For Quick Alerts
ALLOW NOTIFICATIONS  
For Daily Alerts

ಮುಂಜಾನೆಯ ನಡಿಗೆ, ಆರೋಗ್ಯದ ಕಡೆಗೆ...!

By Manu
|

ಸುಖವಾದ ನಿದ್ದೆ ಎಂದರೇನು ಎಂಬ ಪ್ರಶ್ನೆಗೆ ಹಲವರು ವಿವಿಧ ರೀತಿಯ ಉತ್ತರ ನೀಡುತ್ತಾರೆ. ಆದರೆ ಬಹುತೇಕ ಜನರಿಂದ ಬರುವ ಉತ್ತರ 'ಮೈತುಂಬಾ ಹೊದ್ದುಕೊಂಡು ಬೆಳಿಗ್ಗೆ ತಡವಾಗಿ ಏಳುವುದು' ಏಕೆಂದರೆ ಮುಂಜಾನೆ ಏಳುವ ಕೆಲಸ ಕೇವಲ ಕುಂಬಾರಣ್ಣನ ಕೆಲಸ ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡನ ಹಾರ್ಯಾಡಿ ಮಣ್ಣಾ ತುಳಿದಾನ ಹಾಡು ನೆನಪಾಯಿತೇ?

ವಾಸ್ತವವಾಗಿ ನಿಸರ್ಗ ನಮ್ಮನ್ನು ಬೇಗನೇ ಮಲಗಿ ಬೇಗನೇ ಏಳಲು ಹೇಳುತ್ತದೆ. ಜಗತ್ತಿನ ಹೆಚ್ಚಿನ ಧರ್ಮಗಳೂ ಈ ನಿಟ್ಟಿನಲ್ಲಿ ಬೆಳಿಗ್ಗೆ ಬೇಗನೇ ಎದ್ದು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಹೇಳುತ್ತವೆ. ಇಂದು ನಾಗರಿಕತೆಯ ಉತ್ತುಂಗದಲ್ಲಿರುವ ನಾವು ನಿಸರ್ಗ ನೀಡಿದ ಈ ನಿಯಮಗಳನ್ನು ಸುಲಭವಾಗಿ ಮುರಿಯುತ್ತಿದ್ದೇವೆ.

ತಡರಾತ್ರಿಯವರೆಗೆ ಎಚ್ಚರಿದ್ದು ಸೂರ್ಯೋದಯವನ್ನೇ ಕಾಣದ ನಮಗೆ ಆರೋಗ್ಯವನ್ನು ಪಡೆಯುವುದು ಜಿಮ್‌ನಲ್ಲಿ ವ್ಯಾಯಮ ಮಾಡುವ ಮೂಲಕ ಎಂಬ ನಂಬಿಕೆ ಬೆಳೆದುಬಿಟ್ಟಿದೆ. ಆದರೆ ನಿಜವಾದ ಆರೋಗ್ಯವಂತರು ನಿಸರ್ಗದೊಡನೆ ನಡೆಯುತ್ತಾರೆ. ಮುಂಜಾನೆದ್ದು ಸೂರ್ಯೋದಯದ ಹೊತ್ತಿನಲ್ಲಿ ನಡೆಯುವ ನಡಿಗೆಯೂ ಆರೋಗ್ಯಕರ ಮತ್ತು ಇಡಿಯ ದೇಹಕ್ಕೆ ವ್ಯಾಯಮ ಮತ್ತು ಮನಸ್ಸಿಗೆ ಮುದ ನೀಡುವ ಚಟುವಟಿಕೆಯಾಗಿದೆ. ಮುಂಜಾನೆಯ ನಡಿಗೆಯನ್ನು ನಮ್ಮ ಹಿರಿಯರು ಅನುಸರಿಸುತ್ತಾ ಬಂದಿದ್ದು ಶತಾಯುಶಿಗಳಾದವರು ನಿತ್ಯ ಜಪಿಸುವ ಮಂತ್ರವಾಗಿದೆ. ನಡುಗೆಯೇನು ಸಾಮಾನ್ಯ ಅಂದುಕೊಂಡಿರಾ?

