For Quick Alerts
ALLOW NOTIFICATIONS  
For Daily Alerts

ವ್ಯಾಯಾಮದ ಹಂಗಿಲ್ಲದೇ ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದೇ?

By Super
|

ಹೆಚ್ಚುತ್ತಿರುವ ತೂಕ ಎಲ್ಲರ ಕಾಳಜಿಯಾಗಿದೆ. ಯೇ ಕಮರೇ ಕೋ ಕಮರ್ ಬನಾನಾ ಹೈ ಎಂಬುದೇ ಮಹಿಳೆಯರ ಬಯಕೆ. ಆದರೇನು ಮಾಡುವುದು? ವ್ಯಾಯಾಮ ಮಾಡಲು ಸಮಯವಿಲ್ಲ, ಊಟದಲ್ಲಿ ಕಟ್ಟುನಿಟ್ಟು ಪಾಲಿಸಲು ಆಗುತ್ತಿಲ್ಲ. ಇಂತಹವರಿಗಾಗಿ ತೂಕ ಇಳಿಸುವ ಕ್ಷೇತ್ರದಲ್ಲಿ ನಿಪುಣರಾದ ಸ್ಟೀವ್ ಮಿಲ್ಲರ್ ಅವರ ಅಮೂಲ್ಯ ಸಲಹೆಗಳ ಸಂಗ್ರವನ್ನು ಇಲ್ಲಿ ನೀಡಲಾಗಿದೆ. ಬನ್ನಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಂದು ಕನ್ನಡಿಯನ್ನು ಸದಾ ನಿಮ್ಮೊಂದಿಗೆ ಒಯ್ಯಿರಿ

ನಿಮ್ಮ ಶರೀರದ ನಡುಭಾಗದಲ್ಲಿ ಶೇಖರವಾಗಿರುವ ಕೊಬ್ಬು ಇಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಊಟದಲ್ಲಿ ಕೊಂಚ ನಿಯಂತ್ರಣ ಬೇಕು. ನಿಮ್ಮೊಂದಿಗೆ ಚಿಕ್ಕ ಕನ್ನಡಿಯೊಂದನ್ನು ಸದಾ ಒಯ್ಯಿರಿ ಹಾಗೂ ಸಾಧ್ಯವಾದಲ್ಲೆಲ್ಲಾ ಕನ್ನಡಿಯಲ್ಲಿ ನಿಮ್ಮ ಕೊಬ್ಬು ತುಂಬಿದ ಭಾಗಗಳನ್ನು ನೋಡುತ್ತಾ ಇರಿ. ಇದು ನಿಮಗೆ ಊಟದ ಹೊತ್ತಿನಲ್ಲಿ ಕಡಿಮೆ ಊಟ ಮಾಡಲು ಪ್ರೇರಣೆ ನೀಡುತ್ತದೆ. ತೂಕ ಇಳಿಸಿಕೊಳ್ಳುವ ಆಹಾರ ಕ್ರಮಕ್ಕೆ ಹೊಂದಿಕೊಂಡಿರುವುದು ಹೇಗೆ?

Smart ways to lose weight without exercise

ತೂಕ ಕಳೆದುಕೊಳ್ಳಲೇಬೇಕು ಎಂದು ನಿಮಗೆ ನೀವೇ ಅಪ್ಪಣೆ ನೀಡಿ

ಸಾಮಾನ್ಯವಾಗಿ ನಾವೆಲ್ಲಾ ಅಪ್ಪಣೆಯಿಲ್ಲದೇ ಯಾವ ಕೆಲಸವನ್ನೂ ಮಾಡಲಾರೆವು. ಆದರೆ ತೂಕವಿಳಿಸುವ ನಿಟ್ಟಿನಲ್ಲಿ ಮಾನಸಿಕ ದೃಢತೆ ಅಗತ್ಯ. ತೂಕ ಕಳೆದುಕೊಳ್ಳಲೇಬೇಕು ಎಂಬ ದೃಢನಿಶ್ಚಯ ಮಾಡಿಕೊಂಡು ನಿಮಗೆ ನೀವೇ ಕೆಲವು ಸಾಧಿಸಬಹುದಾದ ಕಟ್ಟುಪಾಡುಗಳನ್ನು ಹೇರಿ, ಅದೇ ಪ್ರಕಾರ ನಡೆಯಿರಿ. ಉದಾಹರಣೆಗೆ. ಮೊದಲ ಮಹಡಿಗೂ ನೂರಕ್ಕೆ ತೊಂಭತ್ತೊಂಭತ್ತು ಜನರು ಲಿಫ್ಟ್ ಬಳಸಲು ಒಲವು ತೋರುತ್ತಾರೆ. ನೂರನೆಯವರಾಗಿ ನೀವು ಲಿಫ್ಟ್ ಇದ್ದರೂ ಮೆಟ್ಟಿಲು ಹತ್ತಿ ಹೋಗಲು ಸ್ವಪ್ರೇರಣೆಯಿಂದ ಮುಂದಾಗಿ. ಇಡಿಯ ದಿನದಲ್ಲಿ ಇಂತಹ ಹಲವು ಚಟುವಟಿಕೆಗಳು ನಿಮ್ಮ ಇರಾದೆಯನ್ನು ಗಟ್ಟಿಗೊಳಿಸುತ್ತಾ ಹೋಗುತ್ತವೆ.

