For Quick Alerts
ALLOW NOTIFICATIONS  
For Daily Alerts

  ದಿನವಿಡೀ ಕುಳಿತು ಕೆಲಸ ಮಾಡುವವರು, ತಪ್ಪದೇ ಈ ಲೇಖನ ಓದಿ....

  By Manu
  |

  ಇಂದಿನ ದಿನಗಳಲ್ಲಿ ದೊರಕುತ್ತಿರುವ ಉದ್ಯೋಗಗಳು ಕಂಪ್ಯೂಟರ್ ಆಧಾರಿತವಾಗಿದ್ದು ಹೆಚ್ಚಿನ ದಿನ ಕುಳಿತೇ ಇರಲು ಪ್ರೋತ್ಸಾಹಿಸುತ್ತದೆ. ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳೂ ಹೆಚ್ಚಿನ ದಿನ ಕುಳಿತೇ ಇರಲು ಪ್ರೇರಣೆ ನೀಡುತ್ತವೆ.

  ಕಷ್ಟ ಪಟ್ಟು ದುಡಿಯುವುದು ಇಂದಿನ ದಿನಗಳಲ್ಲಿ ಬುದ್ಧಿ ಇಲ್ಲದವರ ಆಯ್ಕೆಯಾಗಿದ್ದು, ಕುಳಿತಲ್ಲೇ ಸುಲಭವಾಗಿ ಮೊಬೈಲು ಕಂಪ್ಯೂಟರು ಬಳಸಿ ಹಣ ಮಾಡುವುದೇ ಹೆಚ್ಚಿನವರ ಆದ್ಯತೆಯಾಗಿದ್ದು ಪರಿಣಾಮವಾಗಿ ದೇಹಕ್ಕೆ ಅಗತ್ಯವಾದ ಚಲನವಲನಗಳಿಂದ ವಂಚಿತರಾಗುತ್ತಿದ್ದೇವೆ.    ಆಫೀಸಿನಲ್ಲಿ ಕೂತು ಬೊಜ್ಜು ಬರುತ್ತಿದೆಯೆ?

  ಆದರೆ ಇದರಿಂದ ನಮಗೆ ಯಾವ ರೀತಿಯ ನಷ್ಟವಾಗುತ್ತದೆ ಎಂದು ಗೊತ್ತೇ? ನಮ್ಮ ದೇಹ ನಿತ್ಯವೂ ಅಡ್ಡಾಡುತ್ತಲೇ ಇರಬೇಕು, ಹಾಗೇ ನಿರ್ಮಿಸಲ್ಪಟ್ಟಿದೆ. ಆದರೆ ಇಡಿಯ ದಿನ ಹೆಚ್ಚಿನ ಸಮಯ ಕುಳಿತೇ ಇರುವ ಮೂಲಕ ಪ್ರತಿ ಅಂಗವೂ ಏನಾದರೊಂದು ಗುಣವನ್ನು ಕಳೆದುಕೊಳ್ಳುತ್ತದೆ.

  ಆದರೆ ಇದರ ಪರಿಣಾಮಗಳು ಥಟ್ಟನೇ ಗೋಚರವಾಗದೇ ಇರುವ ಕಾರಣ ಹೆಚ್ಚಿನವರು ಈ ಬಗ್ಗೆ ತಲೆಬಿಸಿ ಮಾಡಿಕೊಳ್ಳಲು ಹೋಗುವುದಿಲ್ಲ. ನಯವಾಗಿ ಹೇಳಿದರೂ ತಮ್ಮ ಅನಿವಾರ್ಯತೆಯನ್ನು ತಿಳಿಸುತ್ತಾರೆ. ಆದರೆ ವಾಸ್ತವವಾಗಿ ನಾವು ಅರಿಯದೇ ನಮ್ಮ ದೇಹದ ಅಂಗಗಳಿಗೆ ಯಾವ ರೀತಿಯಾಗಿ ತೊಂದರೆ ಎದುರಾಗುತ್ತದೆ ಗೊತ್ತೇ?   ಕೆಲಸದ ಸಮಯದಲ್ಲಿ ಕಾಡುವ ಸೊಂಟ ನೋವಿಗೆ ಪರಿಹಾರ

  ಮೆದುಳಿಗೆ ಹಾನಿ!

  ಮೆದುಳಿಗೆ ಹಾನಿ!

