ಸಿಕ್ಸ್ ಪ್ಯಾಕ್ ಮೈಕಟ್ಟು ಬೇಕೇ? ಈ ಆಹಾರಗಳನ್ನು ಸೇವಿಸಿ

By: manu
Subscribe to Boldsky

ಹೊಟ್ಟೆಯ ಸ್ನಾಯುಗಳನ್ನು ಹುರುಗಟ್ಟಿಸುವುದು ಅತಿ ಕಷ್ಟಕರ. ಏಕೆಂದರೆ ಸೊಂಟದ ಕೊಬ್ಬು ಕರಗಿದ ಬಳಿಕವೇ ಹೊಟ್ಟೆಯ ಸ್ನಾಯುಗಳು ಹುರಿಗಟ್ಟುತ್ತವೆ. ಇದಕ್ಕಾಗಿ ಕುಳಿತೇಳುವ, ಪುಷಪ್, ಇಳಿಜಾರಿನ ವ್ಯಾಯಾಮ ಮೊದಲಾದವುಗಳನ್ನೆಲ್ಲಾ ಅನುಸರಿಸಬೇಕಾಗಿ ಬರುತ್ತದೆ.

ಆದರೂ ಹೊಟ್ಟೆಯಲ್ಲಿ ಸಿಕ್ಸ್ ಪ್ಯಾಕ್ ಸ್ನಾಯುಗಳು ಮೂಡುವುದು ಅನುಮಾನ. ಏಕೆಂದರೆ ಬರೆಯ ವ್ಯಾಯಾಮ ಮಾಡುವುದು ಮಾತ್ರ ಸಾಕಾಗದು, ಇದಕ್ಕೆ ಸೂಕ್ತವಾದ ಆಹಾರಗಳನ್ನೂ ಸೇವಿಸಬೇಕು. ಈ ಆಹಾರಗಳು ಸ್ನಾಯುಗಳನ್ನು ಹೆಚ್ಚಿಸುವಂತಹದ್ದಾಗಿದ್ದು ತೂಕವನ್ನು ಹೆಚ್ಚಿಸದಂತಹವೂ ಆಗಿರಬೇಕು. ಇಂತಹ ಆಹಾರಗಳನ್ನೇ ಸೇವಿಸುತ್ತಿದ್ದೀರೇ? ಸಿಕ್ಸ್ ಪ್ಯಾಕ್ ಗಾಗಿ ಮಾಡಿ ಸ್ವಲ್ಪ ಕಸರತ್ತು!

ನಿಮ್ಮ ಆಹಾರದಲ್ಲಿ ಉತ್ತಮ ಪ್ರಮಾಣದ ಕರಗದ ನಾರು, ಪ್ರೋಟೀನ್, ಕ್ಯಾಲ್ಸಿಯಂ, ವಿಟಾಮಿನ್ನುಗಳು ಮತ್ತು ಖನಿಜಗಳಿರಬೇಕು. ಇವೆಲ್ಲಾ ಇರುವ ಆಹಾರಗಳನ್ನು ಸೇವಿಸಿದರೆ ಮಾತ್ರ ನಿಮ್ಮ ಕನಸಿನ ಮೈಕಟ್ಟು ಪಡೆದು ಹೊಟ್ಟೆಯಲ್ಲಿ ಸಿಕ್ಸ್ ಪ್ಯಾಕ್ ಗಳನ್ನೂ ಅಳವಡಿಸಲು ಸಾಧ್ಯ.

ಬರೆಯ ಆಹಾರಗಳನ್ನು ಮಾತ್ರ ನಿಯಂತ್ರಿಸಿದರೆ ಸಾಲದು, ಸತತ ಮತ್ತು ನಿಯಮಿತ ವ್ಯಾಯಾಮ, ದುಃಶ್ಚಟಗಳಿಂದ ದೂರವಿರುವುದು, ಸಾಕಷ್ಟು ನಿದ್ದೆ ಮಾಡುವುದು, ಒತ್ತಡಗಳಿಂದ ದೂರವಿರುವುದು ಎಲ್ಲವೂ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿವೆ. ಬನ್ನಿ, ನಿಮ್ಮ ಕನಸಿನ ಸಿಕ್ಸಿ ಪ್ಯಾಕ್ ಹೊಟ್ಟೆಯನ್ನು ಪಡೆಯಲು ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ನೋಡೋಣ.....   

ಬಾಳೆಹಣ್ಣು

ಬಾಳೆಹಣ್ಣು

ಪೊಟ್ಯಾಶಿಯಂನ ಆಗರವಾದ ಬಾಳೆಹಣ್ಣು ಅತ್ಯುತ್ತಮವಾದ ಆಹಾರವಾಗಿದ್ದು ದೇಹದಲ್ಲಿನ ನೀರನ್ನು ಅನಗತ್ಯವಾಗಿ ಪೋಲಾಗದಂತೆ ತಡೆಯುತ್ತದೆ ಈ ಮೂಲಕ ಸ್ನಾಯುಗಳು ಹುರಿಗಟ್ಟಲು ನೆರವಾಗುತ್ತದೆ. ಈ ಗುಣ ಹೊಟ್ಟೆಯ ಸ್ನಾಯುಗಳು ಹುರಿಗಟ್ಟಲೂ ಸಹಕಾರಿಯಾಗಿವೆ. ದಿನಕ್ಕೆ ಒಂದು ಅಥವಾ ಎರಡು ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ನಿಮ್ಮ ಕನಸು ಶೀಘ್ರವಾಗಿ ನನಸಾಗುತ್ತದೆ.ಆರೋಗ್ಯ ವೃದ್ಧಿಗೆ ದಿನಕ್ಕೊಂದು 'ಬಾಳೆ ಹಣ್ಣು' ತಿಂದರೂ ಸಾಕು!

ಮೊಟ್ಟೆ

ಮೊಟ್ಟೆ

ಮೊಟ್ಟೆಗಳಲ್ಲಿ ಪ್ರೋಟೀನ್ ಹೇರಳವಾಗಿದ್ದು ಸ್ನಾಯುಗಳನ್ನು ಬೆಳೆಸುವಲ್ಲಿ ಅತ್ಯುತ್ತಮ ಆಹಾರವಾಗಿದೆ. ಪುರುಷರಿಗೆ ಹೊಟ್ಟೆಯ ಸ್ನಾಯುಗಳನ್ನು ಬೆಳೆಸಲು ದಿನಕ್ಕೆ ಒಂದು ಅಥವಾ ಎರಡು ಬೇಯಿಸಿದ ಮೊಟ್ಟೆಗಳು ಅಗತ್ಯವಾಗಿ ಬೇಕು.

ಇಡಿಯ ಧಾನ್ಯಗಳು

ಇಡಿಯ ಧಾನ್ಯಗಳು

ಇಡಿಯ ಧಾನ್ಯಗಳಲ್ಲಿ ಕರಗದ ನಾರು, ಖನಿಜಗಳು ಮತ್ತು ಪ್ರೋಟೀನ್ ಹೇರಳವಾಗಿದ್ದು ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿದೆ. ಅಲ್ಲದೇ ಈ ಪೋಷಕಾಂಶಗಳು ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಮೂಲಕ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತವೆ.

