ಬೆಳಗ್ಗಿನ ಉಪಹಾರದ ಶಿಸ್ತು ತಪ್ಪಿದರೆ, ಖಂಡಿತ ತೂಕ ಹೆಚ್ಚುತ್ತದೆ!!

By: lekhaka
Subscribe to Boldsky

ದಿನಪೂರ್ತಿ ನೀವು ಶಕ್ತಿ ಹಾಗೂ ಉಲ್ಲಾಸದಿಂದ ಕೆಲಸ ಮಾಡಬೇಕಾದರೆ ಬೆಳಗ್ಗೆ ಮಾಡುವಂತಹ ಉಪಹಾರವು ತುಂಬಾ ಪ್ರಾಮುಖ್ಯವಾಗಿರುವುದು. ಬೆಳಗ್ಗಿನ ಉಪಹಾರವು ದೇಹಕ್ಕೆ ಶಕ್ತಿ ನೀಡಲು ಅತೀ ಅಗತ್ಯವೆಂದು ಪ್ರತೀ ಸಲ ನಾವು ಕೇಳಿದ್ದೇವೆ. ಉಪಹಾರ ಸೇವನೆ ಮಾಡದೆ ಇದ್ದರೆ ತೂಕ ಹೆಚ್ಚಳವಾಗುವುದು ಎಂದು ಅಧ್ಯಯನಗಳು ಹೇಳಿವೆ.

ಅದೇ ರೀತಿ ಉಪಹಾರದ ವೇಳೆ ನೀವು ಮಾಡುವಂತಹ ಕೆಲವೊಂದು ತಪ್ಪುಗಳು ಕೂಡ ತೂಕ ಹೆಚ್ಚಿಸಿಬಿಡಬಹುದು. ದೇಹದಲ್ಲಿ ಅತಿಯಾಗಿ ಬೆಳೆದಿರುವ ತೂಕ ಕಡಿಮೆ ಮಾಡಬೇಕೆಂದು ನೀವು ನಿರ್ಧರಿಸಿದ್ದರೆ ಉಪಹಾರದ ವೇಳೆ ಮಾಡುವಂತಹ ಈ ರೀತಿಯ ತಪ್ಪುಗಳನ್ನು ಕಡೆಗಣಿಸಲೇಬೇಕು. ಆ ತಪ್ಪುಗಳು ಯಾವುದು ಎಂದು ಮುಂದಕ್ಕೆ ತಿಳಿಯಿರಿ....

ಸವಿಯಾದ ಮೊಸರು

ಸವಿಯಾದ ಮೊಸರು

ತೂಕ ಕಳೆದುಕೊಳ್ಳಬೇಕೆಂದು ನಿರ್ಧರಿಸಿದ್ದರೆ ಸವಿಯಾಗಿರುವ ಮೊಸರು ಸೇವನೆ ಮಾಡಬೇಡಿ. ಭಾರತದಲ್ಲಿ ಇಂದು ಹಲವಾರು ರೀತಿಯ ಬ್ರಾಂಡೆಡ್ ಮೊಸರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮೊಸರಿನಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ ಎನ್ನುವುದು ನಿಜ. ಆದರೆ ಸವಿಯ ಮೊಸರಿಗೆ ಹೆಚ್ಚಿನ ಸಕ್ಕರೆ ಹಾಕಿರುವ ಕಾರಣದಿಂದಾಗಿ ಇದು ತುಂಬಾ ಸಿಹಿಯಾಗಿರುವುದು. ತೂಕ ಕಳೆದುಕೊಳ್ಳಲು ಸವಿ ಮೊಸರು ಒಳ್ಳೆಯದು ಎನ್ನುವ ಮಾತು ಕೇಳಬೇಡಿ. ಇದಕ್ಕೆ ಬದಲು ಮೊಸರಿಗೆ ಹಣ್ಣುಗಳನ್ನು ಅಥವಾ ಬಾಳೆಹಣ್ಣು ಹಾಕಿ ಸೇವಿಸಿದರೆ ಕಡಿಮೆ ಕ್ಯಾಲರಿ ಸೇವಿಸಿದಂತಾಗುವುದು.

