For Quick Alerts
ALLOW NOTIFICATIONS  
For Daily Alerts

ಹೃದಯದ ಸ್ವಾಸ್ಥ್ಯಕ್ಕೆ 'ಏರೋಬಿಕ್' ಚೇತೋಹಾರಿ ವ್ಯಾಯಮ

By Hemanth
|

ಹೃದಯದ ಆರೈಕೆ ಮಾಡಿದರೆ ನಮ್ಮ ಇಡೀ ದೇಹವನ್ನೇ ನೋಡಿಕೊಂಡಂತೆ. ಹೃದಯವು ಸರಿಯಾಗಿದ್ದರೆ ದೇಹದ ಇತರ ಕಾರ್ಯಚಟುವಟಿಕೆಗಳು ಅಡೆತಡೆಯಿಲ್ಲದೆ ಸಾಗಲು ಸಾಧ್ಯ. ಹೃದಯದ ಆರೋಗ್ಯವನ್ನು ಕಾಪಾಡಲು ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮ ಮುಖ್ಯವಾಗಿ ಬೇಕಾಗುತ್ತದೆ. ಅದರಲ್ಲೂ ಏರೋಬಿಕ್ಸ್ ವ್ಯಾಯಮದಲ್ಲಿ ವೇಗವಾಗಿ ನಡೆಯುವುದು, ಓಡುವುದು, ಜಾಗಿಂಗ್ ಮತ್ತು ಈಜು ಪ್ರಮುಖವಾಗಿದೆ.

ಈ ವ್ಯಾಯಾಮಗಳು ಹೃದಯಾಘಾತದ ವೇಳೆ ಹೃದಯದ ಪ್ರೋಟೀನ್ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯನ್ನು ಸರಿಯಾಗಿರಿಸುವುದು ಎಂದು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಹೃದಯಾಘಾತವು ಅನೇಕ ರೀತಿಯ ಹೃದಯ ಸಂಬಂಧಿ ರೋಗಗಳಿಗೆ ಒಂದು ಕಾರಣವಾಗಿದೆ. ಇದರಿಂದಾಗಿ ಹೃದಯದ ಕಾರ್ಯವು ಕಡಿಮೆಯಾಗಿ ವ್ಯಾಯಾಮ ಅಸಹಿಷ್ಣುತೆ ಮತ್ತು ಅಂತಿಮವಾಗಿ ಸಾವು ಸಂಭವಿಸಬಹುದು ಎಂದು ಈ ರೋಗಲಕ್ಷಣವನ್ನು ವರ್ಗೀಕರಿಸಲಾಗಿದೆ.

Aerobic Exercises Restore Protein Quality In Heart Failure: Study

ಹೃದಯಾಘಾತವನ್ನು ಬಹುಅಂಗಾಂಗ ಸಂಬಂಧಿ ರೋಗಲಕ್ಷಣವೆನ್ನಬಹುದು. ಆದರೆ ಸಾಮಾನ್ಯವಾಗಿ ಮನುಷ್ಯರು ಹಾಗೂ ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದ ಅಂಶವೆಂದರೆ ಕೆಟ್ಟ ಪ್ರೋಟೀನ್ ಗಳು ಹೃದಯದ ಕೋಶಗಳಲ್ಲಿ ಶೇಖರಣೆಯಾಗುವುದು. ದಿನಕ್ಕೆ ಎಷ್ಟು ಹೊತ್ತಿನ ವ್ಯಾಯಾಮ ಒತ್ತಡ ನಿವಾರಿಸುತ್ತೆ?

ಪ್ರೋಟೀನ್‌ಗಳು ದೇಹದಲ್ಲಿನ ಕೆಲಸಗಾರರು ಇದ್ದಂತೆ. ಇವುಗಳು ಹಲವಾರು ರೀತಿಯ ರಾಸಾಯನಿಕ ಪ್ರತಿಕ್ರಿಯೆಯನ್ನು ಉಂಟುಮಾಡುವುದು. ಇದು ಕೋಶಗಳನ್ನು ಆರೋಗ್ಯವಾಗಿರಿಸುತ್ತದೆ.

