For Quick Alerts
ALLOW NOTIFICATIONS  
For Daily Alerts

  ಬೊಜ್ಜು ಇಲ್ಲದ ಹೊಟ್ಟೆ, ತೂಕದಲ್ಲಿ ಇಳಿಕೆಗೆ-ಉಪಹಾರ ಹೀಗಿರಲಿ

  By Manu
  |

  ಸಪಾಟಾದ ಹೊಟ್ಟೆ ಎಲ್ಲರಿಗೂ ಬೇಕು. ಆದರೆ ಇದಕ್ಕಾಗಿ ರುಚಿಯನ್ನು ತ್ಯಾಗ ಮಾಡುವುದು, ವ್ಯಾಯಾಮ ಮಾಡುವುದು ಮಾತ್ರ ಯಾರಿಗೂ ಬೇಕಾಗಿಲ್ಲ. ಆದ್ದರಿಂದ ಜಾಣತನದ ಕ್ರಮವೆಂದರೆ ರುಚಿಯೂ ಇದ್ದು ಆರೋಗ್ಯಕರವೂ ಆಗಿರುವ ಉಪಹಾರವನ್ನು ನಿಮ್ಮ ನಿತ್ಯದ ಆಹಾರವನ್ನಾಗಿ ಸೇವಿಸುವುದು. ಇದರಿಂದ ದೇಹದಲ್ಲಿದ್ದ ಕೊಬ್ಬು ಹೆಚ್ಚಾಗಿ ಕರಗಿ ಶೀಘ್ರವೇ ಸಪಾಟಾದ ಹೊಟ್ಟೆ, ತೂಕದಲ್ಲಿ ಇಳಿಕೆ ಮತ್ತು ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೊಟ್ಟೆಯ ಕೊಬ್ಬು ಕರಗಿಸಲು ಆಯುರ್ವೇದ ಮದ್ದು....

  ತೂಕ ಇಳಿಸಲು ಬರೆಯ ಊಟವನ್ನು ಕಡಿಮೆ ಮಾಡಿದರೆ ಸಾಲದು, ಇದರಿಂದ ನಿತ್ರಾಣ ಎದುರಾಗುತ್ತದೆ. ಬದಲಿಗೆ ವಿಟಮಿನ್ನುಗಳು, ಪೋಷಕಾಂಶಗಳು ದಿನದ ಅಗತ್ಯಕ್ಕೆ ತಕ್ಕಷ್ಟು ಇದ್ದು ಕೊಬ್ಬನ್ನು ಹೆಚ್ಚಾಗಿ ಬಳಸುವ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ, ಹೆಚ್ಚಿಗೆ ನೀರು ಕುಡಿಯುವುದು, ಸಿದ್ದ ಆಹಾರಗಳಿಗೆ ಒಲವು ತೋರದಿರುವುದು ಮೊದಲಾದ ಕ್ರಮಗಳಿಂದ ಇದು ಖಂಡಿತಾ ಸಾಧ್ಯ. ಬನ್ನಿ, ತೂಕ ಇಳಿಸಲೇಬೇಕು ಎಂಬ ನಿಮ್ಮ ನಿಲುವಿಗೆ ನೆರವಾಗುವ ಈ ಉಪಾಹಾರ ಯಾವುದು ಎಂಬುದನ್ನು ನೋಡೋಣ....   

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  * 5-7 ಪ್ಲಮ್ ಹಣ್ಣುಗಳು

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  * 1 ಕಪ್ ಕೆನೆರಹಿತ ಮೊಸರು

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  * ಒಂದು ದೊಡ್ಡ ಚಮಚದಷ್ಟು ಚಿಕ್ಕದಾಗಿ ಪುಡಿ ಮಾಡಿದ ಅಗಸೆ ಬೀಜಗಳು (flax seeds)

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  * 2 ಚಿಕ್ಕ ಚಮಚ ಓಟ್ಸ್ ರವೆ

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  * ಚಿಕ್ಕ ಚಮಚ ಕೋಕೋ ಪುಡಿ

  ವಿಧಾನ

  ವಿಧಾನ

  ಈ ಉಪಾಹಾರವನ್ನು ಹಿಂದಿನ ದಿನದ ಸಂಜೆಯೇ ತಯಾರಿಸಿಟ್ಟುಕೊಳ್ಳುವುದು ಉತ್ತಮ. ಮೊದಲು ಪ್ಲಮ್ ಹಣ್ಣುಗಳನ್ನು ಬೀಜ ನಿವಾರಿಸಿ ನೂರು ಮಿಲಿ ಕುದಿಯುವ ನೀರಿನಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಇರಿಸಿ.

