For Quick Alerts
ALLOW NOTIFICATIONS  
For Daily Alerts

ಲೋಳೆ ಸರ ಜ್ಯೂಸ್- ಇನ್ನು ತೂಕ ಇಳಿಸಲು ರೆಡಿಯಾಗಿ..!

|

ಲೋಳೆಸರದ (ಅಲೋವೆರಾ) ಉಪಯೋಗಗಳ ಪಟ್ಟಿ ಮಾಡಿದರೆ ಬಹಳ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಕೂದಲು ಮತ್ತು ಚರ್ಮಕ್ಕೆ ಇದು ನೀಡುವ ಪೋಷಣೆ ಬೇರೆ ಯಾವುದೇ ಕೃತಕ ಪ್ರಸಾಧನಕ್ಕಿಂತ ಉತ್ತಮವಾಗಿದೆ. ಚಿಕ್ಕಪುಟ್ಟ ಗಾಯಗಳಾದರೆ ಲೋಳೆಸರದ ರಸ ಹೆಚ್ಚಿಕೊಂಡರೆ ಕೂಡಲೇ ರಕ್ತ ಒಸರುವುದು ನಿಲ್ಲುತ್ತದೆ. ಸುಟ್ಟ ಗಾಯದ ಉರಿಯನ್ನು ತಣಿಸುತ್ತದೆ. ಆದರೆ ಈ ಲೋಳೆಸರ ತೂಕವಿಳಿಸಲೂ ಸಮರ್ಥವಾಗಿದೆ ಎಂದು ನಿಮಗೆ ತಿಳಿದಿತ್ತೇ? ಲೋಳೆಸರ-ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಹೌದು, ತೂಕವಿಳಿಸಲು ಲೋಳೆಸರ ಒಂದು ಉತ್ತಮವಾದ ಉಪಾಯವಾಗಿದೆ. ಆದರೆ ಇದನ್ನು ಸರಿಯಾದ ಬಳಸಲು ಗೊತ್ತಿರಬೇಕು ಅಷ್ಟೇ. ಈ ತೊಂದರೆಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನಿವಾರಿಸಲಾಗಿದೆ. ಸುಲಭವಾದ ಮತ್ತು ಮನೆಯಲ್ಲಿ ಲಭ್ಯವಿರುವ ಸಾಮಾಗ್ರಿಗಳನ್ನು ಉಪಯೋಗಿಸುವ ವಿಧಾನವನ್ನು ವಿವರಿಸಲಾಗಿದೆ. ಲೋಳೆಸರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ಹೆಚ್ಚಳ, ದೇಹಕ್ಕೆ ಲಭಿಸಿದ ಶಕ್ತಿಯಲ್ಲಿ ಏರಿಕೆ, ಉತ್ತಮಗೊಂಡ ರೋಗ ನಿರೋಧಕ ಗುಣ ಮೊದಲಾದ ಲಾಭಗಳಿವೆ. ಲೋಳೆಸರದಿಂದ ಡಯಾಬಿಟಿಸ್ ಕಡಿಮೆಯಾಗಬಹುದಾ?

ತೂಕ ಇಳಿಸಲು ಲೋಳೆಸರ ಉಪಯೋಗಿಸಿ ತಯಾರಿಸುವ ಈ ಕ್ರಮವನ್ನು ಮುಂಜಾನೆ ಎದ್ದ ಬಳಿಕ ಪ್ರಥಮ ಆಹಾರವಾಗಿ ಸೇವಿಸಬೇಕು. ಆದರ ಬಳಿಕ ನಡೆಸುವ ವ್ಯಾಯಾಮದಿಂದ ಹೆಚ್ಚಿನ ಕೊಬ್ಬು ಬಳಸಲ್ಪಡುವ ಮೂಲಕ ತೂಕ ಇಳಿಯುತ್ತದೆ. ಯಾವುದೇ ಹೊಸ ಪ್ರಯೋಗ ಮಾಡುವ ಮೊದಲು ಮಾಡುವಂತೆ ಈ ವಿಧಾನ ಅನುಸರಿಸುವ ಮುನ್ನ ನಿಮ್ಮ ಕುಟುಂಬದ ವೈದ್ಯರ ಸಲಹೆ ಪಡೆದು ಮುಂದುವರೆಯುವುದು ಉತ್ತಮ. ನೀವು ಈಗಾಗಲೇ ಬೇರೆ ಯಾವುದಾದರೂ ಔಷಧಿಗಳನ್ನು ಸೇವಿಸುತ್ತಿದ್ದು ಲೋಳೆಸರವನ್ನು ಸೇವಿಸುವ ಮೂಲಕ ಏನಾದರೂ ತೊಂದರೆಯಾಗಬಹುದೇ ಎಂದು ಮೊದಲೇ ವಿಚಾರಿಸಿಕೊಳ್ಳಿ.

