Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಟೊಮೇಟೊ ಜ್ಯೂಸ್ ಕುಡಿಯಿರಿ, ತೂಕ ಇಳಿಸಿಕೊಳ್ಳಿರಿ!
ಶಾಪಿಂಗ್ ಮಾಲ್‌ಗೆ ಹೋಗಿ ಒಂದು ಜತೆ ಬಟ್ಟೆ ತೆಗೆದುಕೊಂಡು ಅದನ್ನು ಧರಿಸಲು ಚೇಜಿಂಗ್ ರೂಮ್ ಗೆ ಹೋಗುತ್ತೀರಿ. ಛೇ! ಇದೇನಿದು ಈ ಸೈಜ್ ನ ಬಟ್ಟೆ ನಾನು ಮೊದಲು ಧರಿಸುತ್ತಿದ್ದೆ. ಈಗ ನನಗೆ ಯಾಕೆ ಆಗುತ್ತಿಲ್ಲ ಎಂದು ಬಟ್ಟೆ ಧರಿಸಲು ಕಷ್ಟಪಡುತ್ತಿರುವಾಗ ನಿಮಗನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ತೂಕ ಹೆಚ್ಚಾಗಿದೆ. ದಿನ ಪೂರ್ತಿ ಯಾವುದೇ ವ್ಯಾಯಾಮವಿಲ್ಲದೆ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡಿ ಮನೆಗೆ ಬಂದ ಬಳಿಕ ಟಿವಿ ನೋಡುತ್ತಾ ಕುಳಿತು ಏನಾದರೂ ತಿಂದು ಬಳಿಕ ಊಟ ಮಾಡುತ್ತೀರಿ. ವಾರಾಂತ್ಯದ ದಿನಗಳಲ್ಲಿ ಅಲ್ಲಿಇಲ್ಲಿ ಸುತ್ತಾಡಲು ಹೋಗಿ ಬೇಕಾದದ್ದನ್ನು ತಿನ್ನುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗದೆ ಇರುತ್ತದೆಯಾ?

ಅತಿಯಾದ ತೂಕ ಹೊಂದಿರುವುದು ನಿಮಗೆ ಕಿರಿಕಿರಿಯನ್ನು ಉಂಟುಮಾಡುವುದು. ಆರೋಗ್ಯದ ದೃಷ್ಟಿಯಿಂದಲೂ ದೇಹವು ಅತಿಯಾದ ತೂಕ ಹೊಂದಿದ್ದರೆ ಅದು ಮುಂದೆ ಸಮಸ್ಯೆಗೆ ಕಾರಣವಾಗುವುದು. ಮಂಡಿ ನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ ನಿಮ್ಮನ್ನು ಕಾಡಲು ಆರಂಭಿಸುತ್ತದೆ. ಇದರಿಂದಾಗಿ ನಾವು ದೇಹಕ್ಕೆ ತಕ್ಕ ತೂಕವನ್ನು ಹೊಂದಿದ್ದರೆ ಮುಂದೆ ತೂಕ ಇಳಿಸಿಕೊಳ್ಳುವ ಸಮಸ್ಯೆಯಾವುದಿಲ್ಲ.
ತೂಕ ಹೆಚ್ಚಾಗಲು ಕಾರಣಗಳು ಏನೇ ಇದ್ದರೂ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಇದು ಕಷ್ಟವೇನಲ್ಲ. ಜೀವನಶೈಲಿಯನ್ನು ಬದಲಾಯಿಸುವುದರಿಂದ ನಾವು ಅತಿಯಾದ ತೂಕವನ್ನು ಕಳೆದುಕೊಂಡು ಆರೋಗ್ಯಕರ ತೂಕವನ್ನು ಕಾಪಾಡಬಹುದಾಗಿದೆ. ಇದಕ್ಕಾಗಿ ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲೇ ತೂಕ ಕಳೆದುಕೊಳ್ಳುವುದು ಹೇಗೆ ಎಂದು ನಿಮಗೆ ಯೋಚನೆಯಾಗುತ್ತಿದೆಯಾ? ಕೇವಲ ಎರಡು ತಿಂಗಳಲ್ಲಿ ನೀವು ಅತಿಯಾದ ತೂಕ ಕಳೆದುಕೊಂಡು ಆರೋಗ್ಯಕರ ತೂಕ ಪಡೆಯಬಹುದು. ಅದು ಕೇವಲ ಟೊಮೆಟೋದಿಂದ. ಹೌದು ಟೊಮೆಟೋ ಜ್ಯೂಸ್ ನ್ನು ಪ್ರತಿದಿನ ಕುಡಿಯುವುದರಿಂದ ನೀವು ಎರಡೇ ತಿಂಗಳಲ್ಲಿ ತೂಕ ಕಳೆದುಕೊಳ್ಳಬಹುದು. ಜ್ಯೂಸ್ ನೊಂದಿಗೆ ಆರೋಗ್ಯಕರ ಆಹಾರ ಕ್ರಮ ಮತ್ತು ಸ್ವಲ್ಪ ವ್ಯಾಯಾಮ ಮಾಡಿದರೆ ಸಾಕು.