  ಹೆಚ್ಚಿನ ಹೊತ್ತು ಕುಳಿತೇ ಇರುವ ಕಾರಣ ರಕ್ತಪರಿಚಲನೆಯ ಪ್ರಮಾಣ ಕೊಂಚವಾದರೂ ಕಡಿಮೆಯಾಗುತ್ತದೆ. ಯಾವುದೋ ಸಂದರ್ಭದಲ್ಲಿ ಅಗತ್ಯ ಒತ್ತಡ ಸಿಗದೇ ಹೋದರೆ ಚಿಕ್ಕ ಕಣಗಳು ರಕ್ತನಾಳಗಳ ಒಳಗೇ ಹೆಪ್ಪುಗಟ್ಟಿಬಿಡುತ್ತವೆ.

  ಮೆದುಳಿಗೆ ಹಾನಿ!

  ಮೆದುಳಿಗೆ ಹಾನಿ!

  ಈ ಹೆಪ್ಪುಗಟ್ಟಿದ ರಕ್ತವೇನಾದರೂ ಮೆದುಳಿಗೆ ತಲುಪಿದರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಹೆಚ್ಚು ಕುಳಿತುಕೊಳ್ಳುವ ಮೂಲಕ ಅಪಾಯವನ್ನು ನಾವಾಗಿಯೇ ಆಹ್ವಾನಿಸುತ್ತಿದ್ದೇವೆ.

  ಹೊಟ್ಟೆ

  ಹೊಟ್ಟೆ

  ಕುಳಿತೇ ಇರುವವರ ಹೊಟ್ಟೆ ಸಾಮಾನ್ಯವಾಗಿ ಉಳಿದವರಿಗಿಂತ ಹೆಚ್ಚು ದೊಡ್ಡದಾಗಿರುವುದನ್ನು ಮೇಲ್ನೋಟದಲ್ಲಿಯೇ ಗಮನಿಸಬಹುದು. ಕೆಲವು ಸಂಶೋಧನೆಗಳ ಮೂಲಕ ಕುಳಿತೇ ಇರುವ ಸಂದರ್ಭದಲ್ಲಿ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚಿರುವುದನ್ನೂ ಕಂಡುಕೊಳ್ಳಲಾಗಿದೆ.

  ಹೊಟ್ಟೆ

  ಹೊಟ್ಟೆ

  ಸಂಗ್ರಹವಾದ ಕೊಬ್ಬನ್ನು ಕರಗಿಸಲು ಅಗತ್ಯವಾದ ಕೆಲವು ಕಿಣ್ವಗಳಿಗೆ ಸತತ ಚಲನೆ ಬೇಕು. ಚಲನೆ ಇಲ್ಲದೇ ಇದ್ದಾಗ ಇವೂ ತಟಸ್ಥಗೊಂಡು ಕೊಬ್ಬನ್ನು ಕರಗಿಸದೇ ಇನ್ನಷ್ಟು ಹೆಚ್ಚಿನ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.

  ಹೃದಯ

  ಹೃದಯ

  ಹೃದಯದ ಕೆಲಸ ರಕ್ತವನ್ನು ಒತ್ತಡದಿಂದ ದೇಹದ ಎಲ್ಲಾ ಭಾಗಗಳಿಗೆ ಒದಗಿಸುವುದೇ ಆಗಿದ್ದರೂ ಒಂದೇ ಗತಿಯಲ್ಲಿ ಇಡಿಯ ದಿನ ಇರಬೇಕು ಎಂದಲ್ಲ. ನಿಸರ್ಗ ಇದರ ವೇಗವನ್ನು ಹೆಚ್ಚು ಕಡಿಮೆ ಮಾಡುತ್ತಾ ಇರಬೇಕೆಂಬ ನಿಟ್ಟಿನಲ್ಲಿಯೇ ನಿರ್ಮಿಸಿದೆ.

  ಹೃದಯ

  ಹೃದಯ

  ಆದರೆ ಇಡಿಯ ದಿನ ಕುಳಿತೇ ಇರುವ ಕಾರಣ ಹೃದಯಕ್ಕೆ ಹೆಚ್ಚಿನ ಒತ್ತಡ ದೊರಕಿಸುವ ಅಗತ್ಯವೇ ಇಲ್ಲದೇ ದುರ್ಬಲವಾಗುತ್ತದೆ. ಪರಿಣಾಮವಾಗಿ ಕುತ್ತಿಗೆ, ಶ್ವಾಸಕೋಶಗಳ ಬಳಿ ರಾತ್ರಿ ಹೊತ್ತಿನಲ್ಲಿ ಕಡಿಮೆ ಒತ್ತಡದ ಕಾರಣ ನೀರು ತುಂಬಿಕೊಳ್ಳುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!

