For Quick Alerts
ALLOW NOTIFICATIONS  
For Daily Alerts

  ನಿಮಗೂ ದೇಹದ ತೂಕ ಇಳಿಸಬೇಕೆಂದರೆ ಈ ಉಪಹಾರವನ್ನು ಸೇವಿಸಿ

  By Divya Pandith
  |

  ಫ್ಯಾಷನ್ ಪ್ರಪಂಚದ ಪ್ರಭಾವದಿಂದ ಅನೇಕರು ತಮ್ಮ ದೇಹವು ತೆಳ್ಳಗೆ ಇರಬೇಕೆಂದು ಬಯಸುತ್ತಾರೆ. ಆಕಾರಣಕ್ಕೆ ಊಟ-ತಿಂಡಿಯಲ್ಲಿ ಪಥ್ಯೆ(ಡಯಟ್) ಮಾಡುತ್ತಾರೆ. ಮುಂಜಾನೆಯ ವ್ಯಾಯಾಮದ ನಂತರ ಮಧ್ಯಾಹ್ನದ ಊಟದವರೆಗೂ ಖಾಲಿಹೊಟ್ಟೆಯಲ್ಲಿರುತ್ತಾರೆ. ಸೇವಿಸುವ ಊಟದಲ್ಲಿ ನಾರಿನಂಶ ಮತ್ತು ಕಾರ್ಬೋಹೈಡ್ರೇಟ್ ಯುಕ್ತ ಪದಾರ್ಥಗಳಿಂದ ದೂರ ಉಳಿಯುತ್ತಾರೆ. ಈ ಬಗೆಯ ಹವ್ಯಾಸದಿಂದ ದೇಹದ ತೂಕ ಇಳಿಮುಖವಾಗಬಹುದು. 

  ಬೆಳಗ್ಗಿನ ಉಪಹಾರದ ಶಿಸ್ತು ತಪ್ಪಿದರೆ, ಖಂಡಿತ ತೂಕ ಹೆಚ್ಚುತ್ತದೆ!!

  ಆದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ತೊಂದರೆಗಳು ಒಂದಾದನಂತರ ಒಂದು ಕಾಣಿಸಿಕೊಳ್ಳುತ್ತವೆ. ದೇಹದ ತೂಕ ಇಳಿದು ಬಹಳ ಸಣ್ಣಗಾಗಿರುವಂತೆ ತೋರಬೇಕೆಂದರೆ ಬೆಳಗ್ಗೆಯ ತಿಂಡಿಯನ್ನು ತಿಂದೇ ಸಣ್ಣಗಾಗಬಹುದು. ಇದಕ್ಕೆ ಕೆಲ ಮಾಹಿತಿಗಳನ್ನು ತಿಳಿದು ನಿಯಮಗಳನ್ನು ಅನುಸರಿಸಬೇಕು. ಅದ್ಯಾವ ರೀತಿಯ ಬೆಳಗಿನ ಉಪಹಾರಗಳು? ಎನ್ನುವ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ.

  ಓಟ್‌ಮೀಲ್

  ಓಟ್‌ಮೀಲ್

  ಇದೊಂದು ಪೂರ್ಣ ಪ್ರಮಾಣದ ಧಾನ್ಯವಾಗಿದ್ದು ಕೊಬ್ಬು ಮತ್ತು ಕ್ಯಾಲೋರಿ ಮಿತ ಪ್ರಮಾಣದಲ್ಲಿದೆ. ಇದರ ಸುಗಂಧ ಕೂಡ ನಿಮ್ಮ ಮನಸೆಳೆಯುವಂಥಿದ್ದು ನಿಮ್ಮ ಆಯ್ಕೆಯ ಯಾವುದೇ ಹಣ್ಣು, ಡ್ರೈ ಫ್ರುಟ್ಸ್ ಅನ್ನು ಇದರ ಟೋಪಿಂಗ್‌ಗೆ ಬಳಸಿ ನಿಮಗೆ ಸೇವಿಸಬಹುದು. ಸ್ಟ್ರಾಬೆರಿ, ಬಾಳೆಹಣ್ಣು ಮೊದಲಾದ ಹಣ್ಣುಗಳೂ ಕೂಡ ಇದಕ್ಕೆ ಉತ್ತಮ ರುಚಿಯನ್ನು ನೀಡುತ್ತದೆ. ಡ್ರೈ ಫ್ರುಟ್ಸ್‌ಗಳಾದ ರೈಸನ್ಸ್, ಬಾದಾಮಿ ಸಹ ಓಟ್ಸ್‌ಗೆ ಪರಿಪೂರ್ಣ ರುಚಿಯನ್ನು ನೀಡುತ್ತದೆ.