ಹೆಚ್ಚಿನ ಊಟದ ವ್ಯಾಮೋಹ ತ್ಯಜಿಸಿ

ಎಷ್ಟೇ ಕಟ್ಟುನಿಟ್ಟು ಪಾಲಿಸಿದರೂ ರುಚಿಕರವಾದ ಅಡುಗೆ ಎದುರಿಗಿದ್ದಾಗ ಯಾರಿಗಾದರೂ ತಮ್ಮ ಕಟ್ಟುನಿಟ್ಟುಗಳನ್ನು ಗಾಳಿಗೆ ತೂರುವ ಮನಸ್ಸಾಗುತ್ತದೆ. ಆದರೆ ಮನಸ್ಸಿನಲ್ಲಿಯೇ ನೀವು ಅತ್ಯಂತ ಕಟ್ಟುನಿಟ್ಟು ಪಾಲಿಸುವ ಮೂಲಕ ಎಷ್ಟೇ ರುಚಿಕರ ಆಹಾರ ಎದುರಿಗಿದ್ದರೂ ಅಗತ್ಯವಿದ್ದಷ್ಟು ಪ್ರಮಾಣ ಮಾತ್ರ ಸೇವಿಸಿ. ಇದಕ್ಕೆ ನೆರವಾಗಲು ಆ ಸಮಯದಲ್ಲಿ ನಿಮ್ಮ ಮನಸ್ಸನ್ನು ಆಹಾರದ ಕಡೆಗೆ ಹರಿಯುವುದನ್ನು ಬಿಟ್ಟು ಬೇರೆ ವಿಷಯದತ್ತ ಕೇಂದ್ರೀಕರಿಸಿ.

Smart ways to lose weight without exercise

ನಿಮ್ಮ ಆಹಾರವನ್ನು ಬಚ್ಚಿಡಿ, ಅಥವಾ ಕೊಳ್ಳಲೇಬೇಡಿ

ನಿಮ್ಮ ತೂಕವನ್ನು ಯಾವ ಆಹಾರಗಳು ಹೆಚ್ಚಿಸುತ್ತಿವೆ ಎಂಬುದನ್ನು ಕೊಂಚ ಗಮನಿಸಿ. ಚಾಕಲೇಟು, ಬಿಸ್ಕತ್ತು, ಪಿಜ್ಜಾ ಮೊದಲಾದವು ತೂಕ ಹೆಚ್ಚಿಸುವ ಸಿದ್ಧ ಆಹಾರಗಳಾಗಿವೆ. ಒಂದು ವೇಳೆ ಇದು ನಿಮ್ಮ ಮನೆಯಲ್ಲಿ ಈಗಾಗಲೇ ಇದ್ದರೆ ಕಣ್ಣಿಗೆ ಕಾಣದಂತೆ ಬಚ್ಚಿಡಿ ಮತ್ತು ಇನ್ನೆಂದೂ ತರುವುದಿಲ್ಲ ಎಂದು ಶಪಥ ಮಾಡಿ. ಬಚ್ಚಿಡುವುದಕ್ಕಿಂತಲೂ ಯಾರಿಗಾದರೂ ಕೊಟ್ಟರೆ ವಾಸಿ. ಇವನ್ನು ತಿನ್ನುವ ಮನಸ್ಸಾದಾಗ ಆರೋಗ್ಯಕರ ಹಣ್ಣು ಮತ್ತು ತರಕಾರಿಗಳನ್ನೇ ಸೇವಿಸಿ. ಇಳಿಸಿದ ತೂಕವನ್ನು ಕಾಯ್ದುಕೊಳ್ಳಲು 11 ಸುಲಭ ಸಲಹೆಗಳು

