For Quick Alerts
ALLOW NOTIFICATIONS  
For Daily Alerts

'ಪಪ್ಪಾಯಿ ಹಣ್ಣು'- ದೇಹದ ತೂಕ ಇಳಿಸುವಲ್ಲಿ ಎತ್ತಿದ ಕೈ...

ಪಪ್ಪಾಯಿಯನ್ನು (ಪರಂಗಿ ಹಣ್ಣು) ಬಳಸಿಕೊಂಡು ತೂಕ ಕಡಿಮೆ ಮಾಡಿಕೊಂಡರೆ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಅದರಲ್ಲೂ ಪಪ್ಪಾಯಿ ವರ್ಷದ ಹೆಚ್ಚಿನ ಸಮಯದಲ್ಲಿ ನಮಗೆ ಲಭ್ಯವಿರುತ್ತದೆ. ಮುಂದೆ ಓದಿ....

By Manu
|

ರುಚಿರುಚಿಯಾದ ಅದರಲ್ಲೂ ಕರಿದಿರುವ ಆಹಾರವನ್ನು ತಿಂದು ದೇಹದ ತೂಕವನ್ನು ಇನ್ನಿಲ್ಲದಂತೆ ಏರಿಸಿಕೊಂಡು ಇರುತ್ತೇವೆ. ಅದನ್ನು ತಗ್ಗಿಸಿಕೊಳ್ಳದೆ ಇದ್ದರೆ ನಾಲ್ಕು ಜನರ ಮುಂದೆ ಹೋಗಿ ನಿಲ್ಲುವುದು ತುಂಬಾ ಅವಮಾನವೆನ್ನುವಂತಾಗುತ್ತದೆ. ಇದಕ್ಕಾಗಿಯೇ ಬೊಜ್ಜು ದೇಹವನ್ನು ಹೊಂದಿರುವವರು ಆದಷ್ಟು ತೂಕ ಕಡಿಮೆ ಮಾಡಲು ಹರಸಾಹಸ ಪಡುತ್ತಾರೆ. ಅತಿಯಾದ ತೂಕವಿದ್ದರೆ ದೇಹಕ್ಕೆ ಸೌಂದರ್ಯವೂ ಇರುವುದಿಲ್ಲ. ಬೆಳಿಗ್ಗೆ ಎದ್ದಾಕ್ಷಣ ಪಪ್ಪಾಯಿ+ಲಿಂಬೆಯ ಜ್ಯೂಸ್ ಕುಡಿಯಿರಿ!

ದೇಹದ ತೂಕ ಅತಿಯಾಗಿದ್ದರೆ ಅದರಿಂದ ಬರುವಂತಹ ರೋಗಗಳು ಹಲವಾರು. ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಿ. ಮೂರು ಗಂಟೆಯಲ್ಲಿ ಇಷ್ಟು ಕೆ.ಜಿ. ತೂಕ ಇಳಿಯದಿದ್ದರೆ ಹಣ ವಾಪಸ್ ಎನ್ನುವಂತಹ ಜಾಹೀರಾತುಗಳನ್ನು ನೋಡುತ್ತಾ ಇರುತ್ತೇವೆ. ಆದರೆ ಇಂತಹ ಜಾಹೀರಾತುಗಳ ಹಿಂದಿರುವ ಸತ್ಯ. ಅದನ್ನು ಬಳಸಿಕೊಂಡವರಿಗೆ ಗೊತ್ತು. ದೇಹದಲ್ಲಿರುವ ಕೊಬ್ಬನ್ನು ಕರಗಿಸಬೇಕೇ? ಪಪ್ಪಾಯಿ ಹಣ್ಣು ತಿನ್ನಿ!

