ತೂಕ ಇಳಿಸಲು ಇಲ್ಲಿದೆ ಅತ್ಯಂತ ಪರಿಣಾಮಕಾರಿ ಮನೆಮದ್ದು

By: Jaya subramanya
Subscribe to Boldsky

ಇಂದಿನ ಕಾಲದಲ್ಲಿ ಕೊಬ್ಬು ಎಂಬುದು ಎಲ್ಲರ ತಲೆತಿನ್ನುವ ಸಂಗತಿ ಎಂದೆನಿಸಿದೆ. ಕೊಬ್ಬು ಇಳಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರೂ ನಾಲಿಗೆಗೆ ರುಚಿಯಾಗಿರುವಂತಹದ್ದನ್ನು ಸೇವಿಸುವಾಗ ನೀವು ಡಯಟ್‌ನಲ್ಲಿರುವುದನ್ನು ಮರೆತೇ ಬಿಡುತ್ತೀರಿ. ವ್ಯಾಯಾಮ ಮಾಡಬೇಕೆಂದು ಬೆಳಗ್ಗಿನ ಅಲರಾಂ ಇಟ್ಟಿದ್ದರೂ ಇನ್ನು ಸ್ವಲ್ಪ ಮಲಗಿ ಬಿಟ್ಟು ಆಮೇಲೆ ಮಾಡುತ್ತೇನೆ ಎಂಬ ಅಭಿಲಾಶೆಯಿಂದಲೋ, ಇಲ್ಲವೇ ನಾಳೆ ವ್ಯಾಯಾಮವನ್ನು ಆರಂಭಿಸಿದರೆ ಸಾಕು ಎಂಬ ತಾತ್ಸಾರದಿಂದ ನೀವು ತೂಕ ಕಡಿಮೆ ಮಾಡಬೇಕೆಂಬ ಇಚ್ಛೆಗೆ ಎಳ್ಳುನೀರು ಬಿಡುತ್ತೀರಿ.

Carrot juice

ಆಮೇಲೆ ನಾನು ಎಷ್ಟು ಕಷ್ಟ ಪಟ್ಟರೂ ಒಂದೇ, ತೂಕ ಇಳಿಸಲು ನನ್ನಿಂದ ಸಾಧ್ಯವಾಗದು ಎಂಬಂತಹ ಭಾವನೆ ನಿಮ್ಮ ಮನದಲ್ಲಿ ಮೂಡಿಬಿಡುತ್ತದೆ. ಆದರೆ ನಿಮ್ಮ ತೂಕ ಇಳಿಸುವ ಯೋಚನೆಗೆ ಇಂದಿನ ಲೇಖನದಲ್ಲಿ ನಾವು ಅತ್ಯಂತ ಪರಿಣಾಮಕಾರಿ ವಿಧಾನವನ್ನು ಪರಿಚಯಿಸುತ್ತಿದ್ದೇವೆ.

ಆದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ತೂಕ ಇಳಿಕೆ ವಿಧಾನವು ಅಂತಿಂಥ ತೂಕ ಇಳಿಕೆ ವಿಧಾನವಲ್ಲ. ಇದನ್ನು ಪ್ರಯೋಗಿಸಿರುವ ಬಹಳಷ್ಟು ಜನರು ಇದನ್ನು ತಮ್ಮದಾಗಿಸಿಕೊಂಡು ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. ನೀವು ಈಗಾಗಲೇ ಬಹಳಷ್ಟು ತೂಕ ಇಳಿಕೆ ವಿಧಾನಗಳನ್ನು ಅನುಸರಿಸಿ ಸೋಲು ಕಂಡಿದ್ದೀರಿ ಎಂದಾದಲ್ಲಿ ಈ ವಿಧಾನ ಹೇಳಿಮಾಡಿಸಿರುವಂತಹದ್ದಾಗಿದೆ. ಇದೊಂದು ರೀತಿಯ ಔಷಧಿಯಾಗಿದ್ದು ಇದನ್ನು ತಯಾರಿಸಿ ಖಾಲಿ ಹೊಟ್ಟೆಯಲ್ಲಿ ಪ್ರಾತಃಕಾಲದಲ್ಲಿ ಸೇವಿಸಬೇಕು. 

