Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ತೂಕವನ್ನು ಇಳಿಸಲು ಸಹಾಯ ಮಾಡುವ ಮೂರು ಪ್ರಾಚೀನ ಕಾಲದ ಪದ್ಧತಿಗಳು
ಇತ್ತೀಚಿನ ದಿನಗಳಲ್ಲಿ ದೇಹದ ಫಿಟ್‍ನೆಸ್ ಬಗ್ಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಇದಕ್ಕೆ ನಿದರ್ಶನವಾಗಿರುವುದು ಅನೇಕ ಜಿಮ್ ಸೆಂಟರ್, ಯೋಗ ಕೇಂದ್ರ. ಸಾಮಾನ್ಯವಾಗಿ ಜಿಮ್ ಸೆಂಟರ್‌ಗಳಲ್ಲಿ ದೇಹದ ಫಿಟ್‍ನೆಸ್ ಬಗ್ಗೆ ಕಾಳಜಿ ಇರುವವರು ತುಂಬಿರುವುದನ್ನು ಕಾಣಬಹುದು. ಇಂದಿನ ಯುವಕರು ಹಾಗೂ ವೃದ್ಧರು ಯಾವುದೇ ತಾರತಮ್ಯವಿಲ್ಲದೆ ದೇಹದಾಕೃತಿಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅನವಶ್ಯಕ ಕೊಬ್ಬುಗಳನ್ನು ಕರಗಿಸುವುದು, ಸಣ್ಣ ಸೊಂಟದ ಕಲ್ಪನೆ, ಟೋನ್ಡ್ ದೇಹ, 6 ಪ್ಯಾಕ್‍ನ ದೇಹ ಹೊಂದುವುದನ್ನು ಅನೇಕರು ಬಯಸುತ್ತಾರೆ. ಇದು ಕೇವಲ ನಿನ್ನೆ ಇಂದು ಬಂದಿರುವ ಕಲ್ಪನೆಯಲ್ಲ. ಪುರಾತನ ಕಾಲದಿಂದಲೂ ಜನರು ಫಿಟ್‍ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಂಡು ಬಂದಿದ್ದಾರೆ.
ನಿಜ, ಅಜ್ಜಿ ಅಥವಾ ದೊಡ್ಡಜ್ಜಿಯವರಕಾಲದ ಚಿತ್ರಗಳನ್ನು ನೋಡಿದರೆ ಅರ್ಥವಾಗುತ್ತದೆ. ಆ ಕಾಲದ ಜನರೂ ಸಹ ದೇಹದಾಕೃತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು ಎನ್ನುವುದು ಅರಿವಾಗುತ್ತದೆ. ಆ ಕಾಲದಲ್ಲಿ ಅವರು ಬಳಸುತ್ತಿದ್ದ ಕ್ರಮಗಳು ಹೆಚ್ಚು ಆರೋಗ್ಯ ಪೂರ್ಣವಾಗಿರುತ್ತಿತ್ತು. ಅಲ್ಲದೆ ಆ ವಿಧಾನದಿಂದ ಪಡೆದ ಫಲಿತಾಂಶವು ದೀರ್ಘಕಾಲದವರೆಗೆ ಮುಂದುವರಿಯುತ್ತಿತ್ತು ಎನ್ನುವುದನ್ನು ಅನೇಕ ಸಂಶೋಧನೆ ಹಾಗೂ ಅಧ್ಯಯನಗಳು ದೃಢಪಡಿಸಿವೆ. ಈ ಆಧುನಿಕ ಯುಗದಲ್ಲಿ ಜಿಮ್ ಮೂಲಕ ತಮ್ಮ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.
ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಆದರೆ ಅದನ್ನು ಒಮ್ಮೆ ಬಿಟ್ಟರೆ ಅಥವಾ ಅದಕ್ಕೆ ಬೇಕಾದ ರೀತಿಯ ಜೀವನ ಶೈಲಿಯನ್ನು ಅನುಸರಿಸದೆ ಇರುವ ಪಕ್ಷದಲ್ಲಿ ತೂಕ ನಷ್ಟ ಹೊಂದುವ ಬದಲು ಇನ್ನಷ್ಟು ತೂಕವನ್ನು ಹೊಂದುವ ಸಾಧ್ಯತೆಗಳು ಇರುತ್ತವೆ. ಕೆಲವರಿಗೆ ಜಿಮ್‍ನಲ್ಲಿ ಮಾಡುವ ದೇಹ ದಂಡನೆಯಿಂದ ಉಂಟಾಗುವ ಆಯಾಸ ಹಾಗೂ ಸ್ನಾಯು ನೋವುಗಳನ್ನು ತಡೆಯಲು ಸಾಧ್ಯವಾಗದೆ ಬಿಡಬಹುದು. ಆದರೆ ಪ್ರಾಚೀನ ಕಾಲದ ಈ ಪದ್ಧತಿಯಲ್ಲಿ ಹಾಗೆ ಆಗಲು ಸಾಧ್ಯವಿಲ್ಲ. ಸೂಕ್ತ ರೀತಿಯಲ್ಲಿ ದೇಹವನ್ನು ದಂಡಿಸಿ ಆರೋಗ್ಯಪೂರ್ಣ ವ್ಯಕ್ತಿತ್ವವನ್ನು ಹೊಂದಬಹುದು. ಹಾಗಾದರೆ ಆ ವಿಧಾನಗಳು ಯಾವವು? ಎನ್ನುವ ಸೂಕ್ತ ವಿವರಣೆ ಇಲ್ಲಿದೆ ನೋಡಿ...
ದೈನಂದಿನ ಚಟುವಟಿಕೆಗಳು
ಹಿಂದಿನ ಕಾಲದಲ್ಲಿ ಜನರು ಹೆಚ್ಚು ಕೆಲಸವನ್ನು ಮಾಡಬೇಕಿತ್ತು. ಅವರಿಗೆ ಆಗ ಯಾವುದೇ ಯಂತ್ರಗಳ ಸಹಾಯ ಇರಲಿಲ್ಲ. ಎಲ್ಲಾ ಕೆಲಸಗಳಿಗೂ ಹೆಚ್ಚಿನ ದೈಹಿಕ ಶ್ರಮವನ್ನು ವಿನಿಯೋಗಿಸಬೇಕಿತ್ತು. ಹಾಗಾಗಿ ಸ್ನಾಯುಗಳಿಗೆ ಸೂಕ್ತ ರೀತಿಯ ಆಯಾಸ ಉಂಟಾಗುತ್ತಿತ್ತು. ದೇಹದಲ್ಲಿ ಯಾವುದೇ ರೀತಿಯ ಅನಗತ್ಯ ಕೊಬ್ಬುಗಳು ಶೇಖರಣೆಯಾಗುತ್ತಿರಲಿಲ್ಲ. ಉದಾಹರಣೆಗೆ: ಜನರು ತಮ್ಮ ಮನೆಯ ನಿರ್ಮಿಸುವ ಕೆಲಸವನ್ನು ತಾವೇ ಮಾಡಬೇಕಿತ್ತು. ತೋಟಗಾರಿಕೆಯ ಕೆಲಸ, ಪೀಠೋಪಕರಣಗಳ ಕೆತ್ತನೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಾಲು ನಡಿಗೆಯಿಂದಲೇ ತೆರಳಬೇಕಿತ್ತು.
ಹೆಚ್ಚಿನ ವಾಹನ ವ್ಯವಸ್ಥೆ ಎಂದರೆ ಅದು ಸಹ ನಮ್ಮ ಶಕ್ತಿಯಿಂದ ತುಳಿಯಬೇಕಿದ್ದ ಬೈಸಿಕಲ್ ಆಗಿತ್ತು. ಹೀಗೆ ಪ್ರತಿಯೊಂದು ಕೆಲಸವನ್ನು ಸ್ವತಃ ಶಕ್ತಿ ಹಾಗೂ ದೈಹಿಕ ಶ್ರಮದಿಂದಲೇ ಕೈಗೊಳ್ಳಬೇಕಾದ್ದರಿಂದ ನೈಸರ್ಗಿಕವಾಗಿಯೇ ಅನಗತ್ಯ ಕ್ಯಾಲೋರಿಗಳು ಕರಗುತ್ತಿತ್ತು. ಸಾಕಷ್ಟು ಶುದ್ಧ ಹಾಗೂ ನೈಸರ್ಗಿಕವಾದ ಪೋಷಕಾಂಶ ಭರಿತ ಆಹಾರಗಳು ಸಹ ಹೆಚ್ಚಿನ ಸಹಕಾರ ನೀಡುತ್ತಿದ್ದವು. ಈ ಎಲ್ಲಾ ಕಾರಣಗಳಿಂದ ದೇಹವು ಸೂಕ್ತ ಆರೋಗ್ಯ ಹಾಗೂ ಸುಂದರವಾದ ಆಕೃತಿಯನ್ನು ಹೊಂದಿರುತ್ತಿತ್ತು.
