For Quick Alerts
ALLOW NOTIFICATIONS  
For Daily Alerts

  ತೂಕ ಇಳಿಸಬೇಕೆಂದಿದ್ದರೆ ಈ ಆಹಾರವನ್ನು ಸೇವಿಸಲೇಬೇಡಿ

  By Arshad
  |

  ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಇದರ ಅರಿಮೆಯನ್ನು ತಿಳಿಸುವ ನೂರಾರು ಕಾರ್ಯಕ್ರಮಗಳು ಸುತ್ತ ಮುತ್ತ ನಡೆಯುತ್ತಿರುವಾಗ ನಗರದ ಎಲ್ಲಾ ಜನರ ಮನದಲ್ಲಿಯೂ ತಮ್ಮ ಕೊಬ್ಬನ್ನು ಕರಗಿಸುವ ಬಗ್ಗೆ ಯೋಚನೆಯಂತೂ ಖಂಡಿತಾ ಬರುತ್ತದೆ. ಉತ್ತಮ ಆರೋಗ್ಯಕ್ಕೆ ಸ್ಥೂಲವಲ್ಲದ ಶರೀರ ಹಾಗೂ ಉತ್ತಮ ಆಹಾರ ಸೇವಿಸಬೇಕು ಎಂದು ಎಲ್ಲರಿಗೂ ಗೊತ್ತು.

  ಸ್ಥೂಲಕಾಯದಿಂದ ಮಧುಮೇಹ, ಹೃದಯಸ್ತಂಭನ, ಹೃದಯ ಸಂಬಂಧಿ ರೋಗಗಳು ಮೊದಲಾದವು ಆವರಿಸುವ ಸಾಧ್ಯತೆ ಹೆಚ್ಚು ಎಂದೂ ಗೊತ್ತು. ಆದರೆ ಇದಕ್ಕೆ ಅಡ್ಡಗಾಲು ಹಾಕುವುದು ನಮ್ಮ ಸೋಮಾರಿತನವೇ ಹೊರತು ಬೇರೇನಿಲ್ಲ. ತೂಕ ಇಳಿಸುವ ನಮ್ಮ ಪ್ರಯತ್ನಕ್ಕೆ ಇನ್ನೊಂದು ಅಡ್ಡಗಾಲು ಹಾಕುವುದು ನಾವು ಸೇವಿಸುವ ಆಹಾರಗಳು. ನಮಗೆ ಅತಿ ರುಚಿಕರವೆನಿಸುವ ಆಹಾರ ತಿನಿಸುಗಳೇ ನಮ್ಮ ಸ್ಥೂಲಕಾಯಕ್ಕೂ ಕಾರಣವಾಗಿರುವುದು ಮಾತ್ರ ಒಂದು ವ್ಯಂಗ್ಯವಾಗಿದೆ. ತೂಕ ಇಳಿಸಬೇಕೆಂದಿದ್ದರೆ ನಮ್ಮ ಜಿಹ್ವಾಚಾಪಲ್ಯವನ್ನು ಕೊಂಚವಾದರೂ ಬಲಿಕೊಡಲೇ ಬೇಕಾಗುತ್ತದೆ.

  ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

  ಯಾವ ಆಹಾರಗಳನ್ನು ಸೇವಿಸದಿರಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ಪರಿಚಯಿಸಲಾಗಿದ್ದು ಇದನ್ನು ಸರಿಯಾಗಿ ಅನುಸರಿಸಿ ಸೂಕ್ತ ವ್ಯಾಯಾಮಗಳನ್ನೂ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಸಪಾಟಾದ ಹೊಟ್ಟೆ ಹಾಗೂ ಆರೋಗ್ಯವಂತ ಶರೀರವನ್ನು ಪಡೆಯಲು ಸಾಧ್ಯ. ಬನ್ನಿ, ಯಾವ ಆಹಾರಗಳನ್ನು ವರ್ಜಿಸಬೇಕು ಎಂಬುದನ್ನು ನೋಡೋಣ...

