For Quick Alerts
ALLOW NOTIFICATIONS  
For Daily Alerts

ಏನೇ ಕಸರತ್ತು ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ?

|

ಯಾವುದನ್ನೂ ಮಾಡಲು ಬಾಕಿ ಬಿಟ್ಟಿಲ್ಲ ಜಿಮ್‌ಗೆ ಹೋದದ್ದಾಯಿತು, ಕಠಿಣ ವ್ಯಾಯಮ ಮಾಡಿದ್ದಾಯಿತು, ಆಹಾರ ಸೇವನೆಯಲ್ಲೂ ಇತಿ ಮಿತಿ ಮಾಡಿಯಾಯಿತು ಆದರೂ ತೂಕ ಸ್ವಲ್ಪವೂ ಕಡಿಮೆ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ಪ್ರತಿ ಬಾರಿಯಂತೆ ‘ಈ ಬಾರಿ ಸ್ವಲ್ಪ ತೂಕ ಕಡಿಮೆಯಾಗಿದೆ' ಎನ್ನುವ ಭರವಸೆಯಲ್ಲಿ ತೂಕದ ಯಂತ್ರದ ಮೇಲೆ ನಿಂತರೆ ಸಿಗುವುದು ಬರಿಯ ನಿರಾಸೆಯಷ್ಟೇ..! ಇದು ತೂಕ ಹೆಚ್ಚಾದವರ ಗೋಳು.

ಏನೇ ಮಾಡಿದರೂ ತೂಕ ಸ್ವಲ್ಪವೂ ಕಡಿಮೆ ಆಗುವುದಿಲ್ಲ. 'ಬೆಳಗ್ಗೆ ಬೇಗನೆ ಎದ್ದು ಪಕ್ಕದ ಉದ್ಯಾನವನದಲ್ಲಿ ಸುತ್ತು ಹೊಡೆದಿದ್ದೇ ಬಂತು, ರಾತ್ರಿಯ ಊಟ ಬಿಟ್ಟು ಆಸಿಡಿಟಿ ಅಂಟಿಸಿಕೊಂಡಿದ್ದೂ ಆಯಿತು. ಬದಲಾವಣೆ ಜಗದ ನಿಯಮ ಆದರೆ ದೇಹದ ತೂಕವೊಂದನ್ನು ಬಿಟ್ಟು ಎನ್ನುವ ನಿರ್ಧಾರಕ್ಕೂ ಬಂದಿದ್ದಾಯಿತು' ಎಂಬ ಮಾತನ್ನು ಹೆಚ್ಚಾದ ದೇಹ ತೂಕದ ಮಂದಿ ಆಡುತ್ತಿದ್ದರೆ ಅಯ್ಯೋ ಪಾಪ ಅನಿಸುವುದು. ಲೋಳೆ ಸರ ಜ್ಯೂಸ್- ಇನ್ನು ತೂಕ ಇಳಿಸಲು ರೆಡಿಯಾಗಿ..!

 

ಹಾಗಾದರೆ ದೇಹದ ತೂಕ ನಿರ್ದಿಷ್ಟವೇ? ಕಡಿಮೆ ಆಗುವುದೇ ಇಲ್ಲವೇ? ಅದರಲ್ಲೂ ಸೆಲೆಬ್ರಿಟಿಗಳು ತಮಗೆ ಬೇಕಾದ ರೀತಿಯಲ್ಲಿ ತಮಗೆ ಬೇಕಾದಾಗ ತೂಕ ಹೆಚ್ಚು ಬೇಡವಾದಾಗ ಕಡಿಮೆ ಮಾಡುತ್ತಾನೆ ಇರುತ್ತಾರೆ ನಮಗೆ ಮಾತ್ರ ಯಾಕೆ ಸಾಧ್ಯವಾಗುವುದಿಲ್ಲ ಎನ್ನುವ ಪ್ರಶ್ನೆ ಎಲ್ಲಾ ತೂಕ ಹೆಚ್ಚಾದವರ ಪಾಲಿನ ಮಹಾ ರಹಸ್ಯ. ಖಂಡಿತವಾಗಿ ನೀವೂ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದೇನು ರಾಕೆಟ್ ಸೈನ್ಸ್ ಅಲ್ಲ.