ಯೋಗ
ಆ ದಿನದಲ್ಲಿ ಹೆಚ್ಚಿನ ಜನರು ಯೋಗ ಹಾಗೂ ವ್ಯಾಯಾಮವನ್ನು ಹೆಚ್ಚು ಅಭ್ಯಾಸ ಮಾಡುತ್ತಿದ್ದರು. ಇದು ಆಧ್ಯಾತ್ಮಿಕ ಚಟುವಟಿಕೆಯ ಒಂದು ರೂಪ ಎಂದು ಸಹ ಪರಿಗಣಿಸಲಾಗುತ್ತದೆ. ಆದ್ದರಿಂದ ಇದನ್ನು ಪ್ರತಿದಿನ ಅನೇಕರು ಯೋಗವನ್ನು ಮಾಡುತ್ತಿದ್ದರು. ಇದಕ್ಕೆ ಯಾವುದೇ ವಯಸ್ಸಿನ ತಾರತಮ್ಯ ಇರಲಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಸಹ ಯೋಗ ಮಾಡುತ್ತಿದ್ದರು.
ವ್ಯಾಯಾಮದ ಪರಿಯಲ್ಲಿ ಯೋಗವು ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದೆ. ಯೋಗವು ಕೇವಲ ವ್ಯಾಯಾಮಕ್ಕೆ ಸೀಮಿತವಾಗಿಲ್ಲ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚು ಆರೋಗ್ಯವಾಗಿರಬಹುದು. ಇಂದಿಗೂ ನಿಯಮಿತವಾಗಿ ಯೋಗವನ್ನು ಮಾಡುವುದರಿಂದ ಹೆಚ್ಚು ಲವಲವಿಕೆಯಿಂದ ಒತ್ತಡದಿಂದ ಮುಕ್ತರಾಗಿ ಆರೋಗ್ಯವಂತ ಜೀವನವನ್ನು ನಡೆಸಬಹುದು.
ನಾವು ಸೇವಿಸುವ ಆಹಾರ
ನಾವು ತಿಳಿದಂತೆ ಕೆಲವು ದಶಕಗಳ ಹಿಂದ ವಿಶೇಷವಾಗಿ ಭಾರತದಲ್ಲಿ ಫಾಸ್ಟ್ ಫುಡ್‍ಗಳ ಪರಿಕಲ್ಪನೆಯು ಅಸ್ತಿತ್ವದಲ್ಲಿರಲಿಲ್ಲ. ಯಾವುದೇ ರೆಸ್ಟೋರೆಂಟ್ ಮತ್ತು ಪಾಶ್ಚಾತ್ಯ ತ್ವರಿತ ಆಹಾರಗಳು ಸಹ ಪರಿಚಯವಾಗಿರಲಿಲ್ಲ. ಹಾಗಾಗಿ ನಮ್ಮ ಪೂರ್ವಜರಿಗೆ ಅನಾರೋಗ್ಯಕರ ಕೊಬ್ಬು ಅಥವಾ ವಾಸಿಯಾಗದೇ ಇರುವಂತಹ ಬೇಡದ ಕಾಯಿಲೆಗಳು ಬರುತ್ತಿರಲಿಲ್ಲ.
ಹೆಚ್ಚು ಶಕ್ತಿಯುತವಾದ ನೈಸರ್ಗಿಕ ಉತ್ಪನ್ನಗಳ ಆಹಾರವನ್ನೇ ಸೇವಿಸುತ್ತಿದ್ದರು. ಅದರ ಪರಿಣಾಮವಾಗಿ ಅನೇಕ ವರ್ಷಗಳವರೆಗೆ ಯಾವುದೇ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ. ಈ ವಿಚಾರವನ್ನು ಅರಿತಿರುವ ನೀವು ಸಹ ಆದಷ್ಟು ಫಾಸ್ಟ್ ಫುಡ್‍ಗಳಿಂದ ದೂರವಿರಿ. ಆರೋಗ್ಯ ಪೂರ್ಣ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಿರಿ.