For Quick Alerts
ALLOW NOTIFICATIONS  
For Daily Alerts

ಆರೋಗ್ಯದ ವೃದ್ಧಿಗೆ-ಮುಂಜಾನೆಯ 30 ನಿಮಿಷಗಳ ನಡಿಗೆ!

By Manu
|

ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯವೇ ಭಾಗ್ಯ ಎಂಬುದು ನಮ್ಮ ಮೂಲಮಂತ್ರವಾಗಿರಬೇಕು. ದೈನಂದಿನ ಬಿಡುವಿಲ್ಲದ ಕೆಲಸ, ಸಿಕ್ಕಾಪಟ್ಟೆ ತಿನ್ನುವುದು, ವಿಶ್ರಾಂತಿ ರಹಿತ ಜೀವನದಿಂದ ನಮ್ಮ ಸುಂದರ ಆರೋಗ್ಯ ನಮ್ಮನ್ನು ಬಿಟ್ಟು ಕಣ್ಮರೆಯಾಗುತ್ತಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ನಮ್ಮ ಜೀವನ ಶೈಲಿಯನ್ನು ನಾವಾಗಿಯೇ ಸುಧಾರಿಸಿಕೊಂಡಲ್ಲಿ ಮಾತ್ರವೇ ಆರೋಗ್ಯಪೂರ್ಣ ಜೀವನ ನಮ್ಮದಾಗುತ್ತದೆ.

ನಿಮ್ಮ ಜೀವನದಲ್ಲಿ ನೀವು ನಿಯಮವನ್ನು ಅನುಸರಿಸುತ್ತಿಲ್ಲ ಎಂದಾದಲ್ಲಿ ನೀವು ಕೊಬ್ಬು, ಸ್ಥೂಲಕಾಯತೆ, ಸ್ನಾಯು ಸಂಬಂಧಿ ರೋಗಗಳು, ಆಸಿಡಿಟಿ ಮೊದಲಾದ ನಿತ್ಯ ಬೇನೆಗಳಿಗೆ ಒಳಗಾಗುವುದು ಖಂಡಿತ. ಹಾಗಿದ್ದರೆ ಈ ನಿತ್ಯ ಬೇನೆಗಳು ನಿಮ್ಮನ್ನು ಕಾಡದೇ ನೀವು ಆರೋಗ್ಯಕರವಾಗಿ ಜೀವನ ನಡೆಸಬೇಕು ಅಂತೆಯೇ ನೆಮ್ಮದಿಯ ತೃಪ್ತಿ ನಿಮ್ಮ ಮುಖದಲ್ಲಿ ಮೂಡುತ್ತಿರಬೇಕು ಎಂದಾದಲ್ಲಿ ವ್ಯಾಯಮ, ನಡಿಗೆ, ಓಟ, ಯೋಗ ಮೊದಲಾದ ಆರೋಗ್ಯ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.

ಬೆಳಗ್ಗೆ ಬೇಗನೇ ಏಳುವುದನ್ನು ರೂಢಿಸಿಕೊಂಡು ಮುಂಜಾನೆಯ ಪ್ರಶಾಂತತೆಯನ್ನು ದೇಹಕ್ಕೆ ಸೇರುವಂತೆ ಮಾಡಿದಲ್ಲಿ ಚೈತನ್ಯದಿಂದ ಪುಟಿದೇಳುವ ಉತ್ಸಾಹದ ಬುಗ್ಗೆ ನೀವಾಗುವಿರಿ. ನಿಮ್ಮ ಮನಸ್ಸಿನಲ್ಲಿಯೇ ನೀವೊಂದು ಲಕ್ಷ್ಯವನ್ನು ಇರಿಸಿಕೊಂಡರೆ ಮುಂಜಾನೆಯ ನಡಿಗೆ ನಿಮಗೆ ಆಲಸ್ಯವನ್ನುಂಟು ಮಾಡುವುದಿಲ್ಲ. ಮುಂಜಾನೆಯ ನಡಿಗೆ, ಆರೋಗ್ಯದ ಕಡೆಗೆ...!

