For Quick Alerts
ALLOW NOTIFICATIONS  
For Daily Alerts

ಸಿಕ್ಸ್ ಪ್ಯಾಕ್ ಗಾಗಿ ಮಾಡಿ ಸ್ವಲ್ಪ ಕಸರತ್ತು!

By ಲೇಖಕ
|

ಸಿಕ್ಸ್ ಪ್ಯಾಕ್ ಹೊಂದಿದ ಪುರುಷನ ಅಂಗಸೌಷ್ಠವ ನೋಡುವುದೆ ಚೆಂದ? ಸಿಕ್ಸ್ ಪ್ಯಾಕ್ ನ ನಟರನ್ನು ನೋಡಿ ನಿಮ್ಮ ಹುಡುಗಿ ವಾವ್! ಅವನು ಎಷ್ಟು ಚೆನ್ನಾಗಿದ್ದಾನೆ ಎಂದು ಹೇಳಿದರೆ ಹೊಟ್ಟೆ ಉರಿ ಉಂಟಾಗುವುದು ಸಹಜ. ಆಗ ’ಸಿಕ್ಸ್ ಪ್ಯಾಕ್’ ಹೊಂದಿದ್ದರೆ ಚೆನ್ನಾಗಿತ್ತು ಎಂದು ಅನಿಸುವುದು ಸಹಜ. ಸಿಕ್ಸ್ ಪ್ಯಾಕ್ ಗಾಗಿ ಹಲವಾರು ಕಸರತ್ತು ಮಾಡಬೇಕು. ಅದಕ್ಕಾಗಿ ಜಿಮ್ ಗೆ ಹೋಗಲೇಬೇಕಾಗಿಲ್ಲ. ಮನೆಯಲ್ಲಿಯೇ ಸ್ವಲ್ಪ ಶ್ರಮ ಪಟ್ಟರೆ ಸಿಕ್ಸ್ ಪಡೆಯಬಹುದು.

ಸಿಕ್ಸ್ ಪ್ಯಾಕ್ ಬೇಕೆಂದು ಬಯಸುವುದಾದರೆ ನಿಮಗಾಗಿ ಕೆಲವು ಟಿಪ್ಸ್ ಗಳು ಇಲ್ಲಿವೆ.

How To Get Six Pack Abs

1. ತೂಕ ಇಳಿಸಿಕೊಳ್ಳಿ

ಅತೀಯಾದ ತೂಕ ದೇಹಭಾರ ಎನಿಸಿಬಿಡುತ್ತದೆ. ಅದರಲ್ಲೂ ಕೊಬ್ಬು ಬೆಳೆದರೆ ಅದನ್ನು ಕರಗಿಸುವುದು ಕಷ್ಟ. ಆದ್ದರಿಂದ ಆದಷ್ಟು ದೇಹ ತೂಕವನ್ನು ಸಮಾನಾಂತರವಾಗಿರಿಸಿಕೊಳ್ಳಿ.

2. ವ್ಯಾಯಾಮ

ಹೃದಯಕ್ಕೆ ಸಂಬಂಧಿಸಿದ ವ್ಯಾಯಾಮದಷ್ಟು ಸುಲಭವಾಗಿ ಮತ್ತು ಶೀಘ್ರವಾಗಿ ದೇಹವನ್ನು ಕರಗಿಸುವ ಶಕ್ತಿ ಬೇರೊಂದಿಲ್ಲ. ಓಡುವುದು, ನೃತ್ಯ, ಮೊದಲಾದ ವ್ಯಾಯಾಮಗಳು ದೇಹದಲ್ಲಿ ಬೆವರಿಳಿಸುತ್ತವೆ. ಮತ್ತು ಇದರಿಂದ ದೇಹದಲ್ಲಿ ಕೊಬ್ಬಿನಂಶ ಅತೀ ಶಿಘ್ರದಲ್ಲಿ ಕರಗುತ್ತದೆ. ಅಲ್ಲದೇ ಈಜುವುದು ಕೂಡಾ ಕೊಬ್ಬು ಕರಗಿಸಬಲ್ಲ ಉತ್ತಮ ವ್ಯಾಯಾಮ ವಿಧಾನವಾಗಿದೆ.

3. ಮಿತವಾದ ಆಹಾರ ಸೇವನೆ

ಸರಿಯಾದ ಜೀರ್ಣಕ್ರಿಯೆ ದೇಹದಲ್ಲಿನ ಕೊಬ್ಬನ್ನು ಇಳಿಸಲು ಅತ್ಯಂತ ಅಗತ್ಯ. ಸಾಮಾನ್ಯವಾಗಿ ಮಿತಿ ಮೀರಿದ ಆಹಾರ ಸೇವನೆಯಿಂದಾಗಿ ಕೆಲವರಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದೇ ಕೊಬ್ಬು ಬೆಳೆಯುತ್ತದೆ. ಆದ್ದರಿಂದ ಆಹಾರ ಸೇವನೆ ಮಿತವಾಗಿರಬೇಕು. ದಿನದ ಎಲ್ಲಾ ಸಮಯದಲ್ಲೂ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳದಿರುವುದು ಉತ್ತಮ.

