For Quick Alerts
ALLOW NOTIFICATIONS  
For Daily Alerts

ದೇಹದಲ್ಲಿರುವ ಕೊಬ್ಬನ್ನು ಕರಗಿಸಬೇಕೇ? ಪಪ್ಪಾಯಿ ಹಣ್ಣು ತಿನ್ನಿ!

By Manu
|

ಸ್ಥೂಲಕಾಯ ಕರಗಿಸಲು ಲಭ್ಯವಿರುವ ವಿಧಾನಗಳಿಂದರೆ ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವುದು, ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವುದು ಮತ್ತು ಇನ್ನಷ್ಟು ಸಂಗ್ರಹಗೊಳ್ಳಲು ಬಿಡದಿರುವುದು. ಕೊಬ್ಬನ್ನು ಕರಗಿಸಲು ಕೆಲವು ಆಹಾರಗಳ ಸೇವನೆಯಿಂದ ಸಾಧ್ಯ. ಹೇಗೆಂದರೆ ಇವು ಜೀರ್ಣಗೊಳ್ಳಲು ಹೆಚ್ಚು ಕೊಬ್ಬನ್ನು ಬಳಸುವ ಕಾರಣ ಕೊಬ್ಬು ಕರಗಲು ಸಾಧ್ಯವಾಗುತ್ತದೆ.

Burn Your Body Fat With This One Fruit

ಪಪ್ಪಾಯಿ ಅಥವಾ ಪರಂಗಿ ಹಣ್ಣು ಇಂತಹ ಒಂದು ಆಹಾರವಾಗಿದ್ದು ಕೊಬ್ಬನ್ನು ಅತಿ ಶೀಘ್ರವಾಗಿ ಕರಗಿಸಬಲ್ಲದ್ದಾಗಿದೆ. ವಾಸ್ತವವಾಗಿ ಬಾಳೆದಿಂಡು ಅತಿಹೆಚ್ಚು ಕೊಬ್ಬನ್ನು ಕರಗಿಸಿದರೂ ಇದು ಅತಿ ಕಹಿಯಾದ ಕಾರಣ ಇದರ ಬಳಿಕ ಬರುವ ಪಪ್ಪಾಯಿಯೇ ಹೆಚ್ಚು ಸೂಕ್ತವಾದ ಆಯ್ಕೆಯಾಗಿದೆ. ಏಕೆಂದರೆ ಇದು ಸಿಹಿಯಾಗಿದ್ದು ಬಹುತೇಕ ವರ್ಷದ ಹೆಚ್ಚಿನ ಸಮಯದಲ್ಲಿ ಲಭ್ಯವಿರುವ ಹಣ್ಣಾಗಿದೆ. ಮಾರುಕಟ್ಟೆಯಲ್ಲಿ ಎರಡು ವಿಧದ ಪಪ್ಪಾಯಿ ಹಣ್ಣುಗಳು ಲಭ್ಯವಿವೆ. ಹವಾಯಿಯನ್ ಮತ್ತು ಮೆಕ್ಸಿಕನ್ ಪಪ್ಪಾಯಿ ಹಣ್ಣು. ಪಪ್ಪಾಯಿ ಬೀಜದಲ್ಲಿದೆ, ಸರ್ವ ರೋಗ ನಿಯಂತ್ರಿಸುವ ಪವರ್

ಮೆಕ್ಸಿಕನ್ ಪಪ್ಪಾಯಿ ಹಣ್ಣು ಸುಮಾರು ಒಂಬತ್ತು ಕೇಜಿಗಳಷ್ಟು ದೊಡ್ಡದಾಗಿದ್ದರೆ ಹವಾಯಿಯನ್ ಪಪ್ಪಾಯಿ ಒಂದೆರಡು ಕೇಜಿಗಳಷ್ಟೇ ಇರುತ್ತದೆ. ಇದರೊಂದಿಗೆ ತರಬೂಜ ಮತ್ತು ಪೀಚ್ ಹಣ್ಣುಗಳನ್ನು ಸೇರಿಸಿದರೆ ಇನ್ನಷ್ಟು ರುಚಿಯಾಗುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಇದೆ.

Burn Your Body Fat With This One Fruit

ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳಿದ್ದರೂ ಇದರಲ್ಲಿ ಕೊಬ್ಬು ಇಲ್ಲದೇ ಇರುವ ಕಾರಣ ತೂಕವನ್ನು ಹೆಚ್ಚಿಸುವುದಿಲ್ಲ. ಅಲ್ಲದೇ ಇದರಲ್ಲಿ ಕೊಲೆಸ್ಟ್ರಾಲ್ ಸಹಾ ಇಲ್ಲ. ಬದಲಿಗೆ ಪೊಟ್ಯಾಶಿಯಂ, ಕರಗದ ನಾರು ಮತ್ತು ಫೋಲಿಕ್ ಆಮ್ಲಗಳಿವೆ. ಇವೆಲ್ಲವೂ ಪಪ್ಪಾಯಿಯನ್ನು ನಿತ್ಯವೂ ಸೇವಿಸಬಹುದಾದ ಒಂದು ಉತ್ತಮ ಆಯ್ಕೆಯಾಗಿಸಿವೆ. ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!

ಪಪ್ಪಾಯಿ ಹಣ್ಣು ಅತಿ ಮುಖ್ಯ ಪ್ರಯೋಜನವೆಂದರೆ ಜೀರ್ಣಕ್ರಿಯೆಯಲ್ಲಿ ಇದು ನೀಡುವ ಸಹಕಾರ. ಇದರಲ್ಲಿರುವ ಪ್ರೋಟಿಯೋಲೈಟಿಕ್ ಎಂಬ ಕಿಣ್ವ ಪ್ರೋಟೀನುಗಳನ್ನು ಒಡೆಯಲು ಸಮರ್ಥವಾಗಿದ್ದು ಇದಕ್ಕಾಗಿ ಪಿಷ್ಟ ಮತ್ತು ಕೊಬ್ಬನ್ನು ಬಳಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ತೂಕ ಕಳೆದುಕೊಳ್ಳಲು ಪಪ್ಪಾಯಿ ಒಂದು ಉತ್ತಮ ಆಹಾರವಾಗಿದೆ.

 Burn Your Body Fat With This One Fruit

ಪ್ರೋಟೀನುಗಳನ್ನು ಒಡೆದ ಬಳಿಕ ಉಳಿಯುವ ತ್ಯಾಜ್ಯಗಳನ್ನೂ ನಿವಾರಿಸುವಲ್ಲಿ ನೆರವಾಗುತ್ತದೆ. ಅಷ್ಟೇ ಅಲ್ಲದೆ ಪಪ್ಪಾಯಿಯ ಸೇವನೆಯಿಂದ ಶರೀರದ ಗ್ರಂಥಿಗಳೆಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಕೆಲವು ತಜ್ಞರ ಪ್ರಕಾರ ನಿತ್ಯವೂ ಸೇವಿಸಬೇಕಾದ ಹಣ್ಣುಗಳ ಪಟ್ಟಿಯಲ್ಲಿ ಪಪ್ಪಾಯಿ ಪ್ರಥಮ ಮೂರು ಹಣ್ಣುಗಳಲ್ಲೊಂದಾಗಿದೆ. ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ

ಅಲ್ಲದೇ ಇದರಲ್ಲಿರುವ ವಿಟಮಿನ್ ಇ ಕಿತ್ತಳೆ ಮತ್ತು ಸೇಬಿಗಿಂತಲೂ ಹೆಚ್ಚು ಪ್ರಮಾಣದಲ್ಲಿದ್ದು ಇದು ವಿಶೇಷವಾಗಿ ಚರ್ಮದ ಆರೈಕೆಗೆ ನೆರವಾಗುತ್ತದೆ. ಹಾಗೂ ಚರ್ಮ ಸೌಮ್ಯ ಮತ್ತು ಕಾಂತಿಯುಕ್ತವಾಗುತ್ತದೆ. ಅಲ್ಲದೇ ನಿತ್ಯದ ಪಪ್ಪಾಯಿಯ ಸೇವನೆಯಿಂದ ಕರುಳಿನ ಮತ್ತು ಗರ್ಭನಾಳದ ಕ್ಯಾನ್ಸರ್ ಬರದಂತೆ ತಡೆಯಲೂಬಹುದಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

 Burn Your Body Fat With This One Fruit

ಪಪ್ಪಾಯಿಯನ್ನು ಕತ್ತರಿಸಿ ಚಿಕ್ಕ ತುಂಡುಗಳನ್ನಾಗಿಸಿಯೂ ಸೇವಿಸಬಹುದು ಅಥವಾ ನುಣ್ಣಗೆ ಅರೆದು ಜ್ಯೂಸ್ ಮಾಡಿಕೊಂಡು ಸಹಾ ಕುಡಿಯಬಹುದು. ಅಥವಾ ಬಿಸಿಯಾದ ಸಾಲ್ಸಾ ಪೇಯದಲ್ಲಿ ಮಿಶ್ರಣ ಮಾಡಿಕೊಂಡು ಅಥವಾ ವಿವಿಧ ಹಣ್ಣುಗಳ ಜೊತೆ ಅರೆದು ತಣ್ಣನೆಯ ಪೇಯವನ್ನಾಗಿಸಿಯೂ ಕುಡಿಯಬಹುದು. ಅಥವಾ ಸಾಲಾಡ್‌ನೊಂದಿಗೆ ಚಿಕ್ಕ ತುಂಡುಗಳನ್ನಾಗಿಸಿ ತಿನ್ನಬಹುದು.

Burn Your Body Fat With This One Fruit

ಫ್ರೂಟ್ ಸಾಲಾಡ್ ನಲ್ಲಿ ಪಪ್ಪಾಯಿ ಹಣ್ಣು ಸೂಕ್ತವಾಗಿ ಬೆರೆಯುತ್ತದೆ. ಇದರೊಂದಿಗೆ ಕೊಂಚ ತರಬೂಜ, ಸ್ಟ್ರಾಬೆರಿ ಮೊದಲಾದ ಹಣ್ಣುಗಳನ್ನು ಸೇರಿಸಿಕೊಂಡು ಸೇವಿಸುವ ಮೂಲಕ ಉತ್ತಮ ಪ್ರಯೋಜನ ಪಡೆಯಬಹುದು.

English summary

Burn Your Body Fat With This One Fruit

Discover the incredible weight-reduction advantages of papaya, how to best eat it and how much you must eat to get maximum advantage of the papaya fruit, in this article, which is one among nature's amazing fat-burning foods. Eaten as a fruit, papaya is sweet and delicious and a fantastic way of having your proposed daily portion of fruits. You'll find two types of papayas that most individuals prefer to eat. The two types are the Hawaiian papaya and the Mexican papaya.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more