  ಶ್ವಾಸಕೋಶಗಳು

  ಶ್ವಾಸಕೋಶಗಳು

  ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳುವುದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆಯಾಗಿದ್ದು ಹೃದಯದ ಮೇಲೆ ಹೆಚ್ಚಿನ ಭಾರ ಮತ್ತು ಒತ್ತಡ ನೀಡುತ್ತದೆ. ಶ್ವಾಸಕೋಶದ ಕ್ಷಮತೆಯೂ ಉಡುಗಿ ಅಪಾಯ ಹೆಚ್ಚುತ್ತಲೇ ಹೋಗುತ್ತದೆ.

  ಕೈಗಳು

  ಕೈಗಳು

  ನಮ್ಮ ದೈನಂದಿನ ಕಾರ್ಯಗಳಲ್ಲಿ ಕೈಗಳ ಪಾತ್ರ ಬಹುಮುಖ್ಯ. ಅಂದರೆ ನಮ್ಮ ಕೈಗಳು ಹಲವಾರು ಬಾರಿಯಾದರೂ ಮೇಲೆ ಕೆಳಗೆ ಬರುತ್ತಲೇ ಇರಬೇಕು. ಆದರೆ ಕುಳಿತೇ ಇರುವ ಕಾರ್ಯಗಳ ಕಾರಣ ಇದು ಇಲ್ಲವಾಗಿ ಕೊಬ್ಬು ತುಂಬಿಕೊಂಡು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.

  ಕಾಲುಗಳು

  ಕಾಲುಗಳು

  ನಮ್ಮ ಕಾಲುಗಳು ಸಹಾ ಸತತವಾಗಿ ಶರೀರದ ಭಾರವನ್ನು ಎತ್ತಿಕೊಂಡು ಚಲಿಸುತ್ತಲೇ ಇರುವಂತೆ ನಿರ್ಮಿಸಲಾಗಿದೆ. ಇದಕ್ಕಾಗಿ ಕಾಲುಗಳ ಮತ್ತು ತೊಡೆಗಳ ಸ್ನಾಯುಗಳು ರಚನೆಗೊಂಡಿದ್ದು ನೀರನ್ನು ಸಂಗ್ರಹಿಸಿರುತ್ತವೆ.

  ಕಾಲುಗಳು

  ಕಾಲುಗಳು

  ಇಡಿಯ ದಿನ ಕುಳಿತುಕೊಳ್ಳುವ ಮೂಲಕ ಈ ನೀರು ಬಳಕೆಯಾಗದೇ ಹಾಗೇ ಉಳಿದುಬಿಡುತ್ತದೆ. ಇದು ಇನ್ನಷ್ಟು ತೂಕ ಹೆಚ್ಚಲು, ಕೊಂಚ ದೂರ ನಡೆಯಲೂ ಸುಸ್ತು ಆವರಿಸಲು ಕಾರಣವಾಗುತ್ತದೆ. ಆದ್ದರಿಂದ ಯಾವುದಾದರೂ ನೆವ ತೆಗೆದು ಓಡಾಡುತ್ತಾ ಇರುವುದು ಉತ್ತಮ ಕ್ರಮವಾಗಿದೆ.

  ಕುತ್ತಿಗೆ

  ಕುತ್ತಿಗೆ

  ಕೆಲವು ಜನರಲ್ಲಿ ತೊಡೆಗಳಲ್ಲಿ ಸಂಗ್ರಹವಾಗಿದ್ದ ನೀರು ನೇರವಾಗಿ ಕುತ್ತಿಗೆಗೂ ತಲುಪಿ ಸುಖನಿದ್ದೆಗೆ ಅಡ್ಡಿಯಾಗುತ್ತದೆ. ಅಂದರೆ ನಿದ್ದೆಯಲ್ಲಿ ಉಸಿರಾಟ ತಡೆತಡೆದು ಆಗುವ sleep apnea ಎಂಬ ತೊಂದರೆಯ ಸಾಧ್ಯತೆ ಹೆಚ್ಚುತ್ತದೆ. ಬೆನ್ನೇರಿ ಕಾಡುವ ಕುತ್ತಿಗೆ ನೋವಿಗೆ ಸರಳ ಟಿಪ್ಸ್

  English summary

  The Dangers Of Sitting All Day!

  Most of us are into sedentary jobs as this world is dictated by computers and technological gadgets that require us to sit and work. We no longer need to work hard in the fields or do any kind of physical labour to make both ends meet.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more