  ಹುರಿದ ಆಲುಗಡ್ಡೆ ಚಿಪ್ಸ್

  ಹುರಿದ ಆಲುಗಡ್ಡೆ ಚಿಪ್ಸ್

  ಯಾವುದೇ ಹುರಿದ ಆಹಾರ, ಅದರಲ್ಲೂ ವಿಶೇಷವಾಗಿ ಪೊಟ್ಟಣಗಳಲ್ಲಿ ಸಿಗುವ ಪೊಟಾಟೋ ಚಿಪ್ಸ್ ಅತ್ಯಂತ ಭಯಾನಕವಾದ ಆಹಾರವಾಗಿದೆ. ಮನೆಯಲ್ಲಿಯೇ ಕೇವಲ ಆಲುಗಡ್ಡೆಯನ್ನು ಬೇಯಿಸಿ ತಿಂದರೆ ಅಷ್ಟೊಂದು ಅಪಾಯಕಾರಿಯಲ್ಲ. ಬದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಹುರಿದ ಮತ್ತು ವಿವಿಧ ರುಚಿಕಾರಕ ಮಸಾಲೆಗಳನ್ನು ಸೇರಿಸಿದ ಚಿಪ್ಸ್ ಮಾತ್ರ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲ, ಎಣ್ಣೆಯಲ್ಲಿ ಹುರಿದ ಫ್ರೆಂಚ್ ಫ್ರೈಸ್ ಸಹಾ ಅಪಾಯಕಾರಿ! ಇವನ್ನು ತಿಂದರೆ ತೂಕ ಇಳಿಕೆಯ ಕ್ರಿಯೆ ಹಿನ್ನಡೆ ಪಡೆದುಕೊಳ್ಳುತ್ತದೆ. ಇದರಲ್ಲಿ ಅಪಾರವಾಗಿರುವ ಕ್ಯಾಲೋರಿಗಳು ಹಾಗೂ ಕೊಬ್ಬುಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಇನ್ಸುಲಿನ್ ಮಟ್ಟವನ್ನೂ ಹೆಚ್ಚಿಸುವಂತೆ ಮಾಡುತ್ತವೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ ಹಾಗೂ ತೂಕ ಇಳಿಸುವಿಕೆಗಂತೂ ಸರ್ವಥಾ ಒಳ್ಳೆಯದಲ್ಲ.

  ಲಘು ಪಾನೀಯಗಳು:

  ಲಘು ಪಾನೀಯಗಳು:

  ತೂಕ ಇಳಿಸುವ ಅವಧಿಯಲ್ಲಿ ಯಾವುದೇ ಬುರುಗು ಬರುವ ಪಾನೀಯವನ್ನು ಕುಡಿದರೆ ಇದು ಅತ್ಯಂತ ಕೆಟ್ಟ ತೀರ್ಮಾನವಾಗಿರುತ್ತದೆ. ಏಕೆಂದರೆ ಈ ಪಾನೀಯಗಳಿಂದ ಮೇಲೇಳುವ ಗುಳ್ಳೆ ಅಪ್ಪಟ ಕಾರ್ಬನ್ ಡೈ ಆಕ್ಸೈಡ್ ಆಗಿದ್ದು ಇದು ನಾವು ಬೇಡವೆಂದು ಉಸಿರಿನ ಬಿಡುವ ಅನಿಲವಾಗಿದೆ. ಇದನ್ನು ಬಲವಂತವಾಗಿ ಕರಗಿಸಿ ಈ ಕಹಿಯಾದ ಪೇಯವನ್ನು ರುಚಿಯಾಗಿಸಲು ಏಳು ಪಟ್ಟು ಹೆಚ್ಚು ಸಕ್ಕರೆ ಬೆರೆಸಿ ತಯಾರಿಸಿದ ಲಘು ಪಾನೀಯಗಳು ಹೊಟ್ಟೆಯುಬ್ಬರಿಕೆ ಉಂಟುಮಾಡುತ್ತವೆ. ಅಧಿಕ ಸಕ್ಕರೆಯಿಂದ ಅಧಿಕವಾಗಿರುವ ಕ್ಯಾಲೋರಿಗಳು ಇನ್ನಷ್ಟು ಹೆಚ್ಚು ತಿನ್ನುವಂತೆ ಪ್ರೇರೇಪಿಸುತ್ತವೆ. ಇದು ನಾವು ಸಾಮಾನ್ಯವಾಗಿ ತಿನ್ನುವುದಕ್ಕಿಂತಲೂ ಹೆಚ್ಚು ತಿನ್ನುವಂತೆ ಮಾಡುವ ಮೂಲಕ ಕೊಬ್ಬನ್ನು ಕರಗಿಸುವ ಬದಲು ಇನ್ನಷ್ಟು ಕೊಬ್ಬನ್ನು ಸೇರಿಸುತ್ತವೆ ಹಾಗೂ ವ್ಯಾಯಾಮ ಹೆಚ್ಚಿದಷ್ಟೂ ಸ್ಥೂಲಕಾಯವೂ ಹೆಚ್ಚುತ್ತದೆ.

