ಆರೋಗ್ಯಕಾರಿ ಜೀವನ ಶೈಲಿಗೆ ದಿನನಿತ್ಯ 15 ನಿಮಿಷ ನಡಿಗೆ!

By Manu
Subscribe to Boldsky

ಜೀವನಶೈಲಿ ಸರಿಯಾಗಿಲ್ಲದೆ ಇರುವುದು, ಆಹಾರಶೈಲಿ ಇತ್ಯಾದಿಗಳಿಂದಾಗಿ ಪ್ರತಿಯೊಬ್ಬರೂ ಏನಾದರೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇದ್ದಾರೆ. ಆದರೆ ಅನಾರೋಗ್ಯ ನಮ್ಮ ದೇಹವನ್ನು ಭಾದಿಸುವ ಮೊದಲೇ ಅದನ್ನು ತಡೆಗಟ್ಟಿದರೆ ಮುಂದೆ ಆಗಬಹುದಾದ ಅಪಾಯವನ್ನು ತಡೆಯಬಹುದು. ಆದರೆ ಸಮಯದ ಅಭಾವದಿಂದಾಗಿ ಪ್ರತಿನಿತ್ಯ ವ್ಯಾಯಾಮ ಮಾಡಲು ಸಮಯವಿರುವುದಿಲ್ಲ. ಮುಂಜಾನೆಯ ನಡಿಗೆ, ಆರೋಗ್ಯದ ಕಡೆಗೆ...! 

ಹೆಚ್ಚಿನವರಿಗೆ ಸರಿಯಾಗಿ ಊಟ ಮಾಡಲು ಕೂಡ ಸಮಯವಿಲ್ಲದಂತಹ ಪರಿಸ್ಥಿತಿ ಇರುತ್ತದೆ. ಆದರೆ ಇಂತಹ ಸಮಸ್ಯೆಯವರು ಒಂದು ದಿನ ದೊಡ್ಡ ಸಮಸ್ಯೆಗೆ ಗುರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಡಿಗೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಎಷ್ಟು ದೂರ ನಡೆಯಬೇಕು ಅಥವಾ ಎಷ್ಟು ಸಮಯ ನಡೆಯಬೇಕು ಎನ್ನುವ ಪ್ರಶ್ನೆ ಬರುವುದು ಸಹಜವಾಗಿದೆ.ಆರೋಗ್ಯದ ವೃದ್ಧಿಗೆ-ಮುಂಜಾನೆಯ 30 ನಿಮಿಷಗಳ ನಡಿಗೆ!

ಆದರೆ ಪ್ರತಿದಿನ ಕೇವಲ 15 ನಿಮಿಷ ನಡೆದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಬಹುದು. ನಡಿಗೆಯಿಂದ ಆಗಬಹುದಾದ ಕೆಲವೊಂದು ಆರೋಗ್ಯ ಲಾಭಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.... 

ಸ್ನಾಯುಗಳ ಆರೋಗ್ಯಕ್ಕೆ

ಸ್ನಾಯುಗಳ ಆರೋಗ್ಯಕ್ಕೆ

ನಡೆಯುವುದರಿಂದ ಸ್ನಾಯುಗಳು ಹಾಗೂ ಮೂಳೆಗಳು ಬಲಗೊಳ್ಳುವುದು. ಪ್ರತೀದಿನ 15 ನಿಮಿಷ ನಡೆಯುವುದರಿಂದ ಮೂಳೆಗಳು ಅದರಲ್ಲೂ ಕಾಲನ್ನು ಬಲಶಾಲಿಯಾಗಿಸುವುದು.

ಮನಸ್ಥಿತಿ ಉತ್ತಮಪಡಿಸುವುದು

ಮನಸ್ಥಿತಿ ಉತ್ತಮಪಡಿಸುವುದು

ನಡಿಗೆಯಿಂದ ಮೆದುಳಿನಲ್ಲಿ ಎಂಡ್ರೊಫಿನ್ಸ್ ಎನ್ನುವ ರಾಸಾಯನಿಕವು ಹೆಚ್ಚಾಗುವುದು. ಇದರಿಂದ ಮನಸ್ಥಿತಿಯು ಉತ್ತಮವಾಗುವುದು.