ಹಾಗಾದರೆ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆಂದು ದಢೂತಿ ದೇಹದವರು ಪ್ರಶ್ನಿಸಬಹುದು.ಚಿಂತಿಸದಿರಿ, ಇದಕ್ಕಾಗಿಯೇ ಮನೆ ಹಾಗೂ ಪ್ರಕೃತಿಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ತೂಕ ಕಡಿಮೆ ಮಾಡಿಕೊಳ್ಳಬಹುದು. ಪಪ್ಪಾಯಿಯನ್ನು (ಪರಂಗಿ ಹಣ್ಣು) ಬಳಸಿಕೊಂಡು ತೂಕ ಕಡಿಮೆ ಮಾಡಿಕೊಂಡರೆ ಯಾವುದೇ ಅಡ್ಡಪರಿಣಾಮಗಳು ಇಲ್ಲ... ಮುಂದೆ ಓದಿ....


ಪಪ್ಪಾಯಿ ಜ್ಯೂಸ್

ಪಪ್ಪಾಯಿ ಜ್ಯೂಸ್

ಪಪ್ಪಾಯಿಯನ್ನು ನೇರವಾಗಿ ತಿನ್ನಲು ಆಗದವರು ಅದನ್ನು ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಆದರೆ ತೂಕ ಕಳೆದುಕೊಳ್ಳಬೇಕೆಂದು ಬಯಸುವವರು ಜ್ಯೂಸ್‌ಗೆ ಸಕ್ಕರೆ ಹಾಕಬೇಡಿ. ಪಪ್ಪಾಯಿಯಲ್ಲಿ ನೈಸರ್ಗಿಕವಾಗಿ ಸಿಹಿ ಅಂಶವಿದೆ.

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಹಸಿ ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ.

ಪಪ್ಪಾಯಿಯ ಸಲಾಡ್

ಪಪ್ಪಾಯಿಯ ಸಲಾಡ್

ಪಪ್ಪಾಯಿಯನ್ನು ಸಲಾಡ್ ರೂಪದಲ್ಲಿಯೂ ಸೇವನೆ ಮಾಡಬಹುದು. ಪಪ್ಪಾಯಿಯು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದು.

ಪಪ್ಪಾಯಿ ಬೀಜಗಳು

ಪಪ್ಪಾಯಿ ಬೀಜಗಳು

ಪಪ್ಪಾಯಿ ಹಣ್ಣು ಮಾತ್ರವಲ್ಲದೆ ಅದರ ಬೀಜಗಳನ್ನು ಕೂಡ ತೂಕ ಕಳೆದುಕೊಳ್ಳಲು ಸೇವಿಸಬಹುದು. ಪಪ್ಪಾಯಿಯ ಬೀಜಗಳಲ್ಲಿ ಅಮಿನೋ ಆಮ್ಲವು ಸಮೃದ್ಧವಾಗಿದೆ. ಇದು ದೇಹದಲ್ಲಿ ಕೊಬ್ಬನ್ನು ಕರಗಿಸಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು. ಸರ್ವಗುಣ ಸಂಪನ್ನ- ಪಪ್ಪಾಯಿ ಹಣ್ಣಿನ ಬೀಜ

ಪಪ್ಪಾಯಿಯ ಸ್ಮೂಥಿ

ಪಪ್ಪಾಯಿಯ ಸ್ಮೂಥಿ

ಹೆಚ್ಚಿನವರು ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಇದರಿಂದ ಪಪ್ಪಾಯಿಯ ಸ್ಮೂಥಿ ಮಾಡಿಕೊಂಡು ಕುಡಿಯಿರಿ. ಕೊಬ್ಬುರಹಿತವಾಗಿರುವ ಹಾಲನ್ನು ಬಳಸಿಕೊಂಡು ಪಪ್ಪಾಯಿ ಸ್ಮೂಥಿಯನ್ನು ಬಳಸಬಹುದು. ಸ್ಮೂಥಿಯು ಹಸಿವನ್ನು ನಿಯಂತ್ರಿಸಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತದೆ.

English summary

Simple Ways How Papaya Helps In Weight Loss

Papaya is one of those fruits which is found throughout the year. Apart from enhancing weight loss, papaya has several other health benefits. It helps in protecting the cardiovascular system, aids in digestion and is also known to prevent the risk of certain cancers. What are the ways in which you can consume papaya? Have a look:
X
Desktop Bottom Promotion