For Quick Alerts
ALLOW NOTIFICATIONS  
For Daily Alerts

  ತಿನ್ನುವ ಅಭ್ಯಾಸಕ್ಕೆ ಬ್ರೇಕ್ ಹಾಕಿ, ಹೊಟ್ಟೆಯ ಬೊಜ್ಜು ಕರಗುತ್ತೆ!

  By Arshad
  |

  ಸಾಮಾನ್ಯವಾಗಿ ಸುದ್ದಿಯಲ್ಲಿರುವ ಖ್ಯಾತನಾಮರು, ಚಿತ್ರತಾರೆಯರು, ಕ್ರೀಡಾಪಟುಗಳು ತಮ್ಮ ದೇಹವನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರುತ್ತಿರುವ ಬಗ್ಗೆ ಅಚ್ಚರಿಯಾಗುತ್ತದೆ ಅಲ್ಲವೇ? ಅದರಲ್ಲೂ ವಿಶೇಷವಾಗಿ ಹೊರಕಾಣದ ಇವರ ಹೊಟ್ಟೆ, ಈ ಸಪಾಟುತನ ಸಾಧಿಸಲು ಹೇಗೆ ಸಾಧ್ಯವಾಯಿತು ಎಂದು ಬೆರಗು ಮೂಡುತ್ತದೆ.  ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

  ಅಷ್ಟೊಂದು ಕಡಿಮೆ ತಿಂದೂ, ವ್ಯಾಯಾಮ ಮಾಡಿಯೂ ಮುಂದೆ ಬಂದ ಹೊಟ್ಟೆಯನ್ನು ಕರಗಿಸಲು ಅಸಾಧ್ಯ ಎಂದು ಕೈ ಚೆಲ್ಲಿರುವ ನಮಗೆ ಇವರ ಸಪಾಟು ಹೊಟ್ಟೆ ಕಂಡು ಕೊಂಚ ಅಸೂಯೆಯೂ ಆಗಿರಬಹುದು. ದೈಹಿಕ ಶಿಕ್ಷಕರ ಮತ್ತು ತಜ್ಞರ ಪ್ರಕಾರ ಕರಗಿಸಲು ಅತ್ಯಂತ ಕಷ್ಟಕರವಾದ ನಮ್ಮ ದೇಹದ ಭಾಗವೆಂದರೆ ಹೊಟ್ಟೆಯ ಮತ್ತು ಸೊಂಟದ ಕೊಬ್ಬು. ಏಕೆಂದರೆ ನಮ್ಮ ದೇಹ ಕೊಬ್ಬನ್ನು ಇಲ್ಲಿ ಸಂಗ್ರಹಿಸಲು ಪ್ರಾರಂಭಿಸಿದರೂ ಇದನ್ನು ಬಳಸಿಕೊಳ್ಳಬೇಕೆಂದರೆ ಕಟ್ಟ ಕಡೆಯ ಆದ್ಯತೆ ನೀಡುತ್ತದೆ.

  Want A Flat Stomach? Then, Stay Away From These Common Foods!
   

  ಇದೇ ಕಾರಣಕ್ಕೆ ಯಾವುದೇ ವ್ಯಾಯಾಮದಲ್ಲಿ ಇಡಿಯ ದೇಹದ ಕೊಬ್ಬು ಕರಗಿದ ಬಳಿಕವೇ ಹೊಟ್ಟೆಯ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ದೇಹದಾರ್ಢ್ಯ ಪಟುಗಳಿಗೂ ಈ ನಿಯಮದಿಂದ ಬಿಡುಗಡೆ ಇಲ್ಲ. ಇವರೂ ಸಹಾ ತಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಲು ತಿಂಗಳುಗಟ್ಟಲೇ ಸತತವಾದ ಅಭ್ಯಾಸ, ವ್ಯಾಯಾಮ ಮತ್ತು ಮುಖ್ಯವಾಗಿ ತಮ್ಮ ಆಹಾರದಲ್ಲಿ ಕಟ್ಟುನಿಟ್ಟುಗಳನ್ನು ಪಾಲಿಸುತ್ತಾ ಬಂದಿದ್ದಾರೆ.                  ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