  ಪೇಸ್ಟ್ರಿಗಳು

  ಪೇಸ್ಟ್ರಿಗಳು

  ಪೇಸ್ಟ್ರಿ ಎಂದಾಕ್ಷಣ ಮನದಲ್ಲಿ ಮೂಡುವ ಘನ ಆಯತಾಕಾರದ ಸಿಹಿತಿಂಡಿ ಎಂತಹವರಿಗಾದರೂ ಬಾಯಿಯಲ್ಲಿ ನೀರೂರಿಸುತ್ತದೆ. ಆದರೆ ಇದು ಅತ್ಯಂತ ಅನಾರೋಗ್ಯಕರ ಆಹಾರವಾಗಿದ್ದು ವಿಶೇಷವಾಗಿ ತೂಕ ಕಳೆದುಕೊಳ್ಳಲೆತ್ನಿಸುತ್ತಿರುವವರಿಗೆ ಸರ್ವಥಾ ಸಲ್ಲದ ಆಹಾರವಾಗಿದೆ. ಇದರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಸಕಕ್ರೆ ಹಾಗೂ ಸಂಸ್ಕರಿತ ಹಿಟ್ಟು ಇದ್ದು ಕೃತಕ ರುಚಿಕಾರಕ ಟ್ರಾನ್ಸ್ ಫ್ಯಾಟ್ ಎಂಬ ಕೊಬ್ಬು ಈ ಸಿಹಿಯನ್ನು ಇನ್ನಷ್ಟು ಇಷ್ಟಪಡಲು ಕಾರಣವಾಗುತ್ತವೆ ಹಾಗೂ ಹೆಚ್ಚು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ಆದರೆ ಇದನ್ನು ತಿಂದ ಕೊಂಚ ಹೊತ್ತಿಗೇ ಇನ್ನಷ್ಟು ಹಸಿವಾಗುವ ಕಾರಣ ಅನಗತ್ಯವಾಗಿ ಹೆಚ್ಚಿನ ಪ್ರಮಾಣದ ಆಹಾರ ಸೇವಿಸುವಂತಾಗಿ ತೂಕ ಇಳಿಯುವ ಬದಲು ಇನ್ನಷ್ಟು ಹೆಚ್ಚುತ್ತದೆ.

  ಐಸ್ ಕ್ರೀಂ

  ಐಸ್ ಕ್ರೀಂ

  ಯಾವುದೇ ವಯಸ್ಸಿನವರಿಗೆ ಐಸ್ ಕ್ರೀಂ ಕಂಡಾಕ್ಷಣ ತಿನ್ನಲು ಮನಸ್ಸಾಗದೇ ಇರದು. ಆದರೆ ಇದರಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಹಾಗೂ ಆಗಾಧ ಪ್ರಮಾಣದ ಕ್ಯಾಲೋರಿಗಳಿದ್ದು ತೂಕ ಇಳಿಸುವ ಸಮಯದಲ್ಲಿ ತಿನ್ನುವುದು ಅತ್ಯಂತ ಅಪಾಯಕಾರಿಯಾದ ಆಯ್ಕೆಯಾಗಿದೆ. ಅಷ್ಟಕ್ಕೂ ಐಸ್ ಕ್ರೀಂ ತಿನ್ನಲೇಬೇಕು, ತಿನ್ನದಿದ್ದರೆ ಆಗುವುದೇ ಇಲ್ಲ ಎಂಬಷ್ಟು ಮಟ್ಟಿಗೆ ವ್ಯಸನಕ್ಕೊಳಗಾಗಿದ್ದರೆ ಮಾತ್ರ ಮನೆಯಲ್ಲಿಯೇ ತಯಾರಿಸಿದ ಐಸ್ ಕ್ರೀಂ ಹಾಗೂ ಇದರಲ್ಲಿ ಅತಿ ಕಡಿಮೆ ಸಕ್ಕರೆ ಹಾಗೂ ವಿವಿಧ ಹಣ್ಣುಗಳನ್ನು ಮತ್ತು ಮೊಸರನ್ನು ಸೇರಿಸಿ ತಯಾರಿಸಿದುದನ್ನೇ ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು.