ಅತಿಯಾಗಿ ಹಣ್ಣಿನ ಜ್ಯೂಸ್ ಕುಡಿಯುವುದು

ಅತಿಯಾಗಿ ಹಣ್ಣಿನ ಜ್ಯೂಸ್ ಕುಡಿಯುವುದು

ಬೆಳಗ್ಗಿನ ಉಪಹಾರಕ್ಕೆ ಹಲವಾರು ಬಗೆಯ ಜ್ಯೂಸ್ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೆಚ್ಚಿನವರು ಭಾವಿಸಿದ್ದಾರೆ. ಪ್ಯಾಕ್ ಮಾಡಲ್ಪಟ್ಟಿರುವಂತಹ ಹಣ್ಣಿನ ಜ್ಯೂಸ್ ಗಳಲ್ಲಿ ಹೆಚ್ಚಿನ ಸಕ್ಕರೆ, ಸಿಟ್ರಿಕ್ ಆಮ್ಲ ಮತ್ತು ಇತರ ಕೆಲವೊಂದು ಬಗೆಯ ರಾಸಾಯನಿಕಗಳಿರುವುದು. ಎಲ್ಲವು ನೈಸರ್ಗಿಕ ಮತ್ತು ಸಕ್ಕರೆ ಮುಕ್ತ ಎನ್ನುವ ಮಾತಿಗೆ ಮರುಳಾಗಬೇಡಿ. ಈ ಹಣ್ಣಿನ ಜ್ಯೂಸ್ ಗಳಲ್ಲಿ ಹೆಚ್ಚಿನ ಮಟ್ಟದ ಕ್ಯಾಲರಿ ಇರುವುದು. ಪ್ಯಾಕ್ ಮಾಡಿರುವ ಹಣ್ಣಿನ ಜ್ಯೂಸ್ ಬದಲಿಗೆ ಹಣ್ಣು ಸೇವನೆ ಮಾಡಿದರೆ ಒಳ್ಳೆಯದು.

ಎನರ್ಜಿ ಬಾರ್ ಸೇವನೆ

ಎನರ್ಜಿ ಬಾರ್ ಸೇವನೆ

ಭಾರತದಲ್ಲಿ ಎನರ್ಜಿ ಬಾರ್ ಹೆಚ್ಚು ಜನಪ್ರಿಯವಾಗಿದೆ. ಮೂಸ್ಲಿ, ಫ್ಲೆಕ್ಸ್ ಸೀಡ್ ಹಾಗೂ ಇತರ ಕೆಲವೊಂದು ಆರೋಗ್ಯಕರ ಆಹಾರಗಳು ತೂಕ ಕಳೆದುಕೊಳ್ಳುವವರಿಗೆ ತುಂಬಾ ಒಳ್ಳೆಯದು. ಆದರೆ ಈ ಎನರ್ಜಿ ಬಾರ್ ಗಳಲ್ಲಿ ಹೆಚ್ಚಿನ ಮಟ್ಟದ ಸಕ್ಕರೆಯಂಶವಿರುವುದು. ಎನರ್ಜಿ ಬಾರ್ ಸೇವನೆ ಮಾಡುವ ಮೊದಲು ಇದಕ್ಕೆ ಹಾಕಿರುವ ಪದಾರ್ಥಗಳ ಬಗ್ಗೆ ಓದಿಕೊಳ್ಳಿ. ಇದನ್ನು ಒಮ್ಮೆಲೆ ಖರೀದಿಸಬೇಡಿ. ಇಂತಹ ದುಬಾರಿ ಎನರ್ಜಿ ಬಾರ್ ಗಳಿಗೆ ಹಣ ವ್ಯಯಿಸುವುದನ್ನು ಕಡಿಮೆ ಮಾಡಿ.

