For Quick Alerts
ALLOW NOTIFICATIONS  
For Daily Alerts

ಡಿ ಜೀವಸತ್ವದ ಕೊರತೆಯ 7 ಎಚ್ಚರಿಕೆಯ ಲಕ್ಷಣಗಳು

By Sridhara Sastry
|

ಡಿ ಜೀವಸತ್ವವು, (ಡಿ ವಿಟಮಿನ್) ಒಂದು ಕೊಬ್ಬು ಕರಗಿಸುವ ಜೀವಸತ್ವ, ದೇಹದ ಕಾರ್ಯಗಳಿಗೆ ಸಾಕಷ್ಟು ಅಗತ್ಯವಾದ ಕೊಡುಗೆಯನ್ನು ಕೊಡುತ್ತದೆ. ಇದು ನಿಮ್ಮ ದೇಹದಲ್ಲಿರುವ ಕ್ಯಾಲ್ಸಿಯಂನೊಂದಿಗೆ ಕೆಲಸವನ್ನು ಮಾಡಿ ಮೂಳೆಗಳನ್ನು ಬಲವಾಗಿ ಸಂರಕ್ಷಿಸಲು ಮತ್ತು ಅಭಿವೃದ್ಧಿಯಾಗಲು ಸಹಾಯವಾಗುತ್ತದೆಂದು ಉತ್ತಮವಾಗಿ ಅರ್ಥೈಸಲಾಗಿದೆ. ಡಿ ಜೀವಸತ್ವವು ಸಹ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಜೀವಕೋಶಗಳ ನಿರ್ವಹಣೆಯಲ್ಲಿ ಸಂಯೋಜನೆಗೊಂಡು ಕ್ಯಾನ್ಸರ್ ತಪ್ಪಿಸಲು ಸಹಾಯ ಮಾಡಬಹುದು - ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್.

ಮೂಳೆ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯದ ವಿಚಾರದಲ್ಲಿ ಡಿ ಜೀವಸತ್ವವು ಬಹುಶಃ ಪ್ರಮುಖ ಪೌಷ್ಟಿಕಾಂಶ. ಕೇವಲ ಡಿ ಜೀವಸತ್ವದ ಸೂಕ್ತ ಬಳಕೆಯಿಂದ ಮೂಳೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವುದಲ್ಲದೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಭಾವಿಸಲಾಗಿದೆ. 40ರ ಮಹಿಳೆಯರಿಗೆ ಈ ವಿಟಮಿನ್ ಗಳು ಅಗತ್ಯ

ಸಾಮಾನ್ಯವಾಗಿ ಇದರ ಕೊರತೆಯು ಮಕ್ಕಳಲ್ಲಿ ಬಾಲಗ್ರಹಬಾಧೆಯನ್ನು (ಮೆದು ಮೂಳೆಗಳು), ಅಂದರೆ ಮೂಳೆ ಅಂಗಾಂಶವನ್ನು ಬಲಪಡಿಸದ ಅಥವಾ ಖನಿಜೀಕರಿಸದ ಸ್ಥಿತಿಯನ್ನು ಉಂಟುಮಾಡುತ್ತದೆ ಎಂದು ಚೆನ್ನಾಗಿ ತಿಳಿದಿದೆ. ಈ ಸ್ಥಿತಿಯು ಸಾಮಾನ್ಯವಾಗಿ ದುರ್ಬಲವಾದ ಮೂಳೆಗಳು ಮತ್ತು ಅಸ್ಥಿಪಂಜರದ ವಿರೂಪಗಳಿಗೆ ಕಾರಣವಾಗುತ್ತದೆ ಕಾಕತಾಳೀಯವಾಗಿ ಆಗಾಗ್ಗೆ ಗಾಯದ ಅಪಾಯವನ್ನು ಹೆಚ್ಚಿಸುತ್ತದೆ.

