ಮನೆ ಔಷಧ: ದೇಹದ ತೂಕ ಇಳಿಸುವ ಪವರ್ ಫುಲ್ ಜ್ಯೂಸ್

By: manu
Subscribe to Boldsky

ನಿಮಗೆ ತಿನ್ನುವುದೆಂದರೆ ತುಂಬಾ ಇಷ್ಟ. ಅದನ್ನು ಬಿಡಲು ನಿಮ್ಮಿಂದ ಆಗುವುದಿಲ್ಲ. ಆದರೆ ದೇಹದ ತೂಕವೂ ಹೆಚ್ಚಾಗುತ್ತಲೇ ಇದೆ. ಇದರಿಂದ ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುತ್ತದೆ. ತೂಕ ಇಳಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಿ ಕೈಬಿಟ್ಟಿರಬಹುದು. 

weight loss
 

ಆದರೆ ಇಂತಹ ಪ್ರಯತ್ನಗಳಿಂದ ನಿಮ್ಮ ತೂಕ ಮಾತ್ರ ಹಾಗೆ ಉಳಿದುಕೊಂಡಿರಬಹುದು. ತೂಕ ಹೆಚ್ಚಾಗುವ ಸಮಸ್ಯೆಯು ಹಲವಾರು ಮಂದಿಯನ್ನು ಕಾಡುತ್ತಲೇ ಇದೆ. ತೂಕ ಕಳೆದುಕೊಳ್ಳಬೇಕಾದರೆ ಆಹಾರ ಪಥ್ಯ ಕೈಗೊಳ್ಳಬೇಕು ಮತ್ತು ವ್ಯಾಯಾಮ ಮಾಡುತ್ತಿರಬೇಕು. ಇದನ್ನು ಮಾಡಲು ಹೆಚ್ಚಿನವರಿಗೆ ಇಷ್ಟವಿರುವುದಿಲ್ಲ. ಆದರೆ ಈ ಪಾನೀಯವನ್ನು ಕುಡಿದರೆ ನೀವು ಖಂಡಿತವಾಗಿಯೂ 10 ಕೆಜಿಯಷ್ಟು ತೂಕ ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಲೋಳೆ ಸರ ಜ್ಯೂಸ್- ಇನ್ನು ತೂಕ ಇಳಿಸಲು ರೆಡಿಯಾಗಿ..!   

 

Aloevera

ಕೊಬ್ಬು ಇಳಿಸುವ ಪಾನೀಯ ತಯಾರಿಸಲು ಬೇಕಾಗುವ ಸಾಮಗ್ರಿಗಳು

*1 ಚಮಚ ಜೇನುತುಪ್ಪ

*1 ಚಮಚ ಶುಂಠಿ ಹುಡಿ 

ginger

*1 ಚಮಚ ನಿಂಬೆರಸ

*2-3 ಚಮಚ ಅಲೋವೆರಾ ಜ್ಯೂಸ್

*1 ಲೋಟ ನೀರು 

lime juice
 

ತಯಾರಿಸುವ ವಿಧಾನ

*ಒಂದು ಲೋಟ ಶುದ್ಧೀಕರಿಸಿದ ನೀರಿಗೆ ಮೂರು ಚಮಚ ಅಲೋವೆರಾ ಜ್ಯೂಸ್ ಹಾಕಿ. ಇದಕ್ಕೆ ಒಂದು ಚಮಚ ಶುಂಠಿ ಹುಡಿ ಮತ್ತು ಒಂದು ಚಮಚ ನಿಂಬೆರಸ ಹಾಕಿಕೊಳ್ಳಿ. 

*ಒಂದು ಚಮಚ ಜೇನು ತುಪ್ಪ ಹಾಕಿಕೊಂಡು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿಯಿರಿ. 

honey
 

ಜೇನುತುಪ್ಪವು ಕೊಬ್ಬನ್ನು ಕರಗಿಸುತ್ತದೆ ಮತ್ತು ಇದು ದೇಹಕ್ಕೆ ಶಕ್ತಿಯನ್ನು ಕೂಡ ನೀಡುವುದು. ಜೇನುತುಪ್ಪವು ತೂಕ ಕಳೆದುಕೊಳ್ಳಲು, ಚಯಾಪಚಾಯ ಕ್ರಿಯೆ ವೃದ್ಧಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ನಿಂಬೆರಸದಲ್ಲಿ ಅತ್ಯುನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸಿ ದೇಹದ ಕೊಬ್ಬನ್ನು ವಿಘಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 

Aloevera juice
 

ಅಲೋವೆರಾದಲ್ಲಿ ಹೆಚ್ಚಿನ ಔಷಧಿಯ ಗುಣಗಳಿವೆ. ಇದು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಇದು ದೇಹದಲ್ಲಿರುವ ಕಲ್ಮಶ ಹಾಗೂ ವಿಷವನ್ನು ಹೊರಹಾಕುತ್ತದೆ. ಅಲೋವೆರಾದಲ್ಲಿ 75 ರೀತಿಯ ವಿಟಮಿನ್ ಹಾಗೂ ಖನಿಜಾಂಶಗಳಿವೆ. ಅಲೋವೆರಾ ಜ್ಯೂಸ್ ನ ಆರೋಗ್ಯ ಲಾಭಗಳು   

water
 

ನಿಮಗೆ ಬೇಗನೆ ಫಲಿತಾಂಶ ಬೇಕೆಂದರೆ ಪ್ರತೀದಿನ ಇದನ್ನು ಕುಡಿಯಬೇಕು. ತೂಕ ಕಳೆದುಕೊಳ್ಳಲು ಬಯಸುವವರು ಹೆಚ್ಚಿನ ನೀರು ಕುಡಿಯಬೇಕು ಮತ್ತು ಪೋಷಕಾಂಶಗಳಿರುವ ಆಹಾರ ಸೇವಿಸಬೇಕು. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯು ತೂಕ ಕಳೆದುಕೊಳ್ಳುವ ಪ್ರಕ್ರಿಯೆಗೆ ಬಲ ನೀಡಿ ಚಯಾಪಚಾಯ ಕ್ರಿಯೆ ಹೆಚ್ಚಿಸುವುದು. ಶುಂಠಿ ಜಜ್ಜಿ ಹಾಕಿದ ಬಿಸಿ ನೀರು ಕುಡಿದರೆ-ತೂಕ ಇಳಿಕೆ...

English summary

Powerful Recipe Of Fat Cutter Drink To Lose Up To 10 kg Of Weight

Are you a foodie who is struggling to lose weight? Then, this article is for you. We will introduce you to a fat-cutter beverage that is the perfect solution that you have been looking for. Weight gain is a problem that so many of us struggle with, and it turns out to be quite bothersome to stick to a strict diet. This magic drink can help you lose weight up to 10 kg.
Please Wait while comments are loading...
Subscribe Newsletter