Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳ್ಳುಳ್ಳಿ ಪೇಸ್ಟ್‌ನಿಂದ ಒಂದೇ ತಿಂಗಳಲ್ಲಿ ಮೂರು ಕಿಲೋ ತೂಕ ಇಳಿಸಿ
ದೇಹದಲ್ಲಿ ಬೊಜ್ಜು ಕಾಣಿಸಿಕೊಂಡರೆ ಅದಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದಿಲ್ಲ. ಯಾಕೆಂದರೆ ಎದ್ದು ಕುಳಿತುಕೊಳ್ಳುವುದರಿಂದ ಹಿಡಿದು ಬಟ್ಟೆಬರೆಯ ಆಯ್ಕೆ ತನಕ ಪ್ರತಿಯೊಂದರಲ್ಲೂ ಸಮಸ್ಯೆ ಎದುರಾಗುವುದು. ಯಾವುದಾದರೂ ಬಟ್ಟೆ ಅಂಗಡಿಗೆ ಹೋದಾಗ ನಿಮಗೆ ತುಂಬಾ ಇಷ್ಟವಾಗಿರುವ ಬಣ್ಣದ ಬಟ್ಟೆ ಇರಬಹುದು. ಆದರೆ ಅದು ನಿಮ್ಮ ದೇಹಕ್ಕೆ ಹೊಂದಿಕೊಳ್ಳದೇ ಇರುವುದು ದೊಡ್ಡ ಸಮಸ್ಯೆ. ಇದರಿಂದ ನಿಮಗೆ ತುಂಬಾ ನಿರಾಶೆಯಾಗುವುದು ಖಚಿತ. ಪ್ರತಿಯೊಬ್ಬರು ತಮ್ಮ ದೇಹವು ಸುಂದರವಾಗಿರಬೇಕೆಂದು ಬಯಸುವುದು ಸಹಜ.

ಕೆಲವೊಂದು ಸಲ ನಾವು ಬೇಡವೆಂದರೂ ದೇಹ ಮಾತ್ರ ಉಬ್ಬುತ್ತಾ ಇರುತ್ತದೆ. ಆದರೆ ಸಮಸ್ಯೆ ಬರುವುದು ನಮ್ಮ ಜೀವನಶೈಲಿಯಿಂದ. ಜೀವನಶೈಲಿ ಸರಿಯಾಗಿಸಿಕೊಂಡರೆ ಎಲ್ಲವೂ ನಿವಾರಣೆಯಾಗುವುದು. ಅತಿಯಾದ ತೂಕ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಬೊಜ್ಜು ಇರುವಂತಹ ವ್ಯಕ್ತಿಗಳು ತಮ್ಮ ದೇಹದಿಂದಾಗಿ ಖಿನ್ನತೆಗೆ ಒಳಗಾಗಿರುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದು ಮಾತ್ರವಲ್ಲದೆ ಅತಿಯಾದ ತೂಕದಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಗಂಟು ನೋವು, ಅಧಿಕ ಕೊಲೆಸ್ಟ್ರಾಲ್, ಅಜೀರ್ಣ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಬೊಜ್ಜಿನಿಂದಾಗಿ ಕೆಲವೊಂದು ರೀತಿಯ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳುವುದು.
ಆರೋಗ್ಯಕರ ಜೀವನಶೈಲಿಯೊಂದಿಗೆ ದೇಹದ ತೂಕವನ್ನು ಸರಿಯಾಗಿ ಇಟ್ಟುಕೊಂಡರೆ ಖಂಡಿತವಾಗಿ ಒಳ್ಳೆಯ ಜೀವನ ಸಾಗಿಸಬಹುದು. ಒಂದೇ ತಿಂಗಳಲ್ಲಿ ಮೂರು ಕೆ.ಜಿ ಇಳಿಸಬಲ್ಲ ಪುರಾತನ ಮದ್ದಿನ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಪ್ರಯೋಗಿಸಿ ನೋಡಬಹುದು.
ಬೇಕಾಗುವ ಸಾಮಗ್ರಿಗಳು
ಹಸಿ ಬೆಳ್ಳುಳ್ಳಿ ಎಸಲುಗಳು 2-3
ಜೇನು-1 ಚಮಚ
ನಿಯಮಿತವಾಗಿ ಈ ಮದ್ದನ್ನು ಬಳಸಿಕೊಂಡರೆ ಖಂಡಿತವಾಗಿಯೂ ಫಲಿತಾಂಶ ಸಿಗುವುದು.
ಕೇವಲ ಈ ಮದ್ದನ್ನು ಮಾತ್ರ ಸೇವಿಸಿದರೆ ತೂಕ ಕಡಿಮೆಯಾಗಲ್ಲ. ಇದರೊಂದಿಗೆ ಆಹಾರ ಕ್ರಮದಲ್ಲಿ ಕೂಡ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಆರೋಗ್ಯಕಾರಿ ಆಹಾರ ಕ್ರಮ, ದಿನನಿತ್ಯ ಒಂದು ಗಂಟೆ ಕಾಲ ವ್ಯಾಯಾಮ ಇತ್ಯಾದಿಯಿಂದ ಈ ಮದ್ದು ತುಂಬಾ ಪರಿಣಾಮಕಾರಿಯಾಗಲಿದೆ. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಅಂಶವಿದೆ. ಇದು ಚಯಾಪಚಾಯ ಕ್ರಿಯೆ ಹೆಚ್ಚಿಸುವುದು ಮತ್ತು ಕೊಬ್ಬಿನ ಕೋಶಗಳು ಬೇಗನೆ ದಹಿಸಲು ನೆರವಾಗುವುದು. ಜೇನುತುಪ್ಪದಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ಜಮೆಯಾಗಿರುವ ಕೊಬ್ಬನ್ನು ನಿಯಮಿತವಾಗಿ ಹೊರಹಾಕುವುದು. ಇದರಿಂದ ತೂಕ ಕಡಿಮೆಯಾಗುವುದು.
ತಯಾರಿಸುವ ವಿಧಾನ
*ಹಸಿ ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.
*ಹೇಳಿದಷ್ಟು ಪ್ರಮಾಣದ ಜೇನುತುಪ್ಪಕ್ಕೆ ಬೆಳ್ಳುಳ್ಳಿಯ ತುಂಡುಗಳನ್ನು ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.
*ಈ ಪೇಸ್ಟ್ ಅನ್ನು ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಸೇವಿಸಿ.
*ಒಂದು ತಿಂಗಳ ಬಳಿಕವೂ ಈ ಮದ್ದನ್ನು ಸೇವನೆ ಮಾಡಿದರೆ ದೀರ್ಘಕಾಲಕ್ಕೆ ಪರಿಣಾಮಕಾರಿಯಾಗಿರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