ಲೋಳೆಸರ ಮತ್ತು ಹಣ್ಣುಗಳ ರಸ

ಲೋಳೆಸರ ಮತ್ತು ಹಣ್ಣುಗಳ ರಸ

ಒಂದು ಲೋಳೆಸರದ ಕೋಡನ್ನು ಮುರಿದು ಇದರ ಅಂಚುಗಳನ್ನು ಹರಿತವಾದ ಕತ್ತಿಯಿಂದ ನಿವಾರಿಸಿ. ಬಳಿಕ ಕೋಡನ್ನು ಉದ್ದಕ್ಕೆ ಮೇಲ್ಭಾಗ ಮಾತ್ರ ಸೀಳಿ ಒಳಗಿನ ಲೋಳೆಯನ್ನು ಚಮಚವೊಂದರಲ್ಲಿ ಕೆರೆದು ತೆಗೆಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲೋಳೆಸರ ಮತ್ತು ಹಣ್ಣುಗಳ ರಸ

ಲೋಳೆಸರ ಮತ್ತು ಹಣ್ಣುಗಳ ರಸ

ಇದನ್ನು ನಿಮ್ಮ ಆಯ್ಕೆಯ ಯಾವುದೇ ಹಣ್ಣಿನೊಂದಿಗೆ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಮುಂಜಾನೆ ಪ್ರಥಮ ಆಹಾರವಾಗಿ ಸೇವಿಸಿ.

ಸಲಹೆ

ಸಲಹೆ

ಟಿಪ್ಪಣಿ: ಲೋಳೆಸರ ಈಗ ಮಾತ್ರೆಗಳ ರೂಪದಲ್ಲಿಯೂ ಲಭ್ಯವಾಗುತ್ತಿದೆ. ಇದನ್ನು ಸೇವಿಸುವುದಾದರೆ ಸಾಕಷ್ಟು ನೀರನ್ನು ಕುಡಿಯುವುದು ಅಗತ್ಯ ಹಾಗೂ ಸೇವಿಸಬೇಕಾದ ಪ್ರಮಾಣವನ್ನು ನಿಮ್ಮ ವೈದ್ಯರು ನಿಗದಿಪಡಿಸಿದ ಪ್ರಕಾರವೇ ಸೇವಿಸಿ.

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್

ಲೋಳೆಸರದ ಕೋಡೊಂದನ್ನು ಮುರಿದು ಅದರ ಹೊರಗಿನ ಸಿಪ್ಪೆಯನ್ನು ಆಲುಗಡ್ಡೆಯ ಸಿಪ್ಪೆ ಸುಲಿದಂತೆ ಸುಲಿಯಿರಿ

*ಸಿಪ್ಪೆಯಿಲ್ಲದ ಈ ಭಾಗವನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ.

*ಈ ಮಿಶ್ರಣವನ್ನು ಬಟ್ಟೆಯಲ್ಲಿ ಕೊಂಚ ನೀರಿನೊಂದಿಗೆ ಹಿಂಡಿ ರಸ ತೆಗೆದು ಒಂದು ಬಾಟಲಿಯಲ್ಲಿ ಸಂಗ್ರಹಿಸಿ

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್

ಈ ದ್ರವವನ್ನು ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಕಪ್ ಸೇವಿಸಿ ಮತ್ತು ದಿನದ ಮೂರೂ ಹೊತ್ತಿನ ಊಟಕ್ಕೂ ಹದಿನೈದು ನಿಮಿಷ ಮೊದಲು ಸೇವಿಸಿ.

ಸುಮಾರು ಎರಡು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿ.

ಟಿಪ್ಪಣಿ: ಫ್ರಿಜ್ಜಿನಲ್ಲಿಟ್ಟ ಲೋಳೆಸರ ಕೊಂಚ ಕಹಿಯಾಗುವುದರಿಂದ ಪ್ರತಿದಿನ ಹೊಸತಾದ ಕೋಡನ್ನು ಮುರಿದು ಒಂದು ಚಮಚ ತಿರುಳನ್ನು ಚಮಚದಲ್ಲಿ ಕೆರೆದು ಉಪಯೋಗಿಸಬಹುದು.

ಲೋಳೆಸರ ಮತ್ತು ಲಿಂಬೆಯರಸ

ಲೋಳೆಸರ ಮತ್ತು ಲಿಂಬೆಯರಸ

ಒಂದು ಲೋಳೆಸರದ ಕೋಡನ್ನು ಮುರಿದು ಮಧ್ಯಕ್ಕೆ ಉದ್ದನಾಗಿ ಸೀಳಿ. ಇದನ್ನು ಲಿಂಬೆ ಹಿಂಡಿದಂತೆ ಹಿಂಡಿ ರಸ ತೆಗೆಯಿರಿ. ಇಲ್ಲದಿದ್ದರೆ ಸಿಪ್ಪೆ ನಿವಾರಿಸಿದ ಬಳಿಕ ಲಿಂಬೆ ಹಿಸುಕುವ ಉಪಕರಣದಿಂದಲೂ ರಸ ತೆಗೆಯಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲೋಳೆಸರ ಮತ್ತು ಲಿಂಬೆಯರಸ