  ಡೊಳ್ಳು ಹೊಟ್ಟೆಗೆ ಕುಳಿತೇ ಮಾಡುವ ಕೆಲಸ, ವ್ಯಾಯಾಮದ ಕೊರತೆಯ ಜೊತೆಗೇ ಕೆಲವು ಆಹಾರಗಳೂ ಪರೋಕ್ಷವಾಗಿ ಕಾರಣವಾಗಿವೆ. ಮೊದಲ ಎರಡು ಕಾರಣಗಳಿಗೆ ವ್ಯಾಯಾಮದತ್ತ ಒಲವು ತೋರುವುದೇ ಅನಿವಾರ್ಯವಾಗಿದೆ. ಆದರೆ ಮೂರನೆಯ ಕಾರಣ, ಅಂದರೆ ಕೆಲವು ಆಹಾರಗಳನ್ನು ದೂರವಾಗಿಸುವ ಮೂಲಕ ಹೊಟ್ಟೆಯ ಕೊಬ್ಬು ಏರದಂತೆ ನೋಡಿಕೊಳ್ಳಬಹುದು. ಇದು ನಿಮ್ಮ ವ್ಯಾಯಾಮದ ಪ್ರಯತ್ನಗಳಿಗೆ ಹೆಚ್ಚು ನೆರವು ನೀಡಿ ಹೊಟ್ಟೆ ಶೀಘ್ರವಾಗಿ ಕರಗಿಸಲು ನೆರವಾಗುತ್ತದೆ.

  Want A Flat Stomach? Then, Stay Away From These Common Foods!
   

  ಡೈರಿ ಉತ್ಪನ್ನಗಳು

  ಡೈರಿ ಉತ್ಪನ್ನಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿದ್ದರೂ ಇವುಗಳಲ್ಲಿರುವ ಕೊಬ್ಬಿನ ಅಂಶ ತೂಕಹೆಚ್ಚಿಸಲೂ ಕಾರಣವಾಗುತ್ತವೆ. ವಿಶೇಷವಾಗಿ ಈ ಕೊಬ್ಬು ಮೊದಲಾಗಿ ಸೊಂಟದಲ್ಲಿ ಸಂಗ್ರಹವಾಗಲು ತೊಡಗುತ್ತದೆ. ಆದ್ದರಿಂದ ಇನ್ನಷ್ಟು ಕೊಬ್ಬು ತುಂಬಿಕೊಳ್ಳದಿರಲು ಡೈರಿ ಉತ್ಪನ್ನಗಳ ಬಳಕೆಯನ್ನು ಆದಷ್ಟು ಕನಿಷ್ಠ ಪ್ರಮಾಣಕ್ಕೆ ಇಳಿಸುವುದು ಮತ್ತು ಸಾಧ್ಯವಾದರೆ ಕೆನೆರಹಿತ ಉತ್ಪನ್ನಗಳಿಗೆ ಬದಲಿಸುವುದೇ ಉತ್ತಮ ಪರ್ಯಾಯವಾಗಿದೆ.

  ಸಂಸ್ಕರಿಸಿದ ಸಕ್ಕರೆ

  ನಾವು ಸಕ್ಕರೆ ಎಂದು ಕರೆಯುವ ಸಂಸ್ಕರಿಸಿದ ಸಕ್ಕರೆಯನ್ನು ಕೆಲವರು ಪ್ರಾಣಿಜನ್ಯ ಎಂದೇ ಕರೆಯುತ್ತಾರೆ. ಏಕೆಂದರೆ ಮೂಲತಃ ಸಕ್ಕರೆ ಕಂದು ಬಣ್ಣದ್ದಾಗಿದೆ (ಬೆಲ್ಲದ ಬಣ್ಣ). ಆದರೆ ಇದನ್ನು ಬಿಳಿಯಾಗಿಸಲು ಸುಟ್ಟ ಮೂಳೆಗಳನ್ನು (bone char) ಬಳಸಲಾಗುತ್ತದೆ. ನೋಡಲು ಬಿಳಿಯಾಗಿ ಸುಂದರವಾಗಿರುವ ಈ ಸಕ್ಕರೆಯನ್ನೇ ವಿಶ್ವದಾದ್ಯಂತ ಸಿಹಿತಿಂಡಿ, ಬೇಕರಿ ಉತ್ಪನ್ನಗಳು, ಲಘು ಪಾನೀಯ ಅಷ್ಟೇ ಅಲ್ಲ, ನಮ್ಮ ಮನೆಯ ಟೀ ಕಾಫಿಗಳನ್ನೂ ಉಪಯೋಗಿಸಲಾಗುತ್ತದೆ.   ಅತಿಯಾದ ಸಕ್ಕರೆ ಸೇವನೆ ರೋಗಕ್ಕೆ ಮುಕ್ತ ಆಹ್ವಾನ

  Want A Flat Stomach? Then, Stay Away From These Common Foods!
   

  ಈ ಸಕ್ಕರೆಯಲ್ಲಿ ಸುಕ್ರೋಸ್ ಅಂಶ ಅತಿ ಹೆಚ್ಚಾಗಿದ್ದು ಸಿಹಿ ಎಂದು ಹೆಚ್ಚು ತಿಂದರೆ ಹೊಟ್ಟೆಯ ಸುತ್ತಳತೆಯೂ ಹೆಚ್ಚುವ ಸಂಭವ ಹೆಚ್ಚಾಗುತ್ತದೆ. ವಾಸ್ತವವಾಗಿ ಇಂದು ನಮಗೆ ಬಂದಿರುವ ಹೊಟ್ಟೆಯ ಕೊಬ್ಬು ಸಕ್ಕರೆಯಿಂದಲೇ ಆಗಿರಬಹುದು.

  ಅತಿ ಹೆಚ್ಚಿನ ಉಪ್ಪಿನ ಬಳಕೆ

  ಉಪ್ಪಿಗಿಂತ ರುಚಿಯಿಲ್ಲ ಎಂಬುದೇನೋ ಸರಿ, ಆದರೆ ರುಚಿಗಾಗಿ ಎಷ್ಟು ಉಪ್ಪು ಹಾಕಬೇಕು ಎಂದೇ ನಮಗೆ ಗೊತ್ತಿಲ್ಲ. ಕೊಂಚವೇ ಹುಳಿ ಕಾರ ಕಡಿಮೆಯಾದರೂ ಉಪ್ಪು ಹೆಚ್ಚಿಸಿ ರುಚಿಯನ್ನು ಸರಿಪಡಿಸಿಕೊಳ್ಳುವ ನಮಗೆ ಈ ಉಪ್ಪು ಎಷ್ಟು ಹಾನಿಕರ ಎಂದೇ ಗೊತ್ತಿಲ್ಲ. ತಜ್ಞರ ಪ್ರಕಾರ ಉಪ್ಪಿನ ಬಳಕೆ ಒಂದು ದಿನದಲ್ಲಿ ಗರಿಷ್ಠ ಆರು ಗ್ರಾಂ ದಾಟಬಾರದು. 

  ಆರು ಗ್ರಾಂ ಸಹಾ ವಿಪರೀತವೇ, ಆರೋಗ್ಯಕರ ಎಂದರೆ 2.4ಗ್ರಾಂ ಸರಿಯಾದ ಪ್ರಮಾಣ. ಆದರೆ ನಾವು ದಿನದ ಮೂರೂ ಹೊತ್ತಿನ ಆಹಾರದಲ್ಲಿ ಇದಕ್ಕೂ ಹೆಚ್ಚು ಉಪ್ಪನ್ನು ಸೇವಿಸುತ್ತೇವೆ. ಇದಕ್ಕೆ ಕಡಿವಾಣ ಹಾಕಿದರೆ ಹೊಟ್ಟೆಯ ಕೊಬ್ಬಿಗೂ ಕಡಿವಾಣ ಹಾಕಬಹುದು. ಅಂತೆಯೇ 2.4ಗ್ರಾಂ ಉಪ್ಪಿಗಿಂತ ರುಚಿಯಿಲ್ಲ ಎಂದು ಗಾದೆಯನ್ನು ಬದಲಿಸುವುದು ಉತ್ತಮವಲ್ಲವೇ!   ಐದೇ ದಿನದಲ್ಲಿ ಬೊಜ್ಜು ನಿಯಂತ್ರಣಕ್ಕೆ! ಈ ಟಿಪ್ಸ್ ಪಾಲಿಸಿ

  English summary

  Want A Flat Stomach? Then, Stay Away From These Common Foods!

  Have you ever wondered how celebrities or models, flaunting their fit bodies in sexy clothes, attain such unbelievably flat tummies? Do you feel that no matter how much your exercise or diet, your abdominal fat still refuses to go away? If yes, then we understand how frustrating it can be.
  Story first published: Friday, June 24, 2016, 13:44 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more