ಅನಾರೋಗ್ಯಕರ ಆಹಾರಕ್ಕೆ ಗುಡ್ ಬೈ ಹೇಳಿ

ಇಂದು ನಮ್ಮೆಲ್ಲರ ಸ್ವಾಸ್ಥ್ಯ ಕೆಡಿಸುತ್ತಿರುವ ಅನಾರೋಗ್ಯಕರ ಆಹಾರ (junk food)ಕ್ಕೆ ಯಾವುದೇ ಮುಲಾಜಿಲ್ಲದೇ ಗುಡ್ ಬೈ ಹೇಳಿ. ನಿಮ್ಮ ನೆಚ್ಚಿನ ಬರ್ಗರ್ ಒಂದನ್ನು ಬೇರೆಯವರು ಆರ್ಡರ್ ಮಾಡಿ ತರಿಸಿದಾಗ, ಆ ಆಹಾರ ವ್ಯರ್ಥವಾಗುತ್ತಿದೆ ಎಂಬ ಯೋಚನೆಯಿಂದ ತಿನ್ನುವ ಮನಸ್ಸಾದರೂ ತಿನ್ನದೇ ಇರಲು ಮನಸ್ಸನ್ನು ಗಟ್ಟಿಗೊಳಿಸಿ. ಈ ಬರ್ಗರ್ ಅನ್ನು ಸ್ವೀಕರಿಸಲು ನಿಮ್ಮ ಅಕ್ಕಪಕ್ಕದಲ್ಲಿಯೇ ಯಾರಾದರೂ ಸಿಕ್ಕೇ ಸಿಗುತ್ತಾರೆ.

ಜಗಳ ಕೊನೆಗೊಳಿಸಲು ಆಹಾರದ ನೆಪ ಬೇಡ

ಸಾಮಾನ್ಯವಾಗಿ ಸ್ನೇಹಿತರೊಡನೆ ಚಿಕ್ಕಪುಟ್ಟ ವಿಷಯ ಕೆದಕಿ ಆದ ಕೋಳಿ ಜಗಳಗಳು ಕೋಪ ಇಳಿದ ಬಳಿಕ ರಾಜಿಯಲ್ಲಿ ಪರ್ಯವಸಾನವಾಗುತ್ತವೆ. ಸಾಮಾನ್ಯವಾಗಿ ಈ ವಿಜಯವನ್ನು ಆಚರಿಸಲು ಹೆಚ್ಚಿನವರು ಆಹಾರದ ಮೊರೆ ಹೋಗುತ್ತಾರೆ. ಈ ನಿಲುವಿಗೆ ಕಡಿವಾಣ ಹಾಕಿ. ಊಟ ಬೇಡ, ಬೇರೆ ಏನಾದರೂ ಒಳ್ಳೆಯ ಕೆಲಸ ಮಾಡೋಣ ಎಂದು ಹುರಿದುಂಬಿಸಿ. ಊಟಕ್ಕಾಗಿ ಖರ್ಚು ಮಾಡಲಿದ್ದ ಹಣವನ್ನು ಉಳಿಸಿ ವೈದ್ಯಕೀಯ ನೆರವಿನ ಅಗತ್ಯವಿರುವ ಬಡರೋಗಿಗೆ ನೀಡಿ ಮಾನವೀಯತೆ ಮೆರೆಯಿರಿ. ಈ ಮೂಲಕ ಹೊಟ್ಟೆಯ ಜೊತೆಗೇ ಮನವೂ ಹಗುರಾಗುತ್ತದೆ. ತೂಕ ಇಳಿಸುವ ಭರದಲ್ಲಿ ಮಾಡಬಾರದ 10 ತಪ್ಪುಗಳು

