ತೂಕ ಇಳಿಸಿಕೊಳ್ಳಬೇಕೇ? ಸೌತೆಕಾಯಿ ಜ್ಯೂಸ್ ರೆಸಿಪಿ ಪ್ರಯತ್ನಿಸಿ

By: Arshad
Subscribe to Boldsky

ನಾವು ಸೇವಿಸುವ ಆಹಾರದಲ್ಲಿ ಅತಿ ಹೆಚ್ಚು ಪ್ರಮಾಣದ ನೀರಿನ ಪ್ರಮಾಣವನ್ನು ಹೊಂದಿರುವುದೆಂದರೆ ಕಲ್ಲಂಗಡಿ ಮತ್ತು ಸೌತೆಕಾಯಿ. ಬೇಸಿಗೆಯಲ್ಲಿ ಇವೆರಡೂ ಹಣ್ಣುಗಳು ಬಿಸಿಲ ಬೇಗೆಯನ್ನು ತಣಿಸುವ ಜೊತೆಗೇ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಕಾರಣ ತೂಕ ಇಳಿಸಲೂ ನೆರವಾಗುತ್ತವೆ. ಅದರಲ್ಲೂ ಸೌತೆಕಾಯಿಯಲ್ಲಿ ಸಕ್ಕರೆ ಅತಿ ಕಡಿಮೆಯಾಗಿರುವ ಕಾರಣ ತೂಕ ಇಳಿಸಲು ಅತ್ಯುತ್ತಮವಾದ ಆಯ್ಕೆಯಾಗಿದ್ದು ಇದನ್ನು ಹಾಗೇ ಸೇವಿಸುವ ಬದಲು ನೀರಿನೊಂದಿಗೆ ಕಡೆದು ಸ್ಮೂಥಿ ಮಾಡಿಕೊಂಡು ಕುಡಿಯುವುದು ಇನ್ನೂ ಉತ್ತಮ. ಆವಕಾಡೊ-ಸೌತೆಕಾಯಿ ಜ್ಯೂಸ್‌ನ ಶ್ರೀಮಂತ ಗುಣಗಳು...

ಬೇಸಿಗೆಯ ಬೇಗೆ ತಣಿಯಲು ಕುಡಿಯುವ ಚಾಕಲೇಟು ಸ್ಮೂತಿ ಅಥವಾ ಬೇರಾವುದೋ ರುಚಿಯಾಗಿರುವ ಪೇಯ ಕುಡಿದು ಹೊಟ್ಟೆಯಲ್ಲಿ ವಾಯು ತುಂಬಿಸಿಕೊಂಡು ತೂಕ ಹೆಚ್ಚಿಸಿಕೊಳ್ಳುವುದಕ್ಕಿಂತ ಇವುಗಳ ಬದಲಿಗೆ ಸೌತೆಕಾಯಿಯ ಸ್ಮೂತಿ ಕುಡಿಯುವುದೇ ಲೇಸು. ಈ ಸ್ಮೂತಿ ತೂಕ ಇಳಿಸುವ ಜೊತೆಗೇ ಬಿಸಿಲ ಬೇಗೆಯನ್ನು ತಣಿಸಿ ಚೈತನ್ಯವನ್ನೂ ನೀಡುತ್ತದೆ. ಸೌತೆಕಾಯಿ: ಆರೋಗ್ಯಕ್ಕೂ ಸೈ, ಸೌಂದರ್ಯದ ವಿಷಯದಲ್ಲೂ ಜೈ!

ಆದರೆ ಸೌತೆಕಾಯಿಯ ಪೂರ್ಣ ಪ್ರಯೋಜನಗಳನ್ನು ಪಡೆಯಬೇಕಾದರೆ ಇದರೊಂದಿಗೆ ಸಾಕಷ್ಟು ನೀರನ್ನೂ ಸೇವಿಸಬೇಕು. ಇಂದು ಸೌತೆಕಾಯಿ ಮತ್ತು ನೀರನ್ನು ಬಳಸಿ ಮಾಡಬಹುದಾದಂತಹ ಕೆಲವು ರೆಸಿಪಿಗಳನ್ನು ಸಂಗ್ರಹಿಸಲಾಗಿದ್ದು ಇವು ನಿಮ್ಮ ಬೇಸಿಗೆಯ ದಿನಗಳನ್ನು ಸಹಿಸುವಂತೆ ಮಾಡುವ ಜೊತೆಗೇ ತೂಕವನ್ನೂ ಸಮರ್ಥವಾಗಿ ಇಳಿಸುತ್ತದೆ....  

