ಆವಕಾಡೊ-ಸೌತೆಕಾಯಿ ಜ್ಯೂಸ್‌ನ ಶ್ರೀಮಂತ ಗುಣಗಳು...

By: Hemanth
Subscribe to Boldsky

ನೂರ್ಕಾಲ ಆರೋಗ್ಯವಂತರಾಗಿರಿ ಎನ್ನುವ ಹಾರೈಕೆ ಸಿಗುವುದು ಸಹಜ. ಆದರೆ ಆಧುನಿಕ ಯುಗದಲ್ಲಿ ಪ್ರತಿಯೊಂದನ್ನು ರಾಸಾಯನಿಕಗಳಲ್ಲಿ ಅದ್ದಿ ತೆಗೆಯುತ್ತಿರುವ ಕಾರಣದಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಹರಸಾಹಸವಾಗಿದೆ. ಕೆಲವರು ಮದ್ಯಪಾನ, ಧೂಮಪಾನದಿಂದ ಬೇಕೆಂದೇ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ.

ಆದರೆ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಆರೋಗ್ಯದ ಬಗ್ಗೆ ಚಿಂತಿಸುತ್ತಾರೆ. ತಾನು ಸೇವಿಸುವ ಪ್ರತಿಯೊಂದು ಆಹಾರದ ಬಗ್ಗೆ ಎಚ್ಚರಿಕೆ ವಹಿಸುತ್ತಾರೆ. ನಿಯಮಿತ ಆಹಾರ ಸೇವನೆ, ಕೊಬ್ಬು ರಹಿತ ಆಹಾರ ಮತ್ತು ಸರಿಯಾದ ವ್ಯಾಯಾಮ ಹಾಗೂ ಯೋಗ ಮಾಡಿದರೆ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು.  ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಕೆಲವೊಂದು ತರಕಾರಿಗಳ ಸೇವನೆಯನ್ನು ನಿಯಮಿತವಾಗಿ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆವಕಾಡೊ (ಬೆಣ್ಣೆ ಹಣ್ಣು) ಮತ್ತು ಸೌತೆಕಾಯಿ ಜ್ಯೂಸ್ ನಲ್ಲಿ ಆರು ಬಗೆಯ ಆರೋಗ್ಯ ಲಾಭಗಳು ಇವೆ. ಅದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಸಿಪ್ಪೆ ತೆಗೆದಿರುವ ಸೌತೆ ಕಾಯಿ, ಆವಕಾಡೊ ಹಣ್ಣಿನ ತಿರುಳನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಈ ಜ್ಯೂಸ್ ಅನ್ನು ಎರಡು ತಿಂಗಳ ಕಾಲ ಉಪಹಾರದ ಬಳಿಕ ಸೇವನೆ ಮಾಡಿ. (ಈ ಮನೆಮದ್ದು ಪ್ರಯತ್ನಿಸುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ)

ಜೀರ್ಣಕ್ರಿಯೆ ಹೆಚ್ಚಿಸುವುದು

ಜೀರ್ಣಕ್ರಿಯೆ ಹೆಚ್ಚಿಸುವುದು

ಒಮೆಗಾ-3 ಕೊಬ್ಬಿನಾಮ್ಲ ಮತ್ತು ಆ್ಯಂಟಿಆಕ್ಸಿಡೆಂಟ್ ಇರುವಂತಹ ಈ ಜ್ಯೂಸ್ ಆರೋಗ್ಯಕರ ಜೀರ್ಣಕ್ರಿಯೆ ರಸವನ್ನು ಉತ್ಪತ್ತಿ ಮಾಡುವುದು. ಇದರಿಂದ ಜೀರ್ಣಕ್ರಿಯೆ ಹೆಚ್ಚುವುದು.

ಆಸಿಡಿಟಿ ಕಡಿಮೆ ಮಾಡುವುದು

ಆಸಿಡಿಟಿ ಕಡಿಮೆ ಮಾಡುವುದು

ಆವಕಾಡೊ ಮತ್ತು ಸೌತೆಕಾಯಿ ಮಿಶ್ರಣವು ವಿಟಮಿನ್ ಕೆ ಯ ಆಗರವಾಗಿದೆ. ಇದು ಹೊಟ್ಟೆಯಲ್ಲಿ ಉತ್ಪತ್ತಿಯಾಗುವಂತಹ ವಾಯುವನ್ನು ತಡೆಯುವುದು. ಇದರಿಂದ ಆಸಿಡಿಟಿ ಮತ್ತು ಎದೆಯುರಿ ಕಡಿಮೆಯಾಗುವುದು.ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಪೊಟಾಶಿಯಂ ಇರುವಂತಹ ಈ ಮಿಶ್ರಣವು ರಕ್ತನಾಳಗಳನ್ನು ಹಿಗ್ಗಿಸುವುದು. ಇದರಿಂದ ರಕ್ತದೊತ್ತಡವು ಕಡಿಮೆಯಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯು ನಿವಾರಣೆಯಾಗುವುದು.

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯಕ್ಕೆ

ಆವಕಾಡೊ ಮತ್ತು ಸೌತೆಕಾಯಿಯ ಜ್ಯೂಸ್ ಹೃದಯದ ಆರೋಗ್ಯವನ್ನು ಕಾಪಾಡುವುದು. ಇದರಲ್ಲಿರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಹೃದಯಕ್ಕೆ ಸರಾಗವಾಗಿ ರಕ್ತ ಪರಿಚಲನೆಯಾಗುವಂತೆ ಮಾಡುವುದು.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ಈ ಮನೆಮದ್ದಿನಲ್ಲಿ ನಾರಿನಾಂಶವು ಅಧಿಕವಾಗಿರುವ ಕಾರಣದಿಂದ ಮಲ ವಿಸರ್ಜನೆ ಸರಾಗವಾಗುಂತೆ ಮಾಡಿ ಮಲಬದ್ಧತೆ ಮತ್ತು ಪೈಲ್ಸ್ ನಂತಹ ಸಮಸ್ಯೆಯನ್ನು ನಿವಾರಣೆ ಮಾಡುವುದು.

ಪ್ರತಿರೋಧಕ ಶಕ್ತಿ ಹೆಚ್ಚುವುದು

ಪ್ರತಿರೋಧಕ ಶಕ್ತಿ ಹೆಚ್ಚುವುದು

ಈ ಜ್ಯೂಸ್ ನಲ್ಲಿ ಇರುವಂತಹ ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆಯನ್ನು ಸುಧಾರಿಸಿ ಬಲಿಷ್ಠಗೊಳಿಸುವುದು. ಇದರಿಂದ ಹಲವಾರು ರೋಗಗಳು ದೂರವಾಗುವುದು.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಆವಕಾಡೊ ಮತ್ತು ಸೌತೆಕಾಯಿ ಜ್ಯೂಸ್‪ನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು.

 
English summary

What Happens When You Drink Avocado Juice With Cucumber Juice?

Did you know that the mixture of avocado juice and cucumber juice comes with over 6 health benefits? Just add a few peeled cucumber pieces and one avocado pulp into a blender with some water, grind well to form a mixture, drink this mixture, every morning, after breakfast for 2 months.
Story first published: Wednesday, February 15, 2017, 23:40 [IST]
Subscribe Newsletter