Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ದೇಹದ ತೂಕ ಇಳಿಸಲು ಮಸಾಜ್ ನೆರವಾಗಬಹುದೇ?
ಈ ವಿಷಯ ನಂಬಲಿಕ್ಕೆ ಕೊಂಚ ಕಷ್ಟವಾಗಬಹುದು. ಆದರೆ ನಿಯಮಿತವಾಗಿ ಮಸಾಜ್ ಮಾಡಿಸಿಕೊಳ್ಳುವುದರಿಂದ ನಿಮ್ಮ ತೂಕ ಕಡಿಮೆಯಾಗಲು ನೆರವಾಗುತ್ತದೆಯೇ? ಇದು ನಿಜವೋ ಅಥವಾ ಹಣ ಗಳಿಸುವ ಒಂದು ತಂತ್ರವೋ? ಬನ್ನಿ, ನಿಜವೇನೆಂದು ನೋಡೋಣ:
ವಾಸ್ತವಾಂಶ
ಮಸಾಜ್ ಮಾಡುವ ಮೇಜಿನ ಮೇಲೆ ಮಲಗಿ ಕೆಲವಾರು ಗಂಟೆಗಳ ಕಾಲ ಮಸಾಜ್ ಮಾಡಿಸಿಕೊಂಡರೂ ಇದರಿಂದ ಹೆಚ್ಚೇನೂ ಪ್ರಯೋಜನವಿಲ್ಲ. ಆದರೆ ಇದರಿಂದ ಹಣ ಗಳಿಸಬಯಸುವ ದುರುಳರು ಮಾತ್ರ ಮಸಾಜ್ ಮಾಡುವ ಮೂಲಕ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ಕೊಬ್ಬು ಹೊರಬರುತ್ತದೆ, ಇದರಿಂದ ತೂಕ ಇಳಿಯುತ್ತದೆ ಎಂದೆಲ್ಲಾ ಬಣ್ಣಬಣ್ಣದ ಸವಿಮಾತುಗಳನ್ನು ಆಡುತ್ತಾರೆ. ಸುಮ್ಮನೇ ಮಲಗಿದ್ದಲ್ಲಿಯೇ ತೂಕ ಕಳೆದುಕೊಳ್ಳುವ ಜೊತೆಗೇ ಮಸಾಜ್ ನ ಹಿತಕರ ಅನುಭವವನ್ನು ಪಡೆದುಕೊಳ್ಳುವ ಎರಡು ಲಾಭಗಳನ್ನು ಪರಿಗಣಿಸುವ ಗ್ರಾಹಕರು ಈ ಸವಿಮಾತುಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ.
ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಆದರೆ ಮಸಾಜ್ ಪರಿಣಿತರು ಹಾಗೂ ವೃತ್ತಿಪರರಿಗೆ ಮಸಾಜ್ ನಿಂದ ತೂಕ ಇಳಿಯುವುದಿಲ್ಲ ಎಂಬ ವಾಸ್ತವದ ಅರಿವಿರುತ್ತದೆ. ಮಸಾಜ್ ಮೂಲಕ ರಕ್ತಸಂಚಾರ ಸುಗಮಗೊಳ್ಳುತ್ತದೆ, ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಎಣ್ಣೆ ಅಥವಾ ಔಷಧಿಯನ್ನು ಮಸಾಜ್ ಮಾಡುವ ಮೂಲಕ ಇನ್ನಷ್ಟು ಆಳಕ್ಕಿಳಿಸಿ ರಕ್ತನಾಳಗಳ ಮೂಲಕ ಔಷಧಿಯನ್ನು ನೋವಿರುವ ಭಾಗಕ್ಕೆ ತಲುಪಿಸುವ ಮೂಲಕ ಸ್ನಾಯು ಹಾಗೂ ಮೂಳೆಗಳ ನೋವನ್ನು ಕಡಿಮೆಗೊಳಿಸುವುದು ಒಂದು ಚಿಕಿತ್ಸಾ ವಿಧಾನವೇ ಹೊರತು ಇದರಿಂದ ತೂಕ ಇಳಿಸಲು ಸಾಧ್ಯವಿಲ್ಲ.