ಕಲ್ಲಂಗಡಿ, ಸೌತೆ ಮತ್ತು ನೀರಿನ ಪಾನಕ

ಕಲ್ಲಂಗಡಿ, ಸೌತೆ ಮತ್ತು ನೀರಿನ ಪಾನಕ

ಒಂದು ವೇಳೆ ಬೇಸಿಗೆಯ ಬೇಗೆಯನ್ನೂ ತಣಿಸಿ, ದಣಿದ ದೇಹಕ್ಕೆ ಹೆಚ್ಚಿನ ಶಕ್ತಿಯನ್ನೂ ನೀಡಿ, ತೂಕವನ್ನೂಹೆಚ್ಚಿಸದ ಪಾನೀಯದ ಅವಶ್ಯಕತೆ ಇದ್ದರೆ ಈ ಪಾನೀಯ ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ಅರ್ಧ ಸೌತೆಕಾಯಿ ಮತ್ತು ಒಂದು ಸಾಮಾನ್ಯ ಗಾತ್ರದ ಕಲ್ಲಂಗಡಿಯ ಕಾಲು ಭಾಗದಷ್ಟು ತಿರುಳನ್ನು ಸಂಗ್ರಹಿಸಿ ಬೀಜ ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಮಿಕ್ಸಿಯಲ್ಲಿ ಕಡೆಯಿರಿ.

ಕಲ್ಲಂಗಡಿ, ಸೌತೆ ಮತ್ತು ನೀರಿನ ಪಾನಕ

ಕಲ್ಲಂಗಡಿ, ಸೌತೆ ಮತ್ತು ನೀರಿನ ಪಾನಕ

ಇದಕ್ಕೆ ಕೊಂಚವೇ ಕಾಳುಮೆಣಸಿನ ಪುಡಿ ಮತ್ತು ಕೆಲ ಹನಿ ಲಿಂಬೆರಸವನ್ನು ಸೇರಿಸಿ. ಅಗತ್ಯವೆನಿಸಿದಷ್ಟು ನೀರನ್ನು ಸೇರಿಸಿ. ಈ ಪಾನೀಯವನ್ನು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಬಳಿಕ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ದೊರಕುತ್ತದೆ. ಇದು ದೇಹವನ್ನು ತಂಪಾಗಿಟ್ಟು ನೀರಿನ ಕೊರತೆಯಿಂದ ಕಾಪಾಡುತ್ತದೆ.

ಸೌತೆ ಮತ್ತು ಲಿಂಬೆಯ ಪಾನಕ

ಸೌತೆ ಮತ್ತು ಲಿಂಬೆಯ ಪಾನಕ

ಸೌತೆಕಾಯಿಯನ್ನು ನುಣ್ಣಗೆ ಕಡೆದು ಕುಡಿಯುವುದು ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಇದಕ್ಕೆ ಕೆಲವು ಹನಿ ಲಿಂಬೆರಸವನ್ನು ಬೆರೆಸಿದರೆ ಈ ಪೇಯ ಸ್ವಾದಿಷ್ಟವಾಗಿ ಬದಲಾಗುತ್ತದೆ. ಇದಕ್ಕಾಗಿ ಅರ್ಧ ಸೌತೆಕಾಯಿ ಮತ್ತು ಒಂದು ದೊಡ್ಡಗಾತ್ರದ ಲಿಂಬೆಹಣ್ಣು ಬೇಕು.