Apple Juice

*ತಾಜಾ ಕ್ಯಾರೆಟ್ ರಸ - 1/2 ಲೋಟ

*ಸೇಬಿನ ಪಲ್ಪ್ - 1/2 ಲೋಟ

*ಶುಂಠಿ ರಸ - 1 ಚಮಚ

ಈ ನೈಸರ್ಗಿಕ ವಿಧಾನವನ್ನು ಮನೆಯಲ್ಲೇ ತಯಾರಿಸಿಕೊಂಡು ನೀವು ತ್ವರಿತವಾಗಿ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಒಂದು ದಿನವೂ ಇದನ್ನು ತಪ್ಪಿಸದೆಯೇ ಈ ಜ್ಯೂಸ್ ಅನ್ನು ನೀವು ಸೇವಿಸಬೇಕು. ಇದರೊಂದಿಗೆ ಕೆಲವೊಂದು ಆರೋಗ್ಯಕರ ಜೀವನ ಶೈಲಿಗಳನ್ನು ನೀವು ಅನುಸರಿಸಬೇಕು. ಒಂದು ಗಂಟೆಯಷ್ಟು ವ್ಯಾಯಾಮವನ್ನು ಮಾಡಿ ಅಂತೆಯೇ ಎಣ್ಣೆ ಪಸೆ ಆಹಾರಗಳನ್ನು ತ್ಯಜಿಸಿ. ಆಗ ಮಾತ್ರವೇ ಈ ಜ್ಯೂಸ್ ನಿಮಗೆ ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. 

Weight Loss

ಕ್ಯಾರೆಟ್, ಸೇಬು ಮತ್ತು ಶುಂಠಿಯು ಉತ್ತಮ ಪ್ರೋಟೀನ್ ಅಂಶವನ್ನು ಒಳಗೊಂಡಿದ್ದು, ಇದರಲ್ಲಿರುವ ಅಂಶಗಳು ನಿಮ್ಮ ದೇಹದ ಕೊಬ್ಬನ್ನು ಬೇಗನೇ ಕರಗಿಸುವಲ್ಲಿ ಸಹಕಾರಿಯಾಗಿದೆ. ಈ ಜ್ಯೂಸ್‌ನಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು ನಿಮ್ಮ ಚಯಾಪಚಯ ಕ್ರಿಯೆಯನ್ನು ಇದು ವರ್ಧಿಸುತ್ತದೆ ಮತ್ತು ಬೇಗನೇ ತೂಕ ಇಳಿಸಲು ಸಹಕಾರಿಯಾಗಿದೆ.ಈ ಜ್ಯೂಸ್‌ನಲ್ಲಿರುವ ಫೈಬರ್ ಅಂಶವು ವಿಸರ್ಜನಾ ವ್ಯವಸ್ಥೆಯ ಮೂಲಕ ಹೆಚ್ಚುವರಿ ದೇಹದ ಕೊಬ್ಬನ್ನು ಕರಗಿಸುತ್ತದೆ.

ಮಾಡುವ ವಿಧಾನ:

*ಮಿಕ್ಸಿಯಲ್ಲಿ ತಿಳಿಸಿರುವ ಪ್ರಮಾಣಗಳನ್ನು ಹಾಕಿಕೊಳ್ಳಿ ಮತ್ತು ಇದರೊಂದಿಗೆ ನೀರು ಸೇರಿಸಿ

ಜ್ಯೂಸ್ ತಯಾರಿಸಿ.

*ಒಂದು ತಿಂಗಳ ಕಾಲ ಉಪಹಾರಕ್ಕಿಂತ ಮುನ್ನ ಈ ಜ್ಯೂಸ್ ಸೇವಿಸಿ.

English summary

Amazing Natural Juice That Aids In Quick Weight Loss

As we know, natural remedies can treat and prevent many ailments and reducing body weight is one of their functions too! Check out this simple homemade juice that can help you reduce up to 6 kilos in a month.
Story first published: Thursday, July 13, 2017, 7:01 [IST]
Subscribe Newsletter