ಟೊಮೇಟೊ ಜ್ಯೂಸ್
ಮಾಡಲು ಬೇಕಾಗುವ ಸಾಮಾಗ್ರಿಗಳು
ಟೊಮೇಟೊ, ಜೇನುತುಪ್ಪ ಮತ್ತು ಕರಿಮೆಣಸು
ಆ್ಯಂಟಿಆಕ್ಸಿಡೆಂಟ್ ಮತ್ತು ಮಿನರಲ್‌ಗಳಿಂದ ತುಂಬಿರುವ ಟೊಮೇಟೊ ತೂಕ ಕಡಿಮೆ ಮಾಡುವ ತರಕಾರಿಗಳಲ್ಲಿ ಪ್ರಮುಖವಾದದ್ದು. ಟೊಮೇಟೊದಲ್ಲಿ ಆ್ಯಂಟಿಆಕ್ಸಿಡೆಂಟ್ ಗಳೊಂದಿಗೆ ವಿಟಮಿನ್ ಸಿ ಮತ್ತು ಪೈಥೋನ್ಯೂಟ್ರಿಯನ್ಸ್ ಗಳಿವೆ. ಇದು ದೇಹದಲ್ಲಿನ ಕೊಬ್ಬು ಬೇಗನೆ ವಿಭಜನೆಗೊಳ್ಳಲು ನೆರವಾಗುತ್ತದೆ. ಅಲ್ಲದೆ ಟೊಮೇಟೊದಲ್ಲಿನ ಆ್ಯಮಿನೋ ಆ್ಯಸಿಡ್ ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುವುದು. ಇದರಿಂದ ದೇಹವು ವೇಗವಾಗಿ ಕೊಬ್ಬನ್ನು ಕರಗಿಸುವುದು. ಕರಿಮೆಣಸಿನಲ್ಲಿ ಕೂಡ ಕೊಬ್ಬನ್ನು ಕರಗಿಸುವಂತಹ ಗುಣಗಳಿವೆ. ಈ ಪಾನೀಯದಲ್ಲಿರುವ ಮತ್ತೊಂದು ಸಾಮಾಗ್ರಿ ಜೇನುತುಪ್ಪವು ದೇಹದಲ್ಲಿನ ಕೊಬ್ಬು ಮತ್ತು ವಿಷವನ್ನು ಹೊರಹಾಕುವುದು. ನಿಯಮಿತವಾಗಿ ಬಳಸುವುದರಿಂದ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ.
ತಯಾರಿಸುವ ವಿಧಾನ
ಎರಡು ಟೊಮೇಟೊಗಳನ್ನು ತುಂಡು ಮಾಡಿ ಮತ್ತು ಅದನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ, ಕರಿಮೆಣಸನ್ನು ಹುಡಿ ಮಾಡಿಕೊಂಡು ಜ್ಯೂಸ್ ಗೆ ಹಾಕಿ. ಅದಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ. ಸರಿಯಾಗಿ ಮಿಶ್ರಣ ಮಾಡಿಕೊಂಡು. ಇದನ್ನು ಸೋಸಿ ಕುಡಿಯಬಹುದು ಅಥವಾ ಹಾಗೆ ಕುಡಿಯಬಹುದು. ಪ್ರತೀ ದಿನ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಎರಡು ತಿಂಗಳ ಕಾಲ ನಿಯಮಿತವಾಗಿ ಇದನ್ನು ಸೇವಿಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