  ಬಳಿಕ ಇನ್ನೊಂದು ಪಾತ್ರೆಯಲ್ಲಿ....

  ಬಳಿಕ ಇನ್ನೊಂದು ಪಾತ್ರೆಯಲ್ಲಿ....

  ಬಳಿಕ ಇನ್ನೊಂದು ಪಾತ್ರೆಯಲ್ಲಿ ಕೋಕೋ ಪುಡಿ, ಅಗಸೆ ಬೀಜ, ಓಟ್ಸ್ ರವೆ ಮತ್ತು ಮೊಸರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಕುದಿಯುವ ನೀರಿನಲ್ಲಿಟ್ಟಿದ್ದ ಪ್ಲಂ ಹಣ್ಣುಗಳನ್ನು ನೀರಿನ ಸಹಿತ ಬ್ಲೆಂಡರಿನಲ್ಲಿ ನುಣ್ಣಗೆ ಕಡೆದು ಒಂದು ಲೋಟದಲ್ಲಿ ಸಂಗ್ರಹಿಸಿ. ಮರುದಿನ ಬೆಳಗ್ಗಿನ ಉಪಾಹಾರದಲ್ಲಿ ಇವೆರಡನ್ನೂ ಮಿಶ್ರಣ ಮಾಡಿ ಸೇವಿಸಿ. ಬನ್ನಿ, ಇದರ ಸಾಮಾಗ್ರಿಗಳು ಹೇಗೆ ತೂಕ ಇಳಿಸಲು ನೆರವಾಗುತ್ತವೆ ಎಂಬುದನ್ನು ನೋಡೋಣ:

  ಪ್ಲಮ್ ಹಣ್ಣುಗಳು...

  ಪ್ಲಮ್ ಹಣ್ಣುಗಳು...

  ಹೊಟ್ಟೆಯ ಕೊಬ್ಬಿಗೆ ಮುಖ್ಯ ಕಾರಣವೆಂದರೆ ಮುಖ್ಯ ಆಹಾರಗಳ ನಡುವಣ ಸಮಯದಲ್ಲಿ ಇತರ ಕೊಬ್ಬಿನ ಆಹಾರಗಳನ್ನು ಸೇವಿಸುವುದು. ಸಾಮಾನ್ಯವಾಗಿ ನಾವು ಸುಂದರವಾಗಿ ಕಾಣಿಸುವ ಆಹಾರಗಳಿಗೆ ಮನಸೋತು ಇವನ್ನು ಸೇವಿಸಿ ಬಿಡುತ್ತೇವೆ. ಆದರೆ ಇದರಿಂದ ಹೆಚ್ಚಿನ ಕೊಬ್ಬು, ಕೊಲೆಸ್ಟ್ರಾಲ್ ಮೊದಲಾದವು ದೇಹ ಸೇರುವುದಲ್ಲದೇ ದೇಹ ಇನ್ಸುಲಿನ್ ತಾಳಿಕೊಳ್ಳಬಲ್ಲ ಶಕ್ತಿಯನ್ನೂ ಕುಂದಿಸುತ್ತದೆ.

  ಪ್ಲಮ್ ಹಣ್ಣುಗಳು...

  ಪ್ಲಮ್ ಹಣ್ಣುಗಳು...