ರಕ್ತದೊತ್ತಡ ಕಡಿಮೆಯಾಗುವುದು

ರಕ್ತದೊತ್ತಡ ಕಡಿಮೆಯಾಗುವುದು

ರಕ್ತದೊತ್ತಡದ ಸಮಸ್ಯೆ ಎದುರಿಸುತ್ತಾ ಇದ್ದರೆ ನಡಿಗೆಗಿಂತ ಉತ್ತಮವಾದ ಮದ್ದು ಬೇರೊಂದಿಲ್ಲ. 15 ನಿಮಿಷದ ನಡಿಗೆ ರಕ್ತ ಪರಿಚಲನೆಯನ್ನು ಉತ್ತಮಪಡಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುವುದು.

ಮಧುಮೇಹ ತಡೆಯುವುದು

ಮಧುಮೇಹ ತಡೆಯುವುದು

ನಡಿಗೆಯಿಂದ ದೇಹವು ಇನ್ಸುಲಿನ್ ಬಳಕೆ ಮಾಡುವ ಕ್ಷಮತೆಯನ್ನು ಹೆಚ್ಚಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ದಿನಾಲೂ 15 ನಿಮಿಷ ಕಾಲ ನಡೆದರೆ ಮಧುಮೇಹ ಬರದಂತೆ ತಡೆಯಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ.

ಹೃದಯದ ಕಾಯಿಲೆಯ ಅಪಾಯವಿಲ್ಲ

ಹೃದಯದ ಕಾಯಿಲೆಯ ಅಪಾಯವಿಲ್ಲ

ಪ್ರತಿನಿತ್ಯ ನಡಿಗೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಿ ದೇಹದಲ್ಲಿನ ರಕ್ತದೊತ್ತಡ ಮಟ್ಟವು ನಿಯಂತ್ರಣದಲ್ಲಿ ಇರುವುದು. ಇದರಿಂದ ಹೃದಯದ ಕಾಯಿಲೆಯ ಅಪಾಯ ಕಡಿಮೆಯಾಗುವುದು.

ಹೃದಯದ ಕಾಯಿಲೆಯ ಅಪಾಯವಿಲ್ಲ

ಹೃದಯದ ಕಾಯಿಲೆಯ ಅಪಾಯವಿಲ್ಲ

ತೂಕ ಏರಿಸಿಕೊಂಡಿರುವವರು ಪ್ರತಿದಿನ ಕೇವಲ 15 ನಿಮಿಷ ನಡೆದರೆ ಕ್ಯಾಲರಿ ದಹಿನಗೊಂಡು ತೂಕ ಕಳೆದುಕೊಳ್ಳಲು ನೆರವಾಗುವುದು. ತೂಕ ಕಳೆದುಕೊಳ್ಳಲು ಬಯಸುತ್ತಾ ಇದ್ದರೆ ನೀವು ಖಂಡಿತವಾಗಿಯೂ ದಿನಾ ನಡೆಯಿರಿ.

ವಿಟಮಿನ್ ಡಿ ಹೆಚ್ಚಳ

ವಿಟಮಿನ್ ಡಿ ಹೆಚ್ಚಳ

ಸೂರ್ಯ ಮೂಡಿದ ಬಳಿಕ 15 ನಿಮಿಷ ಕಾಲ ನಡಿಗೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುವುದು. ಇದರಿಂದ ಮೂಳೆಗಳು ಹಾಗೂ ಗಂಟು ಆರೋಗ್ಯವಾಗುವುದು.

ರಕ್ತ ಸಂಚಾರ ಸುಗಮಗೊಳಿಸುವುದು

ರಕ್ತ ಸಂಚಾರ ಸುಗಮಗೊಳಿಸುವುದು

ರಕ್ತಸಂಚಾರಕ್ಕೆ ಅಡ್ಡಿಯಾದರೆ ಅದರಿಂದ ಸಂಪೂರ್ಣ ದೇಹದ ಮೇಲೆ ಪರಿಣಾಮ ಉಂಟಾಗುವುದು. ನಡಿಗೆಯಿಂದ ರಕ್ತಸಂಚಾರವು ಸುಗಮವಾಗಿ ರಕ್ತ ತಡೆಯನ್ನು ನಿವಾರಿಸುವುದು. ಕೇವಲ 15 ನಿಮಿಷದ ನಡಿಗೆ ಆರೋಗ್ಯವನ್ನು ಕಾಪಾಡುವುದು.

 
For Quick Alerts
ALLOW NOTIFICATIONS
For Daily Alerts

    English summary

    health-benefits-of-walking-everyday 15 minutes

    Walking every day for about 15 minutes can have several positive impacts on our health. Read on to know more about it.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more