ಲೋಳೆಸರ ಮತ್ತು ಲಿಂಬೆಯರಸ

ಇನ್ನು ಸಮಪ್ರಮಾಣದಲ್ಲಿ ಲಿಂಬೆರಸವನ್ನು ಸೇರಿಸಿ. ಸಾಕಷ್ಟು ನೀರು ಮತ್ತು ಕೊಂಚ ಸಕ್ಕರೆ ಅಥವಾ ಬೆಲ್ಲ (ರುಚಿಗೆ ಮಾತ್ರ) ಸೇರಿಸಿ ಎರಡರಿಂದ ಮೂರು ನಿಮಿಷ ಕಲಕಿ ನಿಯಮಿತವಾಗಿ ಕುಡಿಯಿರಿ. ಇದು ಸ್ಥೂಲಕಾಯದ ವ್ಯಕ್ತಿಗಳಿಗೆ ಸೂಕ್ತವಾದ ವಿಧಾನವಾಗಿದೆ.

ಲೋಳೆಸರ ಮತ್ತು ಜೇನು

ಲೋಳೆಸರ ಮತ್ತು ಜೇನು

ಒಂದು ಲೋಟ ಲೋಳೆಸರದ ರಸಕ್ಕೆ ಒಂದು ದೊಡ್ಡಚಮಚ ಜೇನು ಸೇರಿಸಿ.

ಇದನ್ನು ಚೆನ್ನಾಗಿ ಕಲಕಿ ಕುಡಿಯಿರಿ.

ಲೋಳೆಸರ ಮತ್ತು ಜೇನು

ಲೋಳೆಸರ ಮತ್ತು ಜೇನು

ನಿಯಮಿತವಾಗಿ ಇದನ್ನು ಸೇವಿಸುವ ಮೂಲಕ ಇದು ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ ಹಾಗೂ ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಅಗತ್ಯವಿರುವುದರಿಂದ ತೂಕ ಶೀಘ್ರವೇ ಇಳಿಯಲು ಪ್ರಾರಂಭವಾಗುತ್ತದೆ.

ಲೋಳೆಸರ ಮತ್ತು ನೀರು

ಲೋಳೆಸರ ಮತ್ತು ನೀರು

ಸುಮಾರು ಎರಡು ದೊಡ್ಡಚಮಚ ಲೋಳೆಸರದ ರಸವನ್ನು ಒಂದು ಲೋಟ ನೀರಿನೊಂದಿಗೆ ಕದಡಿ ಕುಡಿಯಿರಿ. ದಿನಕ್ಕೆ ಕನಿಷ್ಠ ಒಂದು ಲೋಟ ಕುಡಿಯುವ ಮೂಲಕ ತೂಕ ಇಳಿಸಲು ಹೆಚ್ಚಿನ ನೆರವು ದೊರಕಿದಂತಾಗುತ್ತದೆ.

ಲೋಳೆಸರ ಮತ್ತು ಕೇಲ್ ಎಲೆಗಳು

ಲೋಳೆಸರ ಮತ್ತು ಕೇಲ್ ಎಲೆಗಳು

ಲೋಳೆಸರದ ಹೊರಭಾಗದ ಸಿಪ್ಪೆಯನ್ನು ನಿವಾರಿಸಿ. ಚಮಚ ಉಪಯೋಗಿಸಿ ಒಳಗಿನ ಭಾಗವನ್ನು ತೆಗೆಯಿರಿ. ಇದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಅರೆಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲೋಳೆಸರ ಮತ್ತು ಕೇಲ್ ಎಲೆಗಳು

ಲೋಳೆಸರ ಮತ್ತು ಕೇಲ್ ಎಲೆಗಳು

ಬಳಿಕ ನಿಮ್ಮ ನೆಚ್ಚಿನ ಯಾವುದೇ ತರಕಾರಿ ಅಥವಾ ಹಣ್ಣುಗಳನ್ನು ಸೇರಿಸಿ. ಕೇಲ್ ಎಲೆಗಳು, ಶುಂಠಿ, ಪ್ಲಂ ಹಣ್ಣುಗಳು, ಅಥವಾ ನಿಮಗಿಷ್ಟವಾದ ಇತರ ಹಣ್ಣುಗಳನ್ನು ಸೇರಿಸಿ ಅರೆಯಿರಿ. ಮೂರು ನಿಮಿಷಗಳ ಬಳಿಕ ಕನಿಷ್ಠ ದಿನಕ್ಕೊಂದು ಬಾರಿ ಸೇವಿಸುವ ಮೂಲಕ ತೂಕ ಶೀಘ್ರವಾಗಿ ಇಳಿಯಲು ಪ್ರಾರಂಭವಾಗುತ್ತದೆ.

English summary

Aloe Vera for Weight Loss

We all know that Aloe Vera heals cuts and wounds and that we can use it as a soothing balm for burns. But did you know that it’s also an effective tool for weight loss? Listed below are several simple ways you can use Aloe Vera juice as an effective at-home weight loss system.Since Aloe Vera cleanses the digestive system and boosts energy levels, the recipes described below are best consumed first thing in the morning and before workouts.
X
Desktop Bottom Promotion