ಅಲ್ಲದೇ ರಕ್ತಸಂಚಾರ ಸುಗಮಗೊಳ್ಳುವ ಮೂಲಕ ಮನಸ್ಸಿಗೂ ದೇಹಕ್ಕೂ ನಿರಾಳತೆ ಲಭಿಸುತ್ತದೆ. ಆದರೆ ತೂಕ ಇಳಿಸುವ ನಿಮ್ಮ ಇತರ ವ್ಯಾಯಾಮ ಹಾಗೂ ಆಹಾರಾಭ್ಯಾಸಗಳನ್ನು ಸರಿಯಾಗಿ ನಿರ್ವಹಿಸಲು ಮನಸ್ಸನ್ನು ಒತ್ತಡರಹಿತವಾಗಿಸುವಲ್ಲಿ ಮಾತ್ರ ಮಸಾಜ್ ಖಂಡಿತವಾಗಿಯೂ ಸಹಕರಿಸುತ್ತದೆ...
ಮಸಾಜ್ ಅಂದರೆ ನಿಮ್ಮ ದೇಹದ ಬಗ್ಗೆ ವಹಿಸುವ ಕಾಳಜಿಯಾಗಿದೆ
ಒಂದು ವೇಳೆ ನೀವು ವ್ಯಾಯಾಮದ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿದ್ದರೆ ವ್ಯಾಯಾಮದ ಪ್ರಾರಂಭಿಕ ದಿನಗಳೆಷ್ಟು ಕಷ್ಟಕರ ಹಾಗೂ ಮೈ ಕೈ ನೋವು ಬಾಧಿಸುವಂತಹ ಕ್ರಿಯೆ ಎಂದು ನಿಮಗೇ ಗೊತ್ತಿರುತ್ತದೆ. ಈ ಸಮಯದಲ್ಲಿ ಮಸಾಜ್ ನಿಮ್ಮ ನೆರವಿಗೆ ಬರುತ್ತದೆ. ಪರಿಣಿತ ಮಸಾಜ್ ಮಾಡುವವರಿಂದ ಸುಮಾರು ಅರ್ಧ ಗಂಟೆಯವರೆಗೆ ತಲೆಯಿಂದ ಪಾದದವರೆಗೆ ಮಸಾಜ್ ಮಾಡಿಸಿಕೊಂಡರೆ ಮೈ ಹಗುರಾಗುವುದು ಮಾತ್ರವಲ್ಲ, ಮನಸ್ಸೂ ನಿರಾಳವಾಗುತ್ತದೆ. ಈ ಮೂಲಕ
ನೀವು ನಿಮ್ಮ ದೇಹದ ಬಗ್ಗೆ ಕಾಳಜಿ ವಹಿಸುತ್ತಿದ್ದೇನೆ ಎಂದು ಸೂಚ್ಯವಾಗಿ ತಿಳಿಸುವುದೂ ಆಗಿದೆ. ಮಸಾಜ್ ಪ್ರತಿದಿನ ಮಾಡಿಸಿಕೊಳ್ಳಬೇಕಾಗಿಲ್ಲ. ಬದಲಿಗೆ ಇಡಿಯ ವಾರದ ಸತತ ವ್ಯಾಯಾಮದ ಬಳಿಕ ನಿಮಗೆ ನೀವೇ ಮಸಾಜ್ ರೂಪದ ಬಹುಮಾನವನ್ನು ಕೊಟ್ಟುಕೊಳ್ಳುವ ಪರಿಯಿಂದ ವಾರದ ಕಡೆಗೆ ಪಡೆಯುವ ಹಿತಕರ ಅನುಭವಕ್ಕಾಗಿಯಾದರೂ ವಾರದ ಇತರ ದಿನಗಳಂದು ಹೆಚ್ಚಿನ ಶ್ರಮದಾಯಕ ವ್ಯಾಯಾಮ ಮಾಡುವುದು ಸಾಧ್ಯವಾಗುತ್ತದೆ.
