For Quick Alerts
ALLOW NOTIFICATIONS  
For Daily Alerts

ಶುಂಠಿ ಜಜ್ಜಿ ಹಾಕಿದ ಬಿಸಿ ನೀರು ಕುಡಿದರೆ-ತೂಕ ಇಳಿಕೆ...

By Manu
|

ಬೊಜ್ಜು ದೇಹದವರು ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಹಲವಾರು ರೀತಿಯ ಮದ್ದನ್ನು ಸೇವಿಸುತ್ತಾರೆ. ಆದರೆ ತೂಕ ಮಾತ್ರ ಹಾಗೆ ಇರುತ್ತದೆ. ಕೆಲವು ಸಮಯದಲ್ಲಿ ಈ ಮದ್ದಿನಿಂದ ಅಡ್ಡಪರಿಣಾಮಗಳು ಉಂಟಾಗಲು ಆರಂಭವಾಗುತ್ತದೆ. ಮುಂಜಾನೆ ಎದ್ದು ಶುಂಠಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಆದರೆ ಕೆಲವೊಂದು ಮನೆಮದ್ದನ್ನು ಬಳಸಿದರೆ ತೂಕ ಇಳಿಸಿಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳೂ ಇಲ್ಲ. ನಾವು ಪದಾರ್ಥಗಳಿಗೆ ಬಳಕೆ ಮಾಡುವಂತಹ ಶುಂಠಿಯು ಹಲವಾರು ಆರೋಗ್ಯ ಗುಣಗಳನ್ನು ಹೊಂದಿದೆ. ಆರೋಗ್ಯ ಟಿಪ್ಸ್: ಶುಂಠಿ ಸೋಸಿದ ನೀರು, ಆಯಸ್ಸು ನೂರು!

ಶುಂಠಿಯು ದೇಹದಲ್ಲಿನ ಶೀತವನ್ನು ಕಡಿಮೆ ಮಾಡಿ ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೆ ಇದು ದೇಹದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎನ್ನುವ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಬನ್ನಿ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ..

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಎರಡು ಕಪ್ ನೀರನ್ನು ಕುದಿಸಿ ಅದಕ್ಕೆ ಸರಿಯಾಗಿ ಜಜ್ಜಿಕೊಂಡಿರುವಂತಹ ಶುಂಠಿಯನ್ನು ಹಾಕಿಕೊಳ್ಳಿ. 15-20 ನಿಮಿಷಗಳ ಕಾಲ ಅದನ್ನು ಕುದಿಸಿ. ಬೆಳಿಗ್ಗೆ ಎದ್ದ ಕೂಡಲೇ ಈ ನೀರನ್ನು ಕುಡಿಯಬೇಕು. ಇದನ್ನು ದಿನದಲ್ಲಿ ಎರಡು ಮೂರು ಸಲ ಕುಡಿಯಬೇಕು ಎಂದು ಅನಿಸಿದರೆ ಕುಡಿಯಬಹುದು. ಆದರೆ ಊಟಕ್ಕೆ ಮೊದಲು ಅಥವಾ ಊಟವಾದ ತಕ್ಷಣ ಇದನ್ನು ಕುಡಿಯಬೇಡಿ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

ಬೊಜ್ಜು ಮತ್ತು ಕೊಲೆಸ್ಟ್ರಾಲ್ ಜತೆಯಾಗಿಯೇ ದೇಹವನ್ನು ಸೇರಿಕೊಳ್ಳುತ್ತದೆ. ಶುಂಠಿ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು. ಇದು ರಕ್ತದೊತ್ತಡವನ್ನು ಕೂಡ ಕಡಿಮೆ ಮಾಡುವಂತಹ ಸಾಮರ್ಥ್ಯ ಹೊಂದಿದೆ.

ಚಯಾಪಚಯಾ ಕ್ರಿಯೆ

ಚಯಾಪಚಯಾ ಕ್ರಿಯೆ

ಶುಂಠಿ ಹಾಕಿದ ನೀರನ್ನು ಕುಡಿದರೆ ಚಯಾಪಚಯಾ ಕ್ರಿಯೆ ಸುಗಮವಾಗಿ ತೂಕ ಕಳೆದುಕೊಳ್ಳಲು ನೆರವಾಗುವುದು. ಇದು ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುವುದು.

