For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳುವ ನೆಪದಲ್ಲಿ, ಊಟ ಮಾತ್ರ ಬಿಡಬೇಡಿ

By Manu
|

ಸ್ಥೂಲಕಾಯ ಇಂದಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗುತ್ತಿರುವ ಕಾಳಜಿಯಾಗಿದ್ದು ಈಗ ಪ್ರತಿ ಹತ್ತು ವ್ಯಕ್ತಿಗಳಲ್ಲಿ ಐದರಷ್ಟಿರುವ ಸ್ಥೂಲಕಾಯ ಕೆಲವೇ ವರ್ಷಗಳಲ್ಲಿ ಎಂಟಕ್ಕೇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯ ಅರ್ಥ ತೂಕ ಕಳೆದುಕೊಳ್ಳಲು ಸೂಕ್ತ ಆಹಾರ, ವ್ಯಾಯಾಮ, ನಾರು ಹೆಚ್ಚಿರುವ ಆಹಾರ ಸೇವನೆ ಇತ್ಯಾದಿಯೇ ಹೊರತು ಊಟ ಬಿಡಿ ಎಂದರ್ಥವಲ್ಲ. ಆದರೆ ಕೆಲವು ತಿಳಿಗೇಡಿಗಳು ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತದೆ ಎಂಬ ಅಪಾಯಕರ ಅಭಿಪ್ರಾಯವನ್ನು ಹೊಂದಿದ್ದಾರೆ. ಅಂತೆಯೇ ಇವರು ಕೆಲವು ದಿನಗಳ ಕಾಲ ಬರೆಯ ನೀರು ಕುಡಿದು ಏನನ್ನೂ ತಿನ್ನದೇ ವ್ಯಾಯಾಮ ಮಾಡಿಕೊಂಡು ದೊಡ್ಡ ಸಾಧನೆಯ ಕನಸಿನಲ್ಲಿರುತ್ತಾರೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ನೀರಿನ ಉಪವಾಸ (water fasting) ಎಂದು ಕರೆಯಲ್ಪಡುವ ಈ ವಿಧಾನ ಯೋಗಿಗಳು ಅಥವಾ ಚಿಕ್ಕಂದಿನಿಂದಲೂ ಕಠಿಣ ಅಭ್ಯಾಸ ನಡೆಸಿ ತಮ್ಮ ಶರೀರವನ್ನು ಹಲವು ಕಾಲ ಆಹಾರವಿಲ್ಲದೇ ಆರೋಗ್ಯ ಕಾಪಾಡಿಕೊಂಡು ಬರಲು ಸಾಧ್ಯವಿರುವಂತಹ ಹಠಯೋಗಿಗಳಿಗೆ ಮಾತ್ರ ಸಾಧ್ಯವೇ ಹೊರತು ದಿನಕ್ಕೆ ಮೂರು ಹೊತ್ತು ಉಂಡು ಸ್ಥೂಲಕಾಯ ಪಡೆದ ನಮ್ಮಂತಹವರಿಗಲ್ಲ. ಹಿಂದಿನ ಋಷಿಮುನಿಗಳೂ ಕೇವಲ ಗಾಳಿ ನೀರು ಕುಡಿದು ವರ್ಷಗಟ್ಟಲೇ ತಪಸ್ಸು ಆಚರಿಸುತ್ತಿದ್ದರಂತೆ. ತಪಸ್ಸಿನ ಬಳಿಕ ಇವರ ಶರೀರ ಕೇವಲ ಮೂಳೆಚಕ್ಕಳವಾಗಿರುತ್ತಿತ್ತಂತೆ. ಆದರೆ ಇವೆಲ್ಲಾ ಪ್ರಸ್ತುತ ದಿನಗಳಲ್ಲಿ ಅಸಾಧ್ಯವಾದ ಮಾತು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಆದರೂ ಕೆಲವರು ಒಂದೆರಡು ದಿನ ಉಪವಾಸವಿದ್ದು ಇದರಿಂದ ಕಳೆದುಕೊಂಡ ಒಂದೆರಡು ಕೇಜಿ ತೂಕವನ್ನೇ ಪ್ರೇರಣೆಯನ್ನಾಗಿ ಪರಿಗಣಿಸಿ ತಮ್ಮ ದೇಹದ ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ಸಾಧ್ಯ ಎಂಬ ತಪ್ಪು ಅಭಿಪ್ರಾಯವನ್ನು ಹೊಂದಿರುತ್ತಾರೆ. ವಾಸ್ತವವಾಗಿ ಸತತ ಎರಡು ಮೂರು ದಿನ ಉಪವಾಸವಿರುವ ಮೂಲಕ ದೇಹದ ತಾತ್ಕಾಲಿಕ ಕೊಬ್ಬು, ನೀರಿನ ಅಂಶ ಕಳೆದುಕೊಳ್ಳುವ ಮೂಲಕ ಈ ಎರಡು ಕೇಜಿ ಕಡಿಮೆಯಾಗಿದ್ದೇ ಹೊರತು ಸಂಗ್ರಹಗೊಂಡ ಕೊಬ್ಬು ಕರಗಿ ಅಲ್ಲ. ಆದರೆ ಶಕ್ತಿಯಿಲ್ಲದೇ ಸೊರಗಿದ ಸ್ನಾಯುಗಳು ಮತ್ತು ಇತರ ದೇಹದ ಎಲ್ಲಾ ಪ್ರಮುಖ ಅಂಗಗಳೆಲ್ಲಾ ನಿಧಾನವಾಗಿ ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಇದನ್ನೇ ಹಸಿವಿನಿಂದ ಕಂಗಾಲು ಎಂದು ಕರೆಯುತ್ತೇವೆ.

ಶಕ್ತಿಯ ಕೊರತೆ

ಶಕ್ತಿಯ ಕೊರತೆ

ಯಾವುದೇ ಜೀವಿಗೆ ಸತತವಾಗಿ ಶಕ್ತಿಯ ಪೂರೈಕೆಯಾಗುತ್ತಲೇ ಇರಬೇಕು. ಇದಕ್ಕೆ ನಿತ್ಯದ ಆಹಾರ ಸೇವನೆ ಅಗತ್ಯ. ಊಟ ಬಿಟ್ಟಾಗ ಈ ಅವಶ್ಯಕತೆಗಳನ್ನು ದೇಹ ಪೂರೈಸಲಾಗದೇ ಕಾದಿಟ್ಟ ಕೊಬ್ಬು ಮತ್ತು ಶಕ್ತಿಯನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಆದರೆ ಇದಕ್ಕೂ ಒಂದು ಮಿತಿ ಇದೆ. ಈ ಮಿತಿ ಕೆಲವರಲ್ಲಿ ಆರು ಗಂಟೆಗಳ ಕಾಲ ಇದ್ದರೆ ಹೆಚ್ಚಿನವರಲ್ಲಿ ಹನ್ನೆರಡು ಘಂಟೆಗಳ ಕಾಲ. ಇದಕ್ಕೂ ಮೀರಿದ ಸಮಯದಿಂದ ನಮ್ಮ ಶಕ್ತಿ ಉಡುಗಲು ಪ್ರಾರಂಭವಾಗುತ್ತದೆ. ಒಂದು ಹಂತದಲ್ಲಿ ಚೇತನ ಖಾಲಿಯಾಗಿ ಪ್ರಜ್ಞೆ ತಪ್ಪಿ ಬೀಳಬೇಕಾಗುತ್ತದೆ.

ತಲೆನೋವು

ತಲೆನೋವು

ಯಾವಾಗ ಶಕ್ತಿ ಉಡುಗಲು ತೊಡಗಿತೋ ಆಗ ಮೆದುಳು ಹೆಚ್ಚಿನ ರಕ್ತವನ್ನು ಸ್ನಾಯುಗಳ ಕಡೆಗೆ ಒದಗಿಸುವಂತೆ ನಿರ್ದೇಶಿಸುತ್ತದೆ. ಪರಿಣಾಮವಾಗಿ ಮೆದುಳಿಗೆ ಹರಿಯುತ್ತಿದ್ದ ರಕ್ತದ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇದು ತಲೆನೋವಿಗೆ ನೇರವಾದ ಕಾರಣವಾಗಿದೆ.