ನಿಮ್ಮ ದೃಢ ನಿರ್ಧಾರ ಮತ್ತು ಸರಿಯಾದ ಮಾರ್ಗದರ್ಶನ ಇದ್ದರಷ್ಟೇ ಸಾಕು. ವ್ಯಾಯಾಮ ಎಂದ ಕೂಡಲೇ ಇಡಿ ದಿನ ಮೈ ಬಗ್ಗಿಸುವುದಲ್ಲ ಅಲ್ಲದೆ ಆಹಾರದಲ್ಲಿ ಮಿತಿ ಎಂದ ಕೂಡಲೇ ಒಂದು ಹೊತ್ತಿನ ಊಟವನ್ನೇ ಬಿಡುವುದಲ್ಲ. ಆಹಾರ ಮತ್ತು ವ್ಯಾಯಮದ ನಡುವೆ ಸಮನ್ವಯ ಬೇಕು. ಹಾಗಾದರೆ ಮಾತ್ರ ದೇಹದ ತೂಕದ ಮೇಲೆ ಪ್ರಭಾವ ಬೀರಲು ಸಾಧ್ಯ. ಇದಕ್ಕಾಗಿ ಇಲ್ಲಿ ಪ್ರಮುಖವಾದ ಸಲಹೆಗಳನ್ನು ನೀಡಿದ್ದೇವೆ, ಅವು ಯಾವುದು ಎಂಬುದನ್ನು ಮುಂದೆ ಓದಿ...

ಉಪ್ಪು ಕಡಿಮೆ ಇರಲಿ

ಉಪ್ಪು ಕಡಿಮೆ ಇರಲಿ

ಉಪ್ಪಿಗಿಂತ ರುಚಿಯಿಲ್ಲ ಗಾದೆ ಸರಿ. ಆದರೆ ಎಷ್ಟು ಉಪ್ಪು ಬೇಕು ಎಂಬುದೇ ಚಿಂತನೆಯ ವಿಷಯ. ಸಂಶೋಧನೆಗಳ ಪ್ರಕಾರ ನಮಗೆ ನಿಜಕ್ಕೂ ಅಗತ್ಯವಿರುವುದು ಪ್ರತಿದಿನಕ್ಕೆ 3.75 ಗ್ರಾಂ ಮಾತ್ರ. ಅಂದರೆ ಸುಮಾರು ಮುಕ್ಕಾಲು ಚಿಕ್ಕ ಚಮಚದಷ್ಟು. ಈ ಪ್ರಮಾಣ ಸರಿಸುಮಾರಾಗಿ ನಾವು ಉಣ್ಣುವ ಉಪಾಹಾರ, ಊಟದ ಮೂಲಕ ಲಭ್ಯವಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಯನ್ನು ಆಕ್ರಮಿಸಿರುವ ಉಪ್ಪು ಸವರಿದ ಒಣತಿಂಡಿಗಳು ಆಕರ್ಷಕ ಜಾಹೀರಾತುಗಳ ಮೂಲಕ ನಮ್ಮ ಮನವನ್ನು, ಬಳಿಕ ಹೊಟ್ಟೆಯನ್ನು ಸೇರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಪ್ಪು ಕಡಿಮೆ ಇರಲಿ

ಉಪ್ಪು ಕಡಿಮೆ ಇರಲಿ

ಒಂದು ಸಮೀಕ್ಷೆಯ ಪ್ರಕಾರ ನಾವು ಟೀವಿ ನೋಡುತ್ತಾ ತಿನ್ನುವ ಒಂದು ಪ್ಯಾಕೆಟ್ ಕುರುಕಲು ಚಿಪ್ಸ್ ಮೂಲಕ ಸುಮಾರು 34.5 ಗ್ರಾಂ ನಷ್ಟು ಉಪ್ಪು ಸೇವಿಸುತ್ತೇವೆ. ಅಂದರೆ ಅಗತ್ಯವಿರುವುದಕ್ಕಿಂತಲೂ ಹತ್ತುಪಟ್ಟು ಹೆಚ್ಚು! ಈ ಹೆಚ್ಚುವರಿ ಉಪ್ಪನ್ನು ದೇಹದಿಂದ ಹೊರಹಾಕಲು ಪ್ರತಿ ಜೀವಕೋಶ ಶ್ರಮಿಸಬೇಕು. ಆದರೆ ಈ ಶ್ರಮದಲ್ಲಿ ಕೊಬ್ಬಿನ ಪಾತ್ರ ಇಲ್ಲದೇ ಇರುವುದರಿಂದ ಈ ಸಮಯದಲ್ಲಿ ಕರಗಬೇಕಾಗಿದ್ದ ಕೊಬ್ಬು ಕರಗದೇ ಹಾಗೇ ಉಳಿಯುತ್ತದೆ, ತೂಕವನ್ನು ಹಾಗೇ ಉಳಿಸುತ್ತದೆ. ನಮ್ಮ ಆಹಾರದಲ್ಲಿ ಉಪ್ಪು ಕಡಿಮೆ ಇರುವಂತೆ ನೋಡಿಕೊಳ್ಳಬೇಕು.