ಈ ನಡಿಗೆ, ಹೆಚ್ಚಿರುವ ತೂಕವನ್ನು ಇಳಿಸಿ ಆರೋಗ್ಯವನ್ನು ವೃದ್ಧಿಸುತ್ತದೆ. ಮುಂಜಾನೆಯ ನಡಿಗೆ ದಿನವಿಡೀ ನಿಮ್ಮ ಮನಸ್ಸನ್ನು ಪ್ರಫುಲ್ಲವಾಗಿರಿಸಿ ದಿನದ ಚಟುವಟಿಕೆಗಳು ಸುಲಭವಾಗಿ ನಡೆಯುವಂತಾಗಲು ಸಹಕರಿಸುತ್ತದೆ. ಬನ್ನಿ ಮುಂಜಾನೆ ವಾಕಿಂಗ್ ಮಾಡುವುದರ ಸದುಪಯೋಗಗಳನ್ನು ಅರಿತರೆ ಮುಂಜಾನೆ ಹೊದ್ದು ಮಲಗುವುದರಿಂದ ಗಳಿಸಿಕೊಳ್ಳುವ ಸುಖಕ್ಕಿಂತ ಕಳೆದುಕೊಳ್ಳುವ ಆರೋಗ್ಯ ಆತಂಕ ಮೂಡಿಸುವುದರಿಂದ ನಾಳೆಯಿಂದಲೇ ನಡಿಗೆಗೆ ಮುಂದಾಗುವುದು ಖಚಿತ...

ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ನೆರವಾಗುತ್ತದೆ

ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ನೆರವಾಗುತ್ತದೆ

ಇಂದಿನ ಜೀವನದಲ್ಲಿ ನಮಗೆ ಆಹಾರಕ್ಕಾಗಿ ಕಷ್ಟ ಪಡಬೇಕಿಲ್ಲ. ಆಹಾರ ನಮಗೆ ಸಿದ್ಧರೂಪದಲ್ಲಿ ಸುಲಭವಾಗಿ ಸಿಗುತ್ತಿದೆ. ಆಧುನಿಕ ಉಪಕರಣಗಳು ಅಡುಗೆ ಕೆಲಸವನ್ನು ಸುಲಭವಾಗಿಸಿವೆ. ಆದರೆ ದೇಹಕ್ಕೆ ಇದೆಲ್ಲಾ ಗೊತ್ತಿಲ್ಲ. ಅದಕ್ಕೆ ಗೊತ್ತಿರುವುದು ಆಹಾರವನ್ನು ಕರಗಿಸಿ ಕೊಬ್ಬಿನ ರೂಪದಲ್ಲಿ ಶೇಖರಿಸುವುದು ಮಾತ್ರ. ಚಟುವಟಿಕೆ ಕಡಿಮೆಯಾದರೆ ಆಹಾರದ ಮೂಲಕ ಲಭ್ಯವಾದ ಕ್ಯಾಲೋರಿಗಳು ಬಳಕೆಯಾಗದೇ ಕೊಬ್ಬಿನ ಅಂಶ ಹೆಚ್ಚುತ್ತಾ ಹೋಗುತ್ತದೆ. ಬೆಳಗ್ಗಿನ ನಡಿಗೆಯಿಂದ (ಸುಮಾರು ಅರ್ಧಗಂಟೆಯಾದರೂ ನಡೆಯಲೇ ಬೇಕು, ಇಲ್ಲದಿದ್ದರೆ ಸಾಲದು) ಹೃದಯ ಬಡಿತ ಕೊಂಚ ಹೆಚ್ಚುವುದರಿಂದ ಹೆಚ್ಚುವರಿ ಕ್ಯಾಲೋರಿಗಳು ಬಳಕೆಯಾಗಿ ಕೊಬ್ಬು ಸಂಗ್ರಹವಾಗುವುದರಿಂದ ಕಾಪಾಡುತ್ತವೆ. ಅಲ್ಲದೇ ನಡಿಗೆ ಅತ್ಯಂತ ಸುಲಭವಾದ ಯಾವುದೇ ವಯಸ್ಸಿನವರು ಮಾಡಬಹುದಾದ ವ್ಯಾಯಮವಾಗಿದೆ.

ಮಧುಮೇಹಿಗಳಿಗೆ ಅತ್ಯತ್ತಮವಾದ ವ್ಯಾಯಮ

ಮಧುಮೇಹಿಗಳಿಗೆ ಅತ್ಯತ್ತಮವಾದ ವ್ಯಾಯಮ

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ನಡಿಗೆ ಮಧುಮೇಹಿಗಳಿಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸೂಕ್ತ ಮಿತಿಯಲ್ಲಿಡಲು ನಡಿಗೆ ಅತ್ಯುತ್ತಮವಾಗಿದೆ. ನಿಯಮಿತ ನಡಿಗೆಯಿಂದ ಮಧುಮೇಹ ನಿಯಂತ್ರಣದಲ್ಲಿರುವುದರಿಂದ ವೈದ್ಯರು ಮಧುಮೇಹಿಗಳಿಗೆ ನಡಿಗೆಯನ್ನೇ ಶಿಫಾರಸ್ಸು ಮಾಡುತ್ತಾರೆ. ಆದರೆ ಈ ನಡಿಗೆ ಬೆಳಗ್ಗಿನ ಹೊತ್ತಿನಲ್ಲಿದ್ದರೆ ಅತ್ಯುತ್ತಮವಾಗಿದೆ.