  ಪ್ಲಮ್ ಹಣ್ಣುಗಳಲ್ಲಿರುವ ಫಿನಾಲಿಕ್ ಅಂಶಗಳು ಅತಿ ನಿಧಾನವಾಗಿ ಜೀರ್ಣವಾಗುವ ಕಾರಣ ಉಪಾಹಾರದ ಬಳಿಕ ಮಧ್ಯಾಹ್ನದ ಊಟದವರೆಗೂ ಹೊಟ್ಟೆ ತುಂಬಿದಂತಿದ್ದು ಹೆಚ್ಚಿನ ಆಹಾರ ತಿನ್ನುವುದರಿಂದ ತಪ್ಪಿಸುತ್ತದೆ.

  ಕೆನೆರಹಿತ ಮೊಸರು

  ಕೆನೆರಹಿತ ಮೊಸರು

  ಜೀರ್ಣಕ್ರಿಯೆಗೆ ಅತ್ಯಂತ ಸುಲಭವಾದ ಆಹಾರವಾದ ಮೊಸರಿನಲ್ಲಿಯೂ ಕೆನೆ ಇದೆ. ಆದರೆ ಕೆನೆರಹಿತ ಮೊಸರಿನ ಸೇವನೆಯಿಂದ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ ಹಾಗೂ ಕೊಬ್ಬು ಸಂಗ್ರಹವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುವುದು ತಪ್ಪುತ್ತದೆ.

  ಅಗಸೆ ಬೀಜ

  ಅಗಸೆ ಬೀಜ

  ಈ ಬೀಜಗಳಲ್ಲಿ ಅಪರಿಪೂರ್ಣ ಕೊಬ್ಬು (monounsaturated fat) ಹೇರಳವಾಗಿದ್ದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಸಡಿಲಿಸಲು ನೆರವಾಗುತ್ತದೆ ಹಾಗೂ ಇದರ ಕಣಗಳನ್ನು ಜೀರ್ಣಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ಕೊಬ್ಬು ಬೇಕಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಕರಗುತ್ತದೆ.

  ಓಟ್ಸ್ ರವೆ

  ಓಟ್ಸ್ ರವೆ

  ಇದರಲ್ಲಿ ಸಂಯುಕ್ತ ಕಾರ್ಬೋಹೈಡ್ರೇಟುಗಳಿದ್ದು ಇವೂ ಸಹಾ ಜೀರ್ಣಗೊಳ್ಳಲು ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಪ್ರಮಾನದ ಕೊಬ್ಬನ್ನು ಬಳಸುತ್ತವೆ. ಇದರಿಂದ ಹೊಟ್ಟೆ ತುಂಬಿದಂತಿದ್ದು ನಡುನಡುವೆ ಅನಾರೋಗ್ಯಕರ ಸಿದ್ಧ ಆಹಾರವನ್ನು ಸೇವಿಸದಿರಲು ನೆರವಾಗುತ್ತದೆ.

  ಕೋಕೋಪುಡಿ

  ಕೋಕೋಪುಡಿ

  ಕೋಕೋಪುಡಿ ಸಹಾ ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬೇಡುವ ಆಹಾರವಾಗಿದ್ದು ಇತರ ಸಾಮಾಗ್ರಿಗಳೊಂದಿಗೆ ತನ್ನ ನೆರವನ್ನೂ ನೀಡಿ ದೇಹದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.

  ಫಲಿತಾಂಶ

  ಫಲಿತಾಂಶ

  ಮೇಲಿನ ಎಲ್ಲಾ ಸಾಮಾಗ್ರಿಗಳು ಒಟ್ಟಾಗಿ ಹೊಟ್ಟೆಯ ಕೊಬ್ಬಿನ ಮೇಲೆ ಆಕ್ರಮಣ ಮಾಡಿದರೆ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಮತ್ತು ಪರಿಣಾಮಕಾರಿಯಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಈ ಉಪಾಹಾರದ ಸೇವನೆಯಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುವುದು ಮಾತ್ರವಲ್ಲ ಮೈಕಟ್ಟು ಸಹಾ ಸುಂದರವಾಗುತ್ತದೆ.

  English summary

  Flat belly breakfast recipe that you must definitely try

  In this article we will present one of the best home remedies for flat stomach without exercise. The best part is, this home remedy is a breakfast recipe and you will no longer have to skip your breakfast anymore in order to have your dream figure. You can actually eat to reduce weight.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more