ಆದಾಗ್ಯೂ, ಇತ್ತೀಚಿನ ಸಂಶೋಧನೆಯು ಡಿ ಜೀವಸತ್ವದ ಕೊರತೆ ಮತ್ತು ಇತರ ಆರೋಗ್ಯ ಪರಿಸ್ಥಿತಿಗಳ ಮೂಲದ ನಡುವಿನ ಸಂಬಂಧವನ್ನು ತೆರೆದಿಟ್ಟಿದೆ. ಸಂಶೋಧನೆಯು ಡಿ ಜೀವಸತ್ವವು ಟೈಪ್ 1 ಮತ್ತು ಟೈಪ್ 2 ಮಧುಮೇಹ, ಹಲವಾರು ಸ್ಕ್ಲೆರೋಸಿಸ್ (ಎಂಎಸ್) ಮತ್ತು ಅಧಿಕ ರಕ್ತದೊತ್ತಡ, ಇವುಗಳ ಚಿಕಿತ್ಸೆ ಮತ್ತು ತಪ್ಪಿಸುವಿಕೆ ಎರಡಕ್ಕೂ ಕೊಡುಗೆಯನ್ನು ಸೂಚಿಸುತ್ತದೆ. ಹಾಗಾಗಿ ಬನ್ನಿ ಡಿ ಜೀವಸತ್ವದ ಕೊರತೆಯ 7 ಎಚ್ಚರಿಕೆಯ ಲಕ್ಷಣಗಳು ಯಾವುದು ಎಂಬುದನ್ನು ಮುಂದೆ ಓದಿ...

1. ನೋವು ಮತ್ತು ಸ್ನಾಯು ದೌರ್ಬಲ್ಯ(MUSCLE WEAKNESS)
ನೋವು ಮತ್ತು ಸ್ನಾಯು ದೌರ್ಬಲ್ಯ ತೀವ್ರತೆಯು ಸೂಕ್ಷ್ಮದಿಂದ ತೀವ್ರಕ್ಕೆ ಬದಲಾಗುತ್ತದೆ. ಆರಂಭದಲ್ಲಿ, ಈ ರೀತಿಯ ಲಕ್ಷಣಗಳು ಬಹುತೇಕ ಇರುವುದಿಲ್ಲ; ಆದಾಗ್ಯೂ, ಕೊರತೆಯು ಹೆಚ್ಚು ಅವಧಿಯವರೆಗಿದ್ದರೆ, ಸಂಬಂಧಿಸಿದ ಲಕ್ಷಣಗಳು ಕೆಟ್ಟದಾಗಿರುತ್ತವೆ. ಕಾರಣ ಡಿ ಜೀವಸತ್ವವು , ಚಯಾಪಚಯ ಕ್ರಿಯೆಗೊಳಗಾದಾಗ(metabolized), ಸ್ನಾಯು ಸಂಕೋಚನವನ್ನು(muscle contraction) ಹೆಚ್ಚಿಸುತ್ತದೆ - ಇದೊಂದು ಮೂಳೆಗಳನ್ನು ಬಲಪಡಿಸುವ ಅತ್ಯಗತ್ಯ ಯಾಂತ್ರಿಕ ವ್ಯವಸ್ಥೆ.

2. ದುರ್ಬಲಗೊಂಡ ರೋಗ ನಿರೋಧಕ ವ್ಯವಸ್ಥೆ
ಡಿ ಜೀವಸತ್ವದ ಮಟ್ಟವು ಕಡಿಮೆಯಾದಾಗ, ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಬಿಡಿಸಿಕೊಳ್ಳಲಾಗದಂತೆ ಪ್ರಭಾವಿತವಾಗಿರುತ್ತದೆ. ಡಿ ಜೀವಸತ್ವದ ಗ್ರಾಹಕಗಳನ್ನು(receptors) ಅಧಿಕ ಪ್ರಮಾಣದಲ್ಲಿ ರೋಗನಿರೋಧಕ ಕೋಶಗಳಲ್ಲಿ ಕಾಣಬಹುದು, ದೇಹದ ಭಾಗಗಳಿಗೆ ಸಾಕಷ್ಟು ಡಿ ಜೀವಸತ್ವದ ಪೂರಕಗಳ ಅಗತ್ಯವಿರುತ್ತದೆ.


ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್, ರಲ್ಲಿ ಪ್ರಕಟವಾದ ಒಂದು ಜಪಾನಿಯರ ಅಧ್ಯಯನದ ಪ್ರಕಾರ ಡಿ ಜೀವಸತ್ವ ಪೂರಕಗಳನ್ನು ನೀಡಲಾದ ಶಾಲಾ ಮಕ್ಕಳಲ್ಲಿ ಫ್ಲ್ಯೂ ತಳಿ ಇನ್ಫ್ಲುಯೆನ್ಜ - ಎ(flu strain influenza A), ಪೂರಕಗಳನ್ನು ನೀಡದವರಿಗಿಂತ ಕಡಿಮೆ ನಿದರ್ಶನಗಳನ್ನು ದಾಖಲಿಸಿತು. ಇನ್ನೊಂದು ಅಧ್ಯಯನದ ಪ್ರಕಾರ, ಸ್ವರಕ್ಷಿತ ರೋಗದಿಂದಿರುವ(autoimmune disease) ವ್ಯಕ್ತಿಗಳಲ್ಲಿ ಸಹ ಡಿ ಜೀವಸತ್ವದ ಮಟ್ಟವು ಕಡಿಮೆ ಇರುವುದೆಂದು ಪರೀಕ್ಷೆ ಮಾಡಿ ಗುರುತಿಸಲಾಯಿತು. ಪುರುಷರ ಫಲವತ್ತತೆ ಹೆಚ್ಚಿಸುವ ವಿಟಮಿನ್ ಗಳು