4. ಬೆಳಗಿನ ಉಪಹಾರ ಸೇವಿಸಿ

ಬೆಳಗಿನ ಉಪಹಾರವನ್ನು ಸೇವಿಸುವುದು ದಿನವಿಡಿ ನಿಮ್ಮನ್ನು ಲವಲವಿಕೆಯಿಂದಿಡುತ್ತದೆ. ಬೆಳಿಗ್ಗೆ ಎದ್ದ ಒಂದು ತಾಸಿನೊಳಗೆ ಉಪಹಾರ ಸೇವಿಸುವುದು ರಾತ್ರಿ ಮಲಗುವವರೆಗೆ ಜೀರ್ಣಕ್ರಿಯೆಯಲ್ಲೂ ವ್ಯತ್ಯಯವಾಗದಂತೆ ನೋಡಿಕೊಳ್ಳುತ್ತದೆ.

5. ತೂಕದ ತರಬೇತಿ(Weight Training
)

ಭಾರ ಹೊರುವ ತರಬೇತಿಗಳನ್ನು ಪಡೆಯುವುದು ಒಳ್ಳೆಯದು. ಇಲ್ಲಿ ದೇಹ ತೂಕ ಹೊಂದಿರುವವರಿಗೆ ತೂಕ ಇಳಿಸಲು ಹಾಗೂ ದೇಹ ತೂಕ ಹೆಚ್ಚು ಮಾಡಲು ಈ ಎರಡಕ್ಕೂ ತರಬೇತಿಗಳನ್ನು ನೀಡಲಾಗುತ್ತದೆ. ಇದು ನಿಮ್ಮ ಸ್ಮಾಯುಗಳ ಚಲನೆಗೆ ಅತ್ಯಂತ ಅಗತ್ಯ. ಆದ್ದರಿಂದ ನಿಮಗೆ ಬೇಕಾದ ತರಬೇತಿಯನ್ನು ಆಯ್ದುಕೊಳ್ಳಬಹುದು.

6. ಸ್ನಾಯುಗಳನ್ನು ಬಲಗೊಳಿಸುವುದು Build Muscle

ನಿಮ್ಮ ದೇಹದ ಭಾರ ಕಡಿಮೆಯಾದ ನಂತರ ಸ್ನಾಯುಗಳನ್ನು/ ಮಸಲ್ಸ್ ನ್ನು ಇನ್ನಷ್ಟು ಚೈತನ್ಯವುಳ್ಳವುಗಳನ್ನಾಗಿ ಮಾಡಿ ಸಿಕ್ಸ್ ಪ್ಯಾಕ್ ಮೈಕಟ್ಟನ್ನು ಬೆಳೆಸಿಕೊಳ್ಳಲು ಕೆಲವು ವ್ಯಾಯಾಮಗಳು:

7.ಕ್ರಂಚಸ್ / Crunches

ಇದು ಉತ್ತಮ ಮೈಕಟ್ಟನ್ನು ಹೊಂದಲು ಮಾಡಬಹುದಾದ ಅತ್ಯಂತ ಉತ್ತಮ ವಿಧಾನ. ಮೊದಲು ಶವಾಸಾನದಂತೆ ಮಲಗಿ, ಕಾಲುಗಳನ್ನು ಮಡಚಿ. ನಿಮ್ಮ ಕೈಗಳನ್ನು ತಲೆಯ ಹಿಂದೆ ಕಟ್ಟಿ, ನಂತರ ನಿಮ್ಮ ಮಡಚಿದ ಮಂಡಿಗೆ ತಲೆ ತಾಗುವಂತೆ ದೇಹವನ್ನು ಮೇಲಕ್ಕೆತ್ತಿ. ದಿನಕ್ಕೆ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ, ಬೆಳಗಿನ ಹೊತ್ತಿನಲ್ಲಿ ಮಾಡುವುದು ಉತ್ತಮ.

8. ಲೆಗ್ ಲಿಫ್ಟ್ಸ್ / Leg Lifts
ಇದು ಕೇವಲ ನಿಮ್ಮ ಕಿಬ್ಬೊಟ್ಟೆ ಸ್ನಾಯುಗಳನ್ನು ಮಾತ್ರವಲ್ಲದೇ, ನಿಮ್ಮ ತೊಡೆಗಳ ಸ್ನಾಯುಗಳನ್ನು ಬಲಗೊಳಿಸಿತ್ತದೆ. ಮಲಗಿ ಕಾಲನ್ನು ಮೇಲಕ್ಕೆ ಮಾಡುವ ವಿಧಾನವೇ ಲೆಗ್ ಲಿಫ್ಟ್. ಇದು ಹುಡುಗರನ್ನು ಹೆಚ್ಚು ಸದೃಢರನ್ನಾಗಿ ಮಾಡುತ್ತದೆ.

ಈ ಮೇಲಿನ ವಿಧಾನಗಳು ಕೇವಲ ಸದೃಢ ದೇಹವನ್ನು ಹೊಂದಲು ಮಾತ್ರವಲ್ಲದೇ ಆರೋಗ್ಯಕರ ಜೀವನಕ್ಕೂ ಸಹಾಯಕವಾಗಿವೆ.

English summary

How To Get Six Pack Abs | Tips For Fitness | ಸಿಕ್ಸ್ ಪ್ಯಾಕ್ ಪಡೆಯುವುದು ಹೇಗೆ? | ಸಮತೂಕದ ಮೈಕಟ್ಟಿಗೆ ಕೆಲ ಸಲಹೆಗಳು

Every man dreads and awaits the albatross of the elusive 6-pack abdomen. but every man is being subjected to the prospect of having the perfect body and a ripping 6-pack is the right way to stay ahead of the obese curve. Here’s how you can get your own.
X
Desktop Bottom Promotion