Smart ways to lose weight without exercise

ನಿಮ್ಮ ಕುತ್ತಿಗೆಗೊಂದು ಎಚ್ಚರಿಕಾ ಫಲಕವನ್ನು ನೇತುಹಾಕಿಕೊಳ್ಳಿ

ಒಂದು ಚಿಕ್ಕ ಕಾರ್ಡ್ ನಲ್ಲಿ ನಿಮಗೆ ನೀವೇ ಎಚ್ಚರಿಕೆ ನೀಡುವ ಪದಗಳನ್ನು ಬರೆದು ಕುತ್ತಿಗೆಗೆ ನೇತುಹಾಕಿಕೊಳ್ಳಿ. ಪದಗಳು ಈ ರೀತಿ ಇರಲಿ: "ಎಚ್ಚರಿಕೆ, ಈಗಾಗಲೇ xx ಕೇಜಿ ದಪ್ಪನಿದ್ದೀಯಾ, ಇನ್ನೂ ದಪ್ಪಗಾಗಬೇಕೇನು?" ಅಥವಾ "ದಪ್ಪನಿರುವ ನಾನೇ, ಇನ್ನಷ್ಟು ತಿನ್ನುವ ಮುನ್ನ ಕೊಂಚ ಯೋಚಿಸು". ಈ ಫಲಕಗಳನ್ನು ನೋಡಿದಾಗಲೆಲ್ಲಾ ತಿನ್ನುವ ಬಯಕೆ ಕಡಿಮೆಯಾಗಿರುವುದು ಪ್ರಮಾಣಿಸಲ್ಪಟ್ಟ ಸತ್ಯವಾಗಿದೆ.

ನಿಮಗೆ ಬಿಗಿಯಾಗಿರುವ ಉಡುಪುಗಳನ್ನು ತೊಡಿರಿ

ಸ್ವಲ್ಪ ಹಿಂದೆ ನಿಮಗೆ ಸೂಕ್ತವಾಗಿದ್ದ ಉಡುಪು ಈಗ ಬಿಗಿಯಾಗಿದ್ದರೆ, ಇವನ್ನೇ ತೊಡಿರಿ. ಈ ಉಡುಗೆ ಸರಿಯಾಗುವವರೆಗೆ ನಾನು ಊಟವನ್ನು ಕಟ್ಟುನಿಟ್ಟು ಮಾಡುತ್ತೇನೆ ಎಂದು ನಿಮಗೆ ನೀವೇ ಪ್ರೇರಣೆ ನೀಡಿ.

ಯೋಗಾಭ್ಯಾಸ ಮತ್ತು ಧ್ಯಾನವನ್ನು ಆಚರಿಸಿ

ಖ್ಯಾತ ಆಹಾರತಜ್ಞೆಯಾಗಿರುವ ಪ್ರಿಯಾ ಖಟ್ಪಾಲ್ ರವರ ಅನುಭವದ ಪ್ರಕಾರ ಕೆಲವು ಯೋಗಾಭ್ಯಾಸದ ಭಂಗಿಗಳು, ಧ್ಯಾನವನ್ನು ಆಚರಿಸುಸುವು ಮತ್ತು ಆಳವಾದ ಉಸಿರನ್ನು ಎಳೆದುಕೊಳ್ಳುವುದು ನಿಮ್ಮ ತೂಕವನ್ನು ಇಳಿಸಲು ನೆರವಾಗುತ್ತವೆ. ವಾಸ್ತವವಾಗಿ ಧ್ಯಾನದಿಂದ ಮನಸ್ಸನ್ನು ಆಹಾರದೆಡೆಯಿಂದ ಬೇರೆಡೆ ಸೆಳೆಯಲು ಸಾಧ್ಯವಾಗುತ್ತದೆ. ಇದಕ್ಕೆ ಪ್ರತಿದಿನದ ಕೆಲವು ನಿಮಿಷಗಳಷ್ಟೇ ಸಾಕು. ಯೋಗಾಭ್ಯಾಸದಿಂದ ದೇಹದ ಹೆಚ್ಚಿನ ಸ್ನಾಯುಗಳು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸೆಳೆತ ಅನುಭವಿಸಿ ಹೆಚ್ಚಿನ ಕೊಬ್ಬನ್ನು ಬೇಡುತ್ತವೆ. ಪರಿಣಾಮವಾಗಿ ಹೆಚ್ಚಿನ ಕೊಬ್ಬು ಶೀಘ್ರವಾಗಿ ಕರಗುತ್ತದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Smart ways to lose weight without exercise

Are you following a strict diet and still getting out of shape? It’s time to ditch the diet and follow some smart ways to get rid of those extra pounds quickly. Here are some tricks that can help you lose weight effectively without starving on stringent diet.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X