  ಸಕ್ಕರೆ ಹೆಚ್ಚಿರುವ ಸಿದ್ಧ ಉಪಾಹಾರ ತಿನಿಸುಗಳು

  ಸಕ್ಕರೆ ಹೆಚ್ಚಿರುವ ಸಿದ್ಧ ಉಪಾಹಾರ ತಿನಿಸುಗಳು

  ಬೆಳಗ್ಗಿನ ಉಪಾಹಾರದಲ್ಲಿ ಸೇವಿಸುವ ಯಾವುದೇ ಆಹಾರದಲ್ಲಿ ಸಕ್ಕರೆಯ ಪ್ರಮಾಣವಿಲ್ಲದಂತೆ ನೋಡಿಕೊಂಡರೆ ಇದು ಉತ್ತಮ ಉಪಾಹಾರವಾಗುತ್ತದೆ. ಹಬೆಯಲ್ಲಿ ಬೇಯಿಸಿದ ಆಹಾರ ಉತ್ತಮ ಆಯ್ಕೆ. ಏಕೆಂದರೆ ಸಕ್ಕರೆಯ ಸೇವನೆಯಿಂದ ದೇಹಕ್ಕೆ ಆಗಾಧ ಪ್ರಮಾಣದ ಖಾಲಿ ಕ್ಯಾಲೋರಿ (empty calories) ದೊರೆತಂತಾಗುತ್ತದೆ. ಖಾಲಿ ಕ್ಯಾಲೋರಿ ಎಂದರೆ ಹೊಟ್ಟೆಗೆ ಹೋದ ಬಳಿಕ ತಕ್ಷಣವೇ ರಕ್ತಕ್ಕೆ ಸಿಗುವ ಶಕ್ತಿಯಾಗಿದೆ. ಇದು ಕೊಬ್ಬನ್ನು ಕರಗಿಸುವುದು ಅಸಾಧ್ಯವೆನ್ನುವಷ್ಟು ಕಷ್ಟಕರವಾಗಿಸುತ್ತದೆ. ಇಂದು ಮಾರುಕಟ್ಟೆಯಲ್ಲಿ ಸಕ್ಕರೆ ಇಲ್ಲದ ಉಪಾಹಾರಗಳು ಸಿಗುತ್ತಿವೆಯಾದರೂ ಸಕ್ಕರೆಯ ಬದಲಿಗೆ ಸಿಹಿಕಾರಕ ವಸ್ತುವಾದ ಆಸ್ಪರ್ಟೇಮ್ (aspertame) ಅಥವಾ ಬೇರಾವುದೋ ಸಿಹಿಕಾರಕವನ್ನು ಸೇರಿಸಿರುತ್ತಾರೆ. ಇದು ಸಕ್ಕರೆಯಂತೆ ಕ್ಯಾಲೋರಿ ಹೊಂದಿಲ್ಲವಾದರೂ ಇದರ ಪರೋಕ್ಷ ಪರಿಣಾಮಗಳಿಂದಲೂ ತೂಕ ಏರಬಹುದು ಹಾಗೂ ವಿಶೇಷವಾಗಿ ಆಸ್ಪರ್ಟೇಮ್ ಹೃದಯಕ್ಕೆ ಮಾರಕವಾಗಿದೆ. ಇದರಿಂದ pulmonary hypertension ಅಥವಾ ಅಧಿಕ ರಕ್ತದೊತ್ತಡದ ಸಾಧ್ಯತೆ ಹೆಚ್ಚುತ್ತದೆ.

  ಬಿಳಿ ಬ್ರೆಡ್

  ಬಿಳಿ ಬ್ರೆಡ್

  ಯಾವುದೇ ಬೇಕರಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಬ್ರೆಡ್ ಎಂದರೆ ಬಿಳಿ ಬ್ರೆಡ್. ಇದನ್ನು ಮೈದಾಹಿಟ್ಟಿನಿಂದ ತಯಾರಿಸಲಾಗಿದ್ದು ಇದರಲ್ಲಿ ನಾರಿನಂಶ ಇರುವುದೇ ಇಲ್ಲ. ಹಾಗೂ ಹೆಚ್ಚು ಸಕ್ಕರೆಯನ್ನು ಬೆರೆಸಿರಲಾಗಿರುತ್ತದೆ. ಇದು ಸ್ಥೂಲಕಾಯಕ್ಕೆ ಮೂಲವಾಗುತ್ತದೆ ಹಾಗೂ ನಾರಿಲ್ಲದೇ ಇರುವ ಮೂಲಕ ಹಲವು ತೊಂದರೆಗಳಿಗೂ ಕಾರಣವಾಗುತ್ತದೆ. ಇದರ ಗ್ಲೈಸೆಮಿಕ್ ಗಣಕ ಅತಿ ಹೆಚ್ಚಿರುವ ಕಾರಣ ಬಿಳಿ ಬ್ರೆಡ್ ತಿಂದ ಕೊಂಚ ಹೊತ್ತಿಗೇ ರಕ್ತದಲ್ಲಿ ಅಪಾರವಾದ ಸಕ್ಕರೆಯ ಅಂಶ ಕಂಡುಬರುತ್ತದೆ. ಇದು ಮಧುಮೇಹಕ್ಕೂ ಕಾರಣವಾಗಬಹುದು. ಬದಲಿಗೆ ಕಂದು ಬ್ರೆಡ್ ಬಳಸುವುದು ಆರೋಗ್ಯಕರ.