ಹೃದಯ ಬಡಿತ ಏರುಪೇರಾಗುತ್ತದೆ

ಹೃದಯ ಬಡಿತ ಏರುಪೇರಾಗುತ್ತದೆ

ಶಕ್ತಿಯ ಕೊರತೆಯಿಂದ ರಕ್ತವನ್ನು ಅಗತ್ಯವಿರುವ ಕಡೆ ಕಳುಹಿಸುವ ಮೆದುಳಿನ ಕ್ರಮದ ಕಾರಣ ಲಯಬದ್ದವಾಗಿ ಹೊಡೆದುಕೊಳ್ಳುತ್ತಿದ್ದ ಹೃದಯಕ್ಕೆ ಈಗ ಹೆಚ್ಚಿನ ಒತ್ತಡ ಬೀಳುತ್ತದೆ. ದೂರಕ್ಕೆ ಕಳುಹಿಸಬೇಕಾದ ರಕ್ತಕ್ಕೆ ಅಗತ್ಯ ಒತ್ತಡವನ್ನು ನೀಡಬೇಕಾಗುತ್ತದೆ. ಇದಕ್ಕೂ ಶಕ್ತಿ ಇಲ್ಲದೇ ಹೃದಯ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಪ್ರಾಣಾಪಾಯಕ್ಕೂ ಕಾರಣವಾಗಬಹುದು.

ರೋಗ ನಿರೋಧಕ ಶಕ್ತಿ ಕುಸಿಯುತ್ತದೆ

ರೋಗ ನಿರೋಧಕ ಶಕ್ತಿ ಕುಸಿಯುತ್ತದೆ

ಹಣ ಕಡಿಮೆಯಾದಾಗ ನಾವು ಏನು ಮಾಡುತ್ತೇವೆ? ಅಗತ್ಯಕ್ಕೆ ಮಾತ್ರ ಹಣ ಬಳಸಿ ಅಗತ್ಯವಿಲ್ಲ ಎಂಬುದನ್ನೆಲ್ಲಾ ನಿಲ್ಲಿಸಿ ಬಿಡುತ್ತೇವೆ. ಶಕ್ತಿಯ ಪೂರೈಕೆ ಇಲ್ಲದಿದ್ದಾಗ ದೇಹ ಮಾಡುವುದೂ ಇದನ್ನೇ. ಜೀವ ಉಳಿಸಿಕೊಳ್ಳುವ ಸಲುವಾಗಿ ಇರುವ ಶಕ್ತಿಯನ್ನು ರಕ್ತಸಂಚಾರ ಪೂರೈಸುವ ಭರದಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಉಡುಗುತ್ತದೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿರುವ ಬ್ಯಾಕ್ಟೀರಿಯಾ ವೈರಸ್ಸುಗಳು ಸುಮ್ಮನಿರುತ್ತವೆಯೇ? ಇವುಗಳ ಆಕ್ರಮಣದಿಂದ ದೇಹ ಹಲವು ವಿಧದ ತೊಂದರೆಗೆ ಎದುರಾಗಬಹುದು.

ಯಕೃತ್ ಮತ್ತು ಮೂತ್ರಪಿಂಡಗಳು ಕುಸಿಯುತ್ತವೆ

ಯಕೃತ್ ಮತ್ತು ಮೂತ್ರಪಿಂಡಗಳು ಕುಸಿಯುತ್ತವೆ

ನಮ್ಮ ಆಹಾರದ ಮೂಲಕ ಲಭ್ಯವಾಗುವ ಶಕ್ತಿ ಸ್ನಾಯುಗಳಿಗಿಂತ ಹೆಚ್ಚಾಗಿ ನಮ್ಮ ಅವಶ್ಯಕ ಅಂಗಗಳಿಗೆ ಬಳಕೆಯಾಗುತ್ತದೆ. ಶಕ್ತಿಯ ಪೂರೈಕೆ ಉಡುಗಿದ ತಕ್ಷಣ ಈ ಅಂಗಗಳ ಕ್ಷಮತೆಯೂ ಉಡುಗುತ್ತದೆ. ನಮ್ಮ ಯಕೃತ್ ಮತ್ತು ಮೂತ್ರಪಿಂಡಗಳು ಅತಿ ಹೆಚ್ಚಾಗಿ ನಷ್ಟ ಅನುಭವಿಸುತ್ತವೆ. ಇದರಿಂದ ದೇಹ ಹಲವು ಅಪಾಯಗಳನ್ನು ಎದುರಿಸಬೇಕಾಗುತ್ತದೆ.