ಸೌತೆ ಮತ್ತು ಲಿಂಬೆಯ ಪಾನಕ

ಸೌತೆ ಮತ್ತು ಲಿಂಬೆಯ ಪಾನಕ

ಸೌತೆಕಾಯಿಯನ್ನು ಚಿಕ್ಕದಾಗಿ ತುಂಡರಿಸಿ ಈ ತುಂಡುಗಳನ್ನು ಒಂದು ದೊಡ್ಡ ಬಾಟಲಿಯಲ್ಲಿ ಹಾಕಿ ನೀರು ತುಂಬಿ. ಇದಕ್ಕೆ ಲಿಂಬೆರಸವನ್ನು ಬೆರೆಸಿ ಫ್ರಿಜ್ಜಿನಲ್ಲಿಡಿ. ಬಾಯಾರಿಕೆಯಾದಾಗಲೆಲ್ಲಾ ಈ ನೀರನ್ನು ತಣ್ಣಗಿರುವಂತೆ ಕುಡಿದರೆ ರುಚಿಯಾಗಿಯೂ ಆರೋಗ್ಯಕರವೂ ಆಗಿರುತ್ತದೆ.

ತುಳಸಿ ಎಲೆ ಮತ್ತು ಸೌತೆಕಾಯಿಯ ಪಾನಕ

ತುಳಸಿ ಎಲೆ ಮತ್ತು ಸೌತೆಕಾಯಿಯ ಪಾನಕ

ತುಳಸಿ ಮತ್ತು ಸೌತೆಕಾಯಿಯನ್ನು ಬೆರೆಸಿದ ನೀರು ಕುಡಿದರೆ ಇದು ನಾಲಿಗೆಗೆ ಚುರುಗುಟ್ಟಿಸುವ ರುಚಿಯನ್ನು ನೀಡುವ ಜೊತೆಗೇ ತುಳಸಿ ಮತ್ತು ಸೌತೆ ಎರಡರ ಆರೋಗ್ಯಕರ ಪ್ರಯೋಜನವನ್ನೂ ಪಡೆಯಬಹುದು. ಇದಕ್ಕಾಗಿ ಒಂದು ಕಪ್ ಸಕ್ಕರೆಯನ್ನು ಕೊಂಚ ನೀರಿನಲ್ಲಿ ಬೆರೆಸಿ ಬಿಸಿಮಾಡಿ. ಇದಕ್ಕೆ ಕೆಲವು ಲಿಂಬೆಯ ಹನಿಗಳನ್ನು ಸೇರಿಸಿ. ಸಕ್ಕರೆ ಕರಗಿದ ಬಳಿಕ ಉರಿ ಆರಿಸಿ ಅರ್ಧ ಸೌತೆಕಾಯಿಯ ತುಂಡುಗಳು ಮತ್ತು ಕೆಲವು ತುಳಸಿ ಎಲೆಗಳನ್ನು ಸೇರಿಸಿ. ತಣಿದ ಬಳಿಕ ಈ ಮಿಶ್ರಣವನ್ನು ಒಂದು ದೊಡ್ಡ ಬಾಟಲಿ ನೀರಿಗೆ ಬೆರೆಸಿ ಫ್ರಿಜ್ಜಿನಲ್ಲಿ ಒಂದು ಘಂಟೆ ಇಡಿ. ಬಳಿಕ ಇಡಿಯ ದಿನ ಬಾಯಾರಿಕೆಯಾದಾಗಲೆಲ್ಲಾ ಐಸ್ ನೊಂದಿಗೆ ಅಥವಾ ಇಲ್ಲದೇ ಕೊಂಚಕೊಂಚವಾಗಿ ಸೇವಿಸುತ್ತಾ ಇರಿ.

 
English summary

Effective Cucumber Water Recipes For Weight Loss; Check It Out

Cucumber is one among the healthiest foods to be had, especially when the summer days are around. It is always good to consume a cucumber smoothie or cucumber water rather than getting the stomach bloated with peanut shakes and a chocolate smoothie. Cucumber water can help to keep your body hydrated and also aid in weight loss. It helps to relax and rejuvenate your body effectively.
Subscribe Newsletter