ರಕ್ತಸಂಚಾರವನ್ನು ಹೆಚ್ಚಿಸುತ್ತದೆ

ರಕ್ತಸಂಚಾರವನ್ನು ಹೆಚ್ಚಿಸುತ್ತದೆ

ರಾತ್ರಿ ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಅನೈಚ್ಛಿಕ ಕಾರ್ಯಗಳು ಜರುಗುವುದರಿಂದ ಬಹಳಷ್ಟು ಐಚ್ಛಿಕ ಅಂಗಗಳಿಗೆ (ಸ್ನಾಯುಗಳು ಮೊದಲಾದವು) ರಕ್ತ ಪರಿಚಲನೆ ಅತಿ ಕಡಿಮೆ ಇರುತ್ತದೆ. ಬೆಳಗ್ಗೆದ್ದು ಪ್ರಾತಃವಿಧಿಗಳನ್ನು ಮುಗಿಸಿದ ಬಳಿಕ ಕೇವಲ ದ್ರವಾಹಾರವನ್ನು ಸೇವಿಸಿ ನಡೆಯುವುದರಿಂದ ದೇಹದ ಎಲ್ಲಾ ಅಂಗಗಳಿಗೆ ಪೂರ್ಣಪ್ರಮಾಣದ ರಕ್ತಸಂಚಾರ ಲಭ್ಯವಾಗುತ್ತದೆ. ನಿಯಮಿತ ನಡಿಗೆಯಿಂದ ದೇಹದ ಎಲ್ಲಾ ಭಾಗಗಳಿಗೆ ಸಮರ್ಪಕವಾದ ಪ್ರಮಾಣದಲ್ಲಿ ರಕ್ತಸಂಚಾರದ ಮೂಲಕ ಪೋಷಕಾಂಶಗಳು ಲಭ್ಯವಾಗುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಮುಖ್ಯವಾಗಿ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ದೇಹದಾರ್ಢ್ಯತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ

ದೇಹದಾರ್ಢ್ಯತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳುವುದು ಎಷ್ಟು ಕಷ್ಟವೋ, ಅದಕ್ಕಿಂತ ಕಷ್ಟವಾದುದು ಇಳಿದ ತೂಕವನ್ನು ಅಲ್ಲೇ ಉಳಿಸಿಕೊಳ್ಳುವುದು. ಬೆಳಗ್ಗಿನ ನಡಿಗೆ ಈ ಕಾರ್ಯವನ್ನು ಸುಲಭವಾಗಿಸುತ್ತದೆ. ಮುಖ್ಯವಾಗಿ ಸೊಂಟದ ಸುತ್ತ ಸಂಗ್ರಹವಾಗುವ ಕೊಬ್ಬನ್ನು ತಡೆಯುತ್ತದೆ.

ಒಟ್ಟಾರೆ ಆರೋಗ್ಯ ವೃದ್ಧಿಸುತ್ತದೆ

ಒಟ್ಟಾರೆ ಆರೋಗ್ಯ ವೃದ್ಧಿಸುತ್ತದೆ

ಬೆಳಗ್ಗಿನ ವ್ಯಾಯಾಮದಿಂದ ಇಡಿಯ ದೇಹಕ್ಕೆ ವ್ಯಾಯಾಮ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಸೂರ್ಯನ ಬೆಳಗ್ಗಿನ ಕಿರಣಗಳು ದೇಹಕ್ಕೆ ಉತ್ತಮ ಎಂದು ಆಯುರ್ವೇದ ಹೇಳುತ್ತದೆ. ಹಕ್ಕಿಗಳ ಚಿಲಿಪಿಲಿ, ತಂಗಾಳಿ ಮೊದಲಾದವು ಮನಸ್ಸನ್ನು ಪ್ರಫುಲ್ಲವಾಗಿಸುತ್ತವೆ. ಒಟ್ಟಾರೆಯಾಗಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ವೃದ್ಧಿಸುತ್ತದೆ.

English summary

Benefits of Morning Walk You Should Know

If there’s one healthy habit you must keep, it’s walking regularly in the morning. The benefits of morning walk are numerous and every person who does it will attest to how it keeps them physically, emotionally and mentally healthy. If you are not yet into the habit of walking in the morning, read this article to learn more about its benefits.
Story first published: Tuesday, November 3, 2015, 21:57 [IST]
X
Desktop Bottom Promotion