ಮಸಾಜ್ ನಿಂದ ವ್ಯಾಯಾಮಕ್ಕೆ ದೇಹ ತಯಾರಾಗುತ್ತದೆ
ನಮ್ಮಲ್ಲಿ ಕೆಲವರಿಗೆ ದೈಹಿಕ ನೋವನ್ನು ಸಹಿಸಿಕೊಳ್ಳುವ ಸ್ವಾಭಾವಿಕ ಗುಣವಿರುತ್ತದೆ. ಇವರಿಗೆ ಎಷ್ಟು ವ್ಯಾಯಾಮ ಮಾಡಿದರೂ, ದೇಹದ ಸ್ನಾಯುಗಳೆಲ್ಲಾ ನೋವಿನಿಂದ ಚೀತ್ಕರಿಸುತ್ತಿದ್ದರೂ ತಮ್ಮ ಕೆಲಸ ಪೂರೈಸಲು ಹಿಂದೇಟು ಹಾಕಲಾರರು. ಆದರೆ ಯಾವಾಗ ದೇಹದಲ್ಲಿ ಎಲ್ಲಾದರೂ ಪೆಟ್ಟಾದರೆ ಅಥವಾ ಗಾಯವಾದರೆ ವ್ಯಾಯಾಮಗಳಿಗೆಲ್ಲಾ ರಜೆ. ಒಂದು ವೇಳೆ ಈ ರಜೆ ಸುಮಾರು ಆರು ವಾರಗಳವರೆಗೆ ಮುಂದುವರೆದರೆ? ಈಗಲೂ ನಿಮಗೆ ವ್ಯಾಯಾಮ ಮಾಡಲು ಮನಸ್ಸಾಗುತ್ತದೆಯೇ? ಈ ಸಮಯದಲ್ಲಿ ಮಸಾಜ್ ನೆರವಿಗೆ ಬರುತ್ತದೆ. ನಿಯಮಿತವಾಗಿ ವ್ಯಾಯಾಮದ ನಡುವೆ ಮಸಾಜ್ ಮಾಡಿಸಿಕೊಳ್ಳುವ ಮೂಲಕ ವ್ಯಾಯಮದಲ್ಲಿ ಆಗುವ ಅಪಘಾತಗಳನ್ನು ತಪ್ಪಿಸಿಕೊಳ್ಳಬಹುದು. ದೀರ್ಘಾವಧಿಯಲ್ಲಿ ನಿಯಮಿತ ಮಸಾಜ್ ಹೆಚ್ಚಿನ ಅಪಾಯದಿಂದ ಕಾಪಾಡಬಹುದು.
ಮಸಾಜ್ ನಿಂದ ನಿಮ್ಮ ಜೀವನದ ಗುಣಮಟ್ಟ ಹೆಚ್ಚುತ್ತದೆ
ತೂಕ ಕೆಳದುಕೊಳ್ಳಬೇಕೆಂದರೆ ಇದಕ್ಕೆ ಮಾನಸಿಕವಾದ ಬದ್ದತೆ ತುಂಬಾ ಅಗತ್ಯ. ಮಸಾಜ್ ಈ ಬದ್ದತೆ ಪಡೆಯಲು ನೆರವಾಗುತ್ತದೆ. ವ್ಯಾಯಮದ ಮೂಲಕ ತೂಕ ಕಡಿಮೆಯಾದರೂ ಸ್ನಾಯುಗಳ ನೋವು ವ್ಯಾಯಾಮದ ಬದ್ದತೆಗೆ ಅಡ್ಡಗಾಲು ಹಾಕಬಹುದು. ನಿಮ್ಮ ಮೆಚ್ಚಿನ ಮಸಾಜ್ ಪರಿಣಿತ ವ್ಯಕ್ತಿಯಿಂದ ಮಾಡಿಸಿಕೊಳ್ಳುವ ಮಸಾಜ್ ಅದ್ಭುತ ಪರಿಣಾಮವನ್ನುಂಟು ಮಾಡಬಹುದು. ನಿಮ್ಮ ವ್ಯಾಯಾಮದ ಅಗತ್ಯಕ್ಕೆ ಸೂಕ್ತವಾದ ಆಹಾರ ಸೇವಿಸಲು ಹಾಗೂ ಅನಾರೋಗ್ಯಕರ ಆಹಾರದಿಂದ ದೂರವಿರಲು ಮನಸ್ಸನ್ನು ಹದ್ದುಬಸ್ತಿನಲ್ಲಿಡಲು ಮಸಾಜ್ ನೆರವಾಗುತ್ತದೆ. ಅಲ್ಲದೇ ದೇಹಕ್ಕೆ ಯಾವುದೋ ತೊಂದರೆ ಸನ್ನಿಹಿತವಾಗುತ್ತಿದೆ ಎಂಬ ಅನುಮಾನವನ್ನು ಸಹಾ ಮಸಾಜ್ ಮೂಲಕ ಪಡೆಯಬಹುದು.
ದೇಹದ ಊದಿಕೊಂಡಿರುವುದು ಹಾಗೂ ನೀರು ತುಂಬಿಕೊಂಡಿರುವುದನ್ನು ಕಡಿಮೆ ಮಾಡುತ್ತದೆ
ದೇಹದಲ್ಲಿ ತುಂಬಿರುವ ನೀರನ್ನು ಹಿಂಡಿ ತೆಗೆಯುವ ಒಂದು ವಿಧಾನದ ಮಸಾಜ್ ಪ್ರಚಲಿತವಾಗಿದೆ. ಇದಕ್ಕೆ Lymphatic drainage ಎಂದು ಕರೆಯುತ್ತಾರೆ. ಈ ಮಸಾಜ್ ದೇಹದ ದುಗ್ಧಗ್ರಂಥಿಗಳ ವ್ಯವಸ್ಥೆಯನ್ನು ಗುರಿಯಾಗಿಸಿರುವ ಕಾರಣ ದೇಹದಲ್ಲಿ ನೀರು ತುಂಬಿಕೊಂಡು ಊದಿಕೊಂಡಿರುವುದನ್ನು ಕಡಿಮೆ ಮಾಡುವುದು ಮಾತ್ರವಲ್ಲ, ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ನೀರನ್ನು ನಿವಾರಿಸುವ ಮೂಲಕ ತೂಕವನ್ನೂ ಕಡಿಮೆ ಮಾಡುತ್ತದೆ.
ಮಸಾಜ್ ನಿಂದ ಸ್ನಾಯುಗಳು ಸ್ವಸ್ಥಾನಕ್ಕೆ ಮರಳುತ್ತವೆ
ಕೆಲವೊಮ್ಮೆ ರಾತ್ರಿ ಮಲಗುವ ಭಂಗಿಯಲ್ಲಿ ವ್ಯತ್ಯಾಸವಿರುವುದು ಅಥವಾ ಇತರ ಕಾರಣಗಳಿಂದ ಬೆಳಿಗ್ಗೆದ್ದಾಗ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇಲ್ಲಿ ಸ್ನಾಯುಗಳು ತಮ್ಮ ಸ್ಥಾನದಿಂದ ಕೊಂಚವೇ ಸರಿದಿರುತ್ತವೆ. ಈ ಸ್ನಾಯುಗಳಿಗೆ ಕೆಲಸ ನೀಡಿದಾಗ ಹೆಚ್ಚಿನ ಸೆಳೆತ ಬೀಳುವ ಕಾರಣ ನೋವುಂಟು ಮಾಡುತ್ತವೆ. ಒಂದು ವೇಳೆ ಒತ್ತಡ ಅಥವಾ ಇನ್ನಾವುದೋ ಕಾರ್ಯದಲ್ಲಿ ಸ್ನಾಯುಗಳಿಗೆ ಸತತವಾಗಿ ಹೆಚ್ಚಿನ ಒತ್ತಡ ಬೀಳುತ್ತಲೇ ಇದ್ದರೆ ಇದು ಸ್ನಾಯುಗಳಿಗೆ ಗಾಯವುಂಟು
ಮಾಡುವ ಸಂಭವಿರುತ್ತದೆ. ಈ ಸ್ನಾಯುಗಳ ಮೇಲೆ ಸರಿಯಾದ ವಿಧಾನದಲ್ಲಿ ಮಾಡುವ ಮಸಾಜ್ ಮೂಲಕ ಸ್ಥಾನದಿಂದ ಸರಿದಿದ್ದ ಸ್ನಾಯುಗಳು ಮತ್ತೆ ಸ್ವಸ್ಥಾನಕ್ಕೆ ಮರಳುವ ಮೂಲಕ ಸ್ನಾಯುಗಳ ನೋವು ಕಡಿಮೆಯಾಗುವುದು ಮಾತ್ರವಲ್ಲ, ಇವುಗಳ ಕ್ಷಮತೆ ಹೆಚ್ಚುವ ಮೂಲಕ ನಿಮ್ಮ ಕ್ರೀಡಾಸಾಮರ್ಥ್ಯವೂ ಹೆಚ್ಚುತ್ತದೆ.
ಈ ಮಸಾಜ್ ಸೂಕ್ತರೀತಿಯಲ್ಲಿ ಮಾಡಿಸುವುದು ಅಗತ್ಯ
ಇದುವರೆಗೆ ನೀಡಿರುವ ಮಾಹಿತಿಗಳ ಪ್ರಕಾರ ತೂಕ ಇಳಿಸುವ ನಿಮ್ಮ ನಿತ್ಯದ ವ್ಯಾಯಾಮ ಹಾಗೂ ಆಹಾರಕ್ರಮಗಳಿಗೆ ಮಸಾಜ್ ಸಹಕಾರ ನೀಡುತ್ತದೆ. ಆದರೆ ಈ ಮಸಾಜ್ ಸೂಕ್ತ ಕ್ರಮದಲ್ಲಿ ಅನುಸರಿಸಿದರೆ ಮಾತ್ರ. ಅಷ್ಟೇ ಅಲ್ಲ, ಇದನ್ನು ನಿಯಮಿತವಾಗಿ ಪರಿಣಿತರಿಂದಲೇ ಮಾಡಿಸಿಕೊಳ್ಳುವುದು ಅಗತ್ಯ. ಅಷ್ಟೇ ಅಲ್ಲ, ನಿಮ್ಮ ಮಸಾಜ್ ಪರಿಣಿತರಿಗೆ ನಿಮ್ಮ ಗುರಿಗಳ ಬಗ್ಗೆ ಅರಿವಿದ್ದರೆ ಆ ಪ್ರಕಾರವೇ ಅಗತ್ಯಕ್ಕೆ ತಕ್ಕಂತೆ ಅವರು ತಮ್ಮ ಮಸಾಜ್ ವಿಧಾನಗಳನ್ನು ಬದಲಿಸಬಲ್ಲರು. ಅಷ್ಟೇ ಅಲ್ಲ, ನಿಮಗೆ ಯಾವ ಬಗೆಯ ಮಸಾಜ್ ಇಷ್ಟ ಅಥವಾ ಇಷ್ಟವಾಗದು ಎಂಬುದನ್ನು ಇವರು ಅರಿತು ಆ ಪ್ರಕಾರವೇ ಮಸಾಜ್ ಮುಂದುವರೆಸಲು ನೀವು ಒಬ್ಬರೇ ಪರಿಣಿತರಲ್ಲಿ ಸತತವಾಗಿ ಸೇವೆ ಪಡೆಯಬೇಕು.
ಈ ಮಸಾಜ್ ಸೂಕ್ತರೀತಿಯಲ್ಲಿ ಮಾಡಿಸುವುದು ಅಗತ್ಯ
ಮಸಾಜ್ ಮೂಲಕ ತೂಕ ಇಳಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ತೂಕವಿಳಿಸುವ ಪ್ರಯತ್ನಗಳಿಗೆ ತನ್ನ ಬೆಂಬಲವಂತೂ ಖಂಡಿತಾ ನೀಡುತ್ತದೆ. ನಿಮ್ಮ ವ್ಯಾಯಾಮ, ಆಹಾರಕ್ರಮ ಹಾಗೂ ಮಸಾಜ್ ಗಳು ಸರಿಯಾದ ರೀತಿಯಲ್ಲಿಯೇ ಮುಂದುವರೆದರೆ ಯಾವುದೇ ತೊಂದರೆ ಅಥವಾ ಅಡ್ಡಪರಿಣಾಮವಿಲ್ಲದೇ ತೂಕ ಕಡಿಮೆ ಮಾಡಿಕೊಳ್ಳಬಹುದು.