  ಟೋಸ್ಟ್

  ಟೋಸ್ಟ್

  ಡ್ರೈ ಟೋಸ್ಟ್ ಕೂಡ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಒಂದು ಉತ್ತಮ ಆರಂಭವಾಗಿದೆ. ಇದನ್ನು ಇನ್ನೂ ರುಚಿಕಟ್ಟಾಗಿಸಲು ಕೆಲವೊಂದು ಸಾಮಾಗ್ರಿಗಳನ್ನು ನೀವು ಬಳಸಬಹುದು. ಜೇನು ಅಥವಾ ಪೀನಟ್ ಬೆಣ್ಣೆಯನ್ನು ಟೋಸ್ಟ್ ಮೇಲೆ ಸವರಿ ಆರೋಗ್ಯಪೂರ್ಣ ಬ್ರೇಕ್‌ಫಾಸ್ಟ್‌ನಿಂದ ದಿನವನ್ನು ಆರಂಭಿಸಿ.

  ಸಿರೆಲ್ಸ್

  ಸಿರೆಲ್ಸ್

  ನಾರಿನಂಶಗಳಿಂದ ಕೂಡಿದ ಸಿರೆಲ್ಸ್ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ತುಂಬಾ ಹಿತಕಾರಿ. ಕೊಬ್ಬಿನಂಶ ಕಡಿಮೆ ಇದ್ದು ನಾರಿನಂಶ ಹೆಚ್ಚು ಸಿರೆಲ್ಸ್‌ನಲ್ಲಿ ಇದೆ. ಕೆನೆರಹಿತ ಹಾಲನ್ನು ಮತ್ತು ರೈಸನ್ಸ್, ಬಾದಾಮಿಯನ್ನು ಮಿಶ್ರ ಮಾಡಿಕೊಂಡು ಸಿರೆಲ್ಸ್ ಅನ್ನು ಸವಿಯಿರಿ.

   ಆಮ್ಲೇಟ್

  ಆಮ್ಲೇಟ್

  ಮೊಟ್ಟೆಯು ತೂಕ ಇಳಿಸುವಲ್ಲಿ ಸಹಕಾರಿಯಾಗಿರುವ ಆಹಾರವಾಗಿದೆ. ಇದರಿಂದ ತಯಾರಿಸಲಾದ ಆಮ್ಲೇಟ್ ಕೂಡ ಕೊಬ್ಬಿನಂಶವನ್ನು ಸೊನ್ನೆ ಪ್ರಮಾಣದಲ್ಲಿ ಒಳಗೊಂಡಿದೆ. 2-3 ಮೊಟ್ಟೆಯನ್ನು ಒಡೆದು ಅದಕ್ಕೆ ಈರುಳ್ಳಿ ಹಾಕಿ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಆಮ್ಲೇಟ್ ತಯಾರಿಸಿ.

  ಗ್ರಾನೋಲಾ ಬಾರ್ಸ್

  ಗ್ರಾನೋಲಾ ಬಾರ್ಸ್

  ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಇರುವ ಬದಲು ಗ್ರಾನೋಲಾ ಬಾರ್ಸ್ ಸೇವಿಸಬೇಕು. ಇದರಲ್ಲಿ ಸಕ್ಕರೆ ಮತ್ತು ಕ್ಯಾಲೋರಿ ಪ್ರಮಾಣ ಕಡಿಮೆ ಇರುತ್ತದೆ. 7ಗ್ರಾಂ ಫೈಬರ್, 6 ಗ್ರಾಂ ಪ್ರೋಟೀನ್, 5 ಗ್ರಾಂ ಸಕ್ಕರೆ ಮತ್ತು ತೂಕ ನಷ್ಟಕ್ಕೆ ಸಹಾಯಮಾಡುವುದು.

  ಚೀಸ್ ಮತ್ತು ಸೇಬು ಹಣ್ಣಿನ ತುಂಡುಗಳು

  ಚೀಸ್ ಮತ್ತು ಸೇಬು ಹಣ್ಣಿನ ತುಂಡುಗಳು

  ಬೆಳಗ್ಗೆ ಉಪಹಾರಕ್ಕೆ ಇವುಗಳನ್ನು ಸೇವಿಸಬೇಕು. ಇದರಲ್ಲಿ ಆರೋಗ್ಯಕರ ನಾರಿನಂಶ ಮತ್ತು 70 ಕ್ಯಾಲೋರಿಯನ್ನು ಹೊಂದಿರುತ್ತದೆ. ಜೊತೆಗೆ ಅತಿ ಹೆಚ್ಚು ಕೊಬ್ಬಿನ

  ಪ್ರಮಾಣವನ್ನು ಕರಗಿಸಿ. ಸಮತೋಲನವನ್ನು ಕಾಪಾಡುತ್ತದೆ.