ಸಾಲಾಡ್‌ಗಳು

ಸಾಲಾಡ್‌ಗಳು

ದಿನಕ್ಕೊಂದು ಚಿಕ್ಕ ಬೋಗುಣಿಯಷ್ಟು ವಿವಿಧ ಹಸಿ ತರಕಾರಿ ಮತ್ತು ಹಣ್ಣುಗಳ ಸಾಲಾಡ್ ಗಳನ್ನು ತಪ್ಪದೇ ಸೇವಿಸುವುದು ಹೊಟ್ಟೆಗಳ ಸ್ನಾಯುಗಳನ್ನು ಹುರಿಗಟ್ಟಿಸುವವರಿಗೆ ಅತ್ಯಗತ್ಯವಾಗಿದೆ. ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿ ಈ ಸ್ಥಳದಲ್ಲಿ ಸ್ನಾಯುಗಳನ್ನು ಸ್ಥಾಪಿಸಲು ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ವಿವಿಧ ತರಕಾರಿ ಮತ್ತು ಹಣ್ಣುಗಳ ಅಗತ್ಯವಿದ್ದು ಈ ಅಗತ್ಯತೆಯನ್ನು ಈ ಸಾಲಾಡ್ ಪೂರೈಸಬಲ್ಲುದು.

ಓಟ್ಸ್

ಓಟ್ಸ್

ರವೆ ರೂಪದ ಓಟ್ಸ್ ನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಮತ್ತು ಪ್ರೋಟೀನ್ ಇವೆ. ದಿನಕ್ಕೆ ಕೇವಲ ಅರ್ಧ ಕಪ್ ಓಟ್ಸ್ ರವೆಯ ಖಾದ್ಯವನ್ನು ಸೇವಿಸಿದರೆ ದಿನಕ್ಕೆ ಅಗತ್ಯವಾದ ಶಕ್ತಿಯನ್ನು ಪಡೆಯುವುದು ಮಾತ್ರವಲ್ಲ, ಸ್ನಾಯುಗಳನ್ನು ಹುರಿಗಟ್ಟಿಸಲು ಸಹಾ ಸಾಧ್ಯವಾಗುತ್ತದೆ.

ಸೇಬುಹಣ್ಣು

ಸೇಬುಹಣ್ಣು

ದಿನಕ್ಕೊಂದು ಸೇಬುಹಣ್ಣು ವೈದ್ಯರನ್ನು ದೂರವಿರಿಸುವುದು ಸರಿ. ಇದರೊಂದಿಗೆ ಈ ಹಣ್ಣಿನ ಸೇವನೆಯಿಂದ ಹೊಟ್ಟೆಯ ಸ್ನಾಯು ಹುರಿಗಟ್ಟಲೂ ಸಾಧ್ಯವಾಗುತ್ತದೆ. ಇದರಲ್ಲಿರುವ ಕರಗದ ನಾರು ಮತ್ತು ವಿವಿಧ ಆಂಟಿ ಆಕ್ಸಿಡೆಂಟುಗಳು ಹೊಟ್ಟೆಯ ಸ್ನಾಯುಗಳನ್ನು ಹುರಿಗಟ್ಟಿಸಲು ಅಗತ್ಯವಿರುವ ನೆರವನ್ನು ನೀಡುತ್ತವೆ. ಸೇಬುಗಳ ಕುರಿತು ನಿಮಗೆ ತಿಳಿದಿರದ 10 ವಿಸ್ಮಯಕಾರಿ ಸ೦ಗತಿಗಳು

ಬ್ರೋಕೋಲಿ

ಬ್ರೋಕೋಲಿ

ಹೂಕೋಸಿನ ಹಸಿರು ಅವತಾರದಂತಿರುವ ಬ್ರೋಕೋಲಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಅಲ್ಲದೇ ಇದರಲ್ಲಿ ಸಲ್ಫೋರಫೇನ್ ಎಂಬ ಪೋಷಕಾಂಶವಿದ್ದು ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಮತ್ತು ಸ್ನಾಯುಗಳನ್ನು ಬೆಳೆಯಲು ನೆರವಾಗುತ್ತದೆ. ದಿನಕ್ಕೊಂದು ಚಿಕ್ಕ ಕಪ್ ನಷ್ಟು ಬ್ರೋಕೋಲಿಯನ್ನು ಸೇವಿಸುವುದು ಪುರುಷರಿಗೆ ಸಿಕ್ಸ್ ಪ್ಯಾಕ್ ಪಡೆಯಲು ನೆರವಾಗುತ್ತದೆ.