ಬದಲಿಗೆ ನಡಿಗೆ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಎಂಬ ಭಾವನೆ ನಿಮ್ಮನ್ನು ಕಾಡುತ್ತದೆ. ಆದ್ದರಿಂದ ವಾಕ್ ಎಂದರೆ ವಾಕರಿಗೆ ಬೇಡ. ಪ್ರಾತಃಕಾಲದಲ್ಲಿಯೇ ಎದ್ದು ಲಿಂಬೆ ರಸ ಬೆರೆಸಿದ ಬಿಸಿ ನೀರನ್ನು ಕುಡಿದು ನಿಮ್ಮನ್ನು ಆಹ್ಲಾದವಾಗಿರಿಸಿಕೊಳ್ಳಿ ಇದರಿಂದ ನಿದ್ದೆಯ ಮಬ್ಬು ಹೊರಟು ಹೋಗಿ ಚೈತನ್ಯ ನಿಮ್ಮಲ್ಲಿ ಸೇರಿಕೊಳ್ಳುತ್ತದೆ. ಬನ್ನಿ ನಡಿಗೆಯ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ಆರೋಗ್ಯವನ್ನು ವೃದ್ಧಿಸಲು

ಆರೋಗ್ಯವನ್ನು ವೃದ್ಧಿಸಲು

ನಿಯಮಿತ ವಾಕಿಂಗ್ ಮಾಡುವುದು ಒಂದು ಏರೋಬಿಕ್ ವ್ಯಾಯಮವಾಗಿದ್ದು ಅದು ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುವುದು, ದೈಹಿಕವಾಗಿ ಯೋಗ್ಯವಾಗಿರುವಂತೆ ಮಾಡುವುದು ಮತ್ತು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯಮಾಡುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು

ವಾಕಿಂಗ್ ಶಾರೀರಿಕ ಚಟುವಟಿಕೆಯಂತೆ ರೋಗಿಗಳಲ್ಲಿ ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ಅಧಿಕ ರಕ್ತದೊತ್ತಡ ಒಂದು "ಮೂಕ ಕೊಲೆಗಾರ"ನಾಗಿರುವುದರಿಂದ ಈ ಸಮಸ್ಯೆಯಿಂದ ದೂರವಿರಲು ನಿಯಮಿತವಾಗಿ ವಾಕಿಂಗ್ ಮಾಡಲೇ ಬೇಕು. ವಾಕಿಂಗ್ ರಕ್ತಸಂಚಾರವನ್ನು ಉತ್ತಮಗೊಳಿಸಲು ಸಹಾಯಮಾಡುವುದಲ್ಲದೆ ಲಭ್ಯವಿರುವ ಆಮ್ಲಜನಕ (Oxygen) ವನ್ನು ಸ್ನಾಯುಗಳಿಗೆ ಒದಗಿಸುವುದರಿಂದ ರಕ್ತನಾಳಗಳಿಗೆ ಹೆಚ್ಚು ವಿಶ್ರಾಂತಿ ದೊರೆಯುತ್ತದೆ. ಹಾಗೂ ರಕ್ತದೊತ್ತಡವು ಸುಧಾರಿಸುತ್ತದೆ.

ಮಧುಮೇಹ ರೋಗದಿಂದ ನಿಯಂತ್ರಿಸಲು

ಮಧುಮೇಹ ರೋಗದಿಂದ ನಿಯಂತ್ರಿಸಲು

ಮಧುಮೇಹದಿಂದ ಬಳಲುತ್ತಿರುವವರು ನಿಯಮಿತ ವಾಕಿಂಗ್‍‌ನಿಂದ ಬಿ.ಎಮ್.ಐ.(Body and Mass Index) ಮಟ್ಟವನ್ನು ಸುಧಾರಿಸಲು ಸಹಾಯಮಾಡುತ್ತದೆ ಮತ್ತು ದೇಹದಲ್ಲಿರುವ ಇನ್ಸುಲಿನ್ ಸರಿಯಾದ ಮಟ್ಟದಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ. ಇದರಿಂದ ಇನ್ಸುಲಿನ್ ಸಮರ್ಥವಾಗಿ ಬಳಕೆಯಾಗುವುದಲ್ಲದೆ ಸಕ್ಕರೆಯ ಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ.