ಸ್ನಾಯುಗಳ ನಷ್ಟ

ಸ್ನಾಯುಗಳ ನಷ್ಟ

ನಮ್ಮ ದೇಹದಲ್ಲಿ ಸ್ನಾಯುಗಳ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಇದೆ. ಹೆಚ್ಚಿನ ಸ್ನಾಯುಗಳನ್ನು ದೇಹ ವಿಸರ್ಜಿಸುತ್ತದೆ. ಆಹಾರದ ಮೂಲಕ ಪ್ರೋಟೀನ್ ಲಭಿಸದೇ ಇದ್ದರೆ ದೇಹ ಸ್ನಾಯುಗಳನ್ನು ವಿಸರ್ಜಿಸತೊಡಗುತ್ತದೆ. ಇದರಿಂದ ಕೈಕಾಲುಗಳನ್ನು ಆಡಿಸಲೂ ಆಗದಷ್ಟು ನಿಃಶಕ್ತಿ ಆವರಿಸಬಹುದು.

ಹಠಾತ್ ಸಾವು

ಹಠಾತ್ ಸಾವು

ಸಾವಿಗೆ ಸಾವಿರಾರು ಕಾರಣಗಳಿವೆ. ದೇಹದಲ್ಲಿ ಸಾವು ಸಂಭವಿಸಬಹುದಾದ ಯಾವುದಾದರೂ ಸಾಧ್ಯತೆ ಇದ್ದು ಉತ್ತಮ ಆರೋಗ್ಯದ ಮೂಲಕ ಈ ಸಾಧ್ಯತೆಯ ಪರಿಣಾಮ ಕಡಿಮೆ ಇರುತ್ತದೆ. ಆದರೆ ಊಟ ಬಿಡುವ ಎಡಬಿಡಂಗಿ ಕ್ರಮದಿಂದ ಈ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಉದಾಹರಣೆಗೆ ಮೂತ್ರಪಿಂಡಗಳ ಕ್ಷಮತೆ ಕಡಿಮೆ ಇದ್ದು ತೀರಾ ಕೊನೆಯ ಹಂತದಲ್ಲಿ ಕೆಲಸ ಮಾಡುತ್ತಿದ್ದು ಇದರ ಬಗ್ಗೆ ಅರಿವೇ ಇಲ್ಲದೆ ಈ ಕ್ರಮ ಅನುಸರಿಸಿದರೆ ಶಕ್ತಿಯ ಕೊರತೆಯಿಂದ ಮೂತ್ರಪಿಂಡದ ಕ್ಷಮತೆ ಕನಿಷ್ಟ ಅಗತ್ಯಕ್ಕೂ ತೀರಾ ಕೆಳಗೆ ಇಳಿದು ಹಠಾತ್ ಸಾವು ಸಂಭವಿಸಬಹುದು. (ನಮ್ಮ ದೇಹದ ಹಲವು ಅಂಗಗಳ ಒಂದು ವಿಚಿತ್ರವಾದ ಗುಣವಿದು.ಅಂದರೆ ತೊಂದರೆಗೊಳಗಾಗಿದ್ದರೂ ಕಟ್ಟ ಕಡೆಯ ಹಂತದವರೆಗೂ ಏನೂ ಆಗಿಲ್ಲವೆಂಬಂತೆ ಕಾರ್ಯನಿರ್ವಹಿಸುತ್ತೇ ಕಡೆಗೆ ಒಮ್ಮೆಲೇ ಕುಸಿಯುವುದು. ಯಕೃತ್, ಮೂತ್ರಪಿಂಡ, ಹೃದಯ, ಶ್ವಾಸಕೋಶ ಇತ್ಯಾದಿ. ಇದೇ ಗುಣದಿಂದಾಗಿ ಧೂಮಪಾನಿಗಳು ನಾನೆಷ್ಟೇ ಸಿಗರೇಟು ಸೇದಿದರೂ ನನಗೇನೂ ಆಗುವುದಿಲ್ಲ ಎಂಬ ಭ್ರಮೆಯಲ್ಲಿರುತ್ತಾರೆ)

English summary

Dangers Of Water Fasting to loose weight

Many people would want to get rid of their body fat over night or as fast as possible. But this is not at all healthy. When you wish to rush through things, you may choose water fasting which involves drinking only water for a few days without eating anything. Remember that you are depriving your body of nutrients when you embrace such a dangerous journey.
Story first published: Saturday, April 9, 2016, 19:56 [IST]
X
Desktop Bottom Promotion