3. ಅಧಿಕ ರಕ್ತದೊತ್ತಡ
ದೇಹದಲ್ಲಿ ಡಿ ಜೀವಸತ್ವದ ಮಟ್ಟವು ಕಡಿಮೆಯಾದಾಗ ಅಧಿಕ ರಕ್ತದೊತ್ತಡದಲ್ಲಿ (Hypertension - high blood pressure) ಫಲಿತಗೊಳ್ಳುತ್ತದೆ. ನಮ್ಮ ದೇಹದ ಅಪಧಮನಿಯ(artery) ನಿರ್ಬಂಧ ಮತ್ತು ನೀರಿನ ಧಾರಣಶಕ್ತಿಯ(retention) ಮೂಲಕ ರಕ್ತದೊತ್ತಡ ಹೆಚ್ಚಿಸುವ ಒಂದು ಪೆಪ್ಟೈಡ್ ನ್ನು ಸೂತ್ರೀಕರಿಸಿತ್ತದೆ. ಜೀವಸತ್ವ ಡಿ ಪ್ರತಿಕ್ರಮವಾಗಿ ಕಾರ್ಯನಿರ್ವಹಿಸುತ್ತದೆ, ಕಿಣ್ವಕ (enzymes) ಪ್ರತಿಕ್ರಿಯೆಯನ್ನು ನಿಗ್ರಹಿಸುತ್ತದೆ ಮತ್ತು ಈ ಪೆಪ್ಟೈಡ್ ನಿಂದ ಆದ ದೇಹದ ಸೂಕ್ತವಲ್ಲದ ಮತ್ತು ಉಲ್ಬಣಗೊಂಡ ಪ್ರತಿಕ್ರಿಯೆಯನ್ನು ಕಡಿಮೆಮಾಡುತ್ತದೆ, ಹೀಗೆ ರಕ್ತದೊತ್ತಡದ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ.

4. ದುಃಖ / ಖಿನ್ನತೆಯ ಭಾವನೆಗಳು
ದುಃಖ / ಖಿನ್ನತೆ ಮತ್ತು ಜೀವಸತ್ವ ಡಿ ಯ ಕಡಿಮೆ ಮಟ್ಟದ ನಡುವೆ ಒಂದು ಸಂಬಂಧವನ್ನು ಕಂಡುಹಿಡಿಯಲಾಗಿದೆ. ಕಾಲೋಚಿತ ಪರಿಣಾಮದ ಅಸ್ವಸ್ಥತೆ (ಸೀಸನಲ್ ಅಫ್ಫೆಕ್ಟಿವ್ ಡಿಸಾರ್ಡರ್ - SAD), ಕಾಲೋಚಿತ ಖಿನ್ನತೆಯ ಪರಿಸ್ಥಿತಿ (ಸೀಸನಲ್ ಡೆಪ್ರೆಸ್ಸಿವ್ ಕಂಡೀಷನ್), ಮತ್ತು ಜೀವಸತ್ವ ಡಿ3 ಯ ಏರಿಳಿತದ ಮಟ್ಟದ ನಡುವೆ ಪರಸ್ಪರ ಸಂಬಂಧವು ಒಳಗೊಂಡಿರುತ್ತದೆ ಎಂಬುದು ಒಂದು ವಿಶೇಷವಾಗಿ ಆಸಕ್ತಿದಾಯಕ ಅನ್ವೇಷಣೆಯಾಗಿದೆ.