ಸೇವಿಸುವ ಊಟದಲ್ಲಿ ನಾರಿನಂಶ ಹೆಚ್ಚು ಇರಲಿ
 

ಸೇವಿಸುವ ಊಟದಲ್ಲಿ ನಾರಿನಂಶ ಹೆಚ್ಚು ಇರಲಿ

ದಿನದಲ್ಲಿ ಸೇವಿಸುವ ಆಹಾರದಲ್ಲಿ ನಾರು ಹೆಚ್ಚಿರುವ ಆಹಾರಗಳು ಉತ್ತಮ. ನಾರಿನಲ್ಲಿ ಎರಡು ವಿಧಗಳಿವೆ-ಕರಗುವ ಹಾಗೂ ಕರಗದ ನಾರು. ಕರಗುವ ನಾರು ಸುಲಭವಾಗಿ ಜೀರ್ಣಗೊಂಡರೂ ಕರುಳಿನಲ್ಲಿ ಹೀರಲ್ಪಡುವುದಿಲ್ಲ. ಕರಗದ ನಾರು ಜೀರ್ಣವಾಗುವುದೇ ಇಲ್ಲ. ನಮಗೆ ಎರಡೂ ತರಹದ ನಾರು ಬೇಕು. ಟೊಮೇಟೊ ಸಿಪ್ಪೆ, ಗೋಧಿ, ಅಕ್ಕಿಯ ಮೇಲಿನ ಕವಚ, ಹಣ್ಣುಗಳ ತಿರುಳು ಮೊದಲಾದವು ಕರಗದ ನಾರುಗಳಾಗಿವೆ. (insoluble fibre).

ಸೇವಿಸುವ ಊಟದಲ್ಲಿ ನಾರಿನಂಶ ಹೆಚ್ಚು ಇರಲಿ

ಸೇವಿಸುವ ಊಟದಲ್ಲಿ ನಾರಿನಂಶ ಹೆಚ್ಚು ಇರಲಿ

ಅಂತೆಯೇ ಬಾಳೆಹಣ್ಣು, ದಾಳಿಂಬೆ, ಧಾನ್ಯಗಳು ಮೊದಲಾದವು ಕರಗುವ ನಾರುಗಳಾಗಿವೆ. (soluble fibre). ಗೋಧಿಯಲ್ಲಿರುವ ಕವಚವನ್ನು ತೆಗೆದು ಮೈದಾಹಿಟ್ಟು ತಯಾರಿಸಲಾಗುತ್ತದೆ. ಹಾಗಾಗಿ ಮೈದಾ ಹಿಟ್ಟಿನಲ್ಲಿ ನಾರು ಇಲ್ಲ! ಮೈದಾ ಬದಲಿಗೆ ಗೋಧಿ ಹಿಟ್ಟು ಉಪಯೋಗಿಸುವುದು ಜಾಣತನ. ಅಂತೆಯೇ ಪೂರ್ಣವಾಗಿ ಪಾಲಿಷ್ ಮಾಡಿರುವ ಅಕ್ಕಿಯಲ್ಲಿಯೂ ನಾರು ಇರುವುದಿಲ್ಲ. ನಾರು ಹೆಚ್ಚಿರುವ ಓಟ್ಸ್, ಜೋಳ, ವಿವಿಧ ಧಾನ್ಯಗಳು, ಹಣ್ಣುಗಳು ಮೊದಲಾದವುಗಳನ್ನು ಹೆಚ್ಚು ಸೇವಿಸುವುದು ತೂಕ ಕಳೆದುಕೊಳ್ಳಲು ಸಹಕಾರಿಯಾಗಿವೆ.