ಪ್ರೋಟೀನ್‌ನ ರಚನೆಯನ್ನು ಆ್ಯಮಿನೋ ಆ್ಯಸಿಡ್ ಸನ್ನಿವೇಶಗಳು ಉತ್ಪತ್ತಿ ಮಾಡುತ್ತದೆ. ಇದು ಪ್ರೋಟೀನ್‌ಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

ವಿಕಾಸ ಪ್ರಕ್ರಿಯೆ ವೇಳೆ ಕೋಶಗಳು ಪ್ರೋಟೀನ್ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿದವು. ಇವುಗಳು ಒಳ್ಳೆಯ ಪ್ರೋಟೀನ್ ಅನ್ನು ಉಳಿಸಿಕೊಳ್ಳಲು ಮಾತ್ರ ಅವಕಾಶ ನೀಡುತ್ತದೆ ಎಂದು ಬ್ರೆಜಿಲ್ ನ ಸಾವ್ ಪಾಲೋ ಯೂನಿವರ್ಸಿಟಿಯ ಲೂಯಿಜ್ ಎಚ್. ಎಂ. ಬೊಝಿ ತಿಳಿಸಿದ್ದಾರೆ.

ಕೋಶಗಳ ಪ್ರೋಟೀನ್ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾಗುವ ಅಡೆತಡೆಯಿಂದಾಗಿ ದೋಷಮುಕ್ತವಾಗಿ ಮಡಚಲ್ಪಟ್ಟ ಪ್ರೋಟೀನ್ ಸೇರ್ಪಡೆಯಾಗಿ ಹೃದಯಾಘಾತವಾಗುವುದು ಎಂದು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ಪತ್ತೆಯಾಗಿದೆ. ಯಾವುದೇ ಚಿಕಿತ್ಸೆ ಕೂಡ ಪ್ರೋಟೀನ್ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯನ್ನು ಗುರಿಯಾಗಿಸಲು ಸಾಧ್ಯವಿಲ್ಲ. ಗರ್ಭಿಣಿಯರೇ ಏರೋಬಿಕ್ಸ್ ವ್ಯಾಯಾಮದ ಬಗ್ಗೆ ಕೇಳಿದಿರಾ?

ಏರೋಬಿಕ್ಸ್ ವ್ಯಾಯಾಮದಿಂದಾಗಿ ಹೃಯದ ಪ್ರೋಟೀನ್ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯನ್ನು ಸರಿಪಡಿಸಬಹುದು. ಇದರಿಂದ ದೋಷಮುಕ್ತ ಮಾಡಲ್ಪಟ್ಟ ಪ್ರೋಟೀನ್ ಸೇರ್ಪಡೆ ಕಡಿಮೆಯಾಗುವುದು. ಹೃದಯಾಘಾತವಾದ ಪ್ರಾಣಿಗಳಲ್ಲಿ ಏರೋಬಿಕ್ಸ್ ವ್ಯಾಯಾಮವು ಹೃದಯದ ಚಟುವಟಿಕೆಗಳನ್ನು ಹೆಚ್ಚಿಸಿದೆ ಎಂದು ಸೆಲ್ಯೂಲರ್ ಮತ್ತು ಮೊಲ್ಯಕ್ಯೂಲರ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ಬರಹವು ಹೇಳಿದೆ.

ವಿಶ್ವದಾದ್ಯಂತ ಸುಮಾರು 20 ದಶಲಕ್ಷ ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಮತ್ತು ಇದು ಇನ್ನಷ್ಟು ಹೆಚ್ಚಬಹುದು. ಜನಸಂಖ್ಯೆಯು ಹೆಚ್ಚಾದಂತೆ ಹೃದಯಾಘಾತಕ್ಕೆ ಒಳಗಾಗುವ ಜನರು ಹೆಚ್ಚುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

English summary

Aerobic Exercises Restore Protein Quality In Heart Failure: Study

Heart failure is a common end-point for many cardiovascular diseases. This syndrome is characterised by reduced cardiac output that leads to dyspnoea, exercise intolerance and later death. Despite heart failure seems to be a multi-factorial syndrome, a common point observed by several studies was the accumulation of "bad" (or misfolded) proteins in the cardiac cells of both humans and animals with heart failure, the researchers explained.
X
Desktop Bottom Promotion