ಒಂದು ಅಧ್ಯಯನದಲ್ಲಿ, ಡಿ 3 ಯ ಪೂರಕಗಳನ್ನು (supplementation) ಭಾಗವಹಿಸಿದವರಿಗೆ ನೀಡಿದಾಗ ದೈಹಿಕ ಮತ್ತು ಅರಿವು ಎರಡರಲ್ಲೂ ಧನಾತ್ಮಕ (positive) ಪರಿಣಾಮಗಳು ಹೆಚ್ಚಾಯಿತು ಮತ್ತು ಋಣಾತ್ಮಕ (negative) ಪರಿಣಾಮಗಳು ಕಡಿಮೆಯಾಯಿತು. ಭಾಗವಹಿಸಿದವರು ಆಹಾರದ ಕಡುಬಯಕೆ, ಅತಿನಿದ್ರೆ, ಆಲಸ್ಯ ಮತ್ತು ನಿದ್ರಾ ಭಂಗ ಸೇರಿದಂತೆ ವಿವಿಧ ಲಕ್ಷಣಗಳು, ಗಮನಾರ್ಹವಾಗಿ ಕಡಿಮೆಯಾಯಿತು ಎಂದು ವರದಿ ಮಾಡಿದರು. ಸ್ನಾಯುಗಳ ಬೆಳವಣಿಗೆಗೆ ಅಗತ್ಯ ವಿಟಮಿನ್‌ಗಳು

5. ಗಟ್ (ಕರುಳಿನ) ತೊಂದರೆ
ಕೆಲವು ಜಠರಗರುಳಿನ ಪರಿಸ್ಥಿತಿಗಳು (ಗ್ಯಾಸ್ಟ್ರೋ ಇಂಟೆಸ್ಟಿನಲ್ ಕಂಡಿಷನ್ಸ್) ಡಿ ಜೀವಸತ್ವವನ್ನು ಹೀರಿಕೊಳ್ಳುವುದರ ಮೇಲೆ ಪರಿಣಾಮವನ್ನು ಬೀರುತ್ತದೆ. ಸೆಲಿಯಾಕ್, ಕ್ರೋನ್ ನ, ಕೆರಳಿಸುವ ಕರುಳಿನ ಕಾಯಿಲೆ ಮತ್ತು ಇತರ ಪರಿಸ್ಥಿತಿಗಳನ್ನು ಹೊಂದಿರುವವರಿಗೆ, ಈ ಪರಸ್ಪರ ಕ್ರಿಯೆಯಿಂದ, ಡಿ ಜೀವಸತ್ವದ ಕೊರತೆಯು ಒಂದು ಹೆಚ್ಚಿನ ಅಪಾಯ ತರುವ ಸಾಧ್ಯತೆಗಳಿವೆ. ಇದಲ್ಲದೆ, ಕೊಬ್ಬು, ಜೀವಸತ್ವವನ್ನು ತೆಳುಗೊಳಿಸಿ ಮತ್ತು ತನ್ನ ಶಾರೀರಿಕ ಪ್ರಭಾವವನ್ನು ಕಡಿಮೆ ಮಾಡುವುದರಿಂದ ಶರೀರದಲ್ಲಿ ಹೆಚ್ಚು ಕೊಬ್ಬಿನ ಪ್ರಮಾಣವಿರುವವರು ಡಿ ಜೀವಸತ್ವದ ಕೊರತೆಗೆ ಒಳಗಾಗುತ್ತಾರೆ.

6. ಅತಿಯಾದ ಬೆವರು
ಈ ಪಟ್ಟಿಗೆ ಹೆಚ್ಚುವರಿಯಾಗಿ ಒಂದು ವಿಚಿತ್ರವೆಂದರೆ ಸಾಕಷ್ಟು ಡಿ ಜೀವಸತ್ವದ ಮಟ್ಟವು ಇಲ್ಲದೆ ಇರುವ ಜನರು ಹೆಚ್ಚು ಬೆವರಾಗುವುದು ಕಂಡುಬಂದಿದೆ. ಈ ಪಟ್ಟಿಯಲ್ಲಿನ ಅನೇಕ ಐಟಂಗಳ ವಿರುದ್ಧವಾಗಿ, ವೈದ್ಯಕೀಯ ತಜ್ಞರು, ಕಡಿಮೆ ಡಿ ಜೀವಸತ್ವದ ಮಟ್ಟವಿರುವವರು ಏಕೆ ಹೆಚ್ಚು ಬೆವರುತ್ತಾರೆಂಬುದನ್ನು ಸಾಕಷ್ಟು ಖಚಿತ ಪಡಿಸಿಲ್ಲ. ಗೊತ್ತಿರುವುದೇನೆಂದರೆ, ಡಿ ಜೀವಸತ್ವದ ಕಡಿಮೆ ಮಟ್ಟ ಮತ್ತು ಅತಿಯಾದ ಬೆವರಿನ ನಡುವೆ, ವಿಶೇಷವಾಗಿ ಹಣೆಯ ಸುತ್ತ, ಒಂದು ಬೇರ್ಪಡಿಸಲಾಗದ ಸಂಬಂಧವು ಕಾಣಿಸುತ್ತಿದೆ ಎಂಬುದು ಮಾತ್ರ.

