ಪ್ರೋಟೀನ್ ಭರಿತವಾಗಿರುವ ಆಹಾರ ಪದಾರ್ಥಗಳಲ್ಲಿ ಸಾಂಬರ್ ಪದಾರ್ಥ ಸಹ ಒಂದು. ಇದು ಭಾರತೀಯ ಸಾಂಪ್ರದಾಯಿಕ ಅಡುಗೆಯಲ್ಲಿ ಒಂದು. ಅಧಿಕ ಪ್ರಮಾಣದ ಕ್ಯಾಲೋರಿ ನಷ್ಟ ಮಾಡಲು ವಾರದಲ್ಲಿ 2 ಬಾರಿ ಸಾಂಬಾರ್ ಊಟ ಮಾಡಬೇಕು ಎನ್ನಲಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    High Protein Vegetarian Meal Plan for Fat Loss

    Proteins is one of the many things that is necessary for you to have in abundance in order to lose weight quickly. Boldsky shares with you a handful of protein-rich foods for weight loss to add to your daily diet. The list ofprotein foods for weight loss are Indian based and completely vegetarian. If you need to burn calories fast, these weight loss foods will surely help you quicken the process.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more