  ತಾಜಾ ಪಿಸ್ತ

  ತಾಜಾ ಪಿಸ್ತ

  ಇದರಲ್ಲಿ 6 ಗ್ರಾಂ ಪ್ರೋಟೀನ್ ಮತ್ತು 3 ಗ್ರಾಂ ಫೈಬರ್‌ಗಳನ್ನು ಒಳಗೊಂಡಿರುತ್ತದೆ. ಇದನ್ನು ಡಯಟ್‍ನ ಉದ್ದೇಶಕ್ಕೆ ಉಪಹಾರವಾಗಿ ಸ್ವೀಕರಿಸಬಹುದು. ದೇಹದ ತೂಕವನ್ನು ಸಮತೋಲನ ಹಾಗೂ ಕೊಬ್ಬಿನಂಶವನ್ನು ಕರಗಿಸಲು ಉತ್ತಮ ಆಹಾರ.

  ಗೋಧಿ ಬ್ರೆಡ್ ಮತ್ತು ಬೇಯಿಸಿದ ಮೊಟ್ಟೆ

  ಗೋಧಿ ಬ್ರೆಡ್ ಮತ್ತು ಬೇಯಿಸಿದ ಮೊಟ್ಟೆ

  ಬೆಳಗ್ಗೆಯ ತಿಂಡಿಯಾಗಿ ಗೋಧಿ ಬ್ರೆಡ್‍ನಲ್ಲಿ ಬೇಯಿಸಿದ ಮೊಟ್ಟೆಯನ್ನು ಸೇರಿಸಿ ಸವಿಯಬೇಕು. ಇದರಿಂದ ದೇಹಕ್ಕೆ ಬೇಕಾದ ಕೊಬ್ಬು, ಪ್ರೋಟೀನ್ ಮತ್ತು ನಾರಿನಂಶ ಪರಿಪೂರ್ಣವಾಗಿ ದೊರೆಯುತ್ತದೆ. ದೇಹದ ತೂಕವೂ ಹೆಚ್ಚದು.

   ಕಡಿಮೆ ಪ್ರಮಾಣದ ಕೊಬ್ಬಿನಾಂಶದ ಚೀಸ್ ಮತ್ತು ಬಾಳೆ ಹಣ್ಣು

  ಕಡಿಮೆ ಪ್ರಮಾಣದ ಕೊಬ್ಬಿನಾಂಶದ ಚೀಸ್ ಮತ್ತು ಬಾಳೆ ಹಣ್ಣು

  ಕಾಲುಕಪ್ ಚೀಸ್‍ನಲ್ಲಿ 10 ಗ್ರಾಂ ಪ್ರೋಟೀನ್ ಮತ್ತು ಒಂದು ಬಾಳೆಹಣ್ಣಿನಲ್ಲಿ 10 ಗ್ರಾಂ ಫೈಬರ್ ಇರುತ್ತದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಪೂರಕವಾದ ಪೋಷಕಾಂಶ ದೊರೆಯುವುದಲ್ಲದೆ. ತೂಕವೂ ಕಡಿಮೆಯಾಗುತ್ತದೆ.

  ಕ್ರ್ಯಾಕರ್ಸ್ ಮತ್ತು ಬಾದಾಮಿ ಬೆಣ್ಣೆ

  ಕ್ರ್ಯಾಕರ್ಸ್ ಮತ್ತು ಬಾದಾಮಿ ಬೆಣ್ಣೆ

  ಇದರಲ್ಲಿ 60 ಗ್ರಾಂ ಕ್ಯಾಲರಿ ಮತ್ತು 3 ಗ್ರಾಂ ನಾರಿನಂಶ ಇರುತ್ತದೆ. ಬಾದಾಮಿ ಬೆಣ್ಣೆಯೊಂದಿಗೆ ಕ್ರ್ಯಾಕರ್ಸ್ ಸವಿದರೆ ಉತ್ತಮ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಪಡೆಯಬಹುದು.

  ಸ್ಮೂತಿ

  ಸ್ಮೂತಿ

  ಆಹ್! ನಿಮ್ಮ ಬ್ರೇಕ್‌ಫಾಸ್ಟ್‌ನೊಂದಿಗೆ ತಂಪಾದ ಸ್ಮೂತಿ ಇಲ್ಲದಿದ್ದರೆ ಅದು ಪರಿಪೂರ್ಣ ಆಗಲಿಕ್ಕಿಲ್ಲ. ತಾಜಾ ಹಣ್ಣು ಮೊಸರು ಮತ್ತು ಕೆನೆರಹಿತ ಹಾಲನ್ನು ತೆಗೆದುಕೊಂಡು ಆರೋಗ್ಯಭರಿತ ಸ್ಮೂತಿಯನ್ನು ತಯಾರಿಸಿ. ದೇಹದ ಬಿಸಿಯನ್ನು ನಿವಾರಿಸಲು ಇದು ಹಿತಕಾರಿ ಪೇಯವಾಗಿದೆ.

  English summary

  Best & Healthy Morning Snacks For Weight Loss

  This is when you can go for some healthy morning snacks for weight loss. There is a wide gap between breakfast and lunch, when you feel very hungry. That is the time when you can for these top breakfast snacks for the betterment of your health as well as the weight loss process. In this article, we have listed some of the best morning snacks for weight loss. So, continue reading to know more about them.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more