  ಆಹಾರದಲ್ಲಿ ಕ್ಯಾಲೋರಿ ಕಡಿಮೆ ಇರಲಿ

  ಆಹಾರದಲ್ಲಿ ಕ್ಯಾಲೋರಿ ಕಡಿಮೆ ಇರಲಿ

  ಅಧಿಕ ಕ್ಯಾಲೋರಿ ಇರುವ ಆಹಾರಗಳು ಬಾಯಿಗೆ ರುಚಿ ಅನಿಸಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದ್ದರಿಂದ ಕ್ಯಾಲೋರಿ ಅಧಿಕವಿರುವ ಆಹಾರಗಳನ್ನು ತಿನ್ನಲೇಬೇಡಿ ಎಂದು ಹೇಳುತ್ತಿಲ್ಲ, ಮಿತಿಯಲ್ಲಿ ತಿನ್ನಿ ಎಂಬ ಸಲಹೆಯನ್ನು ನೀಡುತ್ತಿದ್ದೇವೆ ಅಷ್ಟೇ.

  ಬೆಳಗ್ಗೆ ಬಿಸಿ ನೀರು ಕುಡಿಯಿರಿ

  ಬೆಳಗ್ಗೆ ಬಿಸಿ ನೀರು ಕುಡಿಯಿರಿ

  ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಅಲ್ಲದೆ ದಿನದಲ್ಲಿ 7-8 ಲೋಟ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

  ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ

  ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ

  ಡಯಟ್ ಮಾಡುತ್ತಿದ್ದೀರ ಎಂದರೆ ಸಂಪೂರ್ಣ ಊಟ ಬಿಟ್ಟು ಕೂರಬೇಕೆಂದೇನಿಲ್ಲ. ದೇಹಕ್ಕೆ ಅವಶ್ಯಕವಾದ ಪೋಷಕಾಂಶವನ್ನು ನೀಡಲೇಬೇಕು. ದಿನದಲ್ಲಿ ಒಂದು ಗ್ಲಾಸ್ ಹಾಲು, ಧಾನ್ಯಗಳು, ಮೊಟ್ಟೆ ಮತ್ತು ಫೈಬರ್ ಇರುವ ತರಕಾರಿ ನಿಮ್ಮ ಆಹಾರದೊಂದಿಗಿರಲಿ.

  ಗ್ಯಾಸ್ ಉಂಟು ಮಾಡುವ ಆಹಾರ ತ್ಯಜಿಸಿ

  ಗ್ಯಾಸ್ ಉಂಟು ಮಾಡುವ ಆಹಾರ ತ್ಯಜಿಸಿ

  ಆಲೂಗಡ್ಡೆ, ಹೂಕೋಸು, ಎಲೆಕೋಸು, ಮದ್ಯ, ಜೋಳ, ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡುವ ಇಂತಹ ತರಕಾರಿ ಸೇವನೆಯನ್ನು ತ್ಯಜಿಸಬೇಕು. ಇದರ ಸೇವನೆಯಿಂದ ಹೊಟ್ಟೆ ಊದಿಕೊಂಡಂತಾಗುತ್ತದೆ.

  English summary

  Foods You Should Never Eat if You Want to Lose Weight

  Everyone would be aware that exercise combined with a healthy diet can avert many health issues like diabetes, stroke, heart-related diseases, etc. On the road to losing weight, you might encounter several hurdles, one of them being the food which you consume. Usually, the tastiest foods which your mind might crave for will end up being hazardous to your health. Read on to know more about the foods you should never eat if you are striving hard to lose weight and be in shape.
  Story first published: Tuesday, October 31, 2017, 8:30 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more