7. ಹೃದಯದ ಪರಿಸ್ಥಿತಿ
ಡಿ ಜೀವಸತ್ವದ ಕಡಿಮೆ ಮಟ್ಟ ಮತ್ತು ಹೃದಯ ರೋಗದ ನಡುವೆ ಒಂದು ಸಂಭವನೀಯ ಪರಸ್ಪರ ಸಂಬಂಧ ಅಸ್ತಿತ್ವದಲ್ಲಿದೆ. ವೈದ್ಯಕೀಯ ವೃತ್ತಿಪರರು ಜೀವಸತ್ವದ ಕಡಿಮೆ ಮಟ್ಟದ ಪರಿಣಾಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಪಧಮನಿಗಳಲ್ಲಿ ಸಂಗ್ರಹವಾಗುವುದೆಂದು ನಂಬುತ್ತಾರೆ; ಕ್ಯಾಲ್ಸಿಯಂ ಪದರದ (plaque) ರೂಪದಲ್ಲಿ ಅಪಧಮನಿಗಳಲ್ಲಿ ಸಂಗ್ರಹವಾಗುವುದು ಮತ್ತು ಹೃದಯಾಘಾತ ಅಥವಾ ಸ್ಟ್ರೋಕ್ ನ ಅಪಾಯವನ್ನು ಹೆಚ್ಚಿಸುತ್ತದೆ. ಡಿ ಜೀವಸತ್ವದ ಕಡಿಮೆ ಮಟ್ಟಕ್ಕೆ ಸಂಬಂಧಿಸಿದ ಇತರ ಪರಿಸ್ಥಿತಿಗಳು - ಅಧಿಕ ರಕ್ತದೊತ್ತಡ, ಮಧುಮೇಹ ಟೈಪ್ 2, ಬೊಜ್ಜು ಮತ್ತು ಹೆಚ್ಚು ಕೊಲೆಸ್ಟರಾಲ್ - ಡಿ ಜೀವಸತ್ವದ ಕಡಿಮೆ ಮಟ್ಟ ಮತ್ತು ಹೃದಯದ ಆರೋಗ್ಯದ ನಡುವೆ ಸಂಪರ್ಕ ಗಟ್ಟಿಯಾಗಿಸುತ್ತದೆಂದು ಕಾಣಿಸುತ್ತವೆ. ವಿಟಮಿನ್ ಕೆ ಪ್ರಾಮುಖ್ಯತೆ

ಡಿ ಜೀವಸತ್ವದ ಮೂಲಗಳು
ಈಗ ನಾವು ಡಿ ಜೀವಸತ್ವದ ಕೊರತೆಗೆ ಸಂಬಂಧಿಸಿದ ಏಳು ಲಕ್ಷಣಗಳು ಚರ್ಚೆಯನ್ನು ಮಾಡಿರುವುದರಿಂದ, ನಾವು ಪೋಷಕಾಂಶದ ಕೆಲವು ಸಾಮಾನ್ಯ ಮೂಲಗಳ ಪಟ್ಟಿಯನ್ನು ಮಾಡುವೆವು. ಪ್ರತಿದಿನವು ಡಿ ಜೀವಸತ್ವದ ದೈನಂದಿನ ಶಿಫಾರಸು ಪ್ರಮಾಣವನ್ನು ಪಡೆಯಲು ಮರೆಯದಿರಿ.
- ಸೂರ್ಯನ ಬೆಳಕು
- ಕಿತ್ತಳೆ ರಸ (ಶಕ್ತಿಭರಿತ ಡಿ ಜೀವಸತ್ವ )

English summary

7 Signs You're Not Getting Enough Vitamin D

Research suggests that vitamin D could play a role in the prevention and treatment of a number of different conditions, including type1 and type 2 diabetes, hypertension, glucose intolerance, and multiple sclerosis, and also vitamin D could play a role in the prevention and treatment of a number of different conditions, including type1 and type 2 diabetes, hypertension, glucose intolerance, and multiple sclerosis, but some people suffering from Vitamin D.. have a look Signs You're Not Getting Enough Vitamin D
X