ಮೂಸಂಬಿ ಜ್ಯೂಸ್‌ ಕುಡಿಯಿರಿ

ಮೂಸಂಬಿ ಜ್ಯೂಸ್‌ ಕುಡಿಯಿರಿ

ಮೂಸಂಬಿಯಲ್ಲಿ ಹೆಚ್ಚಿನ ತಿರುಳು ಇರುವುದರಿಂದ ಹೆಚ್ಚಿನ ಪೋಷಕಾಂಶಗಳು ಸಿದ್ಧರೂಪದಲ್ಲಿ ದೇಹಕ್ಕೆ ಲಭ್ಯವಾಗುತ್ತವೆ. ಇದು ಸುಲಭವಾಗಿ ಜೀರ್ಣವಾಗುವುದರಿಂದ ತೂಕವಿಳಿಸಲು ನೆರವಾಗುತ್ತದೆ.

ಸರಿಯಾಗಿ ನಿದ್ದೆ ಮಾಡಿ

ಸರಿಯಾಗಿ ನಿದ್ದೆ ಮಾಡಿ

ಅಸಮರ್ಪಕ ನಿದ್ದೆ ಹೆಚ್ಚು ಆಹಾರ ಸೇವಿಸುವಂತೆ ಮಾಡುತ್ತದೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ಹೆಚ್ಚಿನ ಆಹಾರ ಸೇವನೆಯಿಂದ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ನಿದ್ದೆಯನ್ನು ಸರಿಯಾಗಿ ಮಾಡಿ. ನಿದ್ದೆಯ ಅವಧಿಯನ್ನು ನಿಗದಿ ಪಡಿಸಿ ಅದೇ ಅವಧಿಯಲ್ಲಿ ಮಲಗುವಂತೆ ನೋಡಿಕೊಳ್ಳಿ. ಇದು ನಿಮ್ಮ ಉತ್ಸಾಹದ ಮೇಲೂ ಪ್ರಭಾವ ಬೀರುತ್ತದೆ. ಹೆಚ್ಚು ಉತ್ಸಾಹಿತರಾಗಿದ್ದಲ್ಲಿ ಹೆಚ್ಚು ಕೆಲಸ ಇದೂ ತೂಕ ಕಡಿಮೆ ಮಾಡುವ ಮಾರ್ಗವಾಗಿದೆ.

ಜಂಕ್ ಫುಡ್‌ಗೆ ವಿದಾಯ ಹೇಳಿ

ಜಂಕ್ ಫುಡ್‌ಗೆ ವಿದಾಯ ಹೇಳಿ

ಏನಾದರೂ ತಿನ್ನಬೇಕು ಎನ್ನುವ ಭಾವನೆ ಎಲ್ಲರಿಗೂ ಇದ್ದೇ ಇರುತ್ತದೆ ಮತ್ತು ನಾವು ಈ ಆಸೆಗೆ ಜಂಕ್ ಫುಡ್ ಮೂಲಕ ನೀರೆರೆಯುತ್ತೇವೆ. ಮನೆಯಲ್ಲಿ ನಾಲ್ಕು ಪ್ಯಾಕೆಟ್ ಆದರೂ ಇಂತಹ ತಿಂಡಿಗಳು ಇಲ್ಲದ ಮನೆಗಳು ಬಹಳ ವಿರಳ. ಇದನ್ನು ಸಾಧ್ಯವಾದಷ್ಟು ದೂರವಿಡಿ. ಈಗಾಗಲೇ ಸಾಕಷ್ಟು ಸೇವಿಸುತ್ತಿದ್ದರೆ ವಾರಕ್ಕಿಷ್ಟು ಎಂದು ಕಡಿಮೆ ಮಾಡಿ.

English summary

Simple Things You Can Do to Lose Weight

We all love to have a perfectly-toned body, but not all of us are blessed with one! And, that is what makes us follow a strict diet plan or a rigorous workout session regularly. But, what if even following all these things religiously does not work?These are simple things that are designed to make gradual and sustainable changes. Create some simple habits, and the weight will come off.
Story first published: Wednesday, October 21, 2015, 14:23 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more