ಕ್ಯಾಲೋರಿಯ ನಿಯಂತ್ರಣಕ್ಕೆ

ಕ್ಯಾಲೋರಿಯ ನಿಯಂತ್ರಣಕ್ಕೆ

ಇದು ಉರಿಯೂತ ಶಮನಕಾರಿ ಗುಣ ಹೊಂದಿದೆ. ಶುಂಠಿ ನೀರನ್ನು ಕುಡಿದರೆ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಮತ್ತು ಕ್ಯಾಲೋರಿ ದಹಿಸಲು ಪರೋಕ್ಷವಾಗಿ ನೆರವಾಗುವುದು.

ವೈರಲ್ ಹಾಗೂ ಫಂಗಲ್ ವಿರೋಧಿ ಗುಣ ಹೊಂದಿದೆ

ವೈರಲ್ ಹಾಗೂ ಫಂಗಲ್ ವಿರೋಧಿ ಗುಣ ಹೊಂದಿದೆ

ಶುಂಠಿಯಲ್ಲಿರುವ ಮಹತ್ವದ ಗುಣಗಳೆಂದರೆ ಇದು ವೈರಲ್ ಹಾಗೂ ಫಂಗಲ್ ವಿರೋಧಿ ಗುಣ ಹೊಂದಿದೆ. ಇದರಿಂದ ನಿಮ್ಮ ಪ್ರತಿರೋಧಕ ವ್ಯವಸ್ಥೆಗೆ ಬಲ ಬರುವುದು. ಇದರಲ್ಲಿ ಸತು, ಮೆಗ್ನಿಶಿಯಂ ಮತ್ತು ಚರೋಮಿಯನ್ ಇದೆ. ಇದು ಅಲರ್ಜಿ ನಿವಾರಣೆ ಮಾಡುತ್ತದೆ.

ಕೊರಿಸ್ಟೊಲ್‌ನ ನಿಯಂತ್ರಣಕ್ಕೆ

ಕೊರಿಸ್ಟೊಲ್‌ನ ನಿಯಂತ್ರಣಕ್ಕೆ

ಶುಂಠಿ ನೀರನ್ನು ಕುಡಿಯುವುದರಿಂದ ಕೊರಿಸ್ಟೊಲ್ ಮಟ್ಟ ತಗ್ಗುವುದು. ಬೊಜ್ಜಿಗೆ ಅಧಿಕ ಮಟ್ಟದ ಕೊರಿಸ್ಟೊಲ್ ಕಾರಣ.

ಜೀರ್ಣಾಂಗ ಕ್ರಿಯೆಯ ವೃದ್ಧಿಗೆ

ಜೀರ್ಣಾಂಗ ಕ್ರಿಯೆಯ ವೃದ್ಧಿಗೆ

ಇದು ಜೀರ್ಣಾಂಗ ಕ್ರಿಯೆಯನ್ನು ಸುಗಮ ಮಾಡಿ ತೂಕ ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿದ್ದರೆ ದೇಹವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಆಹಾರ ಸೇವನೆ ಪ್ರಮಾಣವು ಕಡಿಮೆಯಾಗುವುದು

ಆಹಾರ ಸೇವನೆ ಪ್ರಮಾಣವು ಕಡಿಮೆಯಾಗುವುದು

ಒಂದು ಹಂತದ ಆರೋಗ್ಯಕರ ಊಟದ ಬಳಿಕ ನಿಮಗೆ ತೃಪ್ತಿಯ ಭಾವನೆ ಮೂಡಿಸುವಲ್ಲಿ ಶುಂಠಿ ನೆರವಾಗುವುದು. ಇದರಿಂದ ಆಹಾರ ಸೇವನೆ ಪ್ರಮಾಣವು ಕಡಿಮೆಯಾಗುವುದು.

English summary

Boiled Ginger Water: Does It Help Lose Weight?

Ginger is a powerful food and is capable of doing a lot more than just adding spicy flavor to your food. Ginger can even relieve cold symptoms and reduce inflammation in your body.
X
Desktop Bottom Promotion