ಮೊಸರು

ಮೊಸರು

ಮೊಸರಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಬ್ಯಾಕ್ಟೀರಿಯಾಗಳಿವೆ. ಸಾಮಾನ್ಯ ಮೊಸರಿನಲ್ಲಿ (ಕೃತಕ ಸಿಹಿ ಮತ್ತು ಬಣ್ಣ ಸೇರಿಸಿದ ಮೊಸರನ್ನು ಹೊರತುಪಡಿಸಿ) ಇರುವ ಪೋಷಕಾಂಶಗಳು ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿವೆ. ದಿನಕ್ಕೊಂದು ಕಪ್ ಮೊಸರನ್ನು ಸೇವಿಸುವ ಮೂಲಕ ಹೊಟ್ಟೆಯ ಸ್ನಾಯುಗಳು ಹುರಿಗಟ್ಟಲು ಸಾಧ್ಯವಾಗುತ್ತದೆ.ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಪಾಲಕ್ ಮತ್ತು ಬಸಲೆ

ಪಾಲಕ್ ಮತ್ತು ಬಸಲೆ

ಈ ಸೊಪ್ಪುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಮತ್ತು ಕಬ್ಬಿಣದ ಅಂಶವಿರುವ ಕಾರಣ ಪುರುಷರಲ್ಲಿ ಸ್ನಾಯುಗಳ ಬೆಳವಣಿಗೆಗೆ ಉತ್ತಮ ಆಯ್ಕೆಯಾಗಿದೆ. ಈ ಸೊಪ್ಪುಗಳು ಕ್ಯಾಲೋರಿಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವ ಮೂಲಕ ಸ್ನಾಯುಗಳು ಹುರಿಗಟ್ಟಲು ನೆರವಾಗುತ್ತವೆ. ಈ ಸೊಪ್ಪುಗಳ ಗರಿಷ್ಟ ಪ್ರಯೋಜನ ಪಡೆಯಬೇಕಾದರೆ ಇವನ್ನು ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿ ಸೇವಿಸಬೇಕು.

ಕಡಿಮೆ ಕ್ಯಾಲೋರಿಯ ಮಾಂಸ

ಕಡಿಮೆ ಕ್ಯಾಲೋರಿಯ ಮಾಂಸ

ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನು ಸೇವಿಸಲು ಅನುಕೂಲವಿರುವ ಪುರುಷರು ಕಡಿಮೆ ಕ್ಯಾಲೋರಿ ಇರುವ ಮಾಂಸಾಹಾರವನ್ನು ಸೇವಿಸುವ ಮೂಲಕವೂ ಉತ್ತಮ ಪ್ರಮಾಣದ ಫಲಿತಾಂಶವನ್ನು ಪಡೆಯಬಹುದು. ಚರ್ಮ ನಿವಾರಿಸಿದ ಕೋಳಿ ಮಾಂಸ ಹಾಗೂ ಸಾಗರ ಉತ್ಪನ್ನಗಳು ಉತ್ತಮ ಆಯ್ಕೆಯಾಗಿದ್ದು ಇವುಗಳ ಸೇವನೆಯಿಂದ ಹೆಚ್ಚಿನ ಪ್ರಮಾಣದ ಪ್ರೋಟೀನು ಲಭ್ಯವಾಗುತ್ತದೆ ಹಾಗೂ ಹೆಚ್ಚಿನ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ.

 
English summary

Men: Foods You Should Eat To Get Six Pack Abs

You hit the gym every day, do a whole lot of sit-ups and push-ups, but still you lag far behind in getting the desired six pack abs. So what are you lacking in? Along with the hard hitting exercises, taking care of the food that one eats is equally important for building up the six pack abs that you have been dreaming of....
Please Wait while comments are loading...
Subscribe Newsletter