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ

ಗರ್ಭಾವಸ್ಥೆಯಲ್ಲಿ ವಾಕಿಂಗ್ ಮಾಡಿದರೆ ಆಯಾಸ ಮತ್ತು ಇತರ ಗರ್ಭಾವಸ್ಥೆಗೆ ಸಬಂಧಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ಸುಲಭವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಮತ್ತು ಗರ್ಭಧಾರಣೆಯ ಸಮಯದಲ್ಲಿ ಬರಬಹುದಾದ ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ. ವಾಕಿಂಗ್ ಮಾಡುವುದರಿಂದ ಗರ್ಭಪಾತವನ್ನು ತಡೆಯಬಹುದು

ಕರಾರುವಾಕ್ ವಾಕಿಂಗ್‌

ಕರಾರುವಾಕ್ ವಾಕಿಂಗ್‌

ದೇಹಾರೋಗ್ಯವನ್ನು ಕ್ರಮಪಡಿಸಬಹುದು ಕರಾರುವಾಕ್ ವಾಕಿಂಗ್‌‌ನಿಂದ ನಿಮ್ಮ ಶರೀರದ ಆಕಾರ ಮತ್ತು ಕಾಲುಗಳ ಆಕಾರಗಳನ್ನು ಉತ್ತಮಗೊಳಿಸಲು ಸಹಾಯವಾಗುತ್ತದೆ. ಹಾಗೂ ಇದು ನಿಮ್ಮ ಮೊಣಕಾಲುಗಳು, ಕುಳಿತುಕೊಳ್ಳುವ ನಿಮ್ಮ ಕೆಳಭಾಗದ ಮೂಳೆಗಳು, ಮಂಡಿಯ ಹಿಂಭಾಗದಲ್ಲಿರುವ ಸ್ನಾಯು ರಜ್ಜುಗಳು ಇವುಗಳಿಗೆ ಅತ್ಯಂತ ಸಹಕಾರ ನೀಡಿ ನಿಮ್ಮ ನಡಿಗೆಯ ಘನತೆಯನ್ನು ಹೆಚ್ಚುತ್ತದೆ. ಆದಾಗ್ಯೂ ನೇರ ಮತ್ತು ನೇರ ನಡಿಗೆ ಸಹ ನಿಮ್ಮ ಕಿಬ್ಬೊಟ್ಟೆಗೆ ಸಹಾಯವಾಗುವುದಲ್ಲದೆ ಸೊಂಟ ನೆಟ್ಟಗೆ ಇರುವುದಕ್ಕೆ ಸಹಾಯಮಾಡುತ್ತದೆ.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು

ವಾಕಿಂಗ್‌ನಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಲು ಸಹಾಯವಾಗುದಲ್ಲದೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ವಾಕಿಂಗ್ ಮಾಡುವುದರಿಂದ ದಿನಕ್ಕೆ ಸುಮಾರು 300 ಕ್ಯಾಲೋರಿ ಸುಟ್ಟುಹಾಕುವುದಲ್ಲದೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಲು ಸಹಾಯಮಾಡುತ್ತದೆ.


English summary

Top benefits of walking 30 minutes a day in kannada

It might sound too good to be true, but simply walking can help you reach the recommended level of physical activity of 30 minutes, a day of moderate exercise. Regular walking protects you against a number of illnesses and can be an efficient way to get from A to B. You can easily build walks into a busy lifestyle and you can do it pretty much anywhere, at any time.
Story first published: Monday, November 23, 2015, 16:53 [IST]
X
Desktop Bottom Promotion