ವಾಫಲ್ಸ್ ಮತ್ತು ಪ್ಯಾನ್ ಕೇಕ್‌ಗಳು

ವಾಫಲ್ಸ್ ಮತ್ತು ಪ್ಯಾನ್ ಕೇಕ್‌ಗಳು

ಬಿಸಿಯಾದ ವಾಫಲ್ಸ್ ಅಥವಾ ಪ್ಯಾನ್ ಕೇಕ್ ಗೆ ಸಕ್ಕರೆ ಅಥವಾ ಚಾಕಲೇಟ್ ಸಿರಪ್ ಹಾಕಿದರೆ ಅದರ ಮಜಾನೇ ಬೇರೆ. ಇದು ಎಲ್ಲರಿಗೂ ಇಷ್ಟವಾಗುವಂತದ್ದೇ. ಈ ಉಪಹಾರವು ತುಂಬಾ ರುಚಿಕರವಾಗಿದ್ದರೂ ಇವುಗಳನ್ನು ಮೈದಾ ಅಥವಾ ಸಂಸ್ಕರಿತ ಹಿಟ್ಟಿನಿಂದ ಮಾಡಿರುವ ಕಾರಣ ಕರಗಲು ಕಷ್ಟವಾಗುವುದು. ಇದರಲ್ಲಿ ಅಧಿಕ ಮಟ್ಟದ ಕ್ಯಾಲರಿ ಹಾಗೂ ಸಕ್ಕರೆಯಿದೆ. ಕ್ಯಾಲರಿ ಕಡಿಮೆ ಇರುವಂತಹ ಪ್ಯಾನ್ ಕೇಕ್ ಬಳಸಿ. ಬಾಳೆಹಣ್ಣಿನ ಪ್ಯಾನ್ ಕೇಕ್ ಗೆ ಚಾಕಲೇಟ್ ಸಾಸ್ ಹಾಕಿಕೊಂಡು ತಿನ್ನುವುದು ದೇಹಕ್ಕೆ ದುಬಾರಿಯಾಗಬಹುದು.

ಹಗುರ ಉಪಹಾರ ಸೇವನೆ

ಹಗುರ ಉಪಹಾರ ಸೇವನೆ

ತೂಕ ಕಳೆದುಕೊಳ್ಳಬೇಕೆಂದು ನಿರ್ಧರಿಸಿದ್ದರೆ ಕ್ಯಾಲರಿ ಸೇವನೆಯನ್ನು ಗರಿಷ್ಠ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬೇಕು. ಉಪಹಾರಕ್ಕೆ ಕೇವಲ ಒಂದು ಮೊಟ್ಟೆ ತಿಂದರೆ ಅಥವಾ ಒಂದು ಕಪ್ ಮಾತ್ರ ಕುಡಿದರೆ ಅದರಿಂದ ದಿನವಿಡಿ ನಿಮಗೆ ಮತ್ತೆ ಮತ್ತೆ ಹಸಿವಾಗುವುದು. ಬೆಳಗ್ಗೆ ಉಪಹಾರಕ್ಕೆ ಹೊಟ್ಟೆ ತುಂಬಾ ತಿನ್ನಿ. ಇದರಿಂದ ದಿನವಿಡಿ ಹೊಟ್ಟೆಯು ತುಂಬಿರುವುದು. ಕೆಲವೇ ತಿಂಗಳಲ್ಲಿ ನೀವು ತೂಕ ಇಳಿಸಿಕೊಳ್ಳಬಹುದು. ಬಾದಾಮಿ, ಅಕ್ರೋಟ್ ಮತ್ತು ಒಳ್ಳೆಯ ಕಾರ್ಬ್ಸ್ ಉಪಹಾರದಲ್ಲಿ ಸೇರಿಸಿಕೊಳ್ಳಿ.

English summary

Breakfast mistakes that are making you fat

How many times have you heard that breakfast is the most important meal of your day? While you might be aware that skipping breakfast could lead to weight gain, small mistakes you make every morning while preparing your breakfast could also prove to be counter productive for your weight loss regimen. If you’re trying to lose weight within a certain time span, avoid these seven breakfast mistakes.
Story first published: Thursday, October 5, 2